quranm◉

Surah Al-Jathiyah transliteration

◉ ಸೂರಾ · ∞

45:1

حمٓ ﴿1﴾

Transliteration: Hameem

Translation: ಹಾ-ಮೀಮ್.

45:2

تَنزِيلُ ٱلۡكِتَٰبِ مِنَ ٱللَّهِ ٱلۡعَزِيزِ ٱلۡحَكِيمِ ﴿2﴾

Transliteration: Tanzeelu alkitabi mina Allahi alAAazeezi alhakeemi

Translation: ಈ ಗ್ರಂಥವು ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನಿಂದ ಅವತೀರ್ಣವಾಗಿದೆ.

45:3

إِنَّ فِي ٱلسَّمَٰوَٰتِ وَٱلۡأَرۡضِ لَأٓيَٰتٖ لِّلۡمُؤۡمِنِينَ ﴿3﴾

Transliteration: Inna fee alssamawati waalardi laayatin lilmumineena

Translation: ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿ ಸತ್ಯವಿಶ್ವಾಸಿಗಳಿಗೆ ಅನೇಕ ದೃಷ್ಟಾಂತಗಳಿವೆ.

45:4

وَفِي خَلۡقِكُمۡ وَمَا يَبُثُّ مِن دَآبَّةٍ ءَايَٰتٞ لِّقَوۡمٖ يُوقِنُونَ ﴿4﴾

Transliteration: Wafee khalqikum wama yabuththu min dabbatin ayatun liqawmin yooqinoona

Translation: ನಿಮ್ಮ ಸೃಷ್ಟಿಯಲ್ಲೂ ಮತ್ತು ಅವನು ಜೀವಿಗಳನ್ನು ಹಬ್ಬಿಸಿರುವುದರಲ್ಲೂ ದೃಢವಿಶ್ವಾಸವಿಡುವ ಜನರಿಗೆ ಅನೇಕ ದೃಷ್ಟಾಂತಗಳಿವೆ.

45:5

وَٱخۡتِلَٰفِ ٱلَّيۡلِ وَٱلنَّهَارِ وَمَآ أَنزَلَ ٱللَّهُ مِنَ ٱلسَّمَآءِ مِن رِّزۡقٖ فَأَحۡيَا بِهِ ٱلۡأَرۡضَ بَعۡدَ مَوۡتِهَا وَتَصۡرِيفِ ٱلرِّيَٰحِ ءَايَٰتٞ لِّقَوۡمٖ يَعۡقِلُونَ ﴿5﴾

Transliteration: Waikhtilafi allayli waalnnahari wama anzala Allahu mina alssamai min rizqin faahya bihi alarda baAAda mawtiha watasreefi alrriyahi ayatun liqawmin yaAAqiloona

Translation: ರಾತ್ರಿ-ಹಗಲುಗಳ ಬದಲಾವಣೆಯಲ್ಲಿ, ಅಲ್ಲಾಹು ಆಕಾಶದಿಂದ ಆಹಾರವನ್ನು (ಮಳೆಯನ್ನು) ಇಳಿಸಿ ತನ್ಮೂಲಕ ಭೂಮಿಗೆ ಅದು ನಿರ್ಜೀವವಾದ ಬಳಿಕ ಜೀವ ನೀಡುವುದರಲ್ಲಿ ಮತ್ತು ಗಾಳಿಯ ನಿಯಂತ್ರಣದಲ್ಲಿ ಆಲೋಚಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ.

45:6

تِلۡكَ ءَايَٰتُ ٱللَّهِ نَتۡلُوهَا عَلَيۡكَ بِٱلۡحَقِّۖ فَبِأَيِّ حَدِيثِۭ بَعۡدَ ٱللَّهِ وَءَايَٰتِهِۦ يُؤۡمِنُونَ ﴿6﴾

Transliteration: Tilka ayatu Allahi natlooha AAalayka bialhaqqi fabiayyi hadeethin baAAda Allahi waayatihi yuminoona

Translation: ಇವು ಅಲ್ಲಾಹನ ವಚನಗಳಾಗಿದ್ದು, ನಾವು ಅವುಗಳನ್ನು ನಿಮಗೆ ಸತ್ಯ ಸಮೇತವಾಗಿ ಓದಿಕೊಡುತ್ತಿದ್ದೇವೆ. ಅಲ್ಲಾಹು ಮತ್ತು ಅವನ ವಚನಗಳ ನಂತರ ಇನ್ನು ಯಾವ ಮಾತಿನಲ್ಲಿ ಅವರು ವಿಶ್ವಾಸವಿಡುವರು?

45:7

وَيۡلٞ لِّكُلِّ أَفَّاكٍ أَثِيمٖ ﴿7﴾

Transliteration: Waylun likulli affakin atheemin

Translation: ಪ್ರತಿಯೊಬ್ಬ ಸುಳ್ಳುಗಾರ ಮತ್ತು ಪಾಪಿಗೆ ವಿನಾಶ ಕಾದಿದೆ.

45:8

يَسۡمَعُ ءَايَٰتِ ٱللَّهِ تُتۡلَىٰ عَلَيۡهِ ثُمَّ يُصِرُّ مُسۡتَكۡبِرٗا كَأَن لَّمۡ يَسۡمَعۡهَاۖ فَبَشِّرۡهُ بِعَذَابٍ أَلِيمٖ ﴿8﴾

Transliteration: YasmaAAu ayati Allahi tutla AAalayhi thumma yusirru mustakbiran kaan lam yasmaAAha fabashshirhu biAAathabin aleemin

Translation: ತನಗೆ ಓದಿಕೊಡಲಾಗುವ ಅಲ್ಲಾಹನ ವಚನಗಳಿಗೆ ಅವನು ಕಿವಿಗೊಡುತ್ತಾನೆ. ನಂತರ ಅದನ್ನು ಕೇಳಿಯೇ ಇಲ್ಲ ಎಂಬಂತೆ ಅಹಂಕಾರದಿಂದ ಹಟತೊಟ್ಟು ನಿಲ್ಲುತ್ತಾನೆ. ಅವನಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ತಿಳಿಸಿರಿ.

45:9

وَإِذَا عَلِمَ مِنۡ ءَايَٰتِنَا شَيۡـًٔا ٱتَّخَذَهَا هُزُوًاۚ أُوْلَـٰٓئِكَ لَهُمۡ عَذَابٞ مُّهِينٞ ﴿9﴾

Transliteration: Waitha AAalima min ayatina shayan ittakhathaha huzuwan olaika lahum AAathabun muheenun

Translation: ಅವನು ನಮ್ಮ ವಚನಗಳಿಂದ ಏನಾದರೂ ತಿಳಿದುಕೊಂಡರೆ ಅದನ್ನು ತಮಾಷೆಯಾಗಿ ಸ್ವೀಕರಿಸುತ್ತಾನೆ. ಅಂತಹ ಜನರಿಗೆ ಅವಮಾನಕರ ಶಿಕ್ಷೆಯಿದೆ.

45:10

مِّن وَرَآئِهِمۡ جَهَنَّمُۖ وَلَا يُغۡنِي عَنۡهُم مَّا كَسَبُواْ شَيۡـٔٗا وَلَا مَا ٱتَّخَذُواْ مِن دُونِ ٱللَّهِ أَوۡلِيَآءَۖ وَلَهُمۡ عَذَابٌ عَظِيمٌ ﴿10﴾

Transliteration: Min waraihim jahannamu wala yughnee AAanhum ma kasaboo shayan wala ma ittakhathoo min dooni Allahi awliyaa walahum AAathabun AAatheemun

Translation: ನರಕಾಗ್ನಿ ಅವರ ಮುಂಭಾಗದಲ್ಲೇ ಇದೆ! ಅವರು ಏನು ಸಂಪಾದಿಸಿದರೋ ಮತ್ತು ಅವರು ಅಲ್ಲಾಹನನ್ನು ಬಿಟ್ಟು ಯಾರನ್ನು ರಕ್ಷಕರನ್ನಾಗಿ ಸ್ವೀಕರಿಸಿದರೋ ಯಾವುದೂ ಅವರಿಗೆ ಪ್ರಯೋಜನ ನೀಡುವುದಿಲ್ಲ. ಅವರಿಗೆ ಕಠೋರ ಶಿಕ್ಷೆಯಿದೆ.

45:11

هَٰذَا هُدٗىۖ وَٱلَّذِينَ كَفَرُواْ بِـَٔايَٰتِ رَبِّهِمۡ لَهُمۡ عَذَابٞ مِّن رِّجۡزٍ أَلِيمٌ ﴿11﴾

Transliteration: Hatha hudan waallatheena kafaroo biayati rabbihim lahum AAathabun min rijzin aleemin

Translation: ಇದು ಸನ್ಮಾರ್ಗವಾಗಿದೆ. ತಮ್ಮ ಪರಿಪಾಲಕನ (ಅಲ್ಲಾಹನ) ವಚನಗಳನ್ನು ನಿಷೇಧಿಸಿದವರು ಯಾರೋ ಅವರಿಗೆ ಬಹಳ ಕಠೋರವಾದ ಯಾತನಾಮಯ ಶಿಕ್ಷೆಯಿದೆ.

45:12

ٱللَّهُ ٱلَّذِي سَخَّرَ لَكُمُ ٱلۡبَحۡرَ لِتَجۡرِيَ ٱلۡفُلۡكُ فِيهِ بِأَمۡرِهِۦ وَلِتَبۡتَغُواْ مِن فَضۡلِهِۦ وَلَعَلَّكُمۡ تَشۡكُرُونَ ﴿12﴾

Transliteration: Allahu allathee sakhkhara lakumu albahra litajriya alfulku feehi biamrihi walitabtaghoo min fadlihi walaAAallakum tashkuroona

Translation: ಅಲ್ಲಾಹನೇ ನಿಮಗೆ ಸಮುದ್ರವನ್ನು ಅಧೀನಗೊಳಿಸಿದವನು. ಅವನ ಅಪ್ಪಣೆಯಂತೆ ನಾವೆಗಳು ಅದರಲ್ಲಿ ಸಂಚರಿಸುವುದಕ್ಕಾಗಿ, ನೀವು ಅವನ ಔದಾರ್ಯದಿಂದ ಬೇಡಿಕೊಳ್ಳುವುದಕ್ಕಾಗಿ ಮತ್ತು ನೀವು ಕೃತಜ್ಞರಾಗುವುದಕ್ಕಾಗಿ.

45:13

وَسَخَّرَ لَكُم مَّا فِي ٱلسَّمَٰوَٰتِ وَمَا فِي ٱلۡأَرۡضِ جَمِيعٗا مِّنۡهُۚ إِنَّ فِي ذَٰلِكَ لَأٓيَٰتٖ لِّقَوۡمٖ يَتَفَكَّرُونَ ﴿13﴾

Transliteration: Wasakhkhara lakum ma fee alssamawati wama fee alardi jameeAAan minhu inna fee thalika laayatin liqawmin yatafakkaroona

Translation: ಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳನ್ನು ಅವನು ತನ್ನ ವತಿಯಿಂದ ನಿಮಗೆ ಅಧೀನಗೊಳಿಸಿದ್ದಾನೆ. ನಿಶ್ಚಯವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.

45:14

قُل لِّلَّذِينَ ءَامَنُواْ يَغۡفِرُواْ لِلَّذِينَ لَا يَرۡجُونَ أَيَّامَ ٱللَّهِ لِيَجۡزِيَ قَوۡمَۢا بِمَا كَانُواْ يَكۡسِبُونَ ﴿14﴾

Transliteration: Qul lillatheena amanoo yaghfiroo lillatheena la yarjoona ayyama Allahi liyajziya qawman bima kanoo yaksiboona

Translation: ಅಲ್ಲಾಹನ ದಿನಗಳನ್ನು ನಿರೀಕ್ಷಿಸದ ಸತ್ಯನಿಷೇಧಿಗಳಿಗೆ ಅವರು ಕ್ಷಮಿಸಿ ಬಿಡಲಿ ಎಂದು ಸತ್ಯವಿಶ್ವಾಸಿಗಳೊಡನೆ ಹೇಳಿರಿ. ಇದು ಅಲ್ಲಾಹು ಆ ಜನರಿಗೆ ಅವರು ಮಾಡಿದ ಕರ್ಮಗಳ ಫಲವನ್ನು ನೀಡುವುದಕ್ಕಾಗಿ.

45:15

مَنۡ عَمِلَ صَٰلِحٗا فَلِنَفۡسِهِۦۖ وَمَنۡ أَسَآءَ فَعَلَيۡهَاۖ ثُمَّ إِلَىٰ رَبِّكُمۡ تُرۡجَعُونَ ﴿15﴾

Transliteration: Man AAamila salihan falinafsihi waman asaa faAAalayha thumma ila rabbikum turjaAAoona

Translation: ಯಾರಾದರೂ ಒಳಿತು ಮಾಡಿದರೆ ಅದು ಅವನ ಒಳಿತಿಗೇ ಆಗಿದೆ. ಯಾರಾದರೂ ಕೆಡುಕು ಮಾಡಿದರೆ ಅದರ ಕೆಡುಕು ಅವನಿಗೇ ಆಗಿದೆ. ನಂತರ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ನಿಮ್ಮನ್ನು ಮರಳಿಸಲಾಗುವುದು.

45:16

وَلَقَدۡ ءَاتَيۡنَا بَنِيٓ إِسۡرَـٰٓءِيلَ ٱلۡكِتَٰبَ وَٱلۡحُكۡمَ وَٱلنُّبُوَّةَ وَرَزَقۡنَٰهُم مِّنَ ٱلطَّيِّبَٰتِ وَفَضَّلۡنَٰهُمۡ عَلَى ٱلۡعَٰلَمِينَ ﴿16﴾

Transliteration: Walaqad atayna banee israeela alkitaba waalhukma waalnnubuwwata warazaqnahum mina alttayyibati wafaddalnahum AAala alAAalameena

Translation: ನಾವು ಇಸ್ರಾಯೇಲ್ ಮಕ್ಕಳಿಗೆ ಗ್ರಂಥ, ಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿದೆವು, ಶುದ್ಧ ವಸ್ತುಗಳಿಂದ ಅವರಿಗೆ ಆಹಾರವನ್ನು ಒದಗಿಸಿದೆವು ಮತ್ತು ಜಗತ್ತಿನ ಎಲ್ಲಾ (ಸಮಕಾಲೀನ) ಜನರಿಗಿಂತ ನಾವು ಅವರಿಗೆ ಶ್ರೇಷ್ಠತೆಯನ್ನು ನೀಡಿದೆವು.

45:17

وَءَاتَيۡنَٰهُم بَيِّنَٰتٖ مِّنَ ٱلۡأَمۡرِۖ فَمَا ٱخۡتَلَفُوٓاْ إِلَّا مِنۢ بَعۡدِ مَا جَآءَهُمُ ٱلۡعِلۡمُ بَغۡيَۢا بَيۡنَهُمۡۚ إِنَّ رَبَّكَ يَقۡضِي بَيۡنَهُمۡ يَوۡمَ ٱلۡقِيَٰمَةِ فِيمَا كَانُواْ فِيهِ يَخۡتَلِفُونَ ﴿17﴾

Transliteration: Waataynahum bayyinatin mina alamri fama ikhtalafoo illa min baAAdi ma jaahumu alAAilmu baghyan baynahum inna rabbaka yaqdee baynahum yawma alqiyamati feema kanoo feehi yakhtalifoona

Translation: ನಾವು ಅವರಿಗೆ (ಧಾರ್ಮಿಕ) ವಿಷಯಗಳ ಬಗ್ಗೆ ಸ್ಪಷ್ಟ ಪುರಾವೆಗಳನ್ನು ನೀಡಿದೆವು. ಆದರೆ ಅವರಿಗೆ ಜ್ಞಾನವು ಬಂದ ಬಳಿಕವೇ ಹೊರತು ಅವರು ಭಿನ್ನಮತ ತಳೆಯಲಿಲ್ಲ. ಅವರು ಪರಸ್ಪರ ಹೊಂದಿದ್ದ ದ್ವೇಷವೇ ಅದಕ್ಕೆ ಕಾರಣವಾಗಿತ್ತು. ನಿಶ್ಚಯವಾಗಿಯೂ ಯಾವ ವಿಷಯದಲ್ಲಿ ಅವರು ಭಿನ್ನಮತ ತಳೆದರೋ ಆ ವಿಷಯದಲ್ಲಿ ಪುನರುತ್ಥಾನ ದಿನದಂದು ನಿಮ್ಮ ಪರಿಪಾಲಕನು (ಅಲ್ಲಾಹು) ಅವರ ನಡುವೆ ತೀರ್ಪು ನೀಡುವನು.

45:18

ثُمَّ جَعَلۡنَٰكَ عَلَىٰ شَرِيعَةٖ مِّنَ ٱلۡأَمۡرِ فَٱتَّبِعۡهَا وَلَا تَتَّبِعۡ أَهۡوَآءَ ٱلَّذِينَ لَا يَعۡلَمُونَ ﴿18﴾

Transliteration: Thumma jaAAalnaka AAala shareeAAatin mina alamri faittabiAAha wala tattabiAA ahwaa allatheena la yaAAlamoona

Translation: ನಂತರ ನಾವು ನಿಮ್ಮನ್ನು ಧರ್ಮದ ಸ್ಪಷ್ಟ ಮಾರ್ಗದಲ್ಲಿ ನಿಲ್ಲಿಸಿದೆವು. ಆದ್ದರಿಂದ ನೀವು ಅದನ್ನು ಅನುಸರಿಸಿರಿ. ತಿಳುವಳಿಕೆಯಿಲ್ಲದ ಜನರ ಸ್ವೇಚ್ಛೆಗಳನ್ನು ಅನುಸರಿಸಬೇಡಿ.

45:19

إِنَّهُمۡ لَن يُغۡنُواْ عَنكَ مِنَ ٱللَّهِ شَيۡـٔٗاۚ وَإِنَّ ٱلظَّـٰلِمِينَ بَعۡضُهُمۡ أَوۡلِيَآءُ بَعۡضٖۖ وَٱللَّهُ وَلِيُّ ٱلۡمُتَّقِينَ ﴿19﴾

Transliteration: Innahum lan yughnoo AAanka mina Allahi shayan wainna alththalimeena baAAduhum awliyao baAAdin waAllahu waliyyu almuttaqeena

Translation: ಅಲ್ಲಾಹನ ಮುಂದೆ ಇವರು ಯಾವ ರೀತಿಯಲ್ಲೂ ನಿಮಗೆ ಉಪಕಾರ ಮಾಡುವುದಿಲ್ಲ. ನಿಶ್ಚಯವಾಗಿಯೂ ಅಕ್ರಮಿಗಳು ಪರಸ್ಪರ ಮಿತ್ರರಾಗಿದ್ದಾರೆ. ಅಲ್ಲಾಹು ದೇವಭಯವುಳ್ಳವರ ರಕ್ಷಕನಾಗಿದ್ದಾನೆ.

45:20

هَٰذَا بَصَـٰٓئِرُ لِلنَّاسِ وَهُدٗى وَرَحۡمَةٞ لِّقَوۡمٖ يُوقِنُونَ ﴿20﴾

Transliteration: Hatha basairu lilnnasi wahudan warahmatun liqawmin yooqinoona

Translation: ಇದು (ಕುರ್‌ಆನ್) ಮನುಷ್ಯರಿಗೆ ಒಳದೃಷ್ಟಿಯಾಗಿದೆ ಮತ್ತು ದೃಢವಿಶ್ವಾಸವಿಡುವ ಜನರಿಗೆ ಸನ್ಮಾರ್ಗ ಹಾಗೂ ದಯೆಯಾಗಿದೆ.

45:21

أَمۡ حَسِبَ ٱلَّذِينَ ٱجۡتَرَحُواْ ٱلسَّيِّـَٔاتِ أَن نَّجۡعَلَهُمۡ كَٱلَّذِينَ ءَامَنُواْ وَعَمِلُواْ ٱلصَّـٰلِحَٰتِ سَوَآءٗ مَّحۡيَاهُمۡ وَمَمَاتُهُمۡۚ سَآءَ مَا يَحۡكُمُونَ ﴿21﴾

Transliteration: Am hasiba allatheena ijtarahoo alssayyiati an najAAalahum kaallatheena amanoo waAAamiloo alssalihati sawaan mahyahum wamamatuhum saa ma yahkumoona

Translation: ಕೆಡುಕು ಮಾಡಿದವರು ಯಾರೋ ಅವರನ್ನು ನಾವು ಸತ್ಯವಿಶ್ವಾಸಿಗಳಾಗಿದ್ದು ಸತ್ಕರ್ಮವೆಸಗುವವರಂತೆ—ಅವರಿಬ್ಬರ ಜೀವನ ಮತ್ತು ಮರಣಗಳು ಸಮಾನವಾಗುವ ರೀತಿಯಲ್ಲಿ—ಮಾಡುವೆವೆಂದು ಭಾವಿಸಿದ್ದಾರೆಯೇ? ಅವರು ನೀಡುವ ತೀರ್ಪು ಬಹಳ ನಿಕೃಷ್ಟವಾಗಿದೆ.

45:22

وَخَلَقَ ٱللَّهُ ٱلسَّمَٰوَٰتِ وَٱلۡأَرۡضَ بِٱلۡحَقِّ وَلِتُجۡزَىٰ كُلُّ نَفۡسِۭ بِمَا كَسَبَتۡ وَهُمۡ لَا يُظۡلَمُونَ ﴿22﴾

Transliteration: Wakhalaqa Allahu alssamawati waalarda bialhaqqi walitujza kullu nafsin bima kasabat wahum la yuthlamoona

Translation: ಅಲ್ಲಾಹು ಭೂಮ್ಯಾಕಾಶಗಳನ್ನು ಸತ್ಯ ಸಮೇತ ಸೃಷ್ಟಿಸಿದ್ದಾನೆ. ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ನೀಡುವುದಕ್ಕಾಗಿ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.

45:23

أَفَرَءَيۡتَ مَنِ ٱتَّخَذَ إِلَٰهَهُۥ هَوَىٰهُ وَأَضَلَّهُ ٱللَّهُ عَلَىٰ عِلۡمٖ وَخَتَمَ عَلَىٰ سَمۡعِهِۦ وَقَلۡبِهِۦ وَجَعَلَ عَلَىٰ بَصَرِهِۦ غِشَٰوَةٗ فَمَن يَهۡدِيهِ مِنۢ بَعۡدِ ٱللَّهِۚ أَفَلَا تَذَكَّرُونَ ﴿23﴾

Transliteration: Afaraayta mani ittakhatha ilahahu hawahu waadallahu Allahu AAala AAilmin wakhatama AAala samAAihi waqalbihi wajaAAala AAala basarihi ghishawatan faman yahdeehi min baAAdi Allahi afala tathakkaroona

Translation: ತನ್ನ ಸ್ವೇಚ್ಛೆಯನ್ನೇ ದೇವನನ್ನಾಗಿ ಮಾಡಿಕೊಂಡವನನ್ನು ನೀವು ನೋಡಿದ್ದೀರಾ?[1] ಅಲ್ಲಾಹು ತಿಳಿದೇ ಅವನನ್ನು ದಾರಿತಪ್ಪಿಸಿದ್ದಾನೆ, ಅವನ ಕಿವಿ ಮತ್ತು ಹೃದಯಕ್ಕೆ ಮೊಹರು ಹಾಕಿದ್ದಾನೆ ಮತ್ತು ಅವನ ಕಣ್ಣಿನ ಮೇಲೆ ಒಂದು ಪರದೆಯನ್ನಿಟ್ಟಿದ್ದಾನೆ. ಅಲ್ಲಾಹನ ನಂತರ ಅವನಿಗೆ ಸನ್ಮಾರ್ಗ ತೋರಿಸುವವರು ಯಾರು? ನೀವು ಉಪದೇಶ ಸ್ವೀಕರಿಸುವುದಿಲ್ಲವೇ?

45:24

وَقَالُواْ مَا هِيَ إِلَّا حَيَاتُنَا ٱلدُّنۡيَا نَمُوتُ وَنَحۡيَا وَمَا يُهۡلِكُنَآ إِلَّا ٱلدَّهۡرُۚ وَمَا لَهُم بِذَٰلِكَ مِنۡ عِلۡمٍۖ إِنۡ هُمۡ إِلَّا يَظُنُّونَ ﴿24﴾

Transliteration: Waqaloo ma hiya illa hayatuna alddunya namootu wanahya wama yuhlikuna illa alddahru wama lahum bithalika min AAilmin in hum illa yathunnoona

Translation: ಅವರು ಹೇಳಿದರು: “ಜೀವನವೆಂದರೆ ನಮ್ಮ ಇಹಲೋಕ ಜೀವನ ಮಾತ್ರವಾಗಿದೆ. ನಾವು ಸಾಯುತ್ತೇವೆ ಮತ್ತು ಬದುಕುತ್ತೇವೆ. ಕಾಲವಲ್ಲದೆ ಬೇರೇನೂ ನಮ್ಮನ್ನು ನಾಶ ಮಾಡುವುದಿಲ್ಲ.” ವಾಸ್ತವವಾಗಿ ಅವರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರು ಕೇವಲ ಊಹಿಸಿ ಹೇಳುತ್ತಾರೆ.

45:25

وَإِذَا تُتۡلَىٰ عَلَيۡهِمۡ ءَايَٰتُنَا بَيِّنَٰتٖ مَّا كَانَ حُجَّتَهُمۡ إِلَّآ أَن قَالُواْ ٱئۡتُواْ بِـَٔابَآئِنَآ إِن كُنتُمۡ صَٰدِقِينَ ﴿25﴾

Transliteration: Waitha tutla AAalayhim ayatuna bayyinatin ma kana hujjatahum illa an qaloo itoo biabaina in kuntum sadiqeena

Translation: ನಮ್ಮ ಸ್ಪಷ್ಟ ವಚನಗಳನ್ನು ಅವರಿಗೆ ಓದಿಕೊಡಲಾದರೆ ಅವರು ಹೇಳುವ ತರ್ಕವು: “ನೀವು ಸತ್ಯವಂತರಾಗಿದ್ದರೆ ನಮ್ಮ ಪೂರ್ವಜರನ್ನು ಕರೆತನ್ನಿರಿ” ಎಂದು ಮಾತ್ರವಾಗಿರುತ್ತದೆ.

45:26

قُلِ ٱللَّهُ يُحۡيِيكُمۡ ثُمَّ يُمِيتُكُمۡ ثُمَّ يَجۡمَعُكُمۡ إِلَىٰ يَوۡمِ ٱلۡقِيَٰمَةِ لَا رَيۡبَ فِيهِ وَلَٰكِنَّ أَكۡثَرَ ٱلنَّاسِ لَا يَعۡلَمُونَ ﴿26﴾

Transliteration: Quli Allahu yuhyeekum thumma yumeetukum thumma yajmaAAukum ila yawmi alqiyamati la rayba feehi walakinna akthara alnnasi la yaAAlamoona

Translation: ಹೇಳಿರಿ: “ಅಲ್ಲಾಹು ನಿಮಗೆ ಜೀವ ನೀಡುತ್ತಾನೆ. ನಂತರ ಅವನು ಸಾವನ್ನು ನೀಡುತ್ತಾನೆ. ನಂತರ ಪುನರುತ್ಥಾನ ದಿನದಂದು ಅವನು ನಿಮ್ಮನ್ನು ಒಟ್ಟುಗೂಡಿಸುತ್ತಾನೆ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಜನರಲ್ಲಿ ಹೆಚ್ಚಿನವರು ಅರ್ಥಮಾಡಿಕೊಳ್ಳುವುದಿಲ್ಲ.

45:27

وَلِلَّهِ مُلۡكُ ٱلسَّمَٰوَٰتِ وَٱلۡأَرۡضِۚ وَيَوۡمَ تَقُومُ ٱلسَّاعَةُ يَوۡمَئِذٖ يَخۡسَرُ ٱلۡمُبۡطِلُونَ ﴿27﴾

Transliteration: Walillahi mulku alssamawati waalardi wayawma taqoomu alssaAAatu yawmaithin yakhsaru almubtiloona

Translation: ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅಂತ್ಯಸಮಯವು ಅಸ್ತಿತ್ವಕ್ಕೆ ಬರುವ ದಿನದಂದು ಮಿಥ್ಯವಾದಿಗಳು ನಷ್ಟ ಹೊಂದುವರು.

45:28

وَتَرَىٰ كُلَّ أُمَّةٖ جَاثِيَةٗۚ كُلُّ أُمَّةٖ تُدۡعَىٰٓ إِلَىٰ كِتَٰبِهَا ٱلۡيَوۡمَ تُجۡزَوۡنَ مَا كُنتُمۡ تَعۡمَلُونَ ﴿28﴾

Transliteration: Watara kulla ommatin jathiyatan kullu ommatin tudAAa ila kitabiha alyawma tujzawna ma kuntum taAAmaloona

Translation: (ಆ ದಿನ) ಎಲ್ಲ ಸಮುದಾಯಗಳನ್ನು ಮಂಡಿಯೂರಿದ ಸ್ಥಿತಿಯಲ್ಲಿ ನೀವು ನೋಡುವಿರಿ. ಪ್ರತಿಯೊಂದು ಸಮುದಾಯವನ್ನೂ ಅದರ ಕರ್ಮದಾಖಲೆಯ ಕಡೆಗೆ ಕರೆಯಲಾಗುವುದು. “ನೀವು ಮಾಡಿರುವ ಕರ್ಮಗಳಿಗೆ ಇಂದು ನಿಮಗೆ ಪ್ರತಿಫಲ ನೀಡಲಾಗುವುದು.

45:29

هَٰذَا كِتَٰبُنَا يَنطِقُ عَلَيۡكُم بِٱلۡحَقِّۚ إِنَّا كُنَّا نَسۡتَنسِخُ مَا كُنتُمۡ تَعۡمَلُونَ ﴿29﴾

Transliteration: Hatha kitabuna yantiqu AAalaykum bialhaqqi inna kunna nastansikhu ma kuntum taAAmaloona

Translation: ಇದು ನಮ್ಮ ದಾಖಲೆಯಾಗಿದ್ದು ಇದು ನಿಮ್ಮ ಬಗ್ಗೆ ಸತ್ಯವನ್ನು ಹೇಳಲಿದೆ. ನಿಶ್ಚಯವಾಗಿಯೂ ನೀವು ಮಾಡುತ್ತಿದ್ದ ಎಲ್ಲಾ ಕರ್ಮಗಳನ್ನು ನಾವು ದಾಖಲಿಸುತ್ತಿದ್ದೆವು.”

45:30

فَأَمَّا ٱلَّذِينَ ءَامَنُواْ وَعَمِلُواْ ٱلصَّـٰلِحَٰتِ فَيُدۡخِلُهُمۡ رَبُّهُمۡ فِي رَحۡمَتِهِۦۚ ذَٰلِكَ هُوَ ٱلۡفَوۡزُ ٱلۡمُبِينُ ﴿30﴾

Transliteration: Faamma allatheena amanoo waAAamiloo alssalihati fayudkhiluhum rabbuhum fee rahmatihi thalika huwa alfawzu almubeenu

Translation: ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರನ್ನು ಅವರ ಪರಿಪಾಲಕನು (ಅಲ್ಲಾಹು) ಅವನ ದಯೆಯಲ್ಲಿ ಸೇರಿಸುವನು. ಅದೇ ಸ್ಪಷ್ಟವಾದ ವಿಜಯ.

45:31

وَأَمَّا ٱلَّذِينَ كَفَرُوٓاْ أَفَلَمۡ تَكُنۡ ءَايَٰتِي تُتۡلَىٰ عَلَيۡكُمۡ فَٱسۡتَكۡبَرۡتُمۡ وَكُنتُمۡ قَوۡمٗا مُّجۡرِمِينَ ﴿31﴾

Transliteration: Waamma allatheena kafaroo afalam takun ayatee tutla AAalaykum faistakbartum wakuntum qawman mujrimeena

Translation: ಸತ್ಯನಿಷೇಧಿಗಳು ಯಾರೋ (ಅವರೊಡನೆ ಹೇಳಲಾಗುವುದು:) “ನನ್ನ ವಚನಗಳನ್ನು ನಿಮಗೆ ಓದಿಕೊಡಲಾಗಿಲ್ಲವೇ? ಆದರೂ ನೀವು ಅಹಂಕಾರ ತೋರಿದಿರಿ ಮತ್ತು ಪಾಪಿಗಳಾದ ಜನರಾಗಿದ್ದಿರಿ.

45:32

وَإِذَا قِيلَ إِنَّ وَعۡدَ ٱللَّهِ حَقّٞ وَٱلسَّاعَةُ لَا رَيۡبَ فِيهَا قُلۡتُم مَّا نَدۡرِي مَا ٱلسَّاعَةُ إِن نَّظُنُّ إِلَّا ظَنّٗا وَمَا نَحۡنُ بِمُسۡتَيۡقِنِينَ ﴿32﴾

Transliteration: Waitha qeela inna waAAda Allahi haqqun waalssaAAatu la rayba feeha qultum ma nadree ma alssaAAatu in nathunnu illa thannan wama nahnu bimustayqineena

Translation: ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ ಮತ್ತು ಅಂತ್ಯಸಮಯದ ವಿಷಯದಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾದರೆ, ಅಂತ್ಯಸಮಯವೇನೆಂದು ನಮಗೆ ತಿಳಿದಿಲ್ಲ. ನಮಗೆ ಕೆಲವು ಕಲ್ಪನೆಗಳಿದ್ದವು. ನಮಗೆ ಯಾವುದರ ಬಗ್ಗೆಯೂ ಖಾತ್ರಿಯಿರಲಿಲ್ಲ ಎಂದು ನೀವು ಉತ್ತರಿಸಿದಿರಿ.”

45:33

وَبَدَا لَهُمۡ سَيِّـَٔاتُ مَا عَمِلُواْ وَحَاقَ بِهِم مَّا كَانُواْ بِهِۦ يَسۡتَهۡزِءُونَ ﴿33﴾

Transliteration: Wabada lahum sayyiatu ma AAamiloo wahaqa bihim ma kanoo bihi yastahzioona

Translation: ಅವರು ಮಾಡಿದ ಕರ್ಮಗಳ ಕೆಡುಕುಗಳು ಅವರಿಗೆ ಗೋಚರವಾಗುವುದು ಮತ್ತು ಅವರು ಏನನ್ನು ತಮಾಷೆ ಮಾಡುತ್ತಿದ್ದರೋ ಅದು ಅವರನ್ನು ಆವರಿಸುವುದು.

45:34

وَقِيلَ ٱلۡيَوۡمَ نَنسَىٰكُمۡ كَمَا نَسِيتُمۡ لِقَآءَ يَوۡمِكُمۡ هَٰذَا وَمَأۡوَىٰكُمُ ٱلنَّارُ وَمَا لَكُم مِّن نَّـٰصِرِينَ ﴿34﴾

Transliteration: Waqeela alyawma nansakum kama naseetum liqaa yawmikum hatha wamawakumu alnnaru wama lakum min nasireena

Translation: ಅವರೊಡನೆ ಹೇಳಲಾಗುವುದು: “ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತುಬಿಟ್ಟಂತೆ ಇಂದು ನಾವು ನಿಮ್ಮನ್ನೂ ಮರೆತಿದ್ದೇವೆ. ನಿಮ್ಮ ವಾಸಸ್ಥಳವು ನರಕವಾಗಿದೆ. ನಿಮಗೆ ಸಹಾಯ ಮಾಡುವವರು ಯಾರೂ ಇಲ್ಲ.

45:35

ذَٰلِكُم بِأَنَّكُمُ ٱتَّخَذۡتُمۡ ءَايَٰتِ ٱللَّهِ هُزُوٗا وَغَرَّتۡكُمُ ٱلۡحَيَوٰةُ ٱلدُّنۡيَاۚ فَٱلۡيَوۡمَ لَا يُخۡرَجُونَ مِنۡهَا وَلَا هُمۡ يُسۡتَعۡتَبُونَ ﴿35﴾

Transliteration: Thalikum biannakumu ittakhathtum ayati Allahi huzuwan wagharratkumu alhayatu alddunya faalyawma la yukhrajoona minha wala hum yustaAAtaboona

Translation: ಅದೇಕೆಂದರೆ ನೀವು ಅಲ್ಲಾಹನ ವಚನಗಳನ್ನು ತಮಾಷೆಯ ವಸ್ತುವಾಗಿ ಸ್ವೀಕರಿಸಿದಿರಿ ಮತ್ತು ಇಹಲೋಕ ಜೀವನವು ನಿಮ್ಮನ್ನು ಮರುಳುಗೊಳಿಸಿತು. ಇಂದು ಅವರನ್ನು ಅಲ್ಲಿಂದ ಹೊರತೆಗೆಯಲಾಗುವುದಿಲ್ಲ ಮತ್ತು ಅವರ ನೆಪಗಳನ್ನು ಸ್ವೀಕರಿಸಲಾಗುವುದಿಲ್ಲ.

45:36

فَلِلَّهِ ٱلۡحَمۡدُ رَبِّ ٱلسَّمَٰوَٰتِ وَرَبِّ ٱلۡأَرۡضِ رَبِّ ٱلۡعَٰلَمِينَ ﴿36﴾

Transliteration: Falillahi alhamdu rabbi alssamawati warabbi alardi rabbi alAAalameena

Translation: ಆದ್ದರಿಂದ ಭೂಮ್ಯಾಕಾಶಗಳ ಪರಿಪಾಲಕನಾದ ಮತ್ತು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.

45:37

وَلَهُ ٱلۡكِبۡرِيَآءُ فِي ٱلسَّمَٰوَٰتِ وَٱلۡأَرۡضِۖ وَهُوَ ٱلۡعَزِيزُ ٱلۡحَكِيمُ ﴿37﴾

Transliteration: Walahu alkibriyao fee alssamawati waalardi wahuwa alAAazeezu alhakeemu

Translation: ಭೂಮ್ಯಾಕಾಶಗಳಲ್ಲಿ ಎಲ್ಲಾ ಮಹಾತ್ಮೆಗಳು ಅವನಿಗೇ ಮೀಸಲು. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download