وَٱلطُّورِ ﴿1﴾وَٱلطُّورِ
Transliteration: Waalttoori
Translation: ತೂರ್ ಪರ್ವತದ ಮೇಲಾಣೆ!
وَٱلطُّورِ ﴿1﴾وَٱلطُّورِ
Transliteration: Waalttoori
Translation: ತೂರ್ ಪರ್ವತದ ಮೇಲಾಣೆ!
وَكِتَٰبٖ مَّسۡطُورٖ ﴿2﴾وَكِتَٰبٖ مَّسۡطُورٖ
Transliteration: Wakitabin mastoorin
Translation: ಲಿಖಿತಗೊಳಿಸಿದ ಗ್ರಂಥದ ಮೇಲಾಣೆ!
فِي رَقّٖ مَّنشُورٖ ﴿3﴾فِي رَقّٖ مَّنشُورٖ
Transliteration: Fee raqqin manshoorin
Translation: ತೆರೆದಿಟ್ಟ ತೊಗಲಿನ ಹಾಳೆಗಳಲ್ಲಿ.
وَٱلۡبَيۡتِ ٱلۡمَعۡمُورِ ﴿4﴾وَٱلۡبَيۡتِ ٱلۡمَعۡمُورِ
Transliteration: Waalbayti almaAAmoori
Translation: ಬೈತುಲ್ ಮಅಮೂರ್‌ನ ಮೇಲಾಣೆ![1]
وَٱلسَّقۡفِ ٱلۡمَرۡفُوعِ ﴿5﴾وَٱلسَّقۡفِ ٱلۡمَرۡفُوعِ
Transliteration: Waalssaqfi almarfooAAi
Translation: ಎತ್ತರದ ಛಾವಣಿಯ (ಆಕಾಶದ) ಮೇಲಾಣೆ!
وَٱلۡبَحۡرِ ٱلۡمَسۡجُورِ ﴿6﴾وَٱلۡبَحۡرِ ٱلۡمَسۡجُورِ
Transliteration: Waalbahri almasjoori
Translation: ಹೊತ್ತಿ ಉರಿಸಲಾದ ಸಮುದ್ರದ ಮೇಲಾಣೆ!
إِنَّ عَذَابَ رَبِّكَ لَوَٰقِعٞ ﴿7﴾إِنَّ عَذَابَ رَبِّكَ لَوَٰقِعٞ
Transliteration: Inna AAathaba rabbika lawaqiAAun
Translation: ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಸಂಭವಿಸಿಯೇ ತೀರುತ್ತದೆ.
مَّا لَهُۥ مِن دَافِعٖ ﴿8﴾مَّا لَهُۥ مِن دَافِعٖ
Transliteration: Ma lahu min dafiAAin
Translation: ಅದನ್ನು ತಡೆಯುವವರು ಯಾರೂ ಇಲ್ಲ.
يَوۡمَ تَمُورُ ٱلسَّمَآءُ مَوۡرٗا ﴿9﴾يَوۡمَ تَمُورُ ٱلسَّمَآءُ مَوۡرٗا
Transliteration: Yawma tamooru alssamao mawran
Translation: ಆಕಾಶವು ಪ್ರಬಲವಾಗಿ ಓಲಾಡುವ ದಿನ.
وَتَسِيرُ ٱلۡجِبَالُ سَيۡرٗا ﴿10﴾وَتَسِيرُ ٱلۡجِبَالُ سَيۡرٗا
Transliteration: Wataseeru aljibalu sayran
Translation: ಪರ್ವತಗಳು ಚಲಿಸತೊಡಗುವ ದಿನ.
فَوَيۡلٞ يَوۡمَئِذٖ لِّلۡمُكَذِّبِينَ ﴿11﴾فَوَيۡلٞ يَوۡمَئِذٖ لِّلۡمُكَذِّبِينَ
Transliteration: Fawaylun yawmaithin lilmukaththibeena
Translation: ಅಂದು ಸತ್ಯನಿಷೇಧಿಗಳಿಗೆ ವಿನಾಶವಿದೆ.
ٱلَّذِينَ هُمۡ فِي خَوۡضٖ يَلۡعَبُونَ ﴿12﴾ٱلَّذِينَ هُمۡ فِي خَوۡضٖ يَلۡعَبُونَ
Transliteration: Allatheena hum fee khawdin yalAAaboona
Translation: ಅವರು ಯಾರೆಂದರೆ, ವ್ಯರ್ಥ ಮಾತುಗಳಲ್ಲಿ ಮಗ್ನವಾಗಿ ಆಟವಾಡುವವರು.
يَوۡمَ يُدَعُّونَ إِلَىٰ نَارِ جَهَنَّمَ دَعًّا ﴿13﴾يَوۡمَ يُدَعُّونَ إِلَىٰ نَارِ جَهَنَّمَ دَعًّا
Transliteration: Yawma yudaAAAAoona ila nari jahannama daAAAAan
Translation: ಅವರನ್ನು ಬಲವಾಗಿ ನರಕಾಗ್ನಿಗೆ ತಳ್ಳಲಾಗುವ ದಿನ!
هَٰذِهِ ٱلنَّارُ ٱلَّتِي كُنتُم بِهَا تُكَذِّبُونَ ﴿14﴾هَٰذِهِ ٱلنَّارُ ٱلَّتِي كُنتُم بِهَا تُكَذِّبُونَ
Transliteration: Hathihi alnnaru allatee kuntum biha tukaththiboona
Translation: (ಅವರೊಂದಿಗೆ ಹೇಳಲಾಗುವುದು): “ಇದೇ ನೀವು ನಿಷೇಧಿಸುತ್ತಿದ್ದ ನರಕ.
أَفَسِحۡرٌ هَٰذَآ أَمۡ أَنتُمۡ لَا تُبۡصِرُونَ ﴿15﴾أَفَسِحۡرٌ هَٰذَآ أَمۡ أَنتُمۡ لَا تُبۡصِرُونَ
Transliteration: Afasihrun hatha am antum la tubsiroona
Translation: ಇದೇನು ಮಾಟಗಾರಿಕೆಯೇ? ಅಥವಾ ನಿಮಗೆ ನೋಡಲು ಸಾಧ್ಯವಾಗುವುದಿಲ್ಲವೇ?
ٱصۡلَوۡهَا فَٱصۡبِرُوٓاْ أَوۡ لَا تَصۡبِرُواْ سَوَآءٌ عَلَيۡكُمۡۖ إِنَّمَا تُجۡزَوۡنَ مَا كُنتُمۡ تَعۡمَلُونَ ﴿16﴾ٱصۡلَوۡهَا فَٱصۡبِرُوٓاْ أَوۡ لَا تَصۡبِرُواْ سَوَآءٌ عَلَيۡكُمۡۖ إِنَّمَا تُجۡزَوۡنَ مَا كُنتُمۡ تَعۡمَلُونَ
Transliteration: Islawha faisbiroo aw la tasbiroo sawaon AAalaykum innama tujzawna ma kuntum taAAmaloona
Translation: ಅದನ್ನು ಪ್ರವೇಶಿಸಿರಿ. ಅದರಲ್ಲಿ ನೀವು ತಾಳ್ಮೆಯಿಂದಿದ್ದರೂ ಅಥವಾ ತಾಳ್ಮೆಗೆಟ್ಟರೂ ಪರಿಣಾಮ ಒಂದೇ. ನೀವು ಮಾಡಿದ ಕರ್ಮಗಳಿಗಾಗಿ ಮಾತ್ರ ನಿಮಗೆ ಪ್ರತಿಫಲ ನೀಡಲಾಗುವುದು.”
إِنَّ ٱلۡمُتَّقِينَ فِي جَنَّـٰتٖ وَنَعِيمٖ ﴿17﴾إِنَّ ٱلۡمُتَّقِينَ فِي جَنَّـٰتٖ وَنَعِيمٖ
Transliteration: Inna almuttaqeena fee jannatin wanaAAeemin
Translation: ನಿಶ್ಚಯವಾಗಿಯೂ ದೇವಭಯವುಳ್ಳವರು ಸ್ವರ್ಗೋದ್ಯಾನಗಳಲ್ಲಿ ಮತ್ತು ಅನುಗ್ರಹಗಳಲ್ಲಿರುವರು.
فَٰكِهِينَ بِمَآ ءَاتَىٰهُمۡ رَبُّهُمۡ وَوَقَىٰهُمۡ رَبُّهُمۡ عَذَابَ ٱلۡجَحِيمِ ﴿18﴾فَٰكِهِينَ بِمَآ ءَاتَىٰهُمۡ رَبُّهُمۡ وَوَقَىٰهُمۡ رَبُّهُمۡ عَذَابَ ٱلۡجَحِيمِ
Transliteration: Fakiheena bima atahum rabbuhum wawaqahum rabbuhum AAathaba aljaheemi
Translation: ಅವರಿಗೆ ಅವರ ಪರಿಪಾಲಕನು (ಅಲ್ಲಾಹು) ನೀಡಿದ್ದರಲ್ಲಿ ಅವರು ಸಂತೋಷವಾಗಿರುವರು. ಅವರ ಪರಿಪಾಲಕನು (ಅಲ್ಲಾಹು) ಅವರನ್ನು ಜ್ವಲಿಸುವ ನರಕ ಶಿಕ್ಷೆಯಿಂದ ಪಾರು ಮಾಡಿದ್ದಾನೆ.
كُلُواْ وَٱشۡرَبُواْ هَنِيٓـَٔۢا بِمَا كُنتُمۡ تَعۡمَلُونَ ﴿19﴾كُلُواْ وَٱشۡرَبُواْ هَنِيٓـَٔۢا بِمَا كُنتُمۡ تَعۡمَلُونَ
Transliteration: Kuloo waishraboo haneean bima kuntum taAAmaloona
Translation: (ಅವರೊಂದಿಗೆ ಹೇಳಲಾಗುವುದು): “ನೀವು ಮಾಡಿದ ಕರ್ಮಗಳ ಪ್ರತಿಫಲವಾಗಿ ನೀವು ಸಂತೃಪ್ತಿಯಿಂದ ತಿನ್ನಿರಿ ಮತ್ತು ಕುಡಿಯಿರಿ.”
مُتَّكِـِٔينَ عَلَىٰ سُرُرٖ مَّصۡفُوفَةٖۖ وَزَوَّجۡنَٰهُم بِحُورٍ عِينٖ ﴿20﴾مُتَّكِـِٔينَ عَلَىٰ سُرُرٖ مَّصۡفُوفَةٖۖ وَزَوَّجۡنَٰهُم بِحُورٍ عِينٖ
Transliteration: Muttakieena AAala sururin masfoofatin wazawwajnahum bihoorin AAeenin
Translation: ಅವರು ಸಾಲಾಗಿ ಜೋಡಿಸಿ ಮಂಚಗಳಲ್ಲಿ ಒರಗಿ ಕುಳಿತಿರುವರು. ನಾವು ಅವರಿಗೆ ಅರಳಿದ ಕಣ್ಣುಗಳುಳ್ಳ ಬೆಳ್ಳಗಿನ ತರುಣಿಯರನ್ನು ವಿವಾಹ ಮಾಡಿಕೊಡುವೆವು.
وَٱلَّذِينَ ءَامَنُواْ وَٱتَّبَعَتۡهُمۡ ذُرِّيَّتُهُم بِإِيمَٰنٍ أَلۡحَقۡنَا بِهِمۡ ذُرِّيَّتَهُمۡ وَمَآ أَلَتۡنَٰهُم مِّنۡ عَمَلِهِم مِّن شَيۡءٖۚ كُلُّ ٱمۡرِيِٕۭ بِمَا كَسَبَ رَهِينٞ ﴿21﴾وَٱلَّذِينَ ءَامَنُواْ وَٱتَّبَعَتۡهُمۡ ذُرِّيَّتُهُم بِإِيمَٰنٍ أَلۡحَقۡنَا بِهِمۡ ذُرِّيَّتَهُمۡ وَمَآ أَلَتۡنَٰهُم مِّنۡ عَمَلِهِم مِّن شَيۡءٖۚ كُلُّ ٱمۡرِيِٕۭ بِمَا كَسَبَ رَهِينٞ
Transliteration: Waallatheena amanoo waittabaAAathum thurriyyatuhum bieemanin alhaqna bihim thurriyyatahum wama alatnahum min AAamalihim min shayin kullu imriin bima kasaba raheenun
Translation: ಸತ್ಯವಿಶ್ವಾಸಿಗಳಾದವರು ಮತ್ತು ಸತ್ಯವಿಶ್ವಾಸದಲ್ಲಿ ಅವರನ್ನು ಹಿಂಬಾಲಿಸಿದ ಅವರ ಮಕ್ಕಳು—ನಾವು ಅವರ ಮಕ್ಕಳನ್ನು ಅವರ ಜೊತೆಗೆ ಸೇರಿಸುವೆವು. ನಾವು ಅವರ ಕರ್ಮಫಲಗಳಲ್ಲಿ ಏನೂ ಕಡಿಮೆ ಮಾಡುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಅವನು ಮಾಡಿದ ಕರ್ಮಗಳಿಗೆ ಅಡಮಾನವಾಗಿದ್ದಾನೆ.
وَأَمۡدَدۡنَٰهُم بِفَٰكِهَةٖ وَلَحۡمٖ مِّمَّا يَشۡتَهُونَ ﴿22﴾وَأَمۡدَدۡنَٰهُم بِفَٰكِهَةٖ وَلَحۡمٖ مِّمَّا يَشۡتَهُونَ
Transliteration: Waamdadnahum bifakihatin walahmin mimma yashtahoona
Translation: ನಾವು ಅವರಿಗೆ ಹಣ್ಣು-ಹಂಪಲುಗಳನ್ನು ಮತ್ತು ಅವರು ಬಯಸುವ ಮಾಂಸವನ್ನು ಯಥೇಷ್ಟವಾಗಿ ನೀಡುವೆವು.
يَتَنَٰزَعُونَ فِيهَا كَأۡسٗا لَّا لَغۡوٞ فِيهَا وَلَا تَأۡثِيمٞ ﴿23﴾يَتَنَٰزَعُونَ فِيهَا كَأۡسٗا لَّا لَغۡوٞ فِيهَا وَلَا تَأۡثِيمٞ
Transliteration: YatanazaAAoona feeha kasan la laghwun feeha wala tatheemun
Translation: ಅವರು ಪರಸ್ಪರ (ಸಂತೋಷದಿಂದ) ಒಬ್ಬರು ಇನ್ನೊಬ್ಬರ (ಶರಾಬಿನ) ಲೋಟವನ್ನು ಕಸಿಯುವರು. ಆ ಶರಾಬು ಕುಡಿಯುವುದರಿಂದ ವ್ಯರ್ಥ ಮಾತುಗಳಾಗಲಿ, ಅಪರಾಧಕೃತ್ಯಗಳಾಗಲಿ ಉಂಟಾಗುವುದಿಲ್ಲ.
وَيَطُوفُ عَلَيۡهِمۡ غِلۡمَانٞ لَّهُمۡ كَأَنَّهُمۡ لُؤۡلُؤٞ مَّكۡنُونٞ ﴿24﴾۞وَيَطُوفُ عَلَيۡهِمۡ غِلۡمَانٞ لَّهُمۡ كَأَنَّهُمۡ لُؤۡلُؤٞ مَّكۡنُونٞ
Transliteration: Wayatoofu AAalayhim ghilmanun lahum kaannahum luluon maknoonun
Translation: ಅವರ ಸುತ್ತಮುತ್ತಲು ಅವರ ಪರಿಚಾರಕರಾದ ಹುಡುಗರು ಸುತ್ತುತ್ತಿರುವರು. ಅವರು ಜೋಪಾನವಾಗಿ ತೆಗೆದಿಡಲಾದ ಮುತ್ತುಗಳಂತಿರುವರು.
وَأَقۡبَلَ بَعۡضُهُمۡ عَلَىٰ بَعۡضٖ يَتَسَآءَلُونَ ﴿25﴾وَأَقۡبَلَ بَعۡضُهُمۡ عَلَىٰ بَعۡضٖ يَتَسَآءَلُونَ
Transliteration: Waaqbala baAAduhum AAala baAAdin yatasaaloona
Translation: ಅವರು ಪರಸ್ಪರ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು.
قَالُوٓاْ إِنَّا كُنَّا قَبۡلُ فِيٓ أَهۡلِنَا مُشۡفِقِينَ ﴿26﴾قَالُوٓاْ إِنَّا كُنَّا قَبۡلُ فِيٓ أَهۡلِنَا مُشۡفِقِينَ
Transliteration: Qaloo inna kunna qablu fee ahlina mushfiqeena
Translation: ಅವರು ಹೇಳುವರು: “ನಿಶ್ಚಯವಾಗಿಯೂ ಇದಕ್ಕೆ ಮೊದಲು ನಾವು ನಮ್ಮ ಕುಟುಂಬದವರೊಡನೆ ಇದ್ದಾಗ ಭಯಪಡುತ್ತಿದ್ದೆವು.
فَمَنَّ ٱللَّهُ عَلَيۡنَا وَوَقَىٰنَا عَذَابَ ٱلسَّمُومِ ﴿27﴾فَمَنَّ ٱللَّهُ عَلَيۡنَا وَوَقَىٰنَا عَذَابَ ٱلسَّمُومِ
Transliteration: Famanna Allahu AAalayna wawaqana AAathaba alssamoomi
Translation: ಅಲ್ಲಾಹು ನಮಗೆ ಬಹಳ ದೊಡ್ಡ ಉಪಕಾರವನ್ನು ಮಾಡಿದನು. ಅವನು ನಮ್ಮನ್ನು ತೀಕ್ಷ್ಣವಾಗಿ ಜ್ವಲಿಸುವ ನರಕ ಶಿಕ್ಷೆಯಿಂದ ಪಾರು ಮಾಡಿದನು.
إِنَّا كُنَّا مِن قَبۡلُ نَدۡعُوهُۖ إِنَّهُۥ هُوَ ٱلۡبَرُّ ٱلرَّحِيمُ ﴿28﴾إِنَّا كُنَّا مِن قَبۡلُ نَدۡعُوهُۖ إِنَّهُۥ هُوَ ٱلۡبَرُّ ٱلرَّحِيمُ
Transliteration: Inna kunna min qablu nadAAoohu innahu huwa albarru alrraheemu
Translation: ನಿಶ್ಚಯವಾಗಿಯೂ ಇದಕ್ಕೆ ಮೊದಲು ನಾವು ಅವನನ್ನು ಕರೆದು ಪ್ರಾರ್ಥಿಸುತ್ತಿದ್ದೆವು. ನಿಶ್ಚಯವಾಗಿಯೂ ಅವನು ಅತ್ಯಂತ ಉಪಕಾರ ಮಾಡುವವನು ಮತ್ತು ದಯೆ ತೋರುವವನಾಗಿದ್ದಾನೆ.”
فَذَكِّرۡ فَمَآ أَنتَ بِنِعۡمَتِ رَبِّكَ بِكَاهِنٖ وَلَا مَجۡنُونٍ ﴿29﴾فَذَكِّرۡ فَمَآ أَنتَ بِنِعۡمَتِ رَبِّكَ بِكَاهِنٖ وَلَا مَجۡنُونٍ
Transliteration: Fathakkir fama anta biniAAmati rabbika bikahin wala majnoonin
Translation: (ಪ್ರವಾದಿಯವರೇ) ನೀವು ಉಪದೇಶ ನೀಡಿರಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹದಿಂದ ನೀವು ಜ್ಯೋತಿಷಿಯೋ ಮಾನಸಿಕ ಅಸ್ವಸ್ಥರೋ ಅಲ್ಲ.
أَمۡ يَقُولُونَ شَاعِرٞ نَّتَرَبَّصُ بِهِۦ رَيۡبَ ٱلۡمَنُونِ ﴿30﴾أَمۡ يَقُولُونَ شَاعِرٞ نَّتَرَبَّصُ بِهِۦ رَيۡبَ ٱلۡمَنُونِ
Transliteration: Am yaqooloona shaAAirun natarabbasu bihi rayba almanooni
Translation: “ಇವನೊಬ್ಬ ಕವಿಯಾಗಿದ್ದಾನೆ. ಇವನಿಗೆ ಕೇಡುಗಾಲ (ಸಾವು) ಬರುವುದನ್ನು ನಾವು ಕಾಯುತ್ತಿದ್ದೇವೆ” ಎಂದು ಅವರು (ಸತ್ಯನಿಷೇಧಿಗಳು) ಹೇಳುತ್ತಿದ್ದಾರೆಯೇ?
قُلۡ تَرَبَّصُواْ فَإِنِّي مَعَكُم مِّنَ ٱلۡمُتَرَبِّصِينَ ﴿31﴾قُلۡ تَرَبَّصُواْ فَإِنِّي مَعَكُم مِّنَ ٱلۡمُتَرَبِّصِينَ
Transliteration: Qul tarabbasoo fainnee maAAakum mina almutarabbiseena
Translation: ಹೇಳಿರಿ: “ನೀವು ಕಾಯಿರಿ! ನಿಶ್ಚಯವಾಗಿಯೂ ನಾನೂ ನಿಮ್ಮೊಂದಿಗೆ ಕಾಯುವವರಲ್ಲಿ ಸೇರುವೆನು.”
أَمۡ تَأۡمُرُهُمۡ أَحۡلَٰمُهُم بِهَٰذَآۚ أَمۡ هُمۡ قَوۡمٞ طَاغُونَ ﴿32﴾أَمۡ تَأۡمُرُهُمۡ أَحۡلَٰمُهُم بِهَٰذَآۚ أَمۡ هُمۡ قَوۡمٞ طَاغُونَ
Transliteration: Am tamuruhum ahlamuhum bihatha am hum qawmun taghoona
Translation: ಅವರ ಮನಸ್ಸು ಅವರಿಗೆ ಇದನ್ನೇ ಕಲಿಸುತ್ತದೆಯೇ? ಅಥವಾ ಅವರು ಅತಿರೇಕಿಗಳಾದ ಜನರಾಗಿದ್ದಾರೆಯೇ?
أَمۡ يَقُولُونَ تَقَوَّلَهُۥۚ بَل لَّا يُؤۡمِنُونَ ﴿33﴾أَمۡ يَقُولُونَ تَقَوَّلَهُۥۚ بَل لَّا يُؤۡمِنُونَ
Transliteration: Am yaqooloona taqawwalahu bal la yuminoona
Translation: “ಅವನು ಇದನ್ನು ಸ್ವಯಂ ರಚಿಸಿದ್ದಾನೆ” ಎಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅವರು ವಿಶ್ವಾಸವಿಡುವುದಿಲ್ಲ.
فَلۡيَأۡتُواْ بِحَدِيثٖ مِّثۡلِهِۦٓ إِن كَانُواْ صَٰدِقِينَ ﴿34﴾فَلۡيَأۡتُواْ بِحَدِيثٖ مِّثۡلِهِۦٓ إِن كَانُواْ صَٰدِقِينَ
Transliteration: Falyatoo bihadeethin mithlihi in kanoo sadiqeena
Translation: ಅವರು ಸತ್ಯವನ್ನೇ ಹೇಳುತ್ತಿದ್ದರೆ ಇದರಂತಿರುವ ಒಂದು ವಚನವನ್ನು ಅವರು ರಚಿಸಿ ತರಲಿ.
أَمۡ خُلِقُواْ مِنۡ غَيۡرِ شَيۡءٍ أَمۡ هُمُ ٱلۡخَٰلِقُونَ ﴿35﴾أَمۡ خُلِقُواْ مِنۡ غَيۡرِ شَيۡءٍ أَمۡ هُمُ ٱلۡخَٰلِقُونَ
Transliteration: Am khuliqoo min ghayri shayin am humu alkhaliqoona
Translation: ಅವರು (ಯಾವುದೇ ಸೃಷ್ಟಿಕರ್ತನಿಲ್ಲದೆ) ಸ್ವಯಂ ಅಸ್ತಿತ್ವಕ್ಕೆ ಬಂದರೇ? ಅಥವಾ ಅವರೇ ಅವರ ಸೃಷ್ಟಿಕರ್ತರಾಗಿದ್ದಾರೆಯೇ?
أَمۡ خَلَقُواْ ٱلسَّمَٰوَٰتِ وَٱلۡأَرۡضَۚ بَل لَّا يُوقِنُونَ ﴿36﴾أَمۡ خَلَقُواْ ٱلسَّمَٰوَٰتِ وَٱلۡأَرۡضَۚ بَل لَّا يُوقِنُونَ
Transliteration: Am khalaqoo alssamawati waalarda bal la yooqinoona
Translation: ಅವರೇ ಭೂಮ್ಯಾಕಾಶಗಳನ್ನು ಸೃಷ್ಟಿಸಿದರೇ? ಅಲ್ಲ, ವಾಸ್ತವವಾಗಿ ಅವರು ದೃಢವಿಶ್ವಾಸವಿಡುವುದಿಲ್ಲ.
أَمۡ عِندَهُمۡ خَزَآئِنُ رَبِّكَ أَمۡ هُمُ ٱلۡمُصَۜيۡطِرُونَ ﴿37﴾أَمۡ عِندَهُمۡ خَزَآئِنُ رَبِّكَ أَمۡ هُمُ ٱلۡمُصَۜيۡطِرُونَ
Transliteration: Am AAindahum khazainu rabbika am humu almusaytiroona
Translation: ನಿಮ್ಮ ಪರಿಪಾಲಕನ (ಅಲ್ಲಾಹನ) ಬೊಕ್ಕಸಗಳು ಅವರ ಬಳಿಯಲ್ಲಿವೆಯೇ? ಅಥವಾ ಅವರು (ಆ ಬೊಕ್ಕಸಗಳ) ನಿರ್ವಾಹಕರೇ?
أَمۡ لَهُمۡ سُلَّمٞ يَسۡتَمِعُونَ فِيهِۖ فَلۡيَأۡتِ مُسۡتَمِعُهُم بِسُلۡطَٰنٖ مُّبِينٍ ﴿38﴾أَمۡ لَهُمۡ سُلَّمٞ يَسۡتَمِعُونَ فِيهِۖ فَلۡيَأۡتِ مُسۡتَمِعُهُم بِسُلۡطَٰنٖ مُّبِينٍ
Transliteration: Am lahum sullamun yastamiAAoona feehi falyati mustamiAAuhum bisultanin mubeenin
Translation: ಅವರ ಬಳಿ ಒಂದು ಏಣಿಯಿದ್ದು ಅವರು ಅದನ್ನು ಏರಿ (ಆಕಾಶದ ಮಾತುಗಳನ್ನು) ಕಿವಿಗೊಟ್ಟು ಕೇಳುತ್ತಾರೆಯೇ? ಹಾಗಿದ್ದರೆ ಅವರಲ್ಲಿ ಕಿವಿಗೊಟ್ಟು ಕೇಳಿದ ವ್ಯಕ್ತಿ ಸ್ಪಷ್ಟ ಆಧಾರವನ್ನು ತರಲಿ.
أَمۡ لَهُ ٱلۡبَنَٰتُ وَلَكُمُ ٱلۡبَنُونَ ﴿39﴾أَمۡ لَهُ ٱلۡبَنَٰتُ وَلَكُمُ ٱلۡبَنُونَ
Transliteration: Am lahu albanatu walakumu albanoona
Translation: ಅಲ್ಲಾಹನಿಗೆ ಹೆಣ್ಣು ಮಕ್ಕಳು ಮತ್ತು ನಿಮಗೆ ಗಂಡು ಮಕ್ಕಳೇ?
أَمۡ تَسۡـَٔلُهُمۡ أَجۡرٗا فَهُم مِّن مَّغۡرَمٖ مُّثۡقَلُونَ ﴿40﴾أَمۡ تَسۡـَٔلُهُمۡ أَجۡرٗا فَهُم مِّن مَّغۡرَمٖ مُّثۡقَلُونَ
Transliteration: Am tasaluhum ajran fahum min maghramin muthqaloona
Translation: ನೀವು ಅವರೊಡನೆ ಪ್ರತಿಫಲವನ್ನು ಕೇಳಿ ಅವರು (ಅದನ್ನು ನೀಡಲು ಸಾಧ್ಯವಾಗದೆ) ಸಾಲದ ಹೊರೆಯನ್ನು ಹೊರುತ್ತಿದ್ದಾರೆಯೇ?
أَمۡ عِندَهُمُ ٱلۡغَيۡبُ فَهُمۡ يَكۡتُبُونَ ﴿41﴾أَمۡ عِندَهُمُ ٱلۡغَيۡبُ فَهُمۡ يَكۡتُبُونَ
Transliteration: Am AAindahumu alghaybu fahum yaktuboona
Translation: ಅವರ ಬಳಿ ಅದೃಶ್ಯ ಜ್ಞಾನವಿದ್ದು ಅವರು ಅದನ್ನು ಬರೆಯುತ್ತಿದ್ದಾರೆಯೇ?
أَمۡ يُرِيدُونَ كَيۡدٗاۖ فَٱلَّذِينَ كَفَرُواْ هُمُ ٱلۡمَكِيدُونَ ﴿42﴾أَمۡ يُرِيدُونَ كَيۡدٗاۖ فَٱلَّذِينَ كَفَرُواْ هُمُ ٱلۡمَكِيدُونَ
Transliteration: Am yureedoona kaydan faallatheena kafaroo humu almakeedoona
Translation: ಅವರು ಏನಾದರೂ ಪಿತೂರಿ ಮಾಡಲು ಬಯಸುತ್ತಿದ್ದಾರೆಯೇ? ಆದರೆ ಪಿತೂರಿಗೆ ಬಲಿಯಾಗುವವರು ಸತ್ಯನಿಷೇಧಿಗಳೇ ಆಗಿದ್ದಾರೆ.
أَمۡ لَهُمۡ إِلَٰهٌ غَيۡرُ ٱللَّهِۚ سُبۡحَٰنَ ٱللَّهِ عَمَّا يُشۡرِكُونَ ﴿43﴾أَمۡ لَهُمۡ إِلَٰهٌ غَيۡرُ ٱللَّهِۚ سُبۡحَٰنَ ٱللَّهِ عَمَّا يُشۡرِكُونَ
Transliteration: Am lahum ilahun ghayru Allahi subhana Allahi AAamma yushrikoona
Translation: ಅವರಿಗೆ ಅಲ್ಲಾಹನ ಹೊರತು ಬೇರೆ ದೇವರಿದ್ದಾನೆಯೇ? ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.
وَإِن يَرَوۡاْ كِسۡفٗا مِّنَ ٱلسَّمَآءِ سَاقِطٗا يَقُولُواْ سَحَابٞ مَّرۡكُومٞ ﴿44﴾وَإِن يَرَوۡاْ كِسۡفٗا مِّنَ ٱلسَّمَآءِ سَاقِطٗا يَقُولُواْ سَحَابٞ مَّرۡكُومٞ
Transliteration: Wain yaraw kisfan mina alssamai saqitan yaqooloo sahabun markoomun
Translation: ಅವರು ಆಕಾಶದಿಂದ ಒಂದು ತುಣುಕು ಉದುರುವುದನ್ನು ಕಂಡರೆ, “ಅದು ಪದರ ಪದರವಾಗಿ ಪೇರಿಸಿಟ್ಟ ಮೋಡ” ಎಂದು ಹೇಳುತ್ತಾರೆ.
فَذَرۡهُمۡ حَتَّىٰ يُلَٰقُواْ يَوۡمَهُمُ ٱلَّذِي فِيهِ يُصۡعَقُونَ ﴿45﴾فَذَرۡهُمۡ حَتَّىٰ يُلَٰقُواْ يَوۡمَهُمُ ٱلَّذِي فِيهِ يُصۡعَقُونَ
Transliteration: Fatharhum hatta yulaqoo yawmahumu allathee feehi yusAAaqoona
Translation: ಆದ್ದರಿಂದ ಅವರನ್ನು ಸ್ಮೃತಿ ತಪ್ಪುವಂತೆ ಮಾಡುವ ಅವರ ಆ ದಿನವನ್ನು ಭೇಟಿಯಾಗುವ ತನಕ ಅವರನ್ನು (ಅವರ ಪಾಡಿಗೆ) ಬಿಟ್ಟುಬಿಡಿ.
يَوۡمَ لَا يُغۡنِي عَنۡهُمۡ كَيۡدُهُمۡ شَيۡـٔٗا وَلَا هُمۡ يُنصَرُونَ ﴿46﴾يَوۡمَ لَا يُغۡنِي عَنۡهُمۡ كَيۡدُهُمۡ شَيۡـٔٗا وَلَا هُمۡ يُنصَرُونَ
Transliteration: Yawma la yughnee AAanhum kayduhum shayan wala hum yunsaroona
Translation: ಆ ದಿನ ಅವರ ತಂತ್ರಗಾರಿಕೆಗಳು ಅವರಿಗೆ ಉಪಕಾರ ಮಾಡುವುದಿಲ್ಲ. ಅವರಿಗೆ ಸಹಾಯವೂ ದೊರೆಯುವುದಿಲ್ಲ.
وَإِنَّ لِلَّذِينَ ظَلَمُواْ عَذَابٗا دُونَ ذَٰلِكَ وَلَٰكِنَّ أَكۡثَرَهُمۡ لَا يَعۡلَمُونَ ﴿47﴾وَإِنَّ لِلَّذِينَ ظَلَمُواْ عَذَابٗا دُونَ ذَٰلِكَ وَلَٰكِنَّ أَكۡثَرَهُمۡ لَا يَعۡلَمُونَ
Transliteration: Wainna lillatheena thalamoo AAathaban doona thalika walakinna aktharahum la yaAAlamoona
Translation: ನಿಶ್ಚಯವಾಗಿಯೂ ಅಕ್ರಮಿಗಳಿಗೆ ಇದರ ಹೊರತಾಗಿ ಬೇರೆ ಶಿಕ್ಷೆಯೂ ಇದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
وَٱصۡبِرۡ لِحُكۡمِ رَبِّكَ فَإِنَّكَ بِأَعۡيُنِنَاۖ وَسَبِّحۡ بِحَمۡدِ رَبِّكَ حِينَ تَقُومُ ﴿48﴾وَٱصۡبِرۡ لِحُكۡمِ رَبِّكَ فَإِنَّكَ بِأَعۡيُنِنَاۖ وَسَبِّحۡ بِحَمۡدِ رَبِّكَ حِينَ تَقُومُ
Transliteration: Waisbir lihukmi rabbika fainnaka biaAAyunina wasabbih bihamdi rabbika heena taqoomu
Translation: ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ತೀರ್ಮಾನವನ್ನು ತಾಳ್ಮೆಯಿಂದ ಕಾಯಿರಿ. ನಿಶ್ಚಯವಾಗಿಯೂ ನೀವು ನಮ್ಮ ಕಣ್ಣುಗಳ ಮುಂಭಾಗದಲ್ಲಿದ್ದೀರಿ. ನೀವು (ಬೆಳಗ್ಗೆ) ಎದ್ದೇಳುವಾಗ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ.
وَمِنَ ٱلَّيۡلِ فَسَبِّحۡهُ وَإِدۡبَٰرَ ٱلنُّجُومِ ﴿49﴾وَمِنَ ٱلَّيۡلِ فَسَبِّحۡهُ وَإِدۡبَٰرَ ٱلنُّجُومِ
Transliteration: Wamina allayli fasabbihhu waidbara alnnujoomi
Translation: ರಾತ್ರಿಯಲ್ಲೂ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ. ನಕ್ಷತ್ರಗಳು ಮರೆಯಾಗುವ ಸಮಯದಲ್ಲೂ ಸಹ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download