قٓۚ وَٱلۡقُرۡءَانِ ٱلۡمَجِيدِ ﴿1﴾قٓۚ وَٱلۡقُرۡءَانِ ٱلۡمَجِيدِ
Transliteration: Qaf waalqurani almajeedi
Translation: ಕ್ವಾಫ್. ಈ ಮಹತ್ವಪೂರ್ಣ ಕುರ್‌ಆನಿನ ಮೇಲಾಣೆ.
قٓۚ وَٱلۡقُرۡءَانِ ٱلۡمَجِيدِ ﴿1﴾قٓۚ وَٱلۡقُرۡءَانِ ٱلۡمَجِيدِ
Transliteration: Qaf waalqurani almajeedi
Translation: ಕ್ವಾಫ್. ಈ ಮಹತ್ವಪೂರ್ಣ ಕುರ್‌ಆನಿನ ಮೇಲಾಣೆ.
بَلۡ عَجِبُوٓاْ أَن جَآءَهُم مُّنذِرٞ مِّنۡهُمۡ فَقَالَ ٱلۡكَٰفِرُونَ هَٰذَا شَيۡءٌ عَجِيبٌ ﴿2﴾بَلۡ عَجِبُوٓاْ أَن جَآءَهُم مُّنذِرٞ مِّنۡهُمۡ فَقَالَ ٱلۡكَٰفِرُونَ هَٰذَا شَيۡءٌ عَجِيبٌ
Transliteration: Bal AAajiboo an jaahum munthirun minhum faqala alkafiroona hatha shayon AAajeebun
Translation: ಅವರಿಂದಲೇ ಅವರಿಗೆ ಒಬ್ಬ ಮುನ್ನೆಚ್ಚರಿಕೆಗಾರ (ಪ್ರವಾದಿ) ಬಂದಿರುವುದನ್ನು ಕಂಡು ಅವರು ಆಶ್ಚರ್ಯಪಡುತ್ತಾರೆ. ಸತ್ಯನಿಷೇಧಿಗಳು ಹೇಳುತ್ತಾರೆ: “ಇದೊಂದು ಆಶ್ಚರ್ಯಕರ ಸಂಗತಿಯಾಗಿದೆ.
أَءِذَا مِتۡنَا وَكُنَّا تُرَابٗاۖ ذَٰلِكَ رَجۡعُۢ بَعِيدٞ ﴿3﴾أَءِذَا مِتۡنَا وَكُنَّا تُرَابٗاۖ ذَٰلِكَ رَجۡعُۢ بَعِيدٞ
Transliteration: Aitha mitna wakunna turaban thalika rajAAun baAAeedun
Translation: ನಾವು ಸತ್ತು ಮಣ್ಣಾಗಿ ಬಿಟ್ಟ ಬಳಿಕ (ಪುನಃ ಜೀವ ಪಡೆಯುವೆವೇ)? ಈ ಮರಳುವಿಕೆ ಬಹಳ ದೂರದ (ಅಸಂಭವ್ಯ) ಸಂಗತಿಯಾಗಿದೆ.”
قَدۡ عَلِمۡنَا مَا تَنقُصُ ٱلۡأَرۡضُ مِنۡهُمۡۖ وَعِندَنَا كِتَٰبٌ حَفِيظُۢ ﴿4﴾قَدۡ عَلِمۡنَا مَا تَنقُصُ ٱلۡأَرۡضُ مِنۡهُمۡۖ وَعِندَنَا كِتَٰبٌ حَفِيظُۢ
Transliteration: Qad AAalimna ma tanqusu alardu minhum waAAindana kitabun hafeethun
Translation: ನಿಶ್ಚಯವಾಗಿಯೂ ಭೂಮಿಯು ಅವರಿಂದ ಏನನ್ನು ಕಡಿಮೆ ಮಾಡುತ್ತಿದೆಯೆಂದು ನಮಗೆ ತಿಳಿದಿದೆ. ನಮ್ಮ ಬಳಿ ಎಲ್ಲವನ್ನೂ ನೆನಪಿಡುವ ಒಂದು ಗ್ರಂಥವಿದೆ.[1]
بَلۡ كَذَّبُواْ بِٱلۡحَقِّ لَمَّا جَآءَهُمۡ فَهُمۡ فِيٓ أَمۡرٖ مَّرِيجٍ ﴿5﴾بَلۡ كَذَّبُواْ بِٱلۡحَقِّ لَمَّا جَآءَهُمۡ فَهُمۡ فِيٓ أَمۡرٖ مَّرِيجٍ
Transliteration: Bal kaththaboo bialhaqqi lamma jaahum fahum fee amrin mareejin
Translation: ವಾಸ್ತವವಾಗಿ, ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದ್ದರಿಂದ ಅವರು ಗೊಂದಲಪೂರ್ಣ (ಅನಿಶ್ಚಿತ) ಸ್ಥಿತಿಯಲ್ಲಿದ್ದಾರೆ.
أَفَلَمۡ يَنظُرُوٓاْ إِلَى ٱلسَّمَآءِ فَوۡقَهُمۡ كَيۡفَ بَنَيۡنَٰهَا وَزَيَّنَّـٰهَا وَمَا لَهَا مِن فُرُوجٖ ﴿6﴾أَفَلَمۡ يَنظُرُوٓاْ إِلَى ٱلسَّمَآءِ فَوۡقَهُمۡ كَيۡفَ بَنَيۡنَٰهَا وَزَيَّنَّـٰهَا وَمَا لَهَا مِن فُرُوجٖ
Transliteration: Afalam yanthuroo ila alssamai fawqahum kayfa banaynaha wazayyannaha wama laha min furoojin
Translation: ಅವರ ಮೇಲ್ಭಾಗದಲ್ಲಿರುವ ಆಕಾಶವನ್ನು ಅವರು ನೋಡುವುದಿಲ್ಲವೇ? ನಾವು ಅದನ್ನು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿಸಿದೆವು ಎಂದು? ಅದರಲ್ಲಿ ಯಾವುದೇ ಬಿರುಕುಗಳಿಲ್ಲ.
وَٱلۡأَرۡضَ مَدَدۡنَٰهَا وَأَلۡقَيۡنَا فِيهَا رَوَٰسِيَ وَأَنۢبَتۡنَا فِيهَا مِن كُلِّ زَوۡجِۭ بَهِيجٖ ﴿7﴾وَٱلۡأَرۡضَ مَدَدۡنَٰهَا وَأَلۡقَيۡنَا فِيهَا رَوَٰسِيَ وَأَنۢبَتۡنَا فِيهَا مِن كُلِّ زَوۡجِۭ بَهِيجٖ
Transliteration: Waalarda madadnaha waalqayna feeha rawasiya waanbatna feeha min kulli zawjin baheejin
Translation: ನಾವು ಭೂಮಿಯನ್ನು ಹರಡಿಸಿದೆವು ಮತ್ತು ಅದರಲ್ಲಿ ಪರ್ವತಗಳನ್ನು ಸ್ಥಾಪಿಸಿದೆವು. ನಾವು ಅದರಲ್ಲಿ ಎಲ್ಲಾ ವಿಧಗಳ ಸುಂದರ ವಸ್ತುಗಳನ್ನು ಬೆಳೆಸಿದೆವು.
تَبۡصِرَةٗ وَذِكۡرَىٰ لِكُلِّ عَبۡدٖ مُّنِيبٖ ﴿8﴾تَبۡصِرَةٗ وَذِكۡرَىٰ لِكُلِّ عَبۡدٖ مُّنِيبٖ
Transliteration: Tabsiratan wathikra likulli AAabdin muneebin
Translation: (ಅಲ್ಲಾಹನ ಕಡೆಗೆ ಮರಳುವ) ಪ್ರತಿಯೊಬ್ಬ ದಾಸನಿಗೂ ಅಂತರ್ದೃಷ್ಟಿ ಮತ್ತು ಉಪದೇಶದ ರೂಪದಲ್ಲಿ.
وَنَزَّلۡنَا مِنَ ٱلسَّمَآءِ مَآءٗ مُّبَٰرَكٗا فَأَنۢبَتۡنَا بِهِۦ جَنَّـٰتٖ وَحَبَّ ٱلۡحَصِيدِ ﴿9﴾وَنَزَّلۡنَا مِنَ ٱلسَّمَآءِ مَآءٗ مُّبَٰرَكٗا فَأَنۢبَتۡنَا بِهِۦ جَنَّـٰتٖ وَحَبَّ ٱلۡحَصِيدِ
Transliteration: Wanazzalna mina alssamai maan mubarakan faanbatna bihi jannatin wahabba alhaseedi
Translation: ನಾವು ಆಕಾಶದಿಂದ ಸಮೃದ್ಧವಾದ ಮಳೆಯನ್ನು ಸುರಿಸಿದೆವು. ಅದರ ಮೂಲಕ ತೋಟಗಳನ್ನು ಮತ್ತು ಕಟಾವು ಮಾಡುವ ಧಾನ್ಯಗಳನ್ನು ಬೆಳೆಸಿದೆವು.
وَٱلنَّخۡلَ بَاسِقَٰتٖ لَّهَا طَلۡعٞ نَّضِيدٞ ﴿10﴾وَٱلنَّخۡلَ بَاسِقَٰتٖ لَّهَا طَلۡعٞ نَّضِيدٞ
Transliteration: Waalnnakhla basiqatin laha talAAun nadeedun
Translation: ಮತ್ತು ಪದರ ಪದರ ಗೊನೆಗಳಿರುವ ಎತ್ತರವಾದ ಖರ್ಜೂರದ ಮರಗಳನ್ನು (ಬೆಳೆಸಿದೆವು)
رِّزۡقٗا لِّلۡعِبَادِۖ وَأَحۡيَيۡنَا بِهِۦ بَلۡدَةٗ مَّيۡتٗاۚ كَذَٰلِكَ ٱلۡخُرُوجُ ﴿11﴾رِّزۡقٗا لِّلۡعِبَادِۖ وَأَحۡيَيۡنَا بِهِۦ بَلۡدَةٗ مَّيۡتٗاۚ كَذَٰلِكَ ٱلۡخُرُوجُ
Transliteration: Rizqan lilAAibadi waahyayna bihi baldatan maytan kathalika alkhurooju
Translation: ದಾಸರ ಉಪಜೀವನಕ್ಕಾಗಿ. ನಾವು ಅದರಿಂದ (ಆ ನೀರಿನಿಂದ) ನಿರ್ಜೀವವಾಗಿದ್ದ ಪ್ರದೇಶಕ್ಕೆ ಜೀವವನ್ನು ನೀಡಿದೆವು. ಇದೇ ರೀತಿ (ಸಮಾಧಿಗಳಿಂದ ನಿಮ್ಮನ್ನು) ಹೊರತೆಗೆಯಲಾಗುವುದು.
كَذَّبَتۡ قَبۡلَهُمۡ قَوۡمُ نُوحٖ وَأَصۡحَٰبُ ٱلرَّسِّ وَثَمُودُ ﴿12﴾كَذَّبَتۡ قَبۡلَهُمۡ قَوۡمُ نُوحٖ وَأَصۡحَٰبُ ٱلرَّسِّ وَثَمُودُ
Transliteration: Kaththabat qablahum qawmu noohin waashabu alrrassi wathamoodu
Translation: ಇವರಿಗಿಂತ ಮೊದಲು ನೂಹರ ಜನತೆ, ರಸ್ಸ್‌ನ ಜನರು ಮತ್ತು ಸಮೂದ್ ಗೋತ್ರದವರು ಸತ್ಯವನ್ನು ನಿಷೇಧಿಸಿದರು.
وَعَادٞ وَفِرۡعَوۡنُ وَإِخۡوَٰنُ لُوطٖ ﴿13﴾وَعَادٞ وَفِرۡعَوۡنُ وَإِخۡوَٰنُ لُوطٖ
Transliteration: WaAAadun wafirAAawnu waikhwanu lootin
Translation: ಆದ್ ಗೋತ್ರದವರು, ಫರೋಹ ಮತ್ತು ಲೂತರ ಸಹೋದರರು (ಜನರು) ಕೂಡ.
وَأَصۡحَٰبُ ٱلۡأَيۡكَةِ وَقَوۡمُ تُبَّعٖۚ كُلّٞ كَذَّبَ ٱلرُّسُلَ فَحَقَّ وَعِيدِ ﴿14﴾وَأَصۡحَٰبُ ٱلۡأَيۡكَةِ وَقَوۡمُ تُبَّعٖۚ كُلّٞ كَذَّبَ ٱلرُّسُلَ فَحَقَّ وَعِيدِ
Transliteration: Waashabu alaykati waqawmu tubbaAAin kullun kaththaba alrrusula fahaqqa waAAeedi
Translation: ಐಕತ್‌ನ ಜನರು ಮತ್ತು ತುಬ್ಬಅ್‌ನ ಜನರು ಕೂಡ. ಅವರೆಲ್ಲರೂ ಸಂದೇಶವಾಹಕರುಗಳನ್ನು ನಿಷೇಧಿಸಿದರು. ಆದ್ದರಿಂದ ಅವರ ಮೇಲೆ ನನ್ನ ವಾಗ್ದಾನವು ಖಾತ್ರಿಯಾಗಿ ಬಿಟ್ಟಿತು.
أَفَعَيِينَا بِٱلۡخَلۡقِ ٱلۡأَوَّلِۚ بَلۡ هُمۡ فِي لَبۡسٖ مِّنۡ خَلۡقٖ جَدِيدٖ ﴿15﴾أَفَعَيِينَا بِٱلۡخَلۡقِ ٱلۡأَوَّلِۚ بَلۡ هُمۡ فِي لَبۡسٖ مِّنۡ خَلۡقٖ جَدِيدٖ
Transliteration: AfaAAayeena bialkhalqi alawwali bal hum fee labsin min khalqin jadeedin
Translation: ನಾವು ಪ್ರಥಮ ಬಾರಿ ಸೃಷ್ಟಿಸಿದಾಗಲೇ ಸುಸ್ತಾದೆವೇ? ಅಲ್ಲ, ವಾಸ್ತವವಾಗಿ ಅವರು ಹೊಸ ಸೃಷ್ಟಿಯ ಬಗ್ಗೆ ಸಂಶಯಪಡುತ್ತಾರೆ.
وَلَقَدۡ خَلَقۡنَا ٱلۡإِنسَٰنَ وَنَعۡلَمُ مَا تُوَسۡوِسُ بِهِۦ نَفۡسُهُۥۖ وَنَحۡنُ أَقۡرَبُ إِلَيۡهِ مِنۡ حَبۡلِ ٱلۡوَرِيدِ ﴿16﴾وَلَقَدۡ خَلَقۡنَا ٱلۡإِنسَٰنَ وَنَعۡلَمُ مَا تُوَسۡوِسُ بِهِۦ نَفۡسُهُۥۖ وَنَحۡنُ أَقۡرَبُ إِلَيۡهِ مِنۡ حَبۡلِ ٱلۡوَرِيدِ
Transliteration: Walaqad khalaqna alinsana wanaAAlamu ma tuwaswisu bihi nafsuhu wanahnu aqrabu ilayhi min habli alwareedi
Translation: ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಸೃಷ್ಟಿಸಿದೆವು. ಅವನ ಮನಸ್ಸು ಅವನೊಡನೆ ಪಿಸುಗುಡುವ ಸಂಗತಿಗಳನ್ನು ನಾವು ತಿಳಿಯುತ್ತೇವೆ. ನಾವು ಅವನಿಗೆ ಅವನ ಕಂಠನಾಡಿಗಿಂತಲೂ ಹತ್ತಿರದಲ್ಲಿದ್ದೇವೆ.
إِذۡ يَتَلَقَّى ٱلۡمُتَلَقِّيَانِ عَنِ ٱلۡيَمِينِ وَعَنِ ٱلشِّمَالِ قَعِيدٞ ﴿17﴾إِذۡ يَتَلَقَّى ٱلۡمُتَلَقِّيَانِ عَنِ ٱلۡيَمِينِ وَعَنِ ٱلشِّمَالِ قَعِيدٞ
Transliteration: Ith yatalaqqa almutalaqqiyani AAani alyameeni waAAani alshshimali qaAAeedun
Translation: ಇಬ್ಬರು ಪಡೆಯುವವರು (ಕರ್ಮಗಳನ್ನು ದಾಖಲಿಸುವ ದೇವದೂತರು) ಪಡೆಯುವ ಸಂದರ್ಭ. ಒಬ್ಬರು ಬಲಭಾಗದಲ್ಲಿ ಮತ್ತು ಇನ್ನೊಬ್ಬರು ಎಡಭಾಗದಲ್ಲಿ ಕುಳಿತಿರುವರು.
مَّا يَلۡفِظُ مِن قَوۡلٍ إِلَّا لَدَيۡهِ رَقِيبٌ عَتِيدٞ ﴿18﴾مَّا يَلۡفِظُ مِن قَوۡلٍ إِلَّا لَدَيۡهِ رَقِيبٌ عَتِيدٞ
Transliteration: Ma yalfithu min qawlin illa ladayhi raqeebun AAateedun
Translation: ಮನುಷ್ಯನು ಯಾವುದೇ ಮಾತನ್ನೂ ಹೇಳಲಾರನು—ಅವನ ಬಳಿ ಒಬ್ಬ ವೀಕ್ಷಕನು (ಅದನ್ನು ದಾಖಲಿಸಲು) ಸಿದ್ಧವಾಗಿರದ ಹೊರತು.
وَجَآءَتۡ سَكۡرَةُ ٱلۡمَوۡتِ بِٱلۡحَقِّۖ ذَٰلِكَ مَا كُنتَ مِنۡهُ تَحِيدُ ﴿19﴾وَجَآءَتۡ سَكۡرَةُ ٱلۡمَوۡتِ بِٱلۡحَقِّۖ ذَٰلِكَ مَا كُنتَ مِنۡهُ تَحِيدُ
Transliteration: Wajaat sakratu almawti bialhaqqi thalika ma kunta minhu taheedu
Translation: ಮರಣದ ಕಡು ಯಾತನೆಯು ಸತ್ಯದೊಂದಿಗೆ ಬರುವುದು. ಯಾವುದರಿಂದ ನೀನು ದೂರವಾಗಲು ಪ್ರಯತ್ನಿಸುತ್ತಿದ್ದೆಯೋ ಅದೇ ಇದು.
وَنُفِخَ فِي ٱلصُّورِۚ ذَٰلِكَ يَوۡمُ ٱلۡوَعِيدِ ﴿20﴾وَنُفِخَ فِي ٱلصُّورِۚ ذَٰلِكَ يَوۡمُ ٱلۡوَعِيدِ
Transliteration: Wanufikha fee alssoori thalika yawmu alwaAAeedi
Translation: ಕಹಳೆಯಲ್ಲಿ ಊದಲಾಗುವುದು. ಅದು ಎಚ್ಚರಿಕೆಯ ದಿನವಾಗಿದೆ.
وَجَآءَتۡ كُلُّ نَفۡسٖ مَّعَهَا سَآئِقٞ وَشَهِيدٞ ﴿21﴾وَجَآءَتۡ كُلُّ نَفۡسٖ مَّعَهَا سَآئِقٞ وَشَهِيدٞ
Transliteration: Wajaat kullu nafsin maAAaha saiqun washaheedun
Translation: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೊತೆಗೆ ಒಬ್ಬ ಸಾಗಾಟಗಾರ ಮತ್ತು ಸಾಕ್ಷಿಯನ್ನು ಹೊಂದಿರುವ ಸ್ಥಿತಿಯಲ್ಲಿ ಬರುವರು.[1]
لَّقَدۡ كُنتَ فِي غَفۡلَةٖ مِّنۡ هَٰذَا فَكَشَفۡنَا عَنكَ غِطَآءَكَ فَبَصَرُكَ ٱلۡيَوۡمَ حَدِيدٞ ﴿22﴾لَّقَدۡ كُنتَ فِي غَفۡلَةٖ مِّنۡ هَٰذَا فَكَشَفۡنَا عَنكَ غِطَآءَكَ فَبَصَرُكَ ٱلۡيَوۡمَ حَدِيدٞ
Transliteration: Laqad kunta fee ghaflatin min hatha fakashafna AAanka ghitaaka fabasaruka alyawma hadeedun
Translation: “ನಿಶ್ಚಯವಾಗಿಯೂ ನೀನು ಇದನ್ನು ನಿರ್ಲಕ್ಷಿಸಿದ್ದೆ. ಆದರೆ ನಾವು ನಿನ್ನ ಮುಂಭಾಗದಿಂದ ಪರದೆಯನ್ನು ನಿವಾರಿಸಿದ್ದೇವೆ. ಆದ್ದರಿಂದ ಇಂದು ನಿನ್ನ ದೃಷ್ಟಿಯು ಬಹಳ ಹರಿತವಾಗಿದೆ.”
وَقَالَ قَرِينُهُۥ هَٰذَا مَا لَدَيَّ عَتِيدٌ ﴿23﴾وَقَالَ قَرِينُهُۥ هَٰذَا مَا لَدَيَّ عَتِيدٌ
Transliteration: Waqala qareenuhu hatha ma ladayya AAateedun
Translation: ಅವನ ಜೊತೆಗಾರನು (ದೇವದೂತ) ಹೇಳುವನು: “ನನ್ನ ಬಳಿಯಿರುವ ಇದು (ದಾಖಲೆ) ಸಿದ್ಧವಾಗಿದೆ.”
أَلۡقِيَا فِي جَهَنَّمَ كُلَّ كَفَّارٍ عَنِيدٖ ﴿24﴾أَلۡقِيَا فِي جَهَنَّمَ كُلَّ كَفَّارٍ عَنِيدٖ
Transliteration: Alqiya fee jahannama kulla kaffarin AAaneedin
Translation: (ಅಲ್ಲಾಹು ಆಜ್ಞಾಪಿಸುವನು): “ಅವನನ್ನು ನರಕಕ್ಕೆ ಎಸೆದು ಬಿಡಿ—ಪ್ರತಿಯೊಬ್ಬ ಸತ್ಯನಿಷೇಧಿ ದುಷ್ಕರ್ಮಿಯನ್ನು.
مَّنَّاعٖ لِّلۡخَيۡرِ مُعۡتَدٖ مُّرِيبٍ ﴿25﴾مَّنَّاعٖ لِّلۡخَيۡرِ مُعۡتَدٖ مُّرِيبٍ
Transliteration: MannaAAin lilkhayri muAAtadin mureebin
Translation: ಒಳಿತನ್ನು ತಡೆಯುವ ಅತಿರೇಕಿ ಸಂಶಯಪಿಶಾಚಿಯನ್ನು.
ٱلَّذِي جَعَلَ مَعَ ٱللَّهِ إِلَٰهًا ءَاخَرَ فَأَلۡقِيَاهُ فِي ٱلۡعَذَابِ ٱلشَّدِيدِ ﴿26﴾ٱلَّذِي جَعَلَ مَعَ ٱللَّهِ إِلَٰهًا ءَاخَرَ فَأَلۡقِيَاهُ فِي ٱلۡعَذَابِ ٱلشَّدِيدِ
Transliteration: Allathee jaAAala maAAa Allahi ilahan akhara faalqiyahu fee alAAathabi alshshadeedi
Translation: ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ನಿಶ್ಚಯಿಸಿದವನನ್ನು. ಅವನನ್ನು ಕಠೋರ ಶಿಕ್ಷೆಗೆ ಎಸೆದುಬಿಡಿ.”
قَالَ قَرِينُهُۥ رَبَّنَا مَآ أَطۡغَيۡتُهُۥ وَلَٰكِن كَانَ فِي ضَلَٰلِۭ بَعِيدٖ ﴿27﴾۞قَالَ قَرِينُهُۥ رَبَّنَا مَآ أَطۡغَيۡتُهُۥ وَلَٰكِن كَانَ فِي ضَلَٰلِۭ بَعِيدٖ
Transliteration: Qala qareenuhu rabbana ma atghaytuhu walakin kana fee dalalin baAAeedin
Translation: ಅವನ ಜೊತೆಗಾರನು[1] ಹೇಳುವನು: “ನಮ್ಮ ಪರಿಪಾಲಕನೇ! ನಾನು ಅವನನ್ನು ದಾರಿತಪ್ಪಿಸಿಲ್ಲ. ಬದಲಿಗೆ, ಅವನೇ ವಿದೂರ ದುರ್ಮಾರ್ಗದಲ್ಲಿದ್ದ.”
قَالَ لَا تَخۡتَصِمُواْ لَدَيَّ وَقَدۡ قَدَّمۡتُ إِلَيۡكُم بِٱلۡوَعِيدِ ﴿28﴾قَالَ لَا تَخۡتَصِمُواْ لَدَيَّ وَقَدۡ قَدَّمۡتُ إِلَيۡكُم بِٱلۡوَعِيدِ
Transliteration: Qala la takhtasimoo ladayya waqad qaddamtu ilaykum bialwaAAeedi
Translation: ಅಲ್ಲಾಹು ಹೇಳುವನು: “ನನ್ನ ಮುಂದೆ ತರ್ಕ ಮಾಡಿಬೇಡಿ. ನಾನು ಈಗಾಗಲೇ ನಿಮ್ಮ ಬಳಿಗೆ ಎಚ್ಚರಿಕೆಯನ್ನು ಕಳುಹಿಸಿದ್ದೇನೆ.
مَا يُبَدَّلُ ٱلۡقَوۡلُ لَدَيَّ وَمَآ أَنَا۠ بِظَلَّـٰمٖ لِّلۡعَبِيدِ ﴿29﴾مَا يُبَدَّلُ ٱلۡقَوۡلُ لَدَيَّ وَمَآ أَنَا۠ بِظَلَّـٰمٖ لِّلۡعَبِيدِ
Transliteration: Ma yubaddalu alqawlu ladayya wama ana bithallamin lilAAabeedi
Translation: ನನ್ನ ಬಳಿ ಮಾತು ಬದಲಾಗುವುದಿಲ್ಲ. ನಾನು ದಾಸರಿಗೆ ಸ್ವಲ್ಪವೂ ಅನ್ಯಾಯ ಮಾಡುವವನಲ್ಲ.”
يَوۡمَ نَقُولُ لِجَهَنَّمَ هَلِ ٱمۡتَلَأۡتِ وَتَقُولُ هَلۡ مِن مَّزِيدٖ ﴿30﴾يَوۡمَ نَقُولُ لِجَهَنَّمَ هَلِ ٱمۡتَلَأۡتِ وَتَقُولُ هَلۡ مِن مَّزِيدٖ
Transliteration: Yawma naqoolu lijahannama hali imtalati wataqoolu hal min mazeedin
Translation: ನಾವು ನರಕದೊಂದಿಗೆ, “ನೀನು ತುಂಬಿದೆಯಾ?” ಎಂದು ಕೇಳುವ ಸಂದರ್ಭ. ಆಗ ಅದು ಕೇಳುವುದು: “ಹೆಚ್ಚು ಏನಾದರೂ ಇದೆಯೇ?”
وَأُزۡلِفَتِ ٱلۡجَنَّةُ لِلۡمُتَّقِينَ غَيۡرَ بَعِيدٍ ﴿31﴾وَأُزۡلِفَتِ ٱلۡجَنَّةُ لِلۡمُتَّقِينَ غَيۡرَ بَعِيدٍ
Transliteration: Waozlifati aljannatu lilmuttaqeena ghayra baAAeedin
Translation: ಸ್ವರ್ಗವನ್ನು ದೇವಭಯವುಳ್ಳವರ ಹತ್ತಿರಕ್ಕೆ ತರಲಾಗುವುದು. ಅದು ಅವರಿಗೆ ಸ್ವಲ್ಪವೂ ದೂರವಿರಲಾರದು.
هَٰذَا مَا تُوعَدُونَ لِكُلِّ أَوَّابٍ حَفِيظٖ ﴿32﴾هَٰذَا مَا تُوعَدُونَ لِكُلِّ أَوَّابٍ حَفِيظٖ
Transliteration: Hatha ma tooAAadoona likulli awwabin hafeethin
Translation: “ಇದು ನಿಮಗೆ—ನಿಮ್ಮ ಪೈಕಿ (ಅಲ್ಲಾಹನ ಕಡೆಗೆ ಪಶ್ಚಾತ್ತಪಪಟ್ಟು) ಮರಳುವ ಮತ್ತು (ಅಲ್ಲಾಹು ಕಡ್ಡಾಯಗೊಳಿಸಿದ್ದನ್ನು) ಪಾಲಿಸುವ ಪ್ರತಿಯೊಬ್ಬ ವ್ಯಕ್ತಿಗೆ—ವಾಗ್ದಾನ ಮಾಡಲಾದ ಸಂಗತಿಯಾಗಿದೆ.
مَّنۡ خَشِيَ ٱلرَّحۡمَٰنَ بِٱلۡغَيۡبِ وَجَآءَ بِقَلۡبٖ مُّنِيبٍ ﴿33﴾مَّنۡ خَشِيَ ٱلرَّحۡمَٰنَ بِٱلۡغَيۡبِ وَجَآءَ بِقَلۡبٖ مُّنِيبٍ
Transliteration: Man khashiya alrrahmana bialghaybi wajaa biqalbin muneebin
Translation: ಅದೃಶ್ಯ ಸ್ಥಿತಿಯಲ್ಲಿ ಪರಮ ದಯಾಮಯನನ್ನು (ಅಲ್ಲಾಹನನ್ನು) ಭಯಪಟ್ಟು (ಅಲ್ಲಾಹನ ಕಡೆಗೆ) ತಿರುಗಿದ ಹೃದಯದೊಂದಿಗೆ ಬಂದವನಿಗೆ.
ٱدۡخُلُوهَا بِسَلَٰمٖۖ ذَٰلِكَ يَوۡمُ ٱلۡخُلُودِ ﴿34﴾ٱدۡخُلُوهَا بِسَلَٰمٖۖ ذَٰلِكَ يَوۡمُ ٱلۡخُلُودِ
Transliteration: Odkhulooha bisalamin thalika yawmu alkhuloodi
Translation: ನೀವು ಸುರಕ್ಷಿತವಾಗಿ ಅದನ್ನು (ಸ್ವರ್ಗವನ್ನು) ಪ್ರವೇಶಿಸಿರಿ. ಇದು ಶಾಶ್ವತ ವಾಸದ ದಿನವಾಗಿದೆ.”
لَهُم مَّا يَشَآءُونَ فِيهَا وَلَدَيۡنَا مَزِيدٞ ﴿35﴾لَهُم مَّا يَشَآءُونَ فِيهَا وَلَدَيۡنَا مَزِيدٞ
Transliteration: Lahum ma yashaoona feeha waladayna mazeedun
Translation: ಅವರು ಇಚ್ಛಿಸುವುದೆಲ್ಲವೂ ಅಲ್ಲಿ ಅವರಿಗೆ ದೊರೆಯುವುದು. ನಮ್ಮ ಬಳಿ ಇನ್ನೂ ಹೆಚ್ಚಿಗೆಯಿದೆ.
وَكَمۡ أَهۡلَكۡنَا قَبۡلَهُم مِّن قَرۡنٍ هُمۡ أَشَدُّ مِنۡهُم بَطۡشٗا فَنَقَّبُواْ فِي ٱلۡبِلَٰدِ هَلۡ مِن مَّحِيصٍ ﴿36﴾وَكَمۡ أَهۡلَكۡنَا قَبۡلَهُم مِّن قَرۡنٍ هُمۡ أَشَدُّ مِنۡهُم بَطۡشٗا فَنَقَّبُواْ فِي ٱلۡبِلَٰدِ هَلۡ مِن مَّحِيصٍ
Transliteration: Wakam ahlakna qablahum min qarnin hum ashaddu minhum batshan fanaqqaboo fee albiladi hal min maheesin
Translation: ಇವರಿಗಿಂತ ಮೊದಲು ನಾವು ಅನೇಕ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ಅವರು ಇವರಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾಗಿದ್ದರು. ಅವರು ಊರಿಡೀ ಜಾಲಾಡಿ ನೋಡಿದರು—ಓಡಿ ಪಾರಾಗಲು ಯಾವುದಾದರೂ ಸ್ಥಳವಿದೆಯೇ ಎಂದು!
إِنَّ فِي ذَٰلِكَ لَذِكۡرَىٰ لِمَن كَانَ لَهُۥ قَلۡبٌ أَوۡ أَلۡقَى ٱلسَّمۡعَ وَهُوَ شَهِيدٞ ﴿37﴾إِنَّ فِي ذَٰلِكَ لَذِكۡرَىٰ لِمَن كَانَ لَهُۥ قَلۡبٌ أَوۡ أَلۡقَى ٱلسَّمۡعَ وَهُوَ شَهِيدٞ
Transliteration: Inna fee thalika lathikra liman kana lahu qalbun aw alqa alssamAAa wahuwa shaheedun
Translation: ನಿಶ್ಚಯವಾಗಿಯೂ ಅದರಲ್ಲಿ ನೀತಿಪಾಠವಿದೆ—ಹೃದಯವುಳ್ಳ ವ್ಯಕ್ತಿಗೆ ಅಥವಾ ಹೃದಯ ಸಾನಿಧ್ಯತೆಯಿಂದ ಕಿವಿಗೊಟ್ಟು ಕೇಳುವವನಿಗೆ.
وَلَقَدۡ خَلَقۡنَا ٱلسَّمَٰوَٰتِ وَٱلۡأَرۡضَ وَمَا بَيۡنَهُمَا فِي سِتَّةِ أَيَّامٖ وَمَا مَسَّنَا مِن لُّغُوبٖ ﴿38﴾وَلَقَدۡ خَلَقۡنَا ٱلسَّمَٰوَٰتِ وَٱلۡأَرۡضَ وَمَا بَيۡنَهُمَا فِي سِتَّةِ أَيَّامٖ وَمَا مَسَّنَا مِن لُّغُوبٖ
Transliteration: Walaqad khalaqna alssamawati waalarda wama baynahuma fee sittati ayyamin wama massana min lughoobin
Translation: ನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದೆವು. ಆಯಾಸವು ನಮ್ಮನ್ನು ಸ್ಪರ್ಶಿಸಲೇ ಇಲ್ಲ.
فَٱصۡبِرۡ عَلَىٰ مَا يَقُولُونَ وَسَبِّحۡ بِحَمۡدِ رَبِّكَ قَبۡلَ طُلُوعِ ٱلشَّمۡسِ وَقَبۡلَ ٱلۡغُرُوبِ ﴿39﴾فَٱصۡبِرۡ عَلَىٰ مَا يَقُولُونَ وَسَبِّحۡ بِحَمۡدِ رَبِّكَ قَبۡلَ طُلُوعِ ٱلشَّمۡسِ وَقَبۡلَ ٱلۡغُرُوبِ
Transliteration: Faisbir AAala ma yaqooloona wasabbih bihamdi rabbika qabla tulooAAi alshshamsi waqabla alghuroobi
Translation: ಆದ್ದರಿಂದ ಅವರು ಹೇಳುವ ಮಾತುಗಳ ಬಗ್ಗೆ ತಾಳ್ಮೆಯಿಂದಿರಿ. ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವರ ಪರಿಶುದ್ಧಿಯನ್ನು ಕೊಂಡಾಡಿರಿ.
وَمِنَ ٱلَّيۡلِ فَسَبِّحۡهُ وَأَدۡبَٰرَ ٱلسُّجُودِ ﴿40﴾وَمِنَ ٱلَّيۡلِ فَسَبِّحۡهُ وَأَدۡبَٰرَ ٱلسُّجُودِ
Transliteration: Wamina allayli fasabbihhu waadbara alssujoodi
Translation: ರಾತ್ರಿಯ ಸಮಯದಲ್ಲೂ ಮತ್ತು ನಮಾಝ್ ನಿರ್ವಹಿಸಿದ ಬಳಿಕವೂ ಅವನ ಪರಿಶುದ್ಧಿಯನ್ನು ಕೊಂಡಾಡಿರಿ.
وَٱسۡتَمِعۡ يَوۡمَ يُنَادِ ٱلۡمُنَادِ مِن مَّكَانٖ قَرِيبٖ ﴿41﴾وَٱسۡتَمِعۡ يَوۡمَ يُنَادِ ٱلۡمُنَادِ مِن مَّكَانٖ قَرِيبٖ
Transliteration: WaistamiAA yawma yunadi almunadi min makanin qareebin
Translation: ಕಿವಿಗೊಟ್ಟು ಕೇಳಿರಿ. ಕರೆಯುವವನು ಹತ್ತಿರದಲ್ಲೇ ಇರುವ ಒಂದು ಸ್ಥಳದಿಂದ ಕೂಗಿ ಕರೆಯುವ ದಿನ.
يَوۡمَ يَسۡمَعُونَ ٱلصَّيۡحَةَ بِٱلۡحَقِّۚ ذَٰلِكَ يَوۡمُ ٱلۡخُرُوجِ ﴿42﴾يَوۡمَ يَسۡمَعُونَ ٱلصَّيۡحَةَ بِٱلۡحَقِّۚ ذَٰلِكَ يَوۡمُ ٱلۡخُرُوجِ
Transliteration: Yawma yasmaAAoona alssayhata bialhaqqi thalika yawmu alkhurooji
Translation: ಆ ಭಯಾನಕ ಚೀತ್ಕಾರವನ್ನು ಖಾತ್ರಿಯಾಗಿ ಕೇಳುವ ದಿನ! ಅದು ಹೊರಡುವ ದಿನವಾಗಿದೆ.
إِنَّا نَحۡنُ نُحۡيِۦ وَنُمِيتُ وَإِلَيۡنَا ٱلۡمَصِيرُ ﴿43﴾إِنَّا نَحۡنُ نُحۡيِۦ وَنُمِيتُ وَإِلَيۡنَا ٱلۡمَصِيرُ
Transliteration: Inna nahnu nuhyee wanumeetu wailayna almaseeru
Translation: ನಿಶ್ಚಯವಾಗಿಯೂ ನಾವು ಜೀವ ಮತ್ತು ಮರಣವನ್ನು ನೀಡುವೆವು. ಗಮ್ಯಸ್ಥಾನವು ನಮ್ಮ ಬಳಿಯೇ ಆಗಿದೆ.
يَوۡمَ تَشَقَّقُ ٱلۡأَرۡضُ عَنۡهُمۡ سِرَاعٗاۚ ذَٰلِكَ حَشۡرٌ عَلَيۡنَا يَسِيرٞ ﴿44﴾يَوۡمَ تَشَقَّقُ ٱلۡأَرۡضُ عَنۡهُمۡ سِرَاعٗاۚ ذَٰلِكَ حَشۡرٌ عَلَيۡنَا يَسِيرٞ
Transliteration: Yawma tashaqqaqu alardu AAanhum siraAAan thalika hashrun AAalayna yaseerun
Translation: ಭೂಮಿಯು ಒಡೆದು ಸೀಳಾಗಿ ಅವರು ತರಾತುರಿಯಿಂದ (ಹೊರಬರುವ) ದಿನ. ಅವರನ್ನು ಒಟ್ಟುಗೂಡಿಸುವುದು ನಮ್ಮ ಮಟ್ಟಿಗೆ ಬಹಳ ಸುಲಭವಾಗಿದೆ.
نَّحۡنُ أَعۡلَمُ بِمَا يَقُولُونَۖ وَمَآ أَنتَ عَلَيۡهِم بِجَبَّارٖۖ فَذَكِّرۡ بِٱلۡقُرۡءَانِ مَن يَخَافُ وَعِيدِ ﴿45﴾نَّحۡنُ أَعۡلَمُ بِمَا يَقُولُونَۖ وَمَآ أَنتَ عَلَيۡهِم بِجَبَّارٖۖ فَذَكِّرۡ بِٱلۡقُرۡءَانِ مَن يَخَافُ وَعِيدِ
Transliteration: Nahnu aAAlamu bima yaqooloona wama anta AAalayhim bijabbarin fathakkir bialqurani man yakhafu waAAeedi
Translation: ಅವರು ಏನು ಹೇಳುತ್ತಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ. ನೀವು ಅವರ ಮೇಲೆ ಸರ್ವಾಧಿಕಾರವಿರುವವರಲ್ಲ. ನನ್ನ ಎಚ್ಚರಿಕೆಯನ್ನು ಭಯಪಡುವವರಿಗೆ ಕುರ್‌ಆನ್‍ನ ಮೂಲಕ ಉಪದೇಶವನ್ನು ನೀಡಿರಿ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download