quranm◉

Surah Nuh transliteration

◉ ಸೂರಾ · ∞

71:1

إِنَّآ أَرۡسَلۡنَا نُوحًا إِلَىٰ قَوۡمِهِۦٓ أَنۡ أَنذِرۡ قَوۡمَكَ مِن قَبۡلِ أَن يَأۡتِيَهُمۡ عَذَابٌ أَلِيمٞ ﴿1﴾

Transliteration: Inna arsalna noohan ila qawmihi an anthir qawmaka min qabli an yatiyahum AAathabun aleemun

Translation: ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. ಅವರಿಗೆ ಯಾತನಾಮಯ ಶಿಕ್ಷೆ ಎರಗುವುದಕ್ಕೆ ಮೊದಲೇ ಅವರಿಗೆ ಎಚ್ಚರಿಕೆ ನೀಡಿರಿ ಎಂಬ ಸಂದೇಶದೊಂದಿಗೆ.

71:2

قَالَ يَٰقَوۡمِ إِنِّي لَكُمۡ نَذِيرٞ مُّبِينٌ ﴿2﴾

Transliteration: Qala ya qawmi innee lakum natheerun mubeenun

Translation: ನೂಹ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.

71:3

أَنِ ٱعۡبُدُواْ ٱللَّهَ وَٱتَّقُوهُ وَأَطِيعُونِ ﴿3﴾

Transliteration: Ani oAAbudoo Allaha waittaqoohu waateeAAooni

Translation: ನೀವು ಅಲ್ಲಾಹನನ್ನು ಆರಾಧಿಸಿರಿ, ಅವನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

71:4

يَغۡفِرۡ لَكُم مِّن ذُنُوبِكُمۡ وَيُؤَخِّرۡكُمۡ إِلَىٰٓ أَجَلٖ مُّسَمًّىۚ إِنَّ أَجَلَ ٱللَّهِ إِذَا جَآءَ لَا يُؤَخَّرُۚ لَوۡ كُنتُمۡ تَعۡلَمُونَ ﴿4﴾

Transliteration: Yaghfir lakum min thunoobikum wayuakhkhirkum ila ajalin musamman inna ajala Allahi itha jaa la yuakhkharu law kuntum taAAlamoona

Translation: ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ಒಂದು ನಿಶ್ಚಿತ ಅವಧಿಯವರೆಗೆ ನಿಮ್ಮನ್ನು ಬಿಟ್ಟುಬಿಡುವನು. ನಿಶ್ಚಯವಾಗಿಯೂ ಅಲ್ಲಾಹನ ಅವಧಿಯು ಬಂದರೆ ಅದನ್ನು ಮುಂದೂಡಲಾಗುವುದಿಲ್ಲ. ನೀವು ತಿಳಿದವರಾಗಿದ್ದರೆ!

71:5

قَالَ رَبِّ إِنِّي دَعَوۡتُ قَوۡمِي لَيۡلٗا وَنَهَارٗا ﴿5﴾

Transliteration: Qala rabbi innee daAAawtu qawmee laylan wanaharan

Translation: ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನಾನು ನನ್ನ ಜನರನ್ನು ಹಗಲು-ರಾತ್ರಿ ನಿನ್ನ ಕಡೆಗೆ ಕರೆದಿದ್ದೇನೆ.

71:6

فَلَمۡ يَزِدۡهُمۡ دُعَآءِيٓ إِلَّا فِرَارٗا ﴿6﴾

Transliteration: Falam yazidhum duAAaee illa firaran

Translation: ಆದರೆ ನನ್ನ ಕರೆಯು ಅವರಿಗೆ ಪಲಾಯನವನ್ನೇ ವಿನಾ ಇನ್ನೇನನ್ನೂ ಹೆಚ್ಚಿಸಲಿಲ್ಲ.

71:7

وَإِنِّي كُلَّمَا دَعَوۡتُهُمۡ لِتَغۡفِرَ لَهُمۡ جَعَلُوٓاْ أَصَٰبِعَهُمۡ فِيٓ ءَاذَانِهِمۡ وَٱسۡتَغۡشَوۡاْ ثِيَابَهُمۡ وَأَصَرُّواْ وَٱسۡتَكۡبَرُواْ ٱسۡتِكۡبَارٗا ﴿7﴾

Transliteration: Wainnee kullama daAAawtuhum litaghfira lahum jaAAaloo asabiAAahum fee athanihim waistaghshaw thiyabahum waasarroo waistakbaroo istikbaran

Translation: ನಿಶ್ಚಯವಾಗಿಯೂ ನೀನು ಅವರನ್ನು ಕ್ಷಮಿಸಬೇಕೆಂದು ನಾನು ಅವರನ್ನು ನಿನ್ನ ಕಡೆಗೆ ಕರೆದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ಕಿವಿಗಳಲ್ಲಿಟ್ಟರು, ಬಟ್ಟೆಗಳಿಂದ ತಮ್ಮನ್ನು ಮುಚ್ಚಿಕೊಂಡರು, (ಸತ್ಯನಿಷೇಧದಲ್ಲಿ) ದೃಢವಾಗಿ ನಿಂತರು ಮತ್ತು ಮಹಾ ಅಹಂಕಾರವನ್ನು ತೋರಿದರು.

71:8

ثُمَّ إِنِّي دَعَوۡتُهُمۡ جِهَارٗا ﴿8﴾

Transliteration: Thumma innee daAAawtuhum jiharan

Translation: ನಂತರ ನಿಶ್ಚಯವಾಗಿಯೂ ನಾನು ಅವರನ್ನು ಉಚ್ಛ ಧ್ವನಿಯಲ್ಲಿ ಕರೆದೆ.

71:9

ثُمَّ إِنِّيٓ أَعۡلَنتُ لَهُمۡ وَأَسۡرَرۡتُ لَهُمۡ إِسۡرَارٗا ﴿9﴾

Transliteration: Thumma innee aAAlantu lahum waasrartu lahum israran

Translation: ನಂತರ ನಾನು ಅವರಿಗೆ ಬಹಿರಂಗವಾಗಿ ತಿಳಿಸಿದೆ. ಅತ್ಯಂತ ರಹಸ್ಯವಾಗಿಯೂ ತಿಳಿಸಿದೆ.

71:10

فَقُلۡتُ ٱسۡتَغۡفِرُواْ رَبَّكُمۡ إِنَّهُۥ كَانَ غَفَّارٗا ﴿10﴾

Transliteration: Faqultu istaghfiroo rabbakum innahu kana ghaffaran

Translation: ನಾನು ಹೇಳಿದೆ: “ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನು.

71:11

يُرۡسِلِ ٱلسَّمَآءَ عَلَيۡكُم مِّدۡرَارٗا ﴿11﴾

Transliteration: Yursili alssamaa AAalaykum midraran

Translation: ಅವನು ಆಕಾಶದಿಂದ ನಿಮಗೆ ಧಾರಾಕಾರ ಮಳೆಯನ್ನು ಸುರಿಸುವನು.

71:12

وَيُمۡدِدۡكُم بِأَمۡوَٰلٖ وَبَنِينَ وَيَجۡعَل لَّكُمۡ جَنَّـٰتٖ وَيَجۡعَل لَّكُمۡ أَنۡهَٰرٗا ﴿12﴾

Transliteration: Wayumdidkum biamwalin wabaneena wayajAAal lakum jannatin wayajAAal lakum anharan

Translation: ಅವನು ನಿಮಗೆ ಹೇರಳ ಆಸ್ತಿಪಾಸ್ತಿ ಮತ್ತು ಗಂಡುಮಕ್ಕಳನ್ನು ನೀಡಿ ನೆರವಾಗುವನು. ಅವನು ನಿಮಗೆ ತೋಟಗಳನ್ನು ಕೊಡುವನು ಮತ್ತು ಹೊಳೆಗಳನ್ನು ಹರಿಸುವನು.”

71:13

مَّا لَكُمۡ لَا تَرۡجُونَ لِلَّهِ وَقَارٗا ﴿13﴾

Transliteration: Ma lakum la tarjoona lillahi waqaran

Translation: ಅಲ್ಲಾಹನ ಮಹಿಮೆಯಲ್ಲಿ ನಂಬಿಕೆಯಿಡದಿರಲು ನಿಮಗೇನಾಗಿದೆ?

71:14

وَقَدۡ خَلَقَكُمۡ أَطۡوَارًا ﴿14﴾

Transliteration: Waqad khalaqakum atwaran

Translation: ಅವನು ನಿಮ್ಮನ್ನು ಹಲವು ಘಟ್ಟಗಳ ಮೂಲಕ ಸೃಷ್ಟಿಸಿದ್ದಾನೆ.

71:15

أَلَمۡ تَرَوۡاْ كَيۡفَ خَلَقَ ٱللَّهُ سَبۡعَ سَمَٰوَٰتٖ طِبَاقٗا ﴿15﴾

Transliteration: Alam taraw kayfa khalaqa Allahu sabAAa samawatin tibaqan

Translation: ಅಲ್ಲಾಹು ಏಳು ಆಕಾಶಗಳನ್ನು ಹೇಗೆ ಅಂತಸ್ತುಗಳಾಗಿ ಸೃಷ್ಟಿಸಿದ್ದಾನೆಂದು ನೀವು ನೋಡಿಲ್ಲವೇ?

71:16

وَجَعَلَ ٱلۡقَمَرَ فِيهِنَّ نُورٗا وَجَعَلَ ٱلشَّمۡسَ سِرَاجٗا ﴿16﴾

Transliteration: WajaAAala alqamara feehinna nooran wajaAAala alshshamsa sirajan

Translation: ಅವನು ಅವುಗಳಲ್ಲಿ ಚಂದ್ರನನ್ನು ಬೆಳಕಾಗಿ ಮತ್ತು ಸೂರ್ಯನನ್ನು (ಉರಿಯುವ) ದೀಪವಾಗಿ ಮಾಡಿದನು.

71:17

وَٱللَّهُ أَنۢبَتَكُم مِّنَ ٱلۡأَرۡضِ نَبَاتٗا ﴿17﴾

Transliteration: WaAllahu anbatakum mina alardi nabatan

Translation: ಅಲ್ಲಾಹು ನಿಮ್ಮನ್ನು (ವಿಶೇಷ ಮುತುವರ್ಜಿ ನೀಡಿ) ಭೂಮಿಯಿಂದ ಬೆಳೆಸಿದನು.

71:18

ثُمَّ يُعِيدُكُمۡ فِيهَا وَيُخۡرِجُكُمۡ إِخۡرَاجٗا ﴿18﴾

Transliteration: Thumma yuAAeedukum feeha wayukhrijukum ikhrajan

Translation: ನಂತರ ಅವನು ನಿಮ್ಮನ್ನು ಅದಕ್ಕೆ ಮರಳಿಸುವನು ಮತ್ತು (ವಿಶೇಷ ರೀತಿಯಲ್ಲಿ) ನಿಮ್ಮನ್ನು ಹೊರತರುವನು.

71:19

وَٱللَّهُ جَعَلَ لَكُمُ ٱلۡأَرۡضَ بِسَاطٗا ﴿19﴾

Transliteration: WaAllahu jaAAala lakumu alarda bisatan

Translation: ಅಲ್ಲಾಹು ನಿಮಗೆ ಭೂಮಿಯನ್ನು ಒಂದು ಹಾಸಿನಂತೆ ಮಾಡಿಕೊಟ್ಟನು.

71:20

لِّتَسۡلُكُواْ مِنۡهَا سُبُلٗا فِجَاجٗا ﴿20﴾

Transliteration: Litaslukoo minha subulan fijajan

Translation: ನೀವು ಅದರ ವಿಶಾಲವಾದ ದಾರಿಗಳಲ್ಲಿ ಸಾಗಲಿಕ್ಕಾಗಿ.

71:21

قَالَ نُوحٞ رَّبِّ إِنَّهُمۡ عَصَوۡنِي وَٱتَّبَعُواْ مَن لَّمۡ يَزِدۡهُ مَالُهُۥ وَوَلَدُهُۥٓ إِلَّا خَسَارٗا ﴿21﴾

Transliteration: Qala noohun rabbi innahum AAasawnee waittabaAAoo man lam yazidhu maluhu wawaladuhu illa khasaran

Translation: ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಅವರು ನನಗೆ ಅವಿಧೇಯತೆ ತೋರಿದ್ದಾರೆ. ಯಾರ ಆಸ್ತಿ ಹಾಗೂ ಮಕ್ಕಳು ಅವನಿಗೆ ನಷ್ಟವನ್ನಲ್ಲದೆ ಇನ್ನೇನನ್ನೂ ಹೆಚ್ಚಿಸುವುದಿಲ್ಲವೋ ಅಂತಹವನನ್ನು ಅವರು ಹಿಂಬಾಲಿಸಿದ್ದಾರೆ.

71:22

وَمَكَرُواْ مَكۡرٗا كُبَّارٗا ﴿22﴾

Transliteration: Wamakaroo makran kubbaran

Translation: ಅವರು ಬಹುದೊಡ್ಡ ಸಂಚು ರೂಪಿಸಿದ್ದಾರೆ.

71:23

وَقَالُواْ لَا تَذَرُنَّ ءَالِهَتَكُمۡ وَلَا تَذَرُنَّ وَدّٗا وَلَا سُوَاعٗا وَلَا يَغُوثَ وَيَعُوقَ وَنَسۡرٗا ﴿23﴾

Transliteration: Waqaloo la tatharunna alihatakum wala tatharunna waddan wala suwaAAan wala yaghootha wayaAAooqa wanasran

Translation: “(ಜನರೇ) ನೀವು ನಿಮ್ಮ ದೇವರುಗಳನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ. ವದ್ದ್, ಸುವಾಅ್, ಯಗೂಸ್, ಯಊಕ್ ಮತ್ತು ನಸ್ರ್‌ರನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ” ಎಂದು ಅವರು ಹೇಳುತ್ತಾರೆ.

71:24

وَقَدۡ أَضَلُّواْ كَثِيرٗاۖ وَلَا تَزِدِ ٱلظَّـٰلِمِينَ إِلَّا ضَلَٰلٗا ﴿24﴾

Transliteration: Waqad adalloo katheeran wala tazidi alththalimeena illa dalalan

Translation: ಅವರು ಈಗಾಗಲೇ ಬಹಳಷ್ಟು ಜನರನ್ನು ದಾರಿ ತಪ್ಪಿಸಿದ್ದಾರೆ. ನೀನು ಆ ಅಕ್ರಮಿಗಳಿಗೆ ಅವರ ದುರ್ಮಾರ್ಗವನ್ನು ಇನ್ನಷ್ಟು ಹೆಚ್ಚಿಸಿಕೊಡು.”

71:25

مِّمَّا خَطِيٓـَٰٔتِهِمۡ أُغۡرِقُواْ فَأُدۡخِلُواْ نَارٗا فَلَمۡ يَجِدُواْ لَهُم مِّن دُونِ ٱللَّهِ أَنصَارٗا ﴿25﴾

Transliteration: Mimma khateeatihim oghriqoo faodkhiloo naran falam yajidoo lahum min dooni Allahi ansaran

Translation: ಅವರ ಪಾಪಗಳ ಕಾರಣದಿಂದ ಅವರನ್ನು ಮುಳುಗಿಸಲಾಯಿತು. ನಂತರ ನರಕಾಗ್ನಿಗೆ ಪ್ರವೇಶ ಮಾಡಿಸಲಾಯಿತು. ಅವರು ಅಲ್ಲಾಹನ ಹೊರತು ಬೇರೆ ಯಾವುದೇ ಸಹಾಯಕರನ್ನು ಕಾಣಲಿಲ್ಲ.

71:26

وَقَالَ نُوحٞ رَّبِّ لَا تَذَرۡ عَلَى ٱلۡأَرۡضِ مِنَ ٱلۡكَٰفِرِينَ دَيَّارًا ﴿26﴾

Transliteration: Waqala noohun rabbi la tathar AAala alardi mina alkafireena dayyaran

Translation: ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನೀನು ಭೂಮಿಯ ಮೇಲೆ ಸತ್ಯನಿಷೇಧಿಗಳಲ್ಲಿ ಯಾರನ್ನೂ ವಾಸಿಸಲು ಬಿಡಬೇಡ.

71:27

إِنَّكَ إِن تَذَرۡهُمۡ يُضِلُّواْ عِبَادَكَ وَلَا يَلِدُوٓاْ إِلَّا فَاجِرٗا كَفَّارٗا ﴿27﴾

Transliteration: Innaka in tatharhum yudilloo AAibadaka wala yalidoo illa fajiran kaffaran

Translation: ನೀನೇನಾದರೂ ಅವರನ್ನು ಬಿಟ್ಟುಬಿಟ್ಟರೆ ಅವರು ನಿನ್ನ ದಾಸರನ್ನು ದಾರಿತಪ್ಪಿಸುವರು. ಅವರು ದುಷ್ಕರ್ಮಿಗಳು ಮತ್ತು ಸತ್ಯನಿಷೇಧಿಗಳಿಗೆ ಮಾತ್ರ ಜನ್ಮ ನೀಡುವರು.

71:28

رَّبِّ ٱغۡفِرۡ لِي وَلِوَٰلِدَيَّ وَلِمَن دَخَلَ بَيۡتِيَ مُؤۡمِنٗا وَلِلۡمُؤۡمِنِينَ وَٱلۡمُؤۡمِنَٰتِۖ وَلَا تَزِدِ ٱلظَّـٰلِمِينَ إِلَّا تَبَارَۢا ﴿28﴾

Transliteration: Rabbi ighfir lee waliwalidayya waliman dakhala baytiya muminan walilmumineena waalmuminati wala tazidi alththalimeena illa tabaran

Translation: ನನ್ನ ಪರಿಪಾಲಕನೇ! ನನಗೆ, ನನ್ನ ಮಾತಾಪಿತರಿಗೆ ಮತ್ತು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದವನಿಗೆ ಕ್ಷಮಿಸು. ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಕ್ಷಮಿಸು. ಅಕ್ರಮಿಗಳಿಗೆ ಸರ್ವನಾಶವಲ್ಲದೆ ಇನ್ನೇನೂ ಹೆಚ್ಚಿಸಬೇಡ.”

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download