quranm◉

Surah Ar-Rum transliteration

◉ ಸೂರಾ · ∞

30:1

الٓمٓ ﴿1﴾

Transliteration: Aliflammeem

Translation: ಅಲಿಫ್-ಲಾಮ್-ಮೀಮ್.

30:2

غُلِبَتِ ٱلرُّومُ ﴿2﴾

Transliteration: Ghulibati alrroomu

Translation: ರೋಮನ್ನರು ಪರಾಜಿತರಾದರು.

30:3

فِيٓ أَدۡنَى ٱلۡأَرۡضِ وَهُم مِّنۢ بَعۡدِ غَلَبِهِمۡ سَيَغۡلِبُونَ ﴿3﴾

Transliteration: Fee adna alardi wahum min baAAdi ghalabihim sayaghliboona

Translation: ಸಮೀಪದ ಪ್ರದೇಶದಲ್ಲಿ. ತಮ್ಮ ಪರಾಜಯದ ಬಳಿಕ ಅವರು ಸದ್ಯವೇ ವಿಜಯಿಗಳಾಗುವರು.[1]

30:4

فِي بِضۡعِ سِنِينَۗ لِلَّهِ ٱلۡأَمۡرُ مِن قَبۡلُ وَمِنۢ بَعۡدُۚ وَيَوۡمَئِذٖ يَفۡرَحُ ٱلۡمُؤۡمِنُونَ ﴿4﴾

Transliteration: Fee bidAAi sineena lillahi alamru min qablu wamin baAAdu wayawmaithin yafrahu almuminoona

Translation: ಕೆಲವೇ ವರ್ಷಗಳಲ್ಲಿ.[1] ಅದರ ಮುಂದಿನ ಮತ್ತು ಹಿಂದಿನ ಸಂಗತಿಗಳ ನಿಯಂತ್ರಣವು ಅಲ್ಲಾಹನ ಕೈಯಲ್ಲಿದೆ. ಅಂದು ಸತ್ಯವಿಶ್ವಾಸಿಗಳು ಸಂಭ್ರಮಿಸುವರು.

30:5

بِنَصۡرِ ٱللَّهِۚ يَنصُرُ مَن يَشَآءُۖ وَهُوَ ٱلۡعَزِيزُ ٱلرَّحِيمُ ﴿5﴾

Transliteration: Binasri Allahi yansuru man yashao wahuwa alAAazeezu alrraheemu

Translation: ಅಲ್ಲಾಹನ ಸಹಾಯದಿಂದ. ಅಲ್ಲಾಹು ಅವನು ಬಯಸುವವರಿಗೆ ಸಹಾಯ ಮಾಡುತ್ತಾನೆ. ಅವನು ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

30:6

وَعۡدَ ٱللَّهِۖ لَا يُخۡلِفُ ٱللَّهُ وَعۡدَهُۥ وَلَٰكِنَّ أَكۡثَرَ ٱلنَّاسِ لَا يَعۡلَمُونَ ﴿6﴾

Transliteration: WaAAda Allahi la yukhlifu Allahu waAAdahu walakinna akthara alnnasi la yaAAlamoona

Translation: ಇದು ಅಲ್ಲಾಹನ ವಾಗ್ದಾನವಾಗಿದೆ. ಅಲ್ಲಾಹು ಅವನ ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ. ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

30:7

يَعۡلَمُونَ ظَٰهِرٗا مِّنَ ٱلۡحَيَوٰةِ ٱلدُّنۡيَا وَهُمۡ عَنِ ٱلۡأٓخِرَةِ هُمۡ غَٰفِلُونَ ﴿7﴾

Transliteration: YaAAlamoona thahiran mina alhayati alddunya wahum AAani alakhirati hum ghafiloona

Translation: ಅವರು ಇಹಲೋಕ ಜೀವನದ ಬಹಿರಂಗ ವಿಷಯಗಳನ್ನು ಮಾತ್ರ ತಿಳಿದಿದ್ದಾರೆ. ಆದರೆ ಪರಲೋಕದ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ.

30:8

أَوَلَمۡ يَتَفَكَّرُواْ فِيٓ أَنفُسِهِمۗ مَّا خَلَقَ ٱللَّهُ ٱلسَّمَٰوَٰتِ وَٱلۡأَرۡضَ وَمَا بَيۡنَهُمَآ إِلَّا بِٱلۡحَقِّ وَأَجَلٖ مُّسَمّٗىۗ وَإِنَّ كَثِيرٗا مِّنَ ٱلنَّاسِ بِلِقَآيِٕ رَبِّهِمۡ لَكَٰفِرُونَ ﴿8﴾

Transliteration: Awalam yatafakkaroo fee anfusihim ma khalaqa Allahu alssamawati waalarda wama baynahuma illa bialhaqqi waajalin musamman wainna katheeran mina alnnasi biliqai rabbihim lakafiroona

Translation: ಅವರು ಸ್ವಯಂ ಆಲೋಚಿಸುವುದಿಲ್ಲವೇ? ಅಲ್ಲಾಹು ಭೂಮ್ಯಾಕಾಶಗಳನ್ನು ಹಾಗೂ ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳನ್ನು ಸತ್ಯ ಸಮೇತವಾಗಿ ಮತ್ತು ಒಂದು ನಿಶ್ಚಿತ ಅವಧಿಯವರೆಗೆ ಮಾತ್ರ ಸೃಷ್ಟಿಸಿದ್ದಾನೆ. ಜನರಲ್ಲಿ ಹೆಚ್ಚಿನವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವುದನ್ನು ನಿಷೇಧಿಸಿದವರಾಗಿದ್ದಾರೆ.

30:9

أَوَلَمۡ يَسِيرُواْ فِي ٱلۡأَرۡضِ فَيَنظُرُواْ كَيۡفَ كَانَ عَٰقِبَةُ ٱلَّذِينَ مِن قَبۡلِهِمۡۚ كَانُوٓاْ أَشَدَّ مِنۡهُمۡ قُوَّةٗ وَأَثَارُواْ ٱلۡأَرۡضَ وَعَمَرُوهَآ أَكۡثَرَ مِمَّا عَمَرُوهَا وَجَآءَتۡهُمۡ رُسُلُهُم بِٱلۡبَيِّنَٰتِۖ فَمَا كَانَ ٱللَّهُ لِيَظۡلِمَهُمۡ وَلَٰكِن كَانُوٓاْ أَنفُسَهُمۡ يَظۡلِمُونَ ﴿9﴾

Transliteration: Awalam yaseeroo fee alardi fayanthuroo kayfa kana AAaqibatu allatheena min qablihim kanoo ashadda minhum quwwatan waatharoo alarda waAAamarooha akthara mimma AAamarooha wajaathum rusuluhum bialbayyinati fama kana Allahu liyathlimahum walakin kanoo anfusahum yathlimoona

Translation: ಅವರು ಭೂಮಿಯಲ್ಲಿ ಸಂಚರಿಸಿ, ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅವರು ಇವರಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾಗಿದ್ದರು. ಅವರು ಭೂಮಿಯನ್ನು ಉತ್ತು ಬೇಸಾಯ ಮಾಡಿದರು. ಅವರು ಇವರಿಗಿಂತಲೂ ಹೆಚ್ಚು ಭೂಮಿಯಲ್ಲಿ ವಾಸವಾಗಿದ್ದರು. ನಮ್ಮ ಸಂದೇಶವಾಹಕರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಅಲ್ಲಾಹು ಅವರಿಗೆ ಯಾವುದೇ ಅನ್ಯಾಯ ಮಾಡಲಿಲ್ಲ. ಆದರೆ ಅವರು ಸ್ವತಃ ಅವರೊಂದಿಗೇ ಅನ್ಯಾಯವೆಸಗಿದರು.

30:10

ثُمَّ كَانَ عَٰقِبَةَ ٱلَّذِينَ أَسَـٰٓـُٔواْ ٱلسُّوٓأَىٰٓ أَن كَذَّبُواْ بِـَٔايَٰتِ ٱللَّهِ وَكَانُواْ بِهَا يَسۡتَهۡزِءُونَ ﴿10﴾

Transliteration: Thumma kana AAaqibata allatheena asaoo alssooa an kaththaboo biayati Allahi wakanoo biha yastahzioona

Translation: ನಂತರ, ದುಷ್ಕರ್ಮವೆಸಗಿದವರ ಅಂತ್ಯವು ಅತ್ಯಂತ ದುಸ್ತರವಾಗಿತ್ತು. ಏಕೆಂದರೆ ಅವರು ಅಲ್ಲಾಹನ ವಚನಗಳನ್ನು ನಿಷೇಧಿಸಿದರು ಮತ್ತು ಅವುಗಳನ್ನು ತಮಾಷೆ ಮಾಡುತ್ತಿದ್ದರು.

30:11

ٱللَّهُ يَبۡدَؤُاْ ٱلۡخَلۡقَ ثُمَّ يُعِيدُهُۥ ثُمَّ إِلَيۡهِ تُرۡجَعُونَ ﴿11﴾

Transliteration: Allahu yabdao alkhalqa thumma yuAAeeduhu thumma ilayhi turjaAAoona

Translation: ಅಲ್ಲಾಹು ಪ್ರಥಮ ಬಾರಿಗೆ ಸೃಷ್ಟಿಸುತ್ತಾನೆ. ನಂತರ ಅದನ್ನು ಪುನರಾವರ್ತಿಸುತ್ತಾನೆ. ನಂತರ ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.

30:12

وَيَوۡمَ تَقُومُ ٱلسَّاعَةُ يُبۡلِسُ ٱلۡمُجۡرِمُونَ ﴿12﴾

Transliteration: Wayawma taqoomu alssaAAatu yublisu almujrimoona

Translation: ಅಂತ್ಯಸಮಯವು ಸಂಭವಿಸುವ ದಿನ ಅಪರಾಧಿಗಳು ಹತಾಶರಾಗುವರು.

30:13

وَلَمۡ يَكُن لَّهُم مِّن شُرَكَآئِهِمۡ شُفَعَـٰٓؤُاْ وَكَانُواْ بِشُرَكَآئِهِمۡ كَٰفِرِينَ ﴿13﴾

Transliteration: Walam yakun lahum min shurakaihim shufaAAao wakanoo bishurakaihim kafireena

Translation: ಅವರು ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡಿದವರಲ್ಲಿ (ದೇವರುಗಳಲ್ಲಿ) ಯಾರೂ ಕೂಡ ಅವರಿಗೆ ಶಿಫಾರಸು ಮಾಡುವುದಿಲ್ಲ. ಸ್ವತಃ ಅವರೇ ಆ ಸಹಭಾಗಿಗಳನ್ನು ನಿಷೇಧಿಸುವರು.

30:14

وَيَوۡمَ تَقُومُ ٱلسَّاعَةُ يَوۡمَئِذٖ يَتَفَرَّقُونَ ﴿14﴾

Transliteration: Wayawma taqoomu alssaAAatu yawmaithin yatafarraqoona

Translation: ಅಂತ್ಯಸಮಯವು ಸಂಭವಿಸುವ ದಿನ. ಅಂದು ಅವರು ಪರಸ್ಪರ ಬೇರ್ಪಡುವರು.

30:15

فَأَمَّا ٱلَّذِينَ ءَامَنُواْ وَعَمِلُواْ ٱلصَّـٰلِحَٰتِ فَهُمۡ فِي رَوۡضَةٖ يُحۡبَرُونَ ﴿15﴾

Transliteration: Faamma allatheena amanoo waAAamiloo alssalihati fahum fee rawdatin yuhbaroona

Translation: ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರು ಉದ್ಯಾನವನದಲ್ಲಿ ಆನಂದದಿಂದ ನಲಿದಾಡುವರು.

30:16

وَأَمَّا ٱلَّذِينَ كَفَرُواْ وَكَذَّبُواْ بِـَٔايَٰتِنَا وَلِقَآيِٕ ٱلۡأٓخِرَةِ فَأُوْلَـٰٓئِكَ فِي ٱلۡعَذَابِ مُحۡضَرُونَ ﴿16﴾

Transliteration: Waamma allatheena kafaroo wakaththaboo biayatina waliqai alakhirati faolaika fee alAAathabi muhdaroona

Translation: ಆದರೆ ಸತ್ಯನಿಷೇಧಿಗಳು ಮತ್ತು ನಮ್ಮ ವಚನಗಳನ್ನು ಹಾಗೂ ಪರಲೋಕದ ಭೇಟಿಯನ್ನು ನಿಷೇಧಿಸಿದವರು ಯಾರೋ ಅವರನ್ನು ಶಿಕ್ಷೆಗಾಗಿ ಹಾಜರುಪಡಿಸಲಾಗುವುದು.

30:17

فَسُبۡحَٰنَ ٱللَّهِ حِينَ تُمۡسُونَ وَحِينَ تُصۡبِحُونَ ﴿17﴾

Transliteration: Fasubhana Allahi heena tumsoona waheena tusbihoona

Translation: ಸಂಜೆಯಾಗುವಾಗ ಮತ್ತು ಮುಂಜಾನೆಯಾಗುವಾಗ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡಿರಿ.

30:18

وَلَهُ ٱلۡحَمۡدُ فِي ٱلسَّمَٰوَٰتِ وَٱلۡأَرۡضِ وَعَشِيّٗا وَحِينَ تُظۡهِرُونَ ﴿18﴾

Transliteration: Walahu alhamdu fee alssamawati waalardi waAAashiyyan waheena tuthhiroona

Translation: ಭೂಮ್ಯಾಕಾಶಗಳಲ್ಲಿ ಸರ್ವಸ್ತುತಿಗಳು ಅವನಿಗೆ ಮಾತ್ರ ಮೀಸಲು. ರಾತ್ರಿ ಹಾಗೂ ಮಧ್ಯಾಹ್ನದಲ್ಲೂ ಅವನ್ನು ಕೊಂಡಾಡಿರಿ.

30:19

يُخۡرِجُ ٱلۡحَيَّ مِنَ ٱلۡمَيِّتِ وَيُخۡرِجُ ٱلۡمَيِّتَ مِنَ ٱلۡحَيِّ وَيُحۡيِ ٱلۡأَرۡضَ بَعۡدَ مَوۡتِهَاۚ وَكَذَٰلِكَ تُخۡرَجُونَ ﴿19﴾

Transliteration: Yukhriju alhayya mina almayyiti wayukhriju almayyita mina alhayyi wayuhyee alarda baAAda mawtiha wakathalika tukhrajoona

Translation: ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುತ್ತಾನೆ. ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ಜೀವವನ್ನು ನೀಡುತ್ತಾನೆ. ಇದೇ ರೀತಿ ನಿಮ್ಮನ್ನು ಕೂಡ ಹೊರತರಲಾಗುವುದು.

30:20

وَمِنۡ ءَايَٰتِهِۦٓ أَنۡ خَلَقَكُم مِّن تُرَابٖ ثُمَّ إِذَآ أَنتُم بَشَرٞ تَنتَشِرُونَ ﴿20﴾

Transliteration: Wamin ayatihi an khalaqakum min turabin thumma itha antum basharun tantashiroona

Translation: ಅವನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದ್ದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಂತರ ನೀವು (ಜಗತ್ತಿನಾದ್ಯಂತ) ಹಬ್ಬಿಕೊಂಡ ಮಾನುಕುಲವಾಗಿ ಮಾರ್ಪಟ್ಟಿರಿ.

30:21

وَمِنۡ ءَايَٰتِهِۦٓ أَنۡ خَلَقَ لَكُم مِّنۡ أَنفُسِكُمۡ أَزۡوَٰجٗا لِّتَسۡكُنُوٓاْ إِلَيۡهَا وَجَعَلَ بَيۡنَكُم مَّوَدَّةٗ وَرَحۡمَةًۚ إِنَّ فِي ذَٰلِكَ لَأٓيَٰتٖ لِّقَوۡمٖ يَتَفَكَّرُونَ ﴿21﴾

Transliteration: Wamin ayatihi an khalaqa lakum min anfusikum azwajan litaskunoo ilayha wajaAAala baynakum mawaddatan warahmatan inna fee thalika laayatin liqawmin yatafakkaroona

Translation: ನಿಮಗೆ ನಿಮ್ಮಿಂದಲೇ ಪತ್ನಿಯರನ್ನು ಸೃಷ್ಟಿಸಿದ್ದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನೀವು ಅವಳಲ್ಲಿ ನೆಮ್ಮದಿಯನ್ನು ಪಡೆಯುವುದಕ್ಕಾಗಿ. ಅವನು ನಿಮ್ಮ ನಡುವೆ ಪ್ರೀತಿ ಮತ್ತು ಅನುಕಂಪವನ್ನು ಇಟ್ಟನು. ನಿಶ್ಚಯವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

30:22

وَمِنۡ ءَايَٰتِهِۦ خَلۡقُ ٱلسَّمَٰوَٰتِ وَٱلۡأَرۡضِ وَٱخۡتِلَٰفُ أَلۡسِنَتِكُمۡ وَأَلۡوَٰنِكُمۡۚ إِنَّ فِي ذَٰلِكَ لَأٓيَٰتٖ لِّلۡعَٰلِمِينَ ﴿22﴾

Transliteration: Wamin ayatihi khalqu alssamawati waalardi waikhtilafu alsinatikum waalwanikum inna fee thalika laayatin lilAAalimeena

Translation: ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದು ಮತ್ತು ನಿಮ್ಮ ಭಾಷೆಗಳಲ್ಲಿ ಹಾಗೂ ವರ್ಣಗಳಲ್ಲಿ ವೈವಿಧ್ಯತೆಯನ್ನು ಮಾಡಿದ್ದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಿಶ್ಚಯವಾಗಿಯೂ ಜ್ಞಾನವಂತರಿಗೆ ಅದರಲ್ಲಿ ದೃಷ್ಟಾಂತಗಳಿವೆ.

30:23

وَمِنۡ ءَايَٰتِهِۦ مَنَامُكُم بِٱلَّيۡلِ وَٱلنَّهَارِ وَٱبۡتِغَآؤُكُم مِّن فَضۡلِهِۦٓۚ إِنَّ فِي ذَٰلِكَ لَأٓيَٰتٖ لِّقَوۡمٖ يَسۡمَعُونَ ﴿23﴾

Transliteration: Wamin ayatihi manamukum biallayli waalnnahari waibtighaokum min fadlihi inna fee thalika laayatin liqawmin yasmaAAoona

Translation: ನೀವು ರಾತ್ರಿಯಲ್ಲಿ ಮತ್ತು ಹಗಲಲ್ಲಿ ನಿದ್ದೆ ಮಾಡುವುದು ಹಾಗೂ ಅಲ್ಲಾಹನ ಔದಾರ್ಯದಿಂದ ನೀವು ಉಪಜೀವನವನ್ನು ಹುಡುಕುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಿಶ್ಚಯವಾಗಿಯೂ ಕಿವಿಗೊಡುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

30:24

وَمِنۡ ءَايَٰتِهِۦ يُرِيكُمُ ٱلۡبَرۡقَ خَوۡفٗا وَطَمَعٗا وَيُنَزِّلُ مِنَ ٱلسَّمَآءِ مَآءٗ فَيُحۡيِۦ بِهِ ٱلۡأَرۡضَ بَعۡدَ مَوۡتِهَآۚ إِنَّ فِي ذَٰلِكَ لَأٓيَٰتٖ لِّقَوۡمٖ يَعۡقِلُونَ ﴿24﴾

Transliteration: Wamin ayatihi yureekumu albarqa khawfan watamaAAan wayunazzilu mina alssamai maan fayuhyee bihi alarda baAAda mawtiha inna fee thalika laayatin liqawmin yaAAqiloona

Translation: ನಿಮ್ಮಲ್ಲಿ ಭಯ ಮತ್ತು ನಿರೀಕ್ಷೆಯನ್ನು ಹುಟ್ಟಿಸುತ್ತಾ ಮಿಂಚನ್ನು ತೋರಿಸುವುದು ಹಾಗೂ ಆಕಾಶದಿಂದ ಮಳೆಯನ್ನು ಸುರಿಸಿ ತನ್ಮೂಲಕ ನಿರ್ಜೀವ ಭೂಮಿಗೆ ಜೀವವನ್ನು ನೀಡುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಿಶ್ಚಯವಾಗಿಯೂ ಅರ್ಥಮಾಡಿಕೊಳ್ಳುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

30:25

وَمِنۡ ءَايَٰتِهِۦٓ أَن تَقُومَ ٱلسَّمَآءُ وَٱلۡأَرۡضُ بِأَمۡرِهِۦۚ ثُمَّ إِذَا دَعَاكُمۡ دَعۡوَةٗ مِّنَ ٱلۡأَرۡضِ إِذَآ أَنتُمۡ تَخۡرُجُونَ ﴿25﴾

Transliteration: Wamin ayatihi an taqooma alssamao waalardu biamrihi thumma itha daAAakum daAAwatan mina alardi itha antum takhrujoona

Translation: ಭೂಮ್ಯಾಕಾಶವು ಅವನ ಆಜ್ಞೆಯಂತೆ ಅಸ್ತಿತ್ವದಲ್ಲಿರುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಂತರ ಅವನು ಭೂಮಿಯಿಂದ ನಿಮ್ಮನ್ನು ಒಮ್ಮೆ ಕರೆದು ಬಿಟ್ಟರೆ, ಅಗೋ! ನೀವು ಹೊರಟು ಬರುತ್ತೀರಿ.

30:26

وَلَهُۥ مَن فِي ٱلسَّمَٰوَٰتِ وَٱلۡأَرۡضِۖ كُلّٞ لَّهُۥ قَٰنِتُونَ ﴿26﴾

Transliteration: Walahu man fee alssamawati waalardi kullun lahu qanitoona

Translation: ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅವನ ನಿಯಂತ್ರಣದಲ್ಲಿದ್ದಾರೆ. ಎಲ್ಲರೂ ಅವನ ಆಜ್ಞೆಗೆ ವಿಧೇಯರಾಗಿದ್ದಾರೆ.

30:27

وَهُوَ ٱلَّذِي يَبۡدَؤُاْ ٱلۡخَلۡقَ ثُمَّ يُعِيدُهُۥ وَهُوَ أَهۡوَنُ عَلَيۡهِۚ وَلَهُ ٱلۡمَثَلُ ٱلۡأَعۡلَىٰ فِي ٱلسَّمَٰوَٰتِ وَٱلۡأَرۡضِۚ وَهُوَ ٱلۡعَزِيزُ ٱلۡحَكِيمُ ﴿27﴾

Transliteration: Wahuwa allathee yabdao alkhalqa thumma yuAAeeduhu wahuwa ahwanu AAalayhi walahu almathalu alaAAla fee alssamawati waalardi wahuwa alAAazeezu alhakeemu

Translation: ಅವನೇ ಪ್ರಥಮ ಬಾರಿಗೆ ಸೃಷ್ಟಿಸುವವನು ಮತ್ತು ನಂತರ ಅದನ್ನು ಪುನರಾವರ್ತಿಸುವವನು. ಅದು ಅವನಿಗೆ ಅತ್ಯಂತ ಸುಲಭವಾಗಿದೆ. ಅವನಿಗೆ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಉನ್ನತ ಗುಣಲಕ್ಷಣಗಳಿವೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

30:28

ضَرَبَ لَكُم مَّثَلٗا مِّنۡ أَنفُسِكُمۡۖ هَل لَّكُم مِّن مَّا مَلَكَتۡ أَيۡمَٰنُكُم مِّن شُرَكَآءَ فِي مَا رَزَقۡنَٰكُمۡ فَأَنتُمۡ فِيهِ سَوَآءٞ تَخَافُونَهُمۡ كَخِيفَتِكُمۡ أَنفُسَكُمۡۚ كَذَٰلِكَ نُفَصِّلُ ٱلۡأٓيَٰتِ لِقَوۡمٖ يَعۡقِلُونَ ﴿28﴾

Transliteration: Daraba lakum mathalan min anfusikum hal lakum mi mma malakat aymanukum min shurakaa fee ma razaqnakum faantum feehi sawaon takhafoonahum kakheefatikum anfusakum kathalika nufassilu alayati liqawmin yaAAqiloona

Translation: ಅಲ್ಲಾಹು ನಿಮಗೆ ನಿಮ್ಮಿಂದಲೇ ಒಂದು ಉದಾಹರಣೆಯನ್ನು ನೀಡುತ್ತಾನೆ. ನಾವು ನಿಮಗೆ ನೀಡಿದ ಸವಲತ್ತುಗಳಲ್ಲಿ ನಿಮ್ಮ ಗುಲಾಮರು ಯಾರಾದರೂ ನಿಮ್ಮ ಪಾಲುದಾರರಾಗಿದ್ದಾರೆಯೇ? ಅಂದರೆ, ನಿಮಗೆ ಮತ್ತು ಅವರಿಗೆ ಸಮಾನ ಸ್ಥಾನಮಾನವಿರುವ ರೀತಿಯಲ್ಲಿ? ನೀವು ಸ್ವತಃ ನಿಮ್ಮ ಬಗ್ಗೆ ಭಯಪಡುವಂತೆ ಅವರ ಬಗ್ಗೆಯೂ ಭಯಪಡುವ ರೀತಿಯಲ್ಲಿ? ಅರ್ಥಮಾಡಿಕೊಳ್ಳುವ ಜನರಿಗೆ ನಾವು ಈ ರೀತಿ ವಚನಗಳನ್ನು ವಿವರಿಸಿಕೊಡುತ್ತೇವೆ.

30:29

بَلِ ٱتَّبَعَ ٱلَّذِينَ ظَلَمُوٓاْ أَهۡوَآءَهُم بِغَيۡرِ عِلۡمٖۖ فَمَن يَهۡدِي مَنۡ أَضَلَّ ٱللَّهُۖ وَمَا لَهُم مِّن نَّـٰصِرِينَ ﴿29﴾

Transliteration: Bali ittabaAAa allatheena thalamoo ahwaahum bighayri AAilmin faman yahdee man adalla Allahu wama lahum min nasireena

Translation: ಆದರೆ ಅಕ್ರಮವೆಸಗಿದವರು ಯಾವುದೇ ಜ್ಞಾನವಿಲ್ಲದೆ ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಅಲ್ಲಾಹು ದಾರಿತಪ್ಪಿಸಿದವರಿಗೆ ಸನ್ಮಾರ್ಗ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಅವರಿಗೆ ಯಾವುದೇ ಸಹಾಯಕರೂ ಇರುವುದಿಲ್ಲ.

30:30

فَأَقِمۡ وَجۡهَكَ لِلدِّينِ حَنِيفٗاۚ فِطۡرَتَ ٱللَّهِ ٱلَّتِي فَطَرَ ٱلنَّاسَ عَلَيۡهَاۚ لَا تَبۡدِيلَ لِخَلۡقِ ٱللَّهِۚ ذَٰلِكَ ٱلدِّينُ ٱلۡقَيِّمُ وَلَٰكِنَّ أَكۡثَرَ ٱلنَّاسِ لَا يَعۡلَمُونَ ﴿30﴾

Transliteration: Faaqim wajhaka lilddeeni haneefan fitrata Allahi allatee fatara alnnasa AAalayha la tabdeela likhalqi Allahi thalika alddeenu alqayyimu walakinna akthara alnnasi la yaAAlamoona

Translation: ಆದ್ದರಿಂದ ನೀವು ಏಕನಿಷ್ಠರಾಗಿ ನಿಮ್ಮ ಮುಖವನ್ನು ಧರ್ಮದ ಕಡೆಗೆ ತಿರುಗಿಸಿರಿ. ಅದು ಅಲ್ಲಾಹು ಮನುಷ್ಯರನ್ನು ಸೃಷ್ಟಿಸಿದ ಸಹಜ ಮನೋಧರ್ಮವಾಗಿದೆ. ಅಲ್ಲಾಹನ ಸೃಷ್ಟಿ ನಿಯಮಕ್ಕೆ ಯಾವುದೇ ಬದಲಾವಣೆಯಿಲ್ಲ. ಅದೇ ನೇರವಾದ ಧರ್ಮ. ಆದರೆ ಮನುಷ್ಯರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

30:31

مُنِيبِينَ إِلَيۡهِ وَٱتَّقُوهُ وَأَقِيمُواْ ٱلصَّلَوٰةَ وَلَا تَكُونُواْ مِنَ ٱلۡمُشۡرِكِينَ ﴿31﴾

Transliteration: Muneebeena ilayhi waittaqoohu waaqeemoo alssalata wala takoonoo mina almushrikeena

Translation: ಅಲ್ಲಾಹನ ಕಡೆಗೆ ತಿರುಗಿ ಅವನನ್ನು ಭಯಪಡಿರಿ ಮತ್ತು ನಮಾಝ್ ಸಂಸ್ಥಾಪಿಸಿರಿ. ಬಹುದೇವಾರಾಧಕರಲ್ಲಿ ಸೇರಬೇಡಿ.

30:32

مِنَ ٱلَّذِينَ فَرَّقُواْ دِينَهُمۡ وَكَانُواْ شِيَعٗاۖ كُلُّ حِزۡبِۭ بِمَا لَدَيۡهِمۡ فَرِحُونَ ﴿32﴾

Transliteration: Mina allatheena farraqoo deenahum wakanoo shiyaAAan kullu hizbin bima ladayhim farihoona

Translation: ಅಂದರೆ, ತಮ್ಮ ಧರ್ಮವನ್ನು ಒಡೆದು ಹಲವಾರು ಪಂಗಡಗಳಾಗಿ ಬಿಟ್ಟವರು. ಪ್ರತಿಯೊಂದು ಪಂಗಡವೂ ಅದರ ಕೈಯಲ್ಲಿ ಏನಿದೆಯೋ ಅದರಲ್ಲಿ ಸಂಭ್ರಮಿಸುತ್ತಿದೆ.

30:33

وَإِذَا مَسَّ ٱلنَّاسَ ضُرّٞ دَعَوۡاْ رَبَّهُم مُّنِيبِينَ إِلَيۡهِ ثُمَّ إِذَآ أَذَاقَهُم مِّنۡهُ رَحۡمَةً إِذَا فَرِيقٞ مِّنۡهُم بِرَبِّهِمۡ يُشۡرِكُونَ ﴿33﴾

Transliteration: Waitha massa alnnasa durrun daAAaw rabbahum muneebeena ilayhi thumma itha athaqahum minhu rahmatan itha fareequn minhum birabbihim yushrikoona

Translation: ಜನರಿಗೆ ಏನಾದರೂ ತೊಂದರೆಯುಂಟಾದರೆ, ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ಸಂಪೂರ್ಣವಾಗಿ ತಿರುಗಿ ಅವನನ್ನು ಕರೆದು ಪ್ರಾರ್ಥಿಸುತ್ತಾರೆ. ನಂತರ ಅಲ್ಲಾಹು ಅವರಿಗೆ ತನ್ನ ದಯೆಯ ರುಚಿಯನ್ನು ತೋರಿಸಿದರೆ, ಅವರಲ್ಲೊಂದು ಗುಂಪು ತಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಸಹಭಾಗಿತ್ವ (ಶಿರ್ಕ್) ಮಾಡುತ್ತಾರೆ.

30:34

لِيَكۡفُرُواْ بِمَآ ءَاتَيۡنَٰهُمۡۚ فَتَمَتَّعُواْ فَسَوۡفَ تَعۡلَمُونَ ﴿34﴾

Transliteration: Liyakfuroo bima ataynahum fatamattaAAoo fasawfa taAAlamoona

Translation: ನಾವು ಅವರಿಗೆ ದಯಪಾಲಿಸಿದ ಅನುಗ್ರಹಗಳಿಗೆ ಕೃತಘ್ನತೆ ತೋರಲೆಂದು! ಸರಿ, ನೀವು ಆನಂದಿಸಿ. ಸದ್ಯವೇ ನಿಮಗೆ ತಿಳಿಯಲಿದೆ.

30:35

أَمۡ أَنزَلۡنَا عَلَيۡهِمۡ سُلۡطَٰنٗا فَهُوَ يَتَكَلَّمُ بِمَا كَانُواْ بِهِۦ يُشۡرِكُونَ ﴿35﴾

Transliteration: Am anzalna AAalayhim sultanan fahuwa yatakallamu bima kanoo bihi yushrikoona

Translation: ನಾವು ಅವರಿಗೆ ಏನಾದರೂ ಸಾಕ್ಷ್ಯಾಧಾರವನ್ನು ಅವತೀರ್ಣಗೊಳಿಸಿದ್ದು, ಅದು ಅವರು ಮಾಡುತ್ತಿರುವ ಸಹಭಾಗಿತ್ವದ (ಶಿರ್ಕ್‌) ಬಗ್ಗೆ ಮಾತನಾಡುತ್ತದೆಯೇ?

30:36

وَإِذَآ أَذَقۡنَا ٱلنَّاسَ رَحۡمَةٗ فَرِحُواْ بِهَاۖ وَإِن تُصِبۡهُمۡ سَيِّئَةُۢ بِمَا قَدَّمَتۡ أَيۡدِيهِمۡ إِذَا هُمۡ يَقۡنَطُونَ ﴿36﴾

Transliteration: Waitha athaqna alnnasa rahmatan farihoo biha wain tusibhum sayyiatun bima qaddamat aydeehim itha hum yaqnatoona

Translation: ನಾವು ಮನುಷ್ಯರಿಗೆ ದಯೆಯ ರುಚಿಯನ್ನು ತೋರಿಸಿದರೆ ಅವರು ಸಂತೋಷಪಡುತ್ತಾರೆ. ಆದರೆ, ಅವರ ಕೈಗಳು ಮುಂದಕ್ಕೆ ಕಳುಹಿಸಿರುವ ದುಷ್ಕರ್ಮಗಳ ಕಾರಣದಿಂದ ಅವರಿಗೇನಾದರೂ ಅನಾಹುತ ಸಂಭವಿಸಿದರೆ ಅಗೋ! ಅವರು ಹತಾಶರಾಗಿ ಬಿಡುತ್ತಾರೆ.

30:37

أَوَلَمۡ يَرَوۡاْ أَنَّ ٱللَّهَ يَبۡسُطُ ٱلرِّزۡقَ لِمَن يَشَآءُ وَيَقۡدِرُۚ إِنَّ فِي ذَٰلِكَ لَأٓيَٰتٖ لِّقَوۡمٖ يُؤۡمِنُونَ ﴿37﴾

Transliteration: Awalam yaraw anna Allaha yabsutu alrrizqa liman yashao wayaqdiru inna fee thalika laayatin liqawmin yuminoona

Translation: ಅಲ್ಲಾಹು ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಇಕ್ಕಟ್ಟುಗೊಳಿಸುತ್ತಾನೆಂದು ಅವರು ನೋಡಿಲ್ಲವೇ?ನಿಶ್ಚಯವಾಗಿಯೂ ವಿಶ್ವಾಸವಿಡುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

30:38

فَـَٔاتِ ذَا ٱلۡقُرۡبَىٰ حَقَّهُۥ وَٱلۡمِسۡكِينَ وَٱبۡنَ ٱلسَّبِيلِۚ ذَٰلِكَ خَيۡرٞ لِّلَّذِينَ يُرِيدُونَ وَجۡهَ ٱللَّهِۖ وَأُوْلَـٰٓئِكَ هُمُ ٱلۡمُفۡلِحُونَ ﴿38﴾

Transliteration: Faati tha alqurba haqqahu waalmiskeena waibna alssabeeli thalika khayrun lillatheena yureedoona wajha Allahi waolaika humu almuflihoona

Translation: ಆದ್ದರಿಂದ ನೀವು ಕುಟುಂಬ ಸಂಬಂಧಿಕರಿಗೆ ಅವರ ಹಕ್ಕನ್ನು ನೀಡಿರಿ. ಬಡವರಿಗೂ, ಪ್ರಯಾಣಿಕರಿಗೂ (ಅವರ ಹಕ್ಕನ್ನು ನೀಡಿರಿ). ಅಲ್ಲಾಹನ ಮುಖವನ್ನು ಬಯಸುವವರಿಗೆ ಅದು ಉತ್ತಮವಾಗಿದೆ. ಅವರೇ ಯಶಸ್ವಿಯಾದವರು.

30:39

وَمَآ ءَاتَيۡتُم مِّن رِّبٗا لِّيَرۡبُوَاْ فِيٓ أَمۡوَٰلِ ٱلنَّاسِ فَلَا يَرۡبُواْ عِندَ ٱللَّهِۖ وَمَآ ءَاتَيۡتُم مِّن زَكَوٰةٖ تُرِيدُونَ وَجۡهَ ٱللَّهِ فَأُوْلَـٰٓئِكَ هُمُ ٱلۡمُضۡعِفُونَ ﴿39﴾

Transliteration: Wama ataytum min riban liyarbuwa fee amwali alnnasi fala yarboo AAinda Allahi wama ataytum min zakatin tureedoona wajha Allahi faolaika humu almudAAifoona

Translation: ಜನರ ಧನದಲ್ಲಿ ಹೆಚ್ಚಾಗುತ್ತಾ ಇರಲು ನೀವು ಏನನ್ನು ಬಡ್ಡಿಗೆ ನೀಡುತ್ತೀರೋ ಅದು ಅಲ್ಲಾಹನ ಬಳಿ ಹೆಚ್ಚಾಗುವುದಿಲ್ಲ. ಆದರೆ ನೀವು ಅಲ್ಲಾಹನ ಮುಖವನ್ನು ಬಯಸಿ ನೀಡುವ ಝಕಾತ್—ಅವರೇ ಇಮ್ಮಡಿ ಪ್ರತಿಫಲವನ್ನು ಪಡೆಯುವವರು.

30:40

ٱللَّهُ ٱلَّذِي خَلَقَكُمۡ ثُمَّ رَزَقَكُمۡ ثُمَّ يُمِيتُكُمۡ ثُمَّ يُحۡيِيكُمۡۖ هَلۡ مِن شُرَكَآئِكُم مَّن يَفۡعَلُ مِن ذَٰلِكُم مِّن شَيۡءٖۚ سُبۡحَٰنَهُۥ وَتَعَٰلَىٰ عَمَّا يُشۡرِكُونَ ﴿40﴾

Transliteration: Allahu allathee khalaqakum thumma razaqakum thumma yumeetukum thumma yuhyeekum hal min shurakaikum man yafAAalu min thalikum min shayin subhanahu wataAAala AAamma yushrikoona

Translation: ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿದವನು. ನಂತರ ಅವನು ನಿಮಗೆ ಉಪಜೀವನವನ್ನು ಒದಗಿಸಿದನು. ನಂತರ ಅವನು ನಿಮ್ಮನ್ನು ಮೃತಪಡಿಸುತ್ತಾನೆ. ನಂತರ ಪುನಃ ನಿಮಗೆ ಜೀವವನ್ನು ನೀಡುತ್ತಾನೆ. ನೀವು ಅಲ್ಲಾಹನೊಂದಿಗೆ ಸಹಭಾಗಿಗಳಾಗಿ ಮಾಡಿದವರಲ್ಲಿ (ನಿಮ್ಮ ದೇವರುಗಳಲ್ಲಿ) ಯಾರಾದರೂ ಒಬ್ಬರು ಇವುಗಳಲ್ಲಿ ಯಾವುದಾದರೂ ಒಂದನ್ನು ಮಾಡುವರೇ? ಅವರು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ಅಲ್ಲಾಹು ಎಷ್ಟೋ ಪರಿಶುದ್ಧನು ಮತ್ತು ಪರಮೋನ್ನತನಾಗಿದ್ದಾನೆ.

30:41

ظَهَرَ ٱلۡفَسَادُ فِي ٱلۡبَرِّ وَٱلۡبَحۡرِ بِمَا كَسَبَتۡ أَيۡدِي ٱلنَّاسِ لِيُذِيقَهُم بَعۡضَ ٱلَّذِي عَمِلُواْ لَعَلَّهُمۡ يَرۡجِعُونَ ﴿41﴾

Transliteration: Thahara alfasadu fee albarri waalbahri bima kasabat aydee alnnasi liyutheeqahum baAAda allathee AAamiloo laAAallahum yarjiAAoona

Translation: ಮನುಷ್ಯರು ಮಾಡಿದ ದುಷ್ಕರ್ಮಗಳ ಕಾರಣದಿಂದ ನೆಲದಲ್ಲೂ, ಕಡಲಲ್ಲೂ ವಿನಾಶವು ಹರಡಿಕೊಂಡಿದೆ. ಅವರು ಮಾಡಿದ ಕೆಲವು ಕರ್ಮಗಳ ರುಚಿಯನ್ನು ಅವರಿಗೆ ತೋರಿಸಲೆಂದು. ಅವರು (ಸತ್ಯಮಾರ್ಗಕ್ಕೆ) ಮರಳಿ ಬರುವುದಕ್ಕಾಗಿ.

30:42

قُلۡ سِيرُواْ فِي ٱلۡأَرۡضِ فَٱنظُرُواْ كَيۡفَ كَانَ عَٰقِبَةُ ٱلَّذِينَ مِن قَبۡلُۚ كَانَ أَكۡثَرُهُم مُّشۡرِكِينَ ﴿42﴾

Transliteration: Qul seeroo fee alardi faonthuroo kayfa kana AAaqibatu allatheena min qablu kana aktharuhum mushrikeena

Translation: ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿ ಹಿಂದಿನ ಕಾಲದ ಜನರ ಅಂತ್ಯವು ಹೇಗಿತ್ತೆಂದು ನೋಡಿರಿ. ಅವರಲ್ಲಿ ಹೆಚ್ಚಿನವರು ಬಹುದೇವಾರಾಧಕರಾಗಿದ್ದರು.”

30:43

فَأَقِمۡ وَجۡهَكَ لِلدِّينِ ٱلۡقَيِّمِ مِن قَبۡلِ أَن يَأۡتِيَ يَوۡمٞ لَّا مَرَدَّ لَهُۥ مِنَ ٱللَّهِۖ يَوۡمَئِذٖ يَصَّدَّعُونَ ﴿43﴾

Transliteration: Faaqim wajhaka lilddeeni alqayyimi min qabli an yatiya yawmun la maradda lahu mina Allahi yawmaithin yassaddaAAoona

Translation: ಯಾರಿಗೂ ತಡೆಯೊಡ್ಡಲು ಸಾಧ್ಯವಾಗದ ಒಂದು ದಿನ ಬರುವುದಕ್ಕೆ ಮೊದಲು ನೀವು ನಿಮ್ಮ ಮುಖವನ್ನು ನೇರವಾದ ಧರ್ಮದ ಕಡೆಗೆ ತಿರುಗಿಸಿರಿ. ಅಂದು ಎಲ್ಲರೂ ಬೇರೆ ಬೇರೆಯಾಗಿ ಬಿಡುವರು.

30:44

مَن كَفَرَ فَعَلَيۡهِ كُفۡرُهُۥۖ وَمَنۡ عَمِلَ صَٰلِحٗا فَلِأَنفُسِهِمۡ يَمۡهَدُونَ ﴿44﴾

Transliteration: Man kafara faAAalayhi kufruhu waman AAamila salihan falianfusihim yamhadoona

Translation: ಯಾರು ಸತ್ಯವನ್ನು ನಿಷೇಧಿಸುತ್ತಾರೋ ಅವರ ಸತ್ಯನಿಷೇಧವು ಅವರಿಗೇ ಕೆಡುಕಾಗಿದೆ. ಯಾರು ಸತ್ಕರ್ಮವೆಸಗುತ್ತಾರೋ ಅವರು ಸ್ವಯಂ ಅವರಿಗೇ ವಾಸ್ತವ್ಯಗಳನ್ನು ಸಿದ್ಧಗೊಳಿಸುತ್ತಿದ್ದಾರೆ.

30:45

لِيَجۡزِيَ ٱلَّذِينَ ءَامَنُواْ وَعَمِلُواْ ٱلصَّـٰلِحَٰتِ مِن فَضۡلِهِۦٓۚ إِنَّهُۥ لَا يُحِبُّ ٱلۡكَٰفِرِينَ ﴿45﴾

Transliteration: Liyajziya allatheena amanoo waAAamiloo alssalihati min fadlihi innahu la yuhibbu alkafireena

Translation: ಅಲ್ಲಾಹು ತನ್ನ ಔದಾರ್ಯದಿಂದ ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಕರ್ಮವೆಸಗಿದವರಿಗೆ ಪ್ರತಿಫಲವನ್ನು ನೀಡಲೆಂದು. ಅವನು ಸತ್ಯನಿಷೇಧಿಗಳನ್ನು ಎಂದಿಗೂ ಇಷ್ಟಪಡುವುದಿಲ್ಲ.

30:46

وَمِنۡ ءَايَٰتِهِۦٓ أَن يُرۡسِلَ ٱلرِّيَاحَ مُبَشِّرَٰتٖ وَلِيُذِيقَكُم مِّن رَّحۡمَتِهِۦ وَلِتَجۡرِيَ ٱلۡفُلۡكُ بِأَمۡرِهِۦ وَلِتَبۡتَغُواْ مِن فَضۡلِهِۦ وَلَعَلَّكُمۡ تَشۡكُرُونَ ﴿46﴾

Transliteration: Wamin ayatihi an yursila alrriyaha mubashshiratin waliyutheeqakum min rahmatihi walitajriya alfulku biamrihi walitabtaghoo min fadlihi walaAAallakum tashkuroona

Translation: ನಿಮಗೆ ಮಳೆಯ ಬಗ್ಗೆ ಸಿಹಿ ಸುದ್ದಿ ನೀಡಲು, ಅವನ ದಯೆಯ ರುಚಿಯನ್ನು ನಿಮಗೆ ತೋರಿಸಲು, ನಾವೆಗಳು ಅವನ ಆಜ್ಞೆಯಂತೆ (ಸಮುದ್ರದಲ್ಲಿ) ಚಲಿಸಲು ಮತ್ತು ಅವನ ಔದಾರ್ಯದಿಂದ ನೀವು ಉಪಜೀವನವನ್ನು ಹುಡುಕಲು ಅವನು ಗಾಳಿಗಳನ್ನು ಕಳುಹಿಸುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನೀವು ಕೃತಜ್ಞರಾಗುವುದಕ್ಕಾಗಿ.

30:47

وَلَقَدۡ أَرۡسَلۡنَا مِن قَبۡلِكَ رُسُلًا إِلَىٰ قَوۡمِهِمۡ فَجَآءُوهُم بِٱلۡبَيِّنَٰتِ فَٱنتَقَمۡنَا مِنَ ٱلَّذِينَ أَجۡرَمُواْۖ وَكَانَ حَقًّا عَلَيۡنَا نَصۡرُ ٱلۡمُؤۡمِنِينَ ﴿47﴾

Transliteration: Walaqad arsalna min qablika rusulan ila qawmihim fajaoohum bialbayyinati faintaqamna mina allatheena ajramoo wakana haqqan AAalayna nasru almumineena

Translation: ನಾವು ನಿಮಗಿಂತ ಮೊದಲು ಅನೇಕ ಪ್ರವಾದಿಗಳನ್ನು ಅವರ ಜನರ ಬಳಿಗೆ ಕಳುಹಿಸಿದ್ದೇವೆ. ಅವರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಆಗ ನಾವು ಅಪರಾಧವೆಸಗಿದ ಜನರಿಂದ ಪ್ರತೀಕಾರ ಪಡೆದೆವು. ಸತ್ಯವಿಶ್ವಾಸಿಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ.

30:48

ٱللَّهُ ٱلَّذِي يُرۡسِلُ ٱلرِّيَٰحَ فَتُثِيرُ سَحَابٗا فَيَبۡسُطُهُۥ فِي ٱلسَّمَآءِ كَيۡفَ يَشَآءُ وَيَجۡعَلُهُۥ كِسَفٗا فَتَرَى ٱلۡوَدۡقَ يَخۡرُجُ مِنۡ خِلَٰلِهِۦۖ فَإِذَآ أَصَابَ بِهِۦ مَن يَشَآءُ مِنۡ عِبَادِهِۦٓ إِذَا هُمۡ يَسۡتَبۡشِرُونَ ﴿48﴾

Transliteration: Allahu allathee yursilu alrriyaha fatutheeru sahaban fayabsutuhu fee alssamai kayfa yashao wayajAAaluhu kisafan fatara alwadqa yakhruju min khilalihi faitha asaba bihi man yashao min AAibadihi itha hum yastabshiroona

Translation: ಅಲ್ಲಾಹು ಗಾಳಿಗಳನ್ನು ಕಳುಹಿಸುತ್ತಾನೆ. ಅವು ಮೋಡಗಳನ್ನು ಎತ್ತಿಕೊಳ್ಳುತ್ತವೆ. ನಂತರ ಅಲ್ಲಾಹು ಅವನು ಇಚ್ಛಿಸುವಂತೆ ಅದನ್ನು ಆಕಾಶದಲ್ಲಿ ಹರಡುತ್ತಾನೆ. ನಂತರ ಅದನ್ನು ತುಣುಕುಗಳನ್ನಾಗಿ ಮಾಡುತ್ತಾನೆ. ಆಗ ಅದರ ಎಡೆಯಿಂದ ಮಳೆಹನಿಗಳು ಹೊರಬರುವುದನ್ನು ನೀವು ಕಾಣುತ್ತೀರಿ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರ ಮೇಲೆ ಅದನ್ನು ಸುರಿಸಿದಾಗ ಅಗೋ! ಅವರು ಸಂತೋಷಪಡುತ್ತಾರೆ.

30:49

وَإِن كَانُواْ مِن قَبۡلِ أَن يُنَزَّلَ عَلَيۡهِم مِّن قَبۡلِهِۦ لَمُبۡلِسِينَ ﴿49﴾

Transliteration: Wain kanoo min qabli an yunazzala AAalayhim min qablihi lamubliseena

Translation: ಆ ಮಳೆಯು ಅವರ ಮೇಲೆ ಸುರಿಯುವುದಕ್ಕೆ ಮೊದಲು ಖಂಡಿತವಾಗಿಯೂ ಅವರು ನಿರಾಶರಾಗಿದ್ದರು.

30:50

فَٱنظُرۡ إِلَىٰٓ ءَاثَٰرِ رَحۡمَتِ ٱللَّهِ كَيۡفَ يُحۡيِ ٱلۡأَرۡضَ بَعۡدَ مَوۡتِهَآۚ إِنَّ ذَٰلِكَ لَمُحۡيِ ٱلۡمَوۡتَىٰۖ وَهُوَ عَلَىٰ كُلِّ شَيۡءٖ قَدِيرٞ ﴿50﴾

Transliteration: Faonthur ila athari rahmati Allahi kayfa yuhyee alarda baAAda mawtiha inna thalika lamuhyee almawta wahuwa AAala kulli shayin qadeerun

Translation: ಅಲ್ಲಾಹನ ದಯೆಯ ಪರಿಣಾಮಗಳನ್ನು ನೋಡಿರಿ. ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ಹೇಗೆ ಜೀವ ನೀಡುತ್ತಾನೆಂದು. ಅಂತಹವನು ಸತ್ತವರಿಗೆ ಜೀವ ನೀಡುತ್ತಾನೆ ಎಂಬುದರಲ್ಲಿ ಸಂಶಯವೇ ಇಲ್ಲ. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

30:51

وَلَئِنۡ أَرۡسَلۡنَا رِيحٗا فَرَأَوۡهُ مُصۡفَرّٗا لَّظَلُّواْ مِنۢ بَعۡدِهِۦ يَكۡفُرُونَ ﴿51﴾

Transliteration: Walain arsalna reehan faraawhu musfarran lathalloo min baAAdihi yakfuroona

Translation: ನಾವು ಬಿರುಗಾಳಿಯನ್ನು ಕಳುಹಿಸಿ ಅದು ಅವರ ಹೊಲಗಳನ್ನು ಹಳದಿ ಬಣ್ಣಕ್ಕೆ ತಿರುಗಿಸುವುದನ್ನು (ಬಾಡಿಸುವುದನ್ನು) ಕಂಡರೂ ಅವರು ಅದರ ಬಳಿಕವೂ ಕೃತಘ್ನರಾಗಿಯೇ ಇರುವರು.

30:52

فَإِنَّكَ لَا تُسۡمِعُ ٱلۡمَوۡتَىٰ وَلَا تُسۡمِعُ ٱلصُّمَّ ٱلدُّعَآءَ إِذَا وَلَّوۡاْ مُدۡبِرِينَ ﴿52﴾

Transliteration: Fainnaka la tusmiAAu almawta wala tusmiAAu alssumma aldduAAaa itha wallaw mudbireena

Translation: ಸತ್ತವರಿಗೆ ಕೇಳುವಂತೆ ಮಾಡಲು ನಿಮಗೆ ಖಂಡಿತ ಸಾಧ್ಯವಿಲ್ಲ. ಕಿವುಡರು ಬೆನ್ನು ತಿರುಗಿಸಿ ನಡೆದರೆ ಅವರಿಗೆ ಕರೆ ಕೇಳುವಂತೆ ಮಾಡಲು ಕೂಡ ನಿಮಗೆ ಸಾಧ್ಯವಿಲ್ಲ.

30:53

وَمَآ أَنتَ بِهَٰدِ ٱلۡعُمۡيِ عَن ضَلَٰلَتِهِمۡۖ إِن تُسۡمِعُ إِلَّا مَن يُؤۡمِنُ بِـَٔايَٰتِنَا فَهُم مُّسۡلِمُونَ ﴿53﴾

Transliteration: Wama anta bihadi alAAumyi AAan dalalatihim in tusmiAAu illa man yuminu biayatina fahum muslimoona

Translation: ಕುರುಡರನ್ನು ಅವರ ದುರ್ಮಾರ್ಗದಿಂದ ಮುಕ್ತಗೊಳಿಸಿ ಸನ್ಮಾರ್ಗಕ್ಕೆ ದಾರಿ ತೋರಿಸಲು ನಿಮಗೆ ಸಾಧ್ಯವಿಲ್ಲ. ನಮ್ಮ ವಚನಗಳಲ್ಲಿ ವಿಶ್ವಾಸವಿಟ್ಟು ನಂತರ ಶರಣಾಗುವವರು ಯಾರೋ ಅವರಿಗೆ ಮಾತ್ರ ನೀವು ಕೇಳುವಂತೆ ಮಾಡಬಲ್ಲಿರಿ.

30:54

ٱللَّهُ ٱلَّذِي خَلَقَكُم مِّن ضَعۡفٖ ثُمَّ جَعَلَ مِنۢ بَعۡدِ ضَعۡفٖ قُوَّةٗ ثُمَّ جَعَلَ مِنۢ بَعۡدِ قُوَّةٖ ضَعۡفٗا وَشَيۡبَةٗۚ يَخۡلُقُ مَا يَشَآءُۚ وَهُوَ ٱلۡعَلِيمُ ٱلۡقَدِيرُ ﴿54﴾

Transliteration: Allahu allathee khalaqakum min daAAfin thumma jaAAala min baAAdi daAAfin quwwatan thumma jaAAala min baAAdi quwwatin daAAfan washaybatan yakhluqu ma yashao wahuwa alAAaleemu alqadeeru

Translation: ಅಲ್ಲಾಹು ನಿಮ್ಮನ್ನು ದುರ್ಬಲ ಸ್ಥಿತಿಯಲ್ಲಿ ಸೃಷ್ಟಿಸಿದನು. ನಂತರ ದೌರ್ಬಲ್ಯದ ಬಳಿಕ ಅವನು ನಿಮಗೆ ಶಕ್ತಿಯನ್ನು ನೀಡಿದನು. ನಂತರ ಶಕ್ತಿಯನ್ನು ನೀಡಿದ ಬಳಿಕ ಅವನು ನಿಮ್ಮನ್ನು ಪುನಃ ದುರ್ಬಲರಾಗಿ ಮತ್ತು ಕೂದಲು ನೆರೆತವರಾಗಿ ಮಾಡಿದನು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅವನು ಸರ್ವಜ್ಞನು ಮತ್ತು ಸರ್ವಶಕ್ತನಾಗಿದ್ದಾನೆ.

30:55

وَيَوۡمَ تَقُومُ ٱلسَّاعَةُ يُقۡسِمُ ٱلۡمُجۡرِمُونَ مَا لَبِثُواْ غَيۡرَ سَاعَةٖۚ كَذَٰلِكَ كَانُواْ يُؤۡفَكُونَ ﴿55﴾

Transliteration: Wayawma taqoomu alssaAAatu yuqsimu almujrimoona ma labithoo ghayra saAAatin kathalika kanoo yufakoona

Translation: ಅಂತ್ಯಸಮಯವು ಸಂಭವಿಸುವ ದಿನದಂದು ಅಪರಾಧಿಗಳು ಆಣೆ ಮಾಡುತ್ತಾ, “ನಾವು (ಇಹಲೋಕದಲ್ಲಿ) ಒಂದು ತಾಸಿಗಿಂತ ಹೆಚ್ಚು ವಾಸವಾಗಿರಲಿಲ್ಲ” ಎಂದು ಹೇಳುವರು. ಈ ರೀತಿ ಅವರನ್ನು (ಸತ್ಯದಿಂದ) ತಪ್ಪಿಸಿಬಿಡಲಾಗಿದೆ.

30:56

وَقَالَ ٱلَّذِينَ أُوتُواْ ٱلۡعِلۡمَ وَٱلۡإِيمَٰنَ لَقَدۡ لَبِثۡتُمۡ فِي كِتَٰبِ ٱللَّهِ إِلَىٰ يَوۡمِ ٱلۡبَعۡثِۖ فَهَٰذَا يَوۡمُ ٱلۡبَعۡثِ وَلَٰكِنَّكُمۡ كُنتُمۡ لَا تَعۡلَمُونَ ﴿56﴾

Transliteration: Waqala allatheena ootoo alAAilma waaleemana laqad labithtum fee kitabi Allahi ila yawmi albaAAthi fahatha yawmu albaAAthi walakinnakum kuntum la taAAlamoona

Translation: ಜ್ಞಾನ ಮತ್ತು ವಿಶ್ವಾಸವನ್ನು ನೀಡಲಾದವರು ಹೇಳುವರು: “ನೀವು ಅಲ್ಲಾಹನ ದಾಖಲೆಯಲ್ಲಿರುವಂತೆ ಪುನರುತ್ಥಾನ ದಿನದವರೆಗೆ ವಾಸವಾಗಿದ್ದಿರಿ. ಇಗೋ ಇದೇ ಪುನರುತ್ಥಾನದ ದಿನ! ಆದರೆ ನಿಮಗೆ ಅದು ತಿಳಿದಿಲ್ಲ.”

30:57

فَيَوۡمَئِذٖ لَّا يَنفَعُ ٱلَّذِينَ ظَلَمُواْ مَعۡذِرَتُهُمۡ وَلَا هُمۡ يُسۡتَعۡتَبُونَ ﴿57﴾

Transliteration: Fayawmaithin la yanfaAAu allatheena thalamoo maAAthiratuhum wala hum yustaAAtaboona

Translation: ಅಕ್ರಮಿಗಳಿಗೆ ಆ ದಿನ ಅವರ ನೆಪಗಳು ಯಾವುದೇ ಉಪಕಾರ ಮಾಡುವುದಿಲ್ಲ. ಅವರೊಡನೆ ಪಶ್ಚಾತ್ತಾಪಪಡುವಂತೆಯೂ ಕೇಳಿಕೊಳ್ಳಲಾಗುವುದಿಲ್ಲ.

30:58

وَلَقَدۡ ضَرَبۡنَا لِلنَّاسِ فِي هَٰذَا ٱلۡقُرۡءَانِ مِن كُلِّ مَثَلٖۚ وَلَئِن جِئۡتَهُم بِـَٔايَةٖ لَّيَقُولَنَّ ٱلَّذِينَ كَفَرُوٓاْ إِنۡ أَنتُمۡ إِلَّا مُبۡطِلُونَ ﴿58﴾

Transliteration: Walaqad darabna lilnnasi fee hatha alqurani min kulli mathalin walain jitahum biayatin layaqoolanna allatheena kafaroo in antum illa mubtiloona

Translation: ನಾವು ಈ ಕುರ್‌ಆನ್‍ನಲ್ಲಿ ಜನರಿಗೋಸ್ಕರ ಎಲ್ಲ ರೀತಿಯ ಉದಾಹರಣೆಗಳನ್ನು ವಿವರಿಸಿದ್ದೇವೆ. ನೀವು ಒಂದು ದೃಷ್ಟಾಂತದೊಂದಿಗೆ ಅವರ ಬಳಿ ತೆರಳಿದರೂ ಸತ್ಯನಿಷೇಧಿಗಳು ಹೇಳುವರು: “ನೀವು ಖಂಡಿತವಾಗಿಯೂ ಮಿಥ್ಯವಾದಿಗಳಾಗಿದ್ದೀರಿ.”

30:59

كَذَٰلِكَ يَطۡبَعُ ٱللَّهُ عَلَىٰ قُلُوبِ ٱلَّذِينَ لَا يَعۡلَمُونَ ﴿59﴾

Transliteration: Kathalika yatbaAAu Allahu AAala quloobi allatheena la yaAAlamoona

Translation: ಈ ರೀತಿ ಅಲ್ಲಾಹು (ಸತ್ಯವನ್ನು) ಅರ್ಥಮಾಡಿಕೊಳ್ಳಲು ಮುಂದಾಗದವರ ಹೃದಯಗಳಿಗೆ ಮೊಹರು ಹಾಕುವನು.

30:60

فَٱصۡبِرۡ إِنَّ وَعۡدَ ٱللَّهِ حَقّٞۖ وَلَا يَسۡتَخِفَّنَّكَ ٱلَّذِينَ لَا يُوقِنُونَ ﴿60﴾

Transliteration: Faisbir inna waAAda Allahi haqqun wala yastakhiffannaka allatheena la yooqinoona

Translation: ನೀವು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ದೃಢವಿಶ್ವಾಸವಿಲ್ಲದ ಆ ಜನರು ನಿಮ್ಮನ್ನು ತಾಳ್ಮೆಗೆಡುವಂತೆ ಮಾಡದಿರಲಿ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download