ಸೂರಾ An-Nisa 4:12
۞وَلَكُمۡ نِصۡفُ مَا تَرَكَ أَزۡوَٰجُكُمۡ إِن لَّمۡ يَكُن لَّهُنَّ وَلَدٞۚ فَإِن كَانَ لَهُنَّ وَلَدٞ فَلَكُمُ ٱلرُّبُعُ مِمَّا تَرَكۡنَۚ مِنۢ بَعۡدِ وَصِيَّةٖ يُوصِينَ بِهَآ أَوۡ دَيۡنٖۚ وَلَهُنَّ ٱلرُّبُعُ مِمَّا تَرَكۡتُمۡ إِن لَّمۡ يَكُن لَّكُمۡ وَلَدٞۚ فَإِن كَانَ لَكُمۡ وَلَدٞ فَلَهُنَّ ٱلثُّمُنُ مِمَّا تَرَكۡتُمۚ مِّنۢ بَعۡدِ وَصِيَّةٖ تُوصُونَ بِهَآ أَوۡ دَيۡنٖۗ وَإِن كَانَ رَجُلٞ يُورَثُ كَلَٰلَةً أَوِ ٱمۡرَأَةٞ وَلَهُۥٓ أَخٌ أَوۡ أُخۡتٞ فَلِكُلِّ وَٰحِدٖ مِّنۡهُمَا ٱلسُّدُسُۚ فَإِن كَانُوٓاْ أَكۡثَرَ مِن ذَٰلِكَ فَهُمۡ شُرَكَآءُ فِي ٱلثُّلُثِۚ مِنۢ بَعۡدِ وَصِيَّةٖ يُوصَىٰ بِهَآ أَوۡ دَيۡنٍ غَيۡرَ مُضَآرّٖۚ وَصِيَّةٗ مِّنَ ٱللَّهِۗ وَٱللَّهُ عَلِيمٌ حَلِيمٞ ﴿١٢﴾
◉
ಅನುವಾದ
ನಿಮ್ಮ ಪತ್ನಿಯರಿಗೆ ಮಕ್ಕಳಿಲ್ಲದಿದ್ದರೆ, ಅವರು ಬಿಟ್ಟುಹೋದ ಆಸ್ತಿಯಲ್ಲಿ ಅರ್ಧ ಭಾಗವು ನಿಮಗೆ ದೊರೆಯುತ್ತದೆ. ಅವರಿಗೆ ಮಕ್ಕಳಿದ್ದರೆ ಅವರು ಬಿಟ್ಟು ಹೋದ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗವು ನಿಮಗೆ ದೊರೆಯುತ್ತದೆ. ಇದು ಅವರು ಮಾಡುವ ಉಯಿಲು ಮತ್ತು ಸಾಲವನ್ನು ತೀರಿಸಿದ ನಂತರ. ನಿಮಗೆ ಮಕ್ಕಳಿಲ್ಲದಿದ್ದರೆ, ನೀವು ಬಿಟ್ಟುಹೋದ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗವು ಅವರಿಗೆ (ಪತ್ನಿಯರಿಗೆ) ದೊರೆಯುತ್ತದೆ. ನಿಮಗೆ ಮಕ್ಕಳಿದ್ದರೆ, ನೀವು ಬಿಟ್ಟುಹೋದ ಆಸ್ತಿಯಲ್ಲಿ ಎಂಟನೇ ಒಂದು ಭಾಗವು ಅವರಿಗೆ ದೊರೆಯುತ್ತದೆ. ಇದು ನೀವು ಮಾಡುವ ಉಯಿಲು ಮತ್ತು ಸಾಲವನ್ನು ತೀರಿಸಿದ ನಂತರ. ವಾರಸು ಆಸ್ತಿಯನ್ನು ಬಿಟ್ಟು ಹೋಗುವ ಪುರುಷ ಅಥವಾ ಮಹಿಳೆಗೆ ತಂದೆ-ತಾಯಿ ಹಾಗೂ ಮಕ್ಕಳಿಲ್ಲದೆ, ಕೇವಲ ಸಹೋದರ ಅಥವಾ ಸಹೋದರಿಯಿದ್ದರೆ, ಆ ಇಬ್ಬರಲ್ಲಿ ಪ್ರತಿಯೊಬ್ಬರಿಗೂ ಆರನೇ ಒಂದು ಭಾಗವು ದೊರೆಯುತ್ತದೆ. ಅವರು ಇಬ್ಬರಿಗಿಂತ ಹೆಚ್ಚಿದ್ದರೆ, ಅವರು ಮೂರನೇ ಒಂದು ಭಾಗದಲ್ಲಿ ಸಮಾನ ಪಾಲುದಾರರಾಗುತ್ತಾರೆ. ಇದು ಹಾನಿಕರವಲ್ಲದ ಉಯಿಲು[1] ಮತ್ತು ಸಾಲವನ್ನು ತೀರಿಸಿದ ನಂತರ. ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.
ನಿಮ್ಮ ಪತ್ನಿಯರು ಮಕ್ಕಳಿಲ್ಲದವರಾಗಿದ್ದರೆ ಅವರು ಬಿಟ್ಟುಹೋದುದರಲ್ಲಿ ನಿಮಗೆ ಅರ್ಧಪಾಲು ಇದೆ. ಇನ್ನು ಅವರಿಗೆ ಮಕ್ಕಳಿದ್ದಲ್ಲಿ ಅವರು ಬಿಟ್ಟು ಹೋದುದರಲ್ಲಿ ನಾಲ್ಕನೆಯ ಒಂದಂಶ ನಿಮಗಿದೆ. ಅವರು ಮಾಡಿದ್ದ ಉಯಿಲು ಅಥವಾ ಸಾಲವನ್ನು ತೀರಿಸಿದ ನಂತರದ ಸೊತ್ತಿನಿಂದ. ನಿಮಗೆ ಮಕ್ಕಳಿಲ್ಲದಿದ್ದಲ್ಲಿ ನೀವು ಬಿಟ್ಟು ಹೋದುದರಲ್ಲಿ ಅವರಿಗೆ (ಮಡದಿಯರಿಗೆ) ನಾಲ್ಕರಲ್ಲಿ ಒಂದಂಶವಿದೆ. ಇನ್ನು ನಿಮಗೆ ಮಕ್ಕಳಿದ್ದಲ್ಲಿ ನೀವು ಉಳಿಸಿ ಹೋದುದರಲ್ಲಿ ಅವರಿಗೆ ಎಂಟನೇ ಒಂದು ಪಾಲು ಇದೆ. ನೀವು ಮಾಡುವ ಉಯಿಲು ಮತ್ತು ಸಾಲವನ್ನು ಕಳೆದು. ಇನ್ನು ವಾರೀಸು ಬಿಟ್ಟು ಹೋದ ಪುರುಷ ಅಥವಾ ಸ್ತ್ರೀಯು ತಂದೆಯೂ ಮಕ್ಕಳೂ ಇಲ್ಲದವರಾಗಿದ್ದು ಆ ಮೃತರಿಗೆ (ತಾಯಿ ಕಡೆಯ) ಓರ್ವ ಸಹೋದರ ಯಾ ಓರ್ವ ಸಹೋದರಿ ಇದ್ದಲ್ಲಿ ಅವರಿಬ್ಬರಿಗೂ ತಲಾ ಆರರಲ್ಲಿ ಒಂದಂಶ ಇದೆ. ಇನ್ನು ಅವರು ಒಂದಕ್ಕಿಂತ ಹೆಚ್ಚಾಗಿದ್ದಲ್ಲಿ ಅವರೆಲ್ಲರೂ ಸೊತ್ತಿನ ಮೂರನೇ ಒಂದು ಅಂಶಕ್ಕೆ ಸಮಾನ ಹಕ್ಕುದಾರರಾಗುತ್ತಾರೆ. ಇದು ಮೃತನು ವಾರೀ ಸುದಾರರಿಗೆ ದ್ರೋಹವೆಸಗುವ ಉದ್ದೇಶವಿಲ್ಲದೆ ಮಾಡಿದ ಉಯಿಲು ಮತ್ತು ಸಾಲವನ್ನು ಪೂರೈಸಿದ ನಂತರವಾಗಿದೆ. ಇದು ಅಲ್ಲಾಹನ ಉಪದೇಶಗಳಾಗಿವೆ. ಅಲ್ಲಾಹನು ಪರಮ ತಜ್ಞನೂ ಪರಮ ಸಹನೆಯುಳ್ಳವನೂ ಆಗಿರುತ್ತಾನೆ.