quranm◉

Surah Al-Hijr transliteration

◉ ಸೂರಾ · ∞

15:1

الٓرۚ تِلۡكَ ءَايَٰتُ ٱلۡكِتَٰبِ وَقُرۡءَانٖ مُّبِينٖ ﴿1﴾

Transliteration: Aliflamra tilka ayatu alkitabi waquranin mubeenin

Translation: ಅಲಿಫ್ ಲಾಮ್ ರಾ. ಇವು ದೈವಿಕ ಗ್ರಂಥದ ವಚನಗಳು ಮತ್ತು ಸ್ಪಷ್ಟ ಕುರ್‌ಆನ್ ಆಗಿದೆ.

15:2

رُّبَمَا يَوَدُّ ٱلَّذِينَ كَفَرُواْ لَوۡ كَانُواْ مُسۡلِمِينَ ﴿2﴾

Transliteration: Rubama yawaddu allatheena kafaroo law kanoo muslimeena

Translation: ”ನಾವು ಮುಸಲ್ಮಾನರಾಗಿದ್ದರೆ!” ಎಂದು ಕೆಲವೊಮ್ಮೆ ಸತ್ಯನಿಷೇಧಿಗಳು ಹಾರೈಸುವರು.[1]

15:3

ذَرۡهُمۡ يَأۡكُلُواْ وَيَتَمَتَّعُواْ وَيُلۡهِهِمُ ٱلۡأَمَلُۖ فَسَوۡفَ يَعۡلَمُونَ ﴿3﴾

Transliteration: Tharhum yakuloo wayatamattaAAoo wayulhihimu alamalu fasawfa yaAAlamoona

Translation: ಅವರನ್ನು ಬಿಟ್ಟುಬಿಡಿ. ಅವರು ತಿನ್ನುತ್ತಲೂ, ಆನಂದಿಸುತ್ತಲೂ, ಹುಸಿ ಭರವಸೆಗಳಲ್ಲಿ ತಲ್ಲೀನರಾಗುತ್ತಲೂ ಇರಲಿ. ಸದ್ಯವೇ ಅವರು ತಿಳಿಯುವರು.

15:4

وَمَآ أَهۡلَكۡنَا مِن قَرۡيَةٍ إِلَّا وَلَهَا كِتَابٞ مَّعۡلُومٞ ﴿4﴾

Transliteration: Wama ahlakna min qaryatin illa walaha kitabun maAAloomun

Translation: ನಾವು ಯಾವುದೇ ಊರನ್ನು ಅದಕ್ಕೆ ಒಂದು ನಿಗದಿತ ಅವಧಿಯನ್ನು ನೀಡದೆ ನಾಶ ಮಾಡಿಲ್ಲ.

15:5

مَّا تَسۡبِقُ مِنۡ أُمَّةٍ أَجَلَهَا وَمَا يَسۡتَـٔۡخِرُونَ ﴿5﴾

Transliteration: Ma tasbiqu min ommatin ajalaha wama yastakhiroona

Translation: ಯಾವುದೇ ಜನತೆ ತಮ್ಮ ನಿಗದಿತ ಅವಧಿಯನ್ನು ದಾಟಿಹೋಗುವುದಿಲ್ಲ, ಹಿಂದೆ ಉಳಿಯುವುದೂ ಇಲ್ಲ.

15:6

وَقَالُواْ يَـٰٓأَيُّهَا ٱلَّذِي نُزِّلَ عَلَيۡهِ ٱلذِّكۡرُ إِنَّكَ لَمَجۡنُونٞ ﴿6﴾

Transliteration: Waqaloo ya ayyuha allathee nuzzila AAalayhi alththikru innaka lamajnoonun

Translation: ಸತ್ಯನಿಷೇಧಿಗಳು ಹೇಳಿದರು: “ಓ ದೇವವಾಣಿ ಅವತೀರ್ಣವಾಗುವವನೇ! ನಿಜಕ್ಕೂ ನೀನೊಬ್ಬ ಮಾನಸಿಕ ಅಸ್ವಸ್ಥ.

15:7

لَّوۡمَا تَأۡتِينَا بِٱلۡمَلَـٰٓئِكَةِ إِن كُنتَ مِنَ ٱلصَّـٰدِقِينَ ﴿7﴾

Transliteration: Law ma tateena bialmalaikati in kunta mina alssadiqeena

Translation: ನೀನು ಸತ್ಯವಂತನಾಗಿದ್ದರೆ ನೀನೇಕೆ ನಮ್ಮ ಬಳಿಗೆ ದೇವದೂತರುಗಳನ್ನು ತರುವುದಿಲ್ಲ?”

15:8

مَا نُنَزِّلُ ٱلۡمَلَـٰٓئِكَةَ إِلَّا بِٱلۡحَقِّ وَمَا كَانُوٓاْ إِذٗا مُّنظَرِينَ ﴿8﴾

Transliteration: Ma nunazzilu almalaikata illa bialhaqqi wama kanoo ithan munthareena

Translation: ನಾವು ದೇವದೂತರುಗಳನ್ನು ಸತ್ಯ ಸಮೇತವಾಗಿಯೇ ಇಳಿಸುತ್ತೇವೆ.[1] ಆಗ ಅವರಿಗೆ ಯಾವುದೇ ಕಾಲಾವಕಾಶ ನೀಡಲಾಗಿರುವುದಿಲ್ಲ.

15:9

إِنَّا نَحۡنُ نَزَّلۡنَا ٱلذِّكۡرَ وَإِنَّا لَهُۥ لَحَٰفِظُونَ ﴿9﴾

Transliteration: Inna nahnu nazzalna alththikra wainna lahu lahafithoona

Translation: ಈ ಕುರ್‌ಆನನ್ನು ಅವತೀರ್ಣಗೊಳಿಸಿದ್ದು ನಾವೇ. ನಾವೇ ಇದನ್ನು ಸಂರಕ್ಷಿಸುತ್ತೇವೆ.

15:10

وَلَقَدۡ أَرۡسَلۡنَا مِن قَبۡلِكَ فِي شِيَعِ ٱلۡأَوَّلِينَ ﴿10﴾

Transliteration: Walaqad arsalna min qablika fee shiyaAAi alawwaleena

Translation: ನಿಮಗಿಂತ ಮೊದಲು ನಾವು ಹಿಂದಿನ ಕಾಲದ ಜನರ ಅನೇಕ ಪಂಗಡಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದೆವು.

15:11

وَمَا يَأۡتِيهِم مِّن رَّسُولٍ إِلَّا كَانُواْ بِهِۦ يَسۡتَهۡزِءُونَ ﴿11﴾

Transliteration: Wama yateehim min rasoolin illa kanoo bihi yastahzioona

Translation: ಯಾವುದೇ ಸಂದೇಶವಾಹಕರು ಅವರ ಬಳಿಗೆ ಬಂದಾಗಲೆಲ್ಲಾ ಅವರು ತಮಾಷೆ ಮಾಡಿ ನಗುತ್ತಿದ್ದರು.

15:12

كَذَٰلِكَ نَسۡلُكُهُۥ فِي قُلُوبِ ٱلۡمُجۡرِمِينَ ﴿12﴾

Transliteration: Kathalika naslukuhu fee quloobi almujrimeena

Translation: ಅಪರಾಧಿಗಳ ಹೃದಯಗಳಲ್ಲಿ ನಾವು ಈ ರೀತಿ ಅದನ್ನು (ತಮಾಷೆ ಮಾಡುವುದನ್ನು) ತೂರಿಸಿ ಬಿಡುತ್ತೇವೆ.

15:13

لَا يُؤۡمِنُونَ بِهِۦ وَقَدۡ خَلَتۡ سُنَّةُ ٱلۡأَوَّلِينَ ﴿13﴾

Transliteration: La yuminoona bihi waqad khalat sunnatu alawwaleena

Translation: ಅವರು ಅದರಲ್ಲಿ ವಿಶ್ವಾಸವಿಡುವುದಿಲ್ಲ. ಹಿಂದಿನ ಕಾಲದ ಜನರ ಮೇಲಿನ ಶಿಕ್ಷಾಕ್ರಮವು ಈಗಾಗಲೇ ಜರುಗಿ ಬಿಟ್ಟಿದೆ.

15:14

وَلَوۡ فَتَحۡنَا عَلَيۡهِم بَابٗا مِّنَ ٱلسَّمَآءِ فَظَلُّواْ فِيهِ يَعۡرُجُونَ ﴿14﴾

Transliteration: Walaw fatahna AAalayhim baban mina alssamai fathalloo feehi yaAArujoona

Translation: ನಾವು ಅವರ ಮೇಲೆ ಆಕಾಶದ ದ್ವಾರವನ್ನು ತೆರೆದುಕೊಟ್ಟು ಅವರು ಅದಕ್ಕೆ ಏರಿಹೋದರೂ ಸಹ,

15:15

لَقَالُوٓاْ إِنَّمَا سُكِّرَتۡ أَبۡصَٰرُنَا بَلۡ نَحۡنُ قَوۡمٞ مَّسۡحُورُونَ ﴿15﴾

Transliteration: Laqaloo innama sukkirat absaruna bal nahnu qawmun mashooroona

Translation: ಅವರು ಹೇಳುವರು: “ನಮ್ಮನ್ನು ಮಂತ್ರಮುಗ್ಧಗೊಳಿಸಲಾಗಿದೆ. ಅಲ್ಲ, ನಮಗೆ ಮಾಟ ಮಾಡಲಾಗಿದೆ.”[1]

15:16

وَلَقَدۡ جَعَلۡنَا فِي ٱلسَّمَآءِ بُرُوجٗا وَزَيَّنَّـٰهَا لِلنَّـٰظِرِينَ ﴿16﴾

Transliteration: Walaqad jaAAalna fee alssamai buroojan wazayyannaha lilnnathireena

Translation: ನಾವು ಆಕಾಶದಲ್ಲಿ ನಕ್ಷತ್ರ ಪುಂಜಗಳನ್ನು ಮಾಡಿದ್ದೇವೆ ಮತ್ತು ನೋಡುಗರಿಗಾಗಿ ಅವುಗಳನ್ನು ಅಲಂಕರಿಸಿದ್ದೇವೆ.

15:17

وَحَفِظۡنَٰهَا مِن كُلِّ شَيۡطَٰنٖ رَّجِيمٍ ﴿17﴾

Transliteration: Wahafithnaha min kulli shaytanin rajeemin

Translation: ಮತ್ತು ಅದನ್ನು (ಆಕಾಶವನ್ನು) ಎಲ್ಲಾ ಬಹಿಷ್ಕೃತ ಶೈತಾನರಿಂದ ಸಂರಕ್ಷಿಸಿದ್ದೇವೆ.

15:18

إِلَّا مَنِ ٱسۡتَرَقَ ٱلسَّمۡعَ فَأَتۡبَعَهُۥ شِهَابٞ مُّبِينٞ ﴿18﴾

Transliteration: Illa mani istaraqa alssamAAa faatbaAAahu shihabun mubeenun

Translation: ಯಾರಾದರೂ ಕದ್ದಾಲಿಸಲು ಪ್ರಯತ್ನಿಸಿದರೆ, ಅಗ್ನಿಜ್ವಾಲೆಯು ಅವನನ್ನು ಹಿಂಬಾಲಿಸುತ್ತದೆ.

15:19

وَٱلۡأَرۡضَ مَدَدۡنَٰهَا وَأَلۡقَيۡنَا فِيهَا رَوَٰسِيَ وَأَنۢبَتۡنَا فِيهَا مِن كُلِّ شَيۡءٖ مَّوۡزُونٖ ﴿19﴾

Transliteration: Waalarda madadnaha waalqayna feeha rawasiya waanbatna feeha min kulli shayin mawzoonin

Translation: ನಾವು ಭೂಮಿಯನ್ನು ವಿಸ್ತರಿಸಿದೆವು ಮತ್ತು ಅದರಲ್ಲಿ ಪರ್ವತಗಳನ್ನು ಹಾಕಿದೆವು. ಅದರಲ್ಲಿ ನಾವು ಎಲ್ಲವನ್ನೂ ಒಂದು ನಿಗದಿತ ಪ್ರಮಾಣದಲ್ಲಿ ಬೆಳೆಸಿದೆವು.

15:20

وَجَعَلۡنَا لَكُمۡ فِيهَا مَعَٰيِشَ وَمَن لَّسۡتُمۡ لَهُۥ بِرَٰزِقِينَ ﴿20﴾

Transliteration: WajaAAalna lakum feeha maAAayisha waman lastum lahu biraziqeena

Translation: ಅದರಲ್ಲಿ ನಾವು ನಿಮಗೆ ಮತ್ತು ನೀವು ಆಹಾರ ನೀಡದವರಿಗೆ[1] ಜೀವನ ಮಾರ್ಗಗಳನ್ನು ಮಾಡಿಕೊಟ್ಟೆವು.

15:21

وَإِن مِّن شَيۡءٍ إِلَّا عِندَنَا خَزَآئِنُهُۥ وَمَا نُنَزِّلُهُۥٓ إِلَّا بِقَدَرٖ مَّعۡلُومٖ ﴿21﴾

Transliteration: Wain min shayin illa AAindana khazainuhu wama nunazziluhu illa biqadarin maAAloomin

Translation: ಯಾವುದೇ ವಸ್ತುವಾದರೂ ಅದರ ಬೊಕ್ಕಸಗಳು ನಮ್ಮ ಬಳಿಯಲ್ಲೇ ಇವೆ. ನಾವು ಪ್ರತಿಯೊಂದು ವಸ್ತುವನ್ನೂ ಅದರ ನಿಗದಿತ ಪ್ರಮಾಣಕ್ಕೆ ಅನುಗುಣವಾಗಿಯೇ ಇಳಿಸುತ್ತೇವೆ.

15:22

وَأَرۡسَلۡنَا ٱلرِّيَٰحَ لَوَٰقِحَ فَأَنزَلۡنَا مِنَ ٱلسَّمَآءِ مَآءٗ فَأَسۡقَيۡنَٰكُمُوهُ وَمَآ أَنتُمۡ لَهُۥ بِخَٰزِنِينَ ﴿22﴾

Transliteration: Waarsalna alrriyaha lawaqiha faanzalna mina alssamai maan faasqaynakumoohu wama antum lahu bikhazineena

Translation: ನಾವು ಫಲವತ್ತಾಗಿಸುವ ಗಾಳಿಯನ್ನು ಕಳುಹಿಸುತ್ತೇವೆ. ನಂತರ ಆಕಾಶದಿಂದ ಮಳೆಯನ್ನು ಸುರಿಸಿ, ಅದನ್ನು ನಿಮಗೆ ಕುಡಿಯಲು ನೀಡುತ್ತೇವೆ. ನೀವು ಅದನ್ನು ಸಂಗ್ರಹಿಸಿಡುವವರಲ್ಲ.

15:23

وَإِنَّا لَنَحۡنُ نُحۡيِۦ وَنُمِيتُ وَنَحۡنُ ٱلۡوَٰرِثُونَ ﴿23﴾

Transliteration: Wainna lanahnu nuhyee wanumeetu wanahnu alwarithoona

Translation: ನಿಶ್ಚಯವಾಗಿಯೂ ನಾವೇ ಜೀವನ ಮತ್ತು ಮರಣವನ್ನು ನೀಡುವವರು. ನಾವೇ (ಎಲ್ಲಾ ವಸ್ತುಗಳ) ಉತ್ತರಾಧಿಕಾರಿಗಳು.

15:24

وَلَقَدۡ عَلِمۡنَا ٱلۡمُسۡتَقۡدِمِينَ مِنكُمۡ وَلَقَدۡ عَلِمۡنَا ٱلۡمُسۡتَـٔۡخِرِينَ ﴿24﴾

Transliteration: Walaqad AAalimna almustaqdimeena minkum walaqad AAalimna almustakhireena

Translation: ನಿಮ್ಮಲ್ಲಿ ಇದಕ್ಕೆ ಮೊದಲು ತೀರಿ ಹೋದವರು ಯಾರೆಂದು ನಮಗೆ ತಿಳಿದಿದೆ. ಮುಂದೆ ಬರಲಿರುವವರು ಯಾರೆಂದೂ ನಮಗೆ ತಿಳಿದಿದೆ.

15:25

وَإِنَّ رَبَّكَ هُوَ يَحۡشُرُهُمۡۚ إِنَّهُۥ حَكِيمٌ عَلِيمٞ ﴿25﴾

Transliteration: Wainna rabbaka huwa yahshuruhum innahu hakeemun AAaleemun

Translation: ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅವರೆಲ್ಲರನ್ನು ಒಟ್ಟು ಸೇರಿಸುವನು. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.

15:26

وَلَقَدۡ خَلَقۡنَا ٱلۡإِنسَٰنَ مِن صَلۡصَٰلٖ مِّنۡ حَمَإٖ مَّسۡنُونٖ ﴿26﴾

Transliteration: Walaqad khalaqna alinsana min salsalin min hamain masnoonin

Translation: ನಾವು ಮನುಷ್ಯನನ್ನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಸೃಷ್ಟಿಸಿದೆವು.

15:27

وَٱلۡجَآنَّ خَلَقۡنَٰهُ مِن قَبۡلُ مِن نَّارِ ٱلسَّمُومِ ﴿27﴾

Transliteration: Waaljanna khalaqnahu min qablu min nari alssamoomi

Translation: ನಾವು ಜಿನ್ನ್‌ಗಳನ್ನು ಇದಕ್ಕಿಂತ ಮೊದಲು ತೀಕ್ಷ್ಣ ತಾಪವಿರುವ ಬೆಂಕಿಯಿಂದ ಸೃಷ್ಟಿಸಿದೆವು.

15:28

وَإِذۡ قَالَ رَبُّكَ لِلۡمَلَـٰٓئِكَةِ إِنِّي خَٰلِقُۢ بَشَرٗا مِّن صَلۡصَٰلٖ مِّنۡ حَمَإٖ مَّسۡنُونٖ ﴿28﴾

Transliteration: Waith qala rabbuka lilmalaikati innee khaliqun basharan min salsalin min hamain masnoonin

Translation: ತಮ್ಮ ಪರಿಪಾಲಕನು (ಅಲ್ಲಾಹು) ದೇವದೂತರುಗಳೊಡನೆ ಹೇಳಿದ ಸಂದರ್ಭ: “ನಾನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸುತ್ತೇನೆ.

15:29

فَإِذَا سَوَّيۡتُهُۥ وَنَفَخۡتُ فِيهِ مِن رُّوحِي فَقَعُواْ لَهُۥ سَٰجِدِينَ ﴿29﴾

Transliteration: Faitha sawwaytuhu wanafakhtu feehi min roohee faqaAAoo lahu sajideena

Translation: ನಾನು ಅವನಿಗೆ ಪೂರ್ಣ ರೂಪವನ್ನು ನೀಡಿ ಅವನಿಗೆ ನನ್ನ ಆತ್ಮವನ್ನು ಊದಿದರೆ, ನೀವೆಲ್ಲರೂ ಅವನಿಗೆ ಸಾಷ್ಟಾಂಗ ಮಾಡುತ್ತಾ ಬೀಳಿರಿ.”

15:30

فَسَجَدَ ٱلۡمَلَـٰٓئِكَةُ كُلُّهُمۡ أَجۡمَعُونَ ﴿30﴾

Transliteration: Fasajada almalaikatu kulluhum ajmaAAoona

Translation: ಆಗ ದೇವದೂತರುಗಳೆಲ್ಲರೂ ಒಟ್ಟಾಗಿ ಸಾಷ್ಟಾಂಗ ಮಾಡಿದರು.

15:31

إِلَّآ إِبۡلِيسَ أَبَىٰٓ أَن يَكُونَ مَعَ ٱلسَّـٰجِدِينَ ﴿31﴾

Transliteration: Illa ibleesa aba an yakoona maAAa alssajideena

Translation: ಇಬ್ಲೀಸನ ಹೊರತು. ಅವನು ಸಾಷ್ಟಾಂಗ ಮಾಡುವವರೊಡನೆ ಸೇರಲು ನಿರಾಕರಿಸಿದನು.

15:32

قَالَ يَـٰٓإِبۡلِيسُ مَا لَكَ أَلَّا تَكُونَ مَعَ ٱلسَّـٰجِدِينَ ﴿32﴾

Transliteration: Qala ya ibleesu ma laka alla takoona maAAa alssajideena

Translation: ಅಲ್ಲಾಹು ಕೇಳಿದನು: “ಓ ಇಬ್ಲೀಸ್! ನೀನು ಸಾಷ್ಟಾಂಗ ಮಾಡುವವರೊಡನೆ ಸೇರದಿರಲು ಕಾರಣವೇನು?”

15:33

قَالَ لَمۡ أَكُن لِّأَسۡجُدَ لِبَشَرٍ خَلَقۡتَهُۥ مِن صَلۡصَٰلٖ مِّنۡ حَمَإٖ مَّسۡنُونٖ ﴿33﴾

Transliteration: Qala lam akun liasjuda libasharin khalaqtahu min salsalin min hamain masnoonin

Translation: ಅವನು ಹೇಳಿದನು: “ನೀನು ಕಪ್ಪು, (ತಟ್ಟಿದರೆ) ಸದ್ದು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಸೃಷ್ಟಿಸಿದ ಈ ಮಾನವನಿಗೆ ನಾನು ಸಾಷ್ಟಾಂಗ ಮಾಡಬೇಕಾದವನಲ್ಲ.”

15:34

قَالَ فَٱخۡرُجۡ مِنۡهَا فَإِنَّكَ رَجِيمٞ ﴿34﴾

Transliteration: Qala faokhruj minha fainnaka rajeemun

Translation: ಅಲ್ಲಾಹು ಹೇಳಿದನು: “ಇಲ್ಲಿಂದ ಹೊರಟುಹೋಗು. ನಿಜಕ್ಕೂ ನೀನು ಬಹಿಷ್ಕೃತನಾಗಿರುವೆ.

15:35

وَإِنَّ عَلَيۡكَ ٱللَّعۡنَةَ إِلَىٰ يَوۡمِ ٱلدِّينِ ﴿35﴾

Transliteration: Wainna AAalayka allaAAnata ila yawmi alddeeni

Translation: ಪ್ರತಿಫಲದ ದಿನದ ತನಕ ನಿನ್ನ ಮೇಲೆ ಶಾಪವಿದೆ.”

15:36

قَالَ رَبِّ فَأَنظِرۡنِيٓ إِلَىٰ يَوۡمِ يُبۡعَثُونَ ﴿36﴾

Transliteration: Qala rabbi faanthirnee ila yawmi yubAAathoona

Translation: ಅವನು ಹೇಳಿದನು: “ಓ ನನ್ನ ಪರಿಪಾಲಕನೇ! ಅವರನ್ನು ಜೀವಂತ ಎಬ್ಬಿಸಲಾಗುವ ದಿನದ ತನಕ ನನಗೆ ಕಾಲಾವಕಾಶ ನೀಡು.”

15:37

قَالَ فَإِنَّكَ مِنَ ٱلۡمُنظَرِينَ ﴿37﴾

Transliteration: Qala fainnaka mina almunthareena

Translation: ಅಲ್ಲಾಹು ಹೇಳಿದನು: “ಸರಿ. ನಿನ್ನನ್ನು ಕಾಲಾವಕಾಶ ನೀಡಲಾದವರಲ್ಲಿ ಸೇರಿಸಿದ್ದೇನೆ.

15:38

إِلَىٰ يَوۡمِ ٱلۡوَقۡتِ ٱلۡمَعۡلُومِ ﴿38﴾

Transliteration: Ila yawmi alwaqti almaAAloomi

Translation: ಆ ನಿಗದಿತ ಸಮಯದ ದಿನದ ತನಕ.”

15:39

قَالَ رَبِّ بِمَآ أَغۡوَيۡتَنِي لَأُزَيِّنَنَّ لَهُمۡ فِي ٱلۡأَرۡضِ وَلَأُغۡوِيَنَّهُمۡ أَجۡمَعِينَ ﴿39﴾

Transliteration: Qala rabbi bima aghwaytanee laozayyinanna lahum fee alardi walaoghwiyannahum ajmaAAeena

Translation: ಅವನು ಹೇಳಿದನು: “ಓ ನನ್ನ ಪರಿಪಾಲಕನೇ! ನೀನು ನನ್ನನ್ನು ದಾರಿತಪ್ಪಿಸಿದ ಕಾರಣ, ಭೂಮಿಯಲ್ಲಿ ನಾನು ಅವರೆಲ್ಲರಿಗೂ ಪಾಪಗಳನ್ನು ಅಂದವಾಗಿ ತೋರಿಸಿಕೊಡುವೆನು ಮತ್ತು ಅವರೆಲ್ಲರನ್ನೂ ದಾರಿತಪ್ಪಿಸುವೆನು.

15:40

إِلَّا عِبَادَكَ مِنۡهُمُ ٱلۡمُخۡلَصِينَ ﴿40﴾

Transliteration: Illa AAibadaka minhumu almukhlaseena

Translation: ಅವರಲ್ಲಿರುವ ನಿನ್ನ ನಿಷ್ಕಳಂಕ ದಾಸರ ಹೊರತು.”

15:41

قَالَ هَٰذَا صِرَٰطٌ عَلَيَّ مُسۡتَقِيمٌ ﴿41﴾

Transliteration: Qala hatha siratun AAalayya mustaqeemun

Translation: ಅಲ್ಲಾಹು ಹೇಳಿದನು: “ಇದು ನನ್ನ ಬಳಿಗೆ ತಲುಪುವ ನೇರ ಮಾರ್ಗವಾಗಿದೆ.

15:42

إِنَّ عِبَادِي لَيۡسَ لَكَ عَلَيۡهِمۡ سُلۡطَٰنٌ إِلَّا مَنِ ٱتَّبَعَكَ مِنَ ٱلۡغَاوِينَ ﴿42﴾

Transliteration: Inna AAibadee laysa laka AAalayhim sultanun illa mani ittabaAAaka mina alghaweena

Translation: ನಿಶ್ಚಯವಾಗಿಯೂ, ನನ್ನ ದಾಸರ ಮೇಲೆ ನಿನಗೆ ಯಾವುದೇ ಅಧಿಕಾರವಿಲ್ಲ. ಅವರಲ್ಲಿ ನಿನ್ನನ್ನು ಹಿಂಬಾಲಿಸಿದ ದುರ್ಮಾರ್ಗಿಗಳ ಹೊರತು.

15:43

وَإِنَّ جَهَنَّمَ لَمَوۡعِدُهُمۡ أَجۡمَعِينَ ﴿43﴾

Transliteration: Wainna jahannama lamawAAiduhum ajmaAAeena

Translation: ನಿಶ್ಚಯವಾಗಿಯೂ, ನರಕಾಗ್ನಿಯು ಅವರೆಲ್ಲರಿಗೂ ವಾಗ್ದಾನ ಮಾಡಲಾದ ಸ್ಥಳವಾಗಿದೆ.

15:44

لَهَا سَبۡعَةُ أَبۡوَٰبٖ لِّكُلِّ بَابٖ مِّنۡهُمۡ جُزۡءٞ مَّقۡسُومٌ ﴿44﴾

Transliteration: Laha sabAAatu abwabin likulli babin minhum juzon maqsoomun

Translation: ಅದಕ್ಕೆ ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೂ ಅವರಲ್ಲಿರುವ ಒಂದು ವಿಭಾಗವನ್ನು ವಿಂಗಡಿಸಿಡಲಾಗಿದೆ.

15:45

إِنَّ ٱلۡمُتَّقِينَ فِي جَنَّـٰتٖ وَعُيُونٍ ﴿45﴾

Transliteration: Inna almuttaqeena fee jannatin waAAuyoonin

Translation: ನಿಶ್ಚಯವಾಗಿಯೂ, ದೇವಭಯವುಳ್ಳವರು ಉದ್ಯಾನಗಳಲ್ಲಿ ಮತ್ತು ಚಿಲುಮೆಗಳಲ್ಲಿರುತ್ತಾರೆ.

15:46

ٱدۡخُلُوهَا بِسَلَٰمٍ ءَامِنِينَ ﴿46﴾

Transliteration: Odkhulooha bisalamin amineena

Translation: (ಅವರೊಡನೆ ಹೇಳಲಾಗುವುದು): “ನಿರ್ಭಯ ಮತ್ತು ಶಾಂತಿಯಿಂದ ಅದರೊಳಗೆ ಪ್ರವೇಶಿಸಿರಿ.”

15:47

وَنَزَعۡنَا مَا فِي صُدُورِهِم مِّنۡ غِلٍّ إِخۡوَٰنًا عَلَىٰ سُرُرٖ مُّتَقَٰبِلِينَ ﴿47﴾

Transliteration: WanazaAAna ma fee sudoorihim min ghillin ikhwanan AAala sururin mutaqabileena

Translation: ಅವರ ಹೃದಯಗಳಲ್ಲಿ ಯಾವುದೇ ರೀತಿಯ ದ್ವೇಷವಿದ್ದರೆ ನಾವು ಅದನ್ನು ತೊಲಗಿಸುವೆವು. ಅವರು ಸಹೋದರರಂತೆ ಪರಸ್ಪರ ಮುಖಾಮುಖಿಯಾಗಿ ಸಿಂಹಾಸನಗಳಲ್ಲಿ ಕುಳಿತಿರುವರು.

15:48

لَا يَمَسُّهُمۡ فِيهَا نَصَبٞ وَمَا هُم مِّنۡهَا بِمُخۡرَجِينَ ﴿48﴾

Transliteration: La yamassuhum feeha nasabun wama hum minha bimukhrajeena

Translation: ಅಲ್ಲಿ ಅವರಿಗೆ ಯಾವುದೇ ರೀತಿಯ ಆಯಾಸ ಉಂಟಾಗುವುದಿಲ್ಲ. ಅವರನ್ನು ಅಲ್ಲಿಂದ ಹೊರದಬ್ಬಲಾಗುವುದೂ ಇಲ್ಲ.

15:49

نَبِّئۡ عِبَادِيٓ أَنِّيٓ أَنَا ٱلۡغَفُورُ ٱلرَّحِيمُ ﴿49﴾

Transliteration: Nabbi AAibadee annee ana alghafooru alrraheemu

Translation: ನನ್ನ ದಾಸರಿಗೆ, ನಾನು ಅತ್ಯಂತ ಕ್ಷಮಿಸುವವನು ಮತ್ತು ಅತ್ಯಧಿಕ ದಯೆ ತೋರುವವನೆಂದು ತಿಳಿಸಿ.

15:50

وَأَنَّ عَذَابِي هُوَ ٱلۡعَذَابُ ٱلۡأَلِيمُ ﴿50﴾

Transliteration: Wa anna AAathabee huwa alAAathabu alaleemu

Translation: ನನ್ನ ಶಿಕ್ಷೆಯು ಅತ್ಯಧಿಕ ನೋವಿನಿಂದ ಕೂಡಿದ ಶಿಕ್ಷೆಯಾಗಿದೆಯೆಂದೂ ತಿಳಿಸಿ.

15:51

وَنَبِّئۡهُمۡ عَن ضَيۡفِ إِبۡرَٰهِيمَ ﴿51﴾

Transliteration: Wanabbihum AAan dayfi ibraheema

Translation: ಇಬ್ರಾಹೀಮ‌ರ ಅತಿಥಿಗಳ ಬಗ್ಗೆ ಅವರಿಗೆ ತಿಳಿಸಿ.

15:52

إِذۡ دَخَلُواْ عَلَيۡهِ فَقَالُواْ سَلَٰمٗا قَالَ إِنَّا مِنكُمۡ وَجِلُونَ ﴿52﴾

Transliteration: Ith dakhaloo AAalayhi faqaloo salaman qala inna minkum wajiloona

Translation: ಅವರು ಇಬ್ರಾಹೀಮ‌ರ ಬಳಿಗೆ ಬಂದು “ಸಲಾಮ್” ಎಂದು ಹೇಳಿದ ಸಂದರ್ಭ. ಇಬ್ರಾಹೀಮ್ ಹೇಳಿದರು: “ನಿಜಕ್ಕೂ ನಮಗೆ ನಿಮ್ಮ ಬಗ್ಗೆ ಭಯವಾಗುತ್ತಿದೆ.”

15:53

قَالُواْ لَا تَوۡجَلۡ إِنَّا نُبَشِّرُكَ بِغُلَٰمٍ عَلِيمٖ ﴿53﴾

Transliteration: Qaloo la tawjal inna nubashshiruka bighulamin AAaleemin

Translation: ಅವರು ಉತ್ತರಿಸಿದರು: “ಭಯಪಡಬೇಡಿ! ನಾವು ನಿಮಗೆ ಒಬ್ಬ ಜ್ಞಾನವಂತ ಪುತ್ರನ ಜನನದ ಶುಭ ಸುದ್ದಿಯನ್ನು ತಿಳಿಸುತ್ತೇವೆ.”

15:54

قَالَ أَبَشَّرۡتُمُونِي عَلَىٰٓ أَن مَّسَّنِيَ ٱلۡكِبَرُ فَبِمَ تُبَشِّرُونَ ﴿54﴾

Transliteration: Qala abashshartumoonee AAala an massaniya alkibaru fabima tubashshirooni

Translation: ಇಬ್ರಾಹೀಮ್ ಕೇಳಿದರು: “ನಾನು ಇಳಿ ವಯಸ್ಸನ್ನು ತಲುಪಿದ ಬಳಿಕ ನೀವು ನನಗೆ ಶುಭ ಸುದ್ದಿ ತಿಳಿಸುತ್ತಿದ್ದೀರಾ? ನೀವು ಎಂತಹ ಶುಭ ಸುದ್ದಿ ತಿಳಿಸುತ್ತೀರಿ?”

15:55

قَالُواْ بَشَّرۡنَٰكَ بِٱلۡحَقِّ فَلَا تَكُن مِّنَ ٱلۡقَٰنِطِينَ ﴿55﴾

Transliteration: Qaloo bashsharnaka bialhaqqi fala takun mina alqaniteena

Translation: ಅವರು ಹೇಳಿದರು: “ನಾವು ನಿಮಗೆ ಸತ್ಯವಾದ ಒಂದು ಶುಭ ಸುದ್ದಿಯನ್ನು ತಿಳಿಸುತ್ತಿದ್ದೇವೆ. ಆದ್ದರಿಂದ ನೀವು ನಿರಾಶರಾದವರಲ್ಲಿ ಸೇರಬೇಡಿ.”

15:56

قَالَ وَمَن يَقۡنَطُ مِن رَّحۡمَةِ رَبِّهِۦٓ إِلَّا ٱلضَّآلُّونَ ﴿56﴾

Transliteration: Qala waman yaqnatu min rahmati rabbihi illa alddalloona

Translation: ಇಬ್ರಾಹೀಮ್ ಹೇಳಿದರು: “ತನ್ನ ಪರಿಪಾಲಕನ (ಅಲ್ಲಾಹನ) ಕರುಣೆಯ ಬಗ್ಗೆ ದಾರಿತಪ್ಪಿದವರ ಹೊರತು ಇನ್ನಾರು ನಿರಾಶರಾಗುತ್ತಾರೆ?”

15:57

قَالَ فَمَا خَطۡبُكُمۡ أَيُّهَا ٱلۡمُرۡسَلُونَ ﴿57﴾

Transliteration: Qala fama khatbukum ayyuha almursaloona

Translation: ಇಬ್ರಾಹೀಮ್ ಕೇಳಿದರು: “ಓ ದೂತರೇ! ಇಲ್ಲಿ ನಿಮಗೇನು ಕೆಲಸವಿದೆಯೆಂದು ಬಂದಿದ್ದೀರಿ?”

15:58

قَالُوٓاْ إِنَّآ أُرۡسِلۡنَآ إِلَىٰ قَوۡمٖ مُّجۡرِمِينَ ﴿58﴾

Transliteration: Qaloo inna orsilna ila qawmin mujrimeena

Translation: ಅವರು ಉತ್ತರಿಸಿದರು: “ನಮ್ಮನ್ನು ಅಪರಾಧಿಗಳಾದ ಜನರ ಬಳಿಗೆ ಕಳುಹಿಸಲಾಗಿದೆ.

15:59

إِلَّآ ءَالَ لُوطٍ إِنَّا لَمُنَجُّوهُمۡ أَجۡمَعِينَ ﴿59﴾

Transliteration: Illa ala lootin inna lamunajjoohum ajmaAAeena

Translation: ಆದರೆ ಲೂತ್‍ರ ಕುಟುಂಬವು ಇದರಿಂದ ಹೊರತಾಗಿದೆ. ನಾವು ಅವರೆಲ್ಲರನ್ನೂ ಖಂಡಿತ ರಕ್ಷಿಸುವೆವು.

15:60

إِلَّا ٱمۡرَأَتَهُۥ قَدَّرۡنَآ إِنَّهَا لَمِنَ ٱلۡغَٰبِرِينَ ﴿60﴾

Transliteration: Illa imraatahu qaddarna innaha lamina alghabireena

Translation: ಆದರೆ ಅವರ ಹೆಂಡತಿಯ ಹೊರತು.” ನಾವು ಅವಳನ್ನು ಬಾಕಿಯಾಗುವವರಲ್ಲಿ (ಶಿಕ್ಷೆಗೆ ಗುರಿಯಾಗುವವರಲ್ಲಿ) ನಿರ್ಣಯಿಸಿದ್ದೇವೆ.

15:61

فَلَمَّا جَآءَ ءَالَ لُوطٍ ٱلۡمُرۡسَلُونَ ﴿61﴾

Transliteration: Falamma jaa ala lootin almursaloona

Translation: ನಂತರ ಆ ದೂತರು ಲೂತರ ಕುಟುಂಬದವರ ಬಳಿಗೆ ಬಂದಾಗ,

15:62

قَالَ إِنَّكُمۡ قَوۡمٞ مُّنكَرُونَ ﴿62﴾

Transliteration: Qala innakum qawmun munkaroona

Translation: ಲೂತ್ ಹೇಳಿದರು: “ನಿಜಕ್ಕೂ ನೀವು ಅಪರಿಚಿತ ಜನರಂತೆ ಕಾಣುತ್ತೀರಿ.”

15:63

قَالُواْ بَلۡ جِئۡنَٰكَ بِمَا كَانُواْ فِيهِ يَمۡتَرُونَ ﴿63﴾

Transliteration: Qaloo bal jinaka bima kanoo feehi yamtaroona

Translation: ಅವರು ಉತ್ತರಿಸಿದರು: “ಅಲ್ಲ, ವಾಸ್ತವವಾಗಿ ಈ ಜನರು ಯಾವುದರ ಬಗ್ಗೆ ಸಂಶಯಪಡುತ್ತಿದ್ದಾರೋ ಅದನ್ನೇ ನಾವು ತಂದಿದ್ದೇವೆ.

15:64

وَأَتَيۡنَٰكَ بِٱلۡحَقِّ وَإِنَّا لَصَٰدِقُونَ ﴿64﴾

Transliteration: Waataynaka bialhaqqi wainna lasadiqoona

Translation: ನಾವು ನಿಮ್ಮ ಬಳಿಗೆ ಸತ್ಯದೊಂದಿಗೆ ಬಂದಿದ್ದೇವೆ. ನಿಶ್ಚಯವಾಗಿಯೂ ನಾವು ಸತ್ಯವಂತರಾಗಿದ್ದೇವೆ.

15:65

فَأَسۡرِ بِأَهۡلِكَ بِقِطۡعٖ مِّنَ ٱلَّيۡلِ وَٱتَّبِعۡ أَدۡبَٰرَهُمۡ وَلَا يَلۡتَفِتۡ مِنكُمۡ أَحَدٞ وَٱمۡضُواْ حَيۡثُ تُؤۡمَرُونَ ﴿65﴾

Transliteration: Faasri biahlika biqitAAin mina allayli waittabiAA adbarahum wala yaltafit minkum ahadun waimdoo haythu tumaroona

Translation: ಆದ್ದರಿಂದ ರಾತ್ರಿಯ ಒಂದು ಭಾಗದಲ್ಲಿ ನೀವು ತಮ್ಮ ಕುಟುಂಬ ಸಮೇತ ಇಲ್ಲಿಂದ ಹೊರಡಿ. ನೀವು ಅವರನ್ನು (ಕುಟುಂಬವನ್ನು) ಹಿಂದಿನಿಂದ ಹಿಂಬಾಲಿಸಿರಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡದಿರಲಿ. ನಿಮಗೆ ಆದೇಶಿಸಲಾಗುವ ಕಡೆಗೆ ಸಾಗಿರಿ.”

15:66

وَقَضَيۡنَآ إِلَيۡهِ ذَٰلِكَ ٱلۡأَمۡرَ أَنَّ دَابِرَ هَـٰٓؤُلَآءِ مَقۡطُوعٞ مُّصۡبِحِينَ ﴿66﴾

Transliteration: Waqadayna ilayhi thalika alamra anna dabira haolai maqtooAAun musbiheena

Translation: ನಾವು ಲೂತರಿಗೆ ಆ ವಿಷಯದ ತೀರ್ಮಾನವನ್ನು ತಿಳಿಸಿದೆವು—ಅದೇನೆಂದರೆ, ಬೆಳಗಾಗುತ್ತಿದ್ದಂತೆ ಇವರ ಬುಡವನ್ನೇ ಕತ್ತರಿಸಿ ಬಿಡಲಾಗುವುದೆಂದು.

15:67

وَجَآءَ أَهۡلُ ٱلۡمَدِينَةِ يَسۡتَبۡشِرُونَ ﴿67﴾

Transliteration: Wajaa ahlu almadeenati yastabshiroona

Translation: ನಗರ ವಾಸಿಗಳು ಕೇಕೆ ಹಾಕುತ್ತಾ ಬಂದರು.

15:68

قَالَ إِنَّ هَـٰٓؤُلَآءِ ضَيۡفِي فَلَا تَفۡضَحُونِ ﴿68﴾

Transliteration: Qala inna haolai dayfee fala tafdahooni

Translation: ಲೂತ್ ಹೇಳಿದರು: “ಇವರು ನನ್ನ ಅತಿಥಿಗಳು! ದಯವಿಟ್ಟು ನನಗೆ ಅವಮಾನ ಮಾಡಬೇಡಿ.

15:69

وَٱتَّقُواْ ٱللَّهَ وَلَا تُخۡزُونِ ﴿69﴾

Transliteration: Waittaqoo Allaha wala tukhzooni

Translation: ಅಲ್ಲಾಹನನ್ನು ಭಯಪಡಿರಿ. ನನ್ನನ್ನು ತಮಾಷೆ ಮಾಡಬೇಡಿ.”

15:70

قَالُوٓاْ أَوَلَمۡ نَنۡهَكَ عَنِ ٱلۡعَٰلَمِينَ ﴿70﴾

Transliteration: Qaloo awalam nanhaka AAani alAAalameena

Translation: ಅವರು ಹೇಳಿದರು: “ಜಗತ್ತಿನಲ್ಲಿರುವವರ ವಿಷಯದಲ್ಲಿ (ಹಸ್ತಕ್ಷೇಪ ಮಾಡಬಾರದೆಂದು) ನಾವು ನಿನ್ನನ್ನು ತಡೆದಿಲ್ಲವೇ?”

15:71

قَالَ هَـٰٓؤُلَآءِ بَنَاتِيٓ إِن كُنتُمۡ فَٰعِلِينَ ﴿71﴾

Transliteration: Qala haolai banatee in kuntum faAAileena

Translation: ಲೂತ್ ಹೇಳಿದರು: “ನಿಮಗೆ ಅದನ್ನು ಮಾಡಲೇಬೇಕೆಂದಿದ್ದರೆ ಇಲ್ಲಿ ನನ್ನ ಹೆಣ್ಣುಮಕ್ಕಳಿದ್ದಾರೆ.”

15:72

لَعَمۡرُكَ إِنَّهُمۡ لَفِي سَكۡرَتِهِمۡ يَعۡمَهُونَ ﴿72﴾

Transliteration: LaAAamruka innahum lafee sakratihim yaAAmahoona

Translation: (ಪ್ರವಾದಿಯವರೇ) ನಿಮ್ಮ ಆಯುಷ್ಯದ ಮೇಲಾಣೆ! ಅವರು ಕಾಮೋನ್ಮಾದದಿಂದ ಅಂಧರಾಗಿ ಅಲೆಯುತ್ತಿದ್ದರು.

15:73

فَأَخَذَتۡهُمُ ٱلصَّيۡحَةُ مُشۡرِقِينَ ﴿73﴾

Transliteration: Faakhathathumu alssayhatu mushriqeena

Translation: ಸೂರ್ಯೋದಯವಾಗುತ್ತಿದ್ದಂತೆ ಆ ಮಹಾ ಚೀತ್ಕಾರವು ಅವರನ್ನು ಹಿಡಿದುಬಿಟ್ಟಿತು.

15:74

فَجَعَلۡنَا عَٰلِيَهَا سَافِلَهَا وَأَمۡطَرۡنَا عَلَيۡهِمۡ حِجَارَةٗ مِّن سِجِّيلٍ ﴿74﴾

Transliteration: FajaAAalna AAaliyaha safilaha waamtarna AAalayhim hijaratan min sijjeelin

Translation: ನಂತರ ನಾವು ಆ ಊರನ್ನು ಬುಡಮೇಲು ಮಾಡಿದೆವು ಮತ್ತು ಅವರ ಮೇಲೆ ಕಲ್ಲುಗಳ ಮಳೆಯನ್ನು ಸುರಿಸಿದೆವು.

15:75

إِنَّ فِي ذَٰلِكَ لَأٓيَٰتٖ لِّلۡمُتَوَسِّمِينَ ﴿75﴾

Transliteration: Inna fee thalika laayatin lilmutawassimeena

Translation: ನಿಶ್ಚಯವಾಗಿಯೂ ಅಂತರ್ದೃಷ್ಟಿಯುಳ್ಳವರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.

15:76

وَإِنَّهَا لَبِسَبِيلٖ مُّقِيمٍ ﴿76﴾

Transliteration: Wainnaha labisabeelin muqeemin

Translation: ನಿಶ್ಚಯವಾಗಿಯೂ ಆ ಊರು ಸಮಾನಾಂತರದಲ್ಲಿ ಚಲಿಸುವ (ಚಿರಪರಿಚಿತ) ರಸ್ತೆಯಲ್ಲಿದೆ.

15:77

إِنَّ فِي ذَٰلِكَ لَأٓيَةٗ لِّلۡمُؤۡمِنِينَ ﴿77﴾

Transliteration: Inna fee thalika laayatan lilmumineena

Translation: ನಿಶ್ಚಯವಾಗಿಯೂ ಅದರಲ್ಲಿ ಸತ್ಯವಿಶ್ವಾಸಿಗಳಿಗೆ ದೃಷ್ಟಾಂತವಿದೆ.

15:78

وَإِن كَانَ أَصۡحَٰبُ ٱلۡأَيۡكَةِ لَظَٰلِمِينَ ﴿78﴾

Transliteration: Wain kana ashabu alaykati lathalimeena

Translation: ಐಕತ್‌ನ ಜನರು (ಮದ್ಯನ್ ದೇಶದವರು) ಅಕ್ರಮಿಗಳಾಗಿದ್ದರು.

15:79

فَٱنتَقَمۡنَا مِنۡهُمۡ وَإِنَّهُمَا لَبِإِمَامٖ مُّبِينٖ ﴿79﴾

Transliteration: Faintaqamna minhum wainnahuma labiimamin mubeenin

Translation: ಆದ್ದರಿಂದ, ನಾವು ಅವರಿಂದ ಪ್ರತೀಕಾರ ಪಡೆದೆವು. ಈ ಎರಡು ಊರುಗಳೂ[1] ಬಯಲು ರಸ್ತೆಯಲ್ಲಿವೆ.

15:80

وَلَقَدۡ كَذَّبَ أَصۡحَٰبُ ٱلۡحِجۡرِ ٱلۡمُرۡسَلِينَ ﴿80﴾

Transliteration: Walaqad kaththaba ashabu alhijri almursaleena

Translation: ಹಿಜ್ರ್ ನಿವಾಸಿಗಳು (ಸಮೂದ್ ಗೋತ್ರದವರು) ಸಂದೇಶವಾಹಕರುಗಳನ್ನು ನಿಷೇಧಿಸಿದರು.

15:81

وَءَاتَيۡنَٰهُمۡ ءَايَٰتِنَا فَكَانُواْ عَنۡهَا مُعۡرِضِينَ ﴿81﴾

Transliteration: Waataynahum ayatina fakanoo AAanha muAArideena

Translation: ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ನೀಡಿದ್ದೆವು. ಆದರೆ ಅವರು ಅವುಗಳನ್ನು ಲೆಕ್ಕಿಸದೆ ವಿಮುಖರಾದರು.

15:82

وَكَانُواْ يَنۡحِتُونَ مِنَ ٱلۡجِبَالِ بُيُوتًا ءَامِنِينَ ﴿82﴾

Transliteration: Wakanoo yanhitoona mina aljibali buyootan amineena

Translation: ಅವರು ನಿರ್ಭೀತವಾಗಿ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತಿದ್ದರು.

15:83

فَأَخَذَتۡهُمُ ٱلصَّيۡحَةُ مُصۡبِحِينَ ﴿83﴾

Transliteration: Faakhathathumu alssayhatu musbiheena

Translation: ಆಗ ಬೆಳಗ್ಗಿನ ವೇಳೆ ಆ ಮಹಾ ಚೀತ್ಕಾರವು ಅವರನ್ನು ಹಿಡಿದುಬಿಟ್ಟಿತು.

15:84

فَمَآ أَغۡنَىٰ عَنۡهُم مَّا كَانُواْ يَكۡسِبُونَ ﴿84﴾

Transliteration: Fama aghna AAanhum ma kanoo yaksiboona

Translation: ಅವರ ಯಾವುದೇ ಕರ್ಮಗಳು ಅವರಿಗೆ ಉಪಕಾರ ಮಾಡಲಿಲ್ಲ.

15:85

وَمَا خَلَقۡنَا ٱلسَّمَٰوَٰتِ وَٱلۡأَرۡضَ وَمَا بَيۡنَهُمَآ إِلَّا بِٱلۡحَقِّۗ وَإِنَّ ٱلسَّاعَةَ لَأٓتِيَةٞۖ فَٱصۡفَحِ ٱلصَّفۡحَ ٱلۡجَمِيلَ ﴿85﴾

Transliteration: Wama khalaqna alssamawati waalarda wama baynahuma illa bialhaqqi wainna alssaAAata laatiyatun faisfahi alssafha aljameela

Translation: ನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಸತ್ಯದೊಂದಿಗೇ ಸೃಷ್ಟಿಸಿದ್ದೇವೆ. ಅಂತ್ಯಸಮಯವು ಖಂಡಿತ ಬಂದೇ ಬರುತ್ತದೆ. ಆದ್ದರಿಂದ ನೀವು ಅತಿಸುಂದರವಾದ ರೀತಿಯಲ್ಲಿ ಕ್ಷಮಿಸಿಬಿಡಿ.

15:86

إِنَّ رَبَّكَ هُوَ ٱلۡخَلَّـٰقُ ٱلۡعَلِيمُ ﴿86﴾

Transliteration: Inna rabbaka huwa alkhallaqu alAAaleemu

Translation: ನಿಶ್ಚಯವಾಗಿಯೂ, ನಿಮ್ಮ ಪರಿಪಾಲಕನು (ಅಲ್ಲಾಹು) ಸೃಷ್ಟಿಕರ್ತನು ಮತ್ತು ಸರ್ವಜ್ಞನಾಗಿದ್ದಾನೆ.

15:87

وَلَقَدۡ ءَاتَيۡنَٰكَ سَبۡعٗا مِّنَ ٱلۡمَثَانِي وَٱلۡقُرۡءَانَ ٱلۡعَظِيمَ ﴿87﴾

Transliteration: Walaqad ataynaka sabAAan mina almathanee waalqurana alAAatheema

Translation: ನಾವು ನಿಮಗೆ ಪುನರಾವರ್ತಿಸಿ ಪಠಿಸಲಾಗುವ ಏಳು ವಚನಗಳನ್ನು[1] ಮತ್ತು ಶ್ರೇಷ್ಠ ಕುರ್‌ಆನನ್ನು ನೀಡಿದ್ದೇವೆ.

15:88

لَا تَمُدَّنَّ عَيۡنَيۡكَ إِلَىٰ مَا مَتَّعۡنَا بِهِۦٓ أَزۡوَٰجٗا مِّنۡهُمۡ وَلَا تَحۡزَنۡ عَلَيۡهِمۡ وَٱخۡفِضۡ جَنَاحَكَ لِلۡمُؤۡمِنِينَ ﴿88﴾

Transliteration: La tamuddanna AAaynayka ila ma mattaAAna bihi azwajan minhum wala tahzan AAalayhim waikhfid janahaka lilmumineena

Translation: ಅವರಲ್ಲಿರುವ ಪಂಗಡಗಳಿಗೆ ನಾವು ಏನೇನು ಸವಲತ್ತುಗಳನ್ನು ಒದಗಿಸಿದ್ದೇವೆಯೋ ಅದರ ಕಡೆಗೆ ನೀವು ನಿಮ್ಮ ದೃಷ್ಟಿಯನ್ನು ಹರಿಸಬೇಡಿ. ಅವರ ವಿಷಯದಲ್ಲಿ ಬೇಸರಪಡಬೇಡಿ. ಸತ್ಯವಿಶ್ವಾಸಿಗಳಿಗೆ ನಿಮ್ಮ ರೆಕ್ಕೆಗಳನ್ನು ತಗ್ಗಿಸಿಕೊಡಿ.

15:89

وَقُلۡ إِنِّيٓ أَنَا ٱلنَّذِيرُ ٱلۡمُبِينُ ﴿89﴾

Transliteration: Waqul innee ana alnnatheeru almubeenu

Translation: ಹೇಳಿರಿ: “ನಿಶ್ಚಯವಾಗಿಯೂ ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.”

15:90

كَمَآ أَنزَلۡنَا عَلَى ٱلۡمُقۡتَسِمِينَ ﴿90﴾

Transliteration: Kama anzalna AAala almuqtasimeena

Translation: ವಿಂಗಡನೆ ಮಾಡಿದವರ ಮೇಲೆ ನಾವು (ಶಿಕ್ಷೆಯನ್ನು) ಇಳಿಸಿದಂತೆ,

15:91

ٱلَّذِينَ جَعَلُواْ ٱلۡقُرۡءَانَ عِضِينَ ﴿91﴾

Transliteration: Allatheena jaAAaloo alqurana AAideena

Translation: ಅಂದರೆ ಕುರ್‌ಆನನ್ನು ವಿವಿಧ ಭಾಗಗಳನ್ನಾಗಿ ಮಾಡಿದವರ ಮೇಲೆ.[1]

15:92

فَوَرَبِّكَ لَنَسۡـَٔلَنَّهُمۡ أَجۡمَعِينَ ﴿92﴾

Transliteration: Fawarabbika lanasalannahum ajmaAAeena

Translation: ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನಾವು ಅವರಲ್ಲಿ ಎಲ್ಲರನ್ನೂ ಖಂಡಿತ ವಿಚಾರಣೆ ಮಾಡುವೆವು.

15:93

عَمَّا كَانُواْ يَعۡمَلُونَ ﴿93﴾

Transliteration: AAamma kanoo yaAAmaloona

Translation: ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ.

15:94

فَٱصۡدَعۡ بِمَا تُؤۡمَرُ وَأَعۡرِضۡ عَنِ ٱلۡمُشۡرِكِينَ ﴿94﴾

Transliteration: FaisdaAA bima tumaru waaAArid AAani almushrikeena

Translation: ಆದ್ದರಿಂದ ನಿಮಗೆ ಆಜ್ಞಾಪಿಸಲಾಗುವುದನ್ನು ಬಹಿರಂಗವಾಗಿ ಘೋಷಿಸಿರಿ ಮತ್ತು ಬಹುದೇವಾರಾಧಕರಿಂದ ವಿಮುಖರಾಗಿರಿ.

15:95

إِنَّا كَفَيۡنَٰكَ ٱلۡمُسۡتَهۡزِءِينَ ﴿95﴾

Transliteration: Inna kafaynaka almustahzieena

Translation: ನಿಮ್ಮನ್ನು ತಮಾಷೆ ಮಾಡುವವರನ್ನು ನೋಡಿಕೊಳ್ಳಲು ನಿಮಗೆ ನಾವು ಸಾಕು.

15:96

ٱلَّذِينَ يَجۡعَلُونَ مَعَ ٱللَّهِ إِلَٰهًا ءَاخَرَۚ فَسَوۡفَ يَعۡلَمُونَ ﴿96﴾

Transliteration: Allatheena yajAAaloona maAAa Allahi ilahan akhara fasawfa yaAAlamoona

Translation: ಅವರು ಯಾರೆಂದರೆ, ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ಸ್ಥಾಪಿಸುವವರು. ಅವರು ಸದ್ಯವೇ ತಿಳಿದುಕೊಳ್ಳುವರು.

15:97

وَلَقَدۡ نَعۡلَمُ أَنَّكَ يَضِيقُ صَدۡرُكَ بِمَا يَقُولُونَ ﴿97﴾

Transliteration: Walaqad naAAlamu annaka yadeequ sadruka bima yaqooloona

Translation: (ಪ್ರವಾದಿಯವರೇ) ಅವರು ಹೇಳುವ ಮಾತುಗಳಿಂದ ನಿಮ್ಮ ಹೃದಯವು ಇಕ್ಕಟ್ಟು ಅನುಭವಿಸುತ್ತಿದೆಯೆಂದು ನಮಗೆ ತಿಳಿದಿದೆ.

15:98

فَسَبِّحۡ بِحَمۡدِ رَبِّكَ وَكُن مِّنَ ٱلسَّـٰجِدِينَ ﴿98﴾

Transliteration: Fasabbih bihamdi rabbika wakun mina alssajideena

Translation: ಆದ್ದರಿಂದ ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ ಮತ್ತು ಸಾಷ್ಟಾಂಗ ಮಾಡುವವರಲ್ಲಿ ಸೇರಿರಿ.

15:99

وَٱعۡبُدۡ رَبَّكَ حَتَّىٰ يَأۡتِيَكَ ٱلۡيَقِينُ ﴿99﴾

Transliteration: WaoAAbud rabbaka hatta yatiyaka alyaqeenu

Translation: ಮರಣವು ಬರುವ ತನಕ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download