quranm◉

Surah Al-Anbya transliteration

◉ ಸೂರಾ · ∞

21:1

ٱقۡتَرَبَ لِلنَّاسِ حِسَابُهُمۡ وَهُمۡ فِي غَفۡلَةٖ مُّعۡرِضُونَ ﴿1﴾

Transliteration: Iqtaraba lilnnasi hisabuhum wahum fee ghaflatin muAAridoona

Translation: ಜನರಿಗೆ ವಿಚಾರಣೆಯ ಸಮಯವು ಸನ್ನಿಹಿತವಾಗಿದೆ. ಆದರೂ ಅವರು ನಿರ್ಲಕ್ಷ್ಯದಿಂದ ವಿಮುಖರಾಗುತ್ತಿದ್ದಾರೆ.

21:2

مَا يَأۡتِيهِم مِّن ذِكۡرٖ مِّن رَّبِّهِم مُّحۡدَثٍ إِلَّا ٱسۡتَمَعُوهُ وَهُمۡ يَلۡعَبُونَ ﴿2﴾

Transliteration: Ma yateehim min thikrin min rabbihim muhdathin illa istamaAAoohu wahum yalAAaboona

Translation: ಅವರಿಗೆ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಯಾವುದೇ ಹೊಸ ಉಪದೇಶವು ಬಂದಾಗಲೆಲ್ಲಾ ಅವರು ಆಟವಾಡುತ್ತಲೇ ಅದಕ್ಕೆ ಕಿವಿಗೊಡುತ್ತಾರೆ.

21:3

لَاهِيَةٗ قُلُوبُهُمۡۗ وَأَسَرُّواْ ٱلنَّجۡوَى ٱلَّذِينَ ظَلَمُواْ هَلۡ هَٰذَآ إِلَّا بَشَرٞ مِّثۡلُكُمۡۖ أَفَتَأۡتُونَ ٱلسِّحۡرَ وَأَنتُمۡ تُبۡصِرُونَ ﴿3﴾

Transliteration: Lahiyatan quloobuhum waasarroo alnnajwa allatheena thalamoo hal hatha illa basharun mithlukum afatatoona alssihra waantum tubsiroona

Translation: ಅವರ ಹೃದಯಗಳು ಸಂಪೂರ್ಣ ನಿರ್ಲಕ್ಷ್ಯದಲ್ಲಿವೆ. ಅಕ್ರಮಿಗಳು ಪರಸ್ಪರ ರಹಸ್ಯವಾಗಿ ಮಾತನಾಡುತ್ತಾ ಕೇಳುತ್ತಾರೆ: “ಇವನು ನಿಮ್ಮಂತಹ ಒಬ್ಬ ಮನುಷ್ಯನಲ್ಲವೇ? ನಿಮಗೆ ದೃಷ್ಟಿಯಿದ್ದೂ ಸಹ ನೀವು ಮಾಟಗಾರಿಕೆಗೆ ಬಲಿಯಾಗುತ್ತೀರಾ?”

21:4

قَالَ رَبِّي يَعۡلَمُ ٱلۡقَوۡلَ فِي ٱلسَّمَآءِ وَٱلۡأَرۡضِۖ وَهُوَ ٱلسَّمِيعُ ٱلۡعَلِيمُ ﴿4﴾

Transliteration: Qala rabbee yaAAlamu alqawla fee alssamai waalardi wahuwa alssameeAAu alAAaleemu

Translation: ಪ್ರವಾದಿ ಹೇಳಿದರು: “ಆಕಾಶ ಮತ್ತು ಭೂಮಿಯಲ್ಲಿರುವ ಎಲ್ಲಾ ಮಾತುಗಳನ್ನು ನನ್ನ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿಯುತ್ತಾನೆ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.”

21:5

بَلۡ قَالُوٓاْ أَضۡغَٰثُ أَحۡلَٰمِۭ بَلِ ٱفۡتَرَىٰهُ بَلۡ هُوَ شَاعِرٞ فَلۡيَأۡتِنَا بِـَٔايَةٖ كَمَآ أُرۡسِلَ ٱلۡأَوَّلُونَ ﴿5﴾

Transliteration: Bal qaloo adghathu ahlamin bali iftarahu bal huwa shaAAirun falyatina biayatin kama orsila alawwaloona

Translation: ಅಷ್ಟೇ ಅಲ್ಲ; ಅವರು ಹೇಳಿದರು: “ಈ ಕುರ್‌ಆನ್ ಅರ್ಥಶೂನ್ಯ ಕನಸುಗಳ ಮಿಶ್ರಣವಾಗಿದೆ. ಅಲ್ಲ; ಅವನೇ (ಪ್ರವಾದಿ) ಅದನ್ನು ಸ್ವಯಂ ರಚಿಸಿ ತಂದಿದ್ದಾನೆ. ಅಲ್ಲ, ಅವನೊಬ್ಬ ಕವಿಯಾಗಿದ್ದಾನೆ. ಇಲ್ಲದಿದ್ದರೆ, ಹಿಂದಿನ ಪ್ರವಾದಿಗಳು ತಂದಂತಹ ಯಾವುದಾದರೂ ದೃಷ್ಟಾಂತವನ್ನು ಇವನು ಕೂಡ ತಂದು ತೋರಿಸಲಿ.”

21:6

مَآ ءَامَنَتۡ قَبۡلَهُم مِّن قَرۡيَةٍ أَهۡلَكۡنَٰهَآۖ أَفَهُمۡ يُؤۡمِنُونَ ﴿6﴾

Transliteration: Ma amanat qablahum min qaryatin ahlaknaha afahum yuminoona

Translation: ಇವರಿಗಿಂತ ಮೊದಲು ನಾವು ನಾಶ ಮಾಡಿದ ಯಾವುದೇ ಊರಿನವರೂ ವಿಶ್ವಾಸವಿಟ್ಟಿರಲಿಲ್ಲ. ಹೀಗಿರುವಾಗ ಇವರು ವಿಶ್ವಾಸವಿಡುವರೇ?

21:7

وَمَآ أَرۡسَلۡنَا قَبۡلَكَ إِلَّا رِجَالٗا نُّوحِيٓ إِلَيۡهِمۡۖ فَسۡـَٔلُوٓاْ أَهۡلَ ٱلذِّكۡرِ إِن كُنتُمۡ لَا تَعۡلَمُونَ ﴿7﴾

Transliteration: Wama arsalna qablaka illa rijalan noohee ilayhim faisaloo ahla alththikri in kuntum la taAAlamoona

Translation: ನಿಮಗಿಂತ ಮೊದಲು ನಾವು ಎಷ್ಟು ಸಂದೇಶವಾಹಕರನ್ನು ಕಳುಹಿಸಿದ್ದೆವೋ ಅವರೆಲ್ಲರೂ ನಾವು ದೇವವಾಣಿ ನೀಡಿದ ಪುರುಷರಾಗಿದ್ದರು. ನಿಮಗೆ ಗೊತ್ತಿಲ್ಲದಿದ್ದರೆ ಗ್ರಂಥದವರೊಡನೆ ಕೇಳಿ ನೋಡಿ.

21:8

وَمَا جَعَلۡنَٰهُمۡ جَسَدٗا لَّا يَأۡكُلُونَ ٱلطَّعَامَ وَمَا كَانُواْ خَٰلِدِينَ ﴿8﴾

Transliteration: Wama jaAAalnahum jasadan la yakuloona alttaAAama wama kanoo khalideena

Translation: ಅವರನ್ನು ನಾವು ಆಹಾರ ಸೇವಿಸದ ದೇಹಗಳನ್ನಾಗಿ ಮತ್ತು ಶಾಶ್ವತವಾಗಿ ವಾಸಿಸುವವರನ್ನಾಗಿ ಮಾಡಿಲ್ಲ.

21:9

ثُمَّ صَدَقۡنَٰهُمُ ٱلۡوَعۡدَ فَأَنجَيۡنَٰهُمۡ وَمَن نَّشَآءُ وَأَهۡلَكۡنَا ٱلۡمُسۡرِفِينَ ﴿9﴾

Transliteration: Thumma sadaqnahumu alwaAAda faanjaynahum waman nashao waahlakna almusrifeena

Translation: ನಂತರ ನಾವು ಅವರಿಗೆ ನೀಡಿದ ಎಲ್ಲಾ ವಾಗ್ದಾನಗಳನ್ನು ಸತ್ಯವಾಗಿ ನೆರವೇರಿಸಿಕೊಟ್ಟೆವು. ಅವರನ್ನು ಮತ್ತು ನಾವು ರಕ್ಷಿಸಬೇಕೆಂದು ಇಚ್ಛಿಸಿದವರನ್ನು ರಕ್ಷಿಸಿದೆವು. ಎಲ್ಲೆ ಮೀರಿದವರನ್ನು ನಾವು ನಾಶ ಮಾಡಿದೆವು.

21:10

لَقَدۡ أَنزَلۡنَآ إِلَيۡكُمۡ كِتَٰبٗا فِيهِ ذِكۡرُكُمۡۚ أَفَلَا تَعۡقِلُونَ ﴿10﴾

Transliteration: Laqad anzalna ilaykum kitaban feehi thikrukum afala taAAqiloona

Translation: ನಿಶ್ಚಯವಾಗಿಯೂ ನಾವು ನಿಮಗೆ ಒಂದು ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ನಿಮಗೆ ಉಪದೇಶವಿದೆ. ಆದರೂ ನೀವು ಆಲೋಚಿಸುವುದಿಲ್ಲವೇ?

21:11

وَكَمۡ قَصَمۡنَا مِن قَرۡيَةٖ كَانَتۡ ظَالِمَةٗ وَأَنشَأۡنَا بَعۡدَهَا قَوۡمًا ءَاخَرِينَ ﴿11﴾

Transliteration: Wakam qasamna min qaryatin kanat thalimatan waanshana baAAdaha qawman akhareena

Translation: ಅಕ್ರಮವೆಸಗುತ್ತಿದ್ದ ಎಷ್ಟೋ ಊರುಗಳನ್ನು ನಾವು ನಾಶ ಮಾಡಿದ್ದೇವೆ. ಅದರ ನಂತರ ನಾವು ಬೇರೊಂದು ಜನತೆಯನ್ನು ಸೃಷ್ಟಿಸಿದೆವು.

21:12

فَلَمَّآ أَحَسُّواْ بَأۡسَنَآ إِذَا هُم مِّنۡهَا يَرۡكُضُونَ ﴿12﴾

Transliteration: Falamma ahassoo basana itha hum minha yarkudoona

Translation: ಅವರಿಗೆ ನಮ್ಮ ಶಿಕ್ಷೆಯ ಅನುಭವವಾದಾಗ ಅಗೋ! ಅವರು ಅದರಿಂದ ಓಡಿ ಪಾರಾಗಲು ಯತ್ನಿಸುತ್ತಾರೆ.

21:13

لَا تَرۡكُضُواْ وَٱرۡجِعُوٓاْ إِلَىٰ مَآ أُتۡرِفۡتُمۡ فِيهِ وَمَسَٰكِنِكُمۡ لَعَلَّكُمۡ تُسۡـَٔلُونَ ﴿13﴾

Transliteration: La tarkudoo wairjiAAoo ila ma otriftum feehi wamasakinikum laAAallakum tusaloona

Translation: ಓಡಬೇಡಿ! ನಾವು ನಿಮಗೆ ಒದಗಿಸಿದ ಆಡಂಬರಗಳ ಕಡೆಗೆ ಮತ್ತು ನಿಮ್ಮ ವಸತಿಗಳ ಕಡೆಗೆ ಬನ್ನಿರಿ. ನಿಮ್ಮೊಂದಿಗೆ ಪ್ರಶ್ನಿಸುವುದಕ್ಕಾಗಿ.[1]

21:14

قَالُواْ يَٰوَيۡلَنَآ إِنَّا كُنَّا ظَٰلِمِينَ ﴿14﴾

Transliteration: Qaloo ya waylana inna kunna thalimeena

Translation: ಅವರು ಹೇಳಿದರು: “ಅಯ್ಯೋ! ನಮ್ಮ ದುರ್ಗತಿಯೇ! ನಿಜಕ್ಕೂ ನಾವು ಅಕ್ರಮಿಗಳೇ ಆಗಿದ್ದೆವು.”

21:15

فَمَا زَالَت تِّلۡكَ دَعۡوَىٰهُمۡ حَتَّىٰ جَعَلۡنَٰهُمۡ حَصِيدًا خَٰمِدِينَ ﴿15﴾

Transliteration: Fama zalat tilka daAAwahum hatta jaAAalnahum haseedan khamideena

Translation: ಅವರು ಹೀಗೆ ರೋದಿಸುತ್ತಲೇ ಇದ್ದರು. ಎಲ್ಲಿಯವರೆಗೆಂದರೆ, ನಾವು ಅವರನ್ನು ಬುಡದಿಂದ ಕತ್ತರಿಸಲಾದ ತೆನೆಗಳಂತೆ ಮತ್ತು ಆರಿಹೋದ ಬೆಂಕಿಯಂತೆ ಮಾಡುವ ತನಕ.

21:16

وَمَا خَلَقۡنَا ٱلسَّمَآءَ وَٱلۡأَرۡضَ وَمَا بَيۡنَهُمَا لَٰعِبِينَ ﴿16﴾

Transliteration: Wama khalaqna alssamaa waalarda wama baynahuma laAAibeena

Translation: ನಾವು ಭೂಮ್ಯಾಕಾಶಗಳನ್ನು ಅಥವಾ ಅವುಗಳ ನಡುವೆಯಿರುವ ವಸ್ತುಗಳನ್ನು ಆಟಕ್ಕಾಗಿ ಸೃಷ್ಟಿಸಿಲ್ಲ.

21:17

لَوۡ أَرَدۡنَآ أَن نَّتَّخِذَ لَهۡوٗا لَّٱتَّخَذۡنَٰهُ مِن لَّدُنَّآ إِن كُنَّا فَٰعِلِينَ ﴿17﴾

Transliteration: Law aradna an nattakhitha lahwan laittakhathnahu min ladunna in kunna faAAileena

Translation: ಮನರಂಜನೆಯು ನಮ್ಮ ಉದ್ದೇಶವಾಗಿದ್ದರೆ, ನಾವು ಅದನ್ನು ನಮ್ಮ ಬಳಿಯಲ್ಲೇ ಮಾಡುತ್ತಿದ್ದೆವು. ನಾವು ಹಾಗೆ ಮಾಡುವವರಾಗಿದ್ದರೆ.

21:18

بَلۡ نَقۡذِفُ بِٱلۡحَقِّ عَلَى ٱلۡبَٰطِلِ فَيَدۡمَغُهُۥ فَإِذَا هُوَ زَاهِقٞۚ وَلَكُمُ ٱلۡوَيۡلُ مِمَّا تَصِفُونَ ﴿18﴾

Transliteration: Bal naqthifu bialhaqqi AAala albatili fayadmaghuhu faitha huwa zahiqun walakumu alwaylu mimma tasifoona

Translation: ಬದಲಿಗೆ, ನಾವು ಸತ್ಯವನ್ನು ಅಸತ್ಯದ ಮೇಲೆ ಎಸೆಯುತ್ತೇವೆ. ಆಗ ಅದು ಅಸತ್ಯವನ್ನು ಒಡೆದು ಹಾಕುತ್ತದೆ. ಆಗ ಅದು (ಅಸತ್ಯ) ತಕ್ಷಣ ನಾಶವಾಗುತ್ತದೆ. ನೀವು (ಅಲ್ಲಾಹನ ಬಗ್ಗೆ) ಆರೋಪಿಸುವ ಮಾತುಗಳಿಂದಾಗಿ ನಿಮಗೆ ವಿನಾಶವು ಕಾದಿದೆ.

21:19

وَلَهُۥ مَن فِي ٱلسَّمَٰوَٰتِ وَٱلۡأَرۡضِۚ وَمَنۡ عِندَهُۥ لَا يَسۡتَكۡبِرُونَ عَنۡ عِبَادَتِهِۦ وَلَا يَسۡتَحۡسِرُونَ ﴿19﴾

Transliteration: Walahu man fee alssamawati waalardi waman AAindahu la yastakbiroona AAan AAibadatihi wala yastahsiroona

Translation: ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅವನಿಗೆ ಸೇರಿದವರು. ಅವನ ಬಳಿಯಿರುವವರು (ದೇವದೂತರು) ಅವನನ್ನು ಆರಾಧಿಸಲು ಅಹಂಕಾರಪಡುವುದಿಲ್ಲ. ಅವರು ದಣಿಯುವುದೂ ಇಲ್ಲ.

21:20

يُسَبِّحُونَ ٱلَّيۡلَ وَٱلنَّهَارَ لَا يَفۡتُرُونَ ﴿20﴾

Transliteration: Yusabbihoona allayla waalnnahara la yafturoona

Translation: ಅವರು ರಾತ್ರಿ-ಹಗಲು ಅಲ್ಲಾಹನ ಪರಿಶುದ್ಧತೆಯನ್ನು ಕೊಂಡಾಡುತ್ತಾರೆ. ಅವರಿಗೆ ಸುಸ್ತಾಗುವುದಿಲ್ಲ.

21:21

أَمِ ٱتَّخَذُوٓاْ ءَالِهَةٗ مِّنَ ٱلۡأَرۡضِ هُمۡ يُنشِرُونَ ﴿21﴾

Transliteration: Ami ittakhathoo alihatan mina alardi hum yunshiroona

Translation: ಅವರು ಭೂಮಿಯಲ್ಲಿ ಯಾರನ್ನು ದೇವರಾಗಿ ಸ್ವೀಕರಿಸಿದ್ದಾರೋ ಅವರು (ಸತ್ತವರಿಗೆ) ಜೀವ ನೀಡುತ್ತಾರೆಯೇ?

21:22

لَوۡ كَانَ فِيهِمَآ ءَالِهَةٌ إِلَّا ٱللَّهُ لَفَسَدَتَاۚ فَسُبۡحَٰنَ ٱللَّهِ رَبِّ ٱلۡعَرۡشِ عَمَّا يَصِفُونَ ﴿22﴾

Transliteration: Law kana feehima alihatun illa Allahu lafasadata fasubhana Allahi rabbi alAAarshi AAamma yasifoona

Translation: ಭೂಮ್ಯಾಕಾಶಗಳಲ್ಲಿ ಅಲ್ಲಾಹನ ಹೊರತು ಬೇರೆ ದೇವರುಗಳು ಇರುತ್ತಿದ್ದರೆ ಅವು ನಾಶವಾಗಿ ಹೋಗುತ್ತಿದ್ದವು.[1] ಅವರು ಸುಳ್ಳು ಸುಳ್ಳಾಗಿ ಆರೋಪಿಸುವ ಎಲ್ಲದ್ದರಿಂದಲೂ ಸಿಂಹಾಸನದ ಒಡೆಯನಾದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.

21:23

لَا يُسۡـَٔلُ عَمَّا يَفۡعَلُ وَهُمۡ يُسۡـَٔلُونَ ﴿23﴾

Transliteration: La yusalu AAamma yafAAalu wahum yusaloona

Translation: ಅವನು (ಅಲ್ಲಾಹು) ಏನು ಮಾಡುತ್ತಾನೋ ಅದರ ಬಗ್ಗೆ ಅವನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ. ಆದರೆ ಅವರು (ಮನುಷ್ಯರು) ಉತ್ತರದಾಯಿಗಳಾಗಿದ್ದಾರೆ.

21:24

أَمِ ٱتَّخَذُواْ مِن دُونِهِۦٓ ءَالِهَةٗۖ قُلۡ هَاتُواْ بُرۡهَٰنَكُمۡۖ هَٰذَا ذِكۡرُ مَن مَّعِيَ وَذِكۡرُ مَن قَبۡلِيۚ بَلۡ أَكۡثَرُهُمۡ لَا يَعۡلَمُونَ ٱلۡحَقَّۖ فَهُم مُّعۡرِضُونَ ﴿24﴾

Transliteration: Ami ittakhathoo min doonihi alihatan qul hatoo burhanakum hatha thikru man maAAiya wathikru man qablee bal aktharuhum la yaAAlamoona alhaqqa fahum muAAridoona

Translation: ಅವರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆಯೇ? ಹೇಳಿರಿ: “ಅದಕ್ಕೆ ನಿಮ್ಮ ಬಳಿಯಿರುವ ಸಾಕ್ಷ್ಯಾಧಾರಗಳನ್ನು ತನ್ನಿರಿ.” ಇದು (ಕುರ್‌ಆನ್) ನನ್ನ ಜೊತೆಯಲ್ಲಿರುವವರಿಗೆ ಮತ್ತು ನನಗಿಂತ ಮೊದಲಿನವರಿಗೆ ಇರುವ ಉಪದೇಶವಾಗಿದೆ. ಆದರೆ ಅವರಲ್ಲಿ ಹೆಚ್ಚಿನವರಿಗೂ ಸತ್ಯವೇನೆಂದು ತಿಳಿದಿಲ್ಲ. ಆದ್ದರಿಂದ ಅವರು ವಿಮುಖರಾಗುತ್ತಿದ್ದಾರೆ.

21:25

وَمَآ أَرۡسَلۡنَا مِن قَبۡلِكَ مِن رَّسُولٍ إِلَّا نُوحِيٓ إِلَيۡهِ أَنَّهُۥ لَآ إِلَٰهَ إِلَّآ أَنَا۠ فَٱعۡبُدُونِ ﴿25﴾

Transliteration: Wama arsalna min qablika min rasoolin illa noohee ilayhi annahu la ilaha illa ana faoAAbudooni

Translation: ನಿಮಗಿಂತ ಮೊದಲು ನಾವು ಯಾವೆಲ್ಲಾ ಸಂದೇಶವಾಹಕರುಗಳನ್ನು ಕಳುಹಿಸಿದ್ದೆವೋ ಅವರೆಲ್ಲರಿಗೂ, “ನನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ” ಎಂಬ ದೇವವಾಣಿಯನ್ನೇ ನೀಡಿದ್ದೆವು.

21:26

وَقَالُواْ ٱتَّخَذَ ٱلرَّحۡمَٰنُ وَلَدٗاۗ سُبۡحَٰنَهُۥۚ بَلۡ عِبَادٞ مُّكۡرَمُونَ ﴿26﴾

Transliteration: Waqaloo ittakhatha alrrahmanu waladan subhanahu bal AAibadun mukramoona

Translation: ಅವರು ಹೇಳಿದರು: “ಪರಮ ದಯಾಮಯನಿಗೆ (ಅಲ್ಲಾಹನಿಗೆ) ಮಕ್ಕಳಿದ್ದಾರೆ.” ಅವನು ಪರಿಶುದ್ಧನು. ಅಲ್ಲ, ವಾಸ್ತವವಾಗಿ ಅವರು ಅವನ ಸನ್ಮಾನ್ಯ ದಾಸರಾಗಿದ್ದಾರೆ.

21:27

لَا يَسۡبِقُونَهُۥ بِٱلۡقَوۡلِ وَهُم بِأَمۡرِهِۦ يَعۡمَلُونَ ﴿27﴾

Transliteration: La yasbiqoonahu bialqawli wahum biamrihi yaAAmaloona

Translation: ಅಲ್ಲಾಹು ಮಾತನಾಡುವುದಕ್ಕೆ ಮೊದಲೇ ಅವರು ಮಾತನಾಡುವುದಿಲ್ಲ. ಅವರು ಅವನ ಆಜ್ಞೆಯಂತೆ ಕೆಲಸ ಮಾಡುತ್ತಾರೆ.

21:28

يَعۡلَمُ مَا بَيۡنَ أَيۡدِيهِمۡ وَمَا خَلۡفَهُمۡ وَلَا يَشۡفَعُونَ إِلَّا لِمَنِ ٱرۡتَضَىٰ وَهُم مِّنۡ خَشۡيَتِهِۦ مُشۡفِقُونَ ﴿28﴾

Transliteration: YaAAlamu ma bayna aydeehim wama khalfahum wala yashfaAAoona illa limani irtada wahum min khashyatihi mushfiqoona

Translation: ಅವರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿರುವ ಎಲ್ಲವನ್ನೂ ಅವನು ತಿಳಿಯುತ್ತಾನೆ. ಅವನ ಸಂಪ್ರೀತಿಗೆ ಪಾತ್ರರಾದವರಿಗೆ ಮಾತ್ರ ಅವರು ಶಿಫಾರಸು ಮಾಡುತ್ತಾರೆ. ಅವರು ಅವನ ಭಯದಿಂದ ತರಗುಟ್ಟುತ್ತಾರೆ.

21:29

وَمَن يَقُلۡ مِنۡهُمۡ إِنِّيٓ إِلَٰهٞ مِّن دُونِهِۦ فَذَٰلِكَ نَجۡزِيهِ جَهَنَّمَۚ كَذَٰلِكَ نَجۡزِي ٱلظَّـٰلِمِينَ ﴿29﴾

Transliteration: Waman yaqul minhum innee ilahun min doonihi fathalika najzeehi jahannama kathalika najzee alththalimeena

Translation: “ಅಲ್ಲಾಹನ ಹೊರತು ನಾನೇ ದೇವನು” ಎಂದು ಅವರಲ್ಲಿ ಯಾರು ಹೇಳುತ್ತಾನೋ, ಅವನಿಗೆ ನಾವು ಪ್ರತಿಫಲವಾಗಿ ನರಕಾಗ್ನಿಯನ್ನು ನೀಡುವೆವು. ಅಕ್ರಮಿಗಳಿಗೆ ನಾವು ಹೀಗೆಯೇ ಪ್ರತಿಫಲ ನೀಡುತ್ತೇವೆ.

21:30

أَوَلَمۡ يَرَ ٱلَّذِينَ كَفَرُوٓاْ أَنَّ ٱلسَّمَٰوَٰتِ وَٱلۡأَرۡضَ كَانَتَا رَتۡقٗا فَفَتَقۡنَٰهُمَاۖ وَجَعَلۡنَا مِنَ ٱلۡمَآءِ كُلَّ شَيۡءٍ حَيٍّۚ أَفَلَا يُؤۡمِنُونَ ﴿30﴾

Transliteration: Awalam yara allatheena kafaroo anna alssamawati waalarda kanata ratqan fafataqnahuma wajaAAalna mina almai kulla shayin hayyin afala yuminoona

Translation: ಭೂಮ್ಯಾಕಾಶಗಳು ಪರಸ್ಪರ ಅಂಟಿಕೊಂಡಿದ್ದವು ಮತ್ತು ನಾವು ಅವುಗಳನ್ನು ಬೇರ್ಪಡಿಸಿದೆವು ಎಂದು ಸತ್ಯನಿಷೇಧಿಗಳು ನೋಡುವುದಿಲ್ಲವೇ? ಜೀವವಿರುವ ಎಲ್ಲ ವಸ್ತುಗಳನ್ನೂ ನಾವು ನೀರಿನಿಂದ ಉಂಟು ಮಾಡಿದೆವು. ಆದರೂ ಅವರು ವಿಶ್ವಾಸವಿಡುವುದಿಲ್ಲವೇ?

21:31

وَجَعَلۡنَا فِي ٱلۡأَرۡضِ رَوَٰسِيَ أَن تَمِيدَ بِهِمۡ وَجَعَلۡنَا فِيهَا فِجَاجٗا سُبُلٗا لَّعَلَّهُمۡ يَهۡتَدُونَ ﴿31﴾

Transliteration: WajaAAalna fee alardi rawasiya an tameeda bihim wajaAAalna feeha fijajan subulan laAAallahum yahtadoona

Translation: ಭೂಮಿಯು ಅವರೊಂದಿಗೆ ಅಲುಗಾಡದಿರಲು ನಾವು ಅದರಲ್ಲಿ ದೃಢವಾಗಿ ನಿಲ್ಲುವ ಪರ್ವತಗಳನ್ನು ಸ್ಥಾಪಿಸಿದೆವು. ನಾವು ಅದರಲ್ಲಿ ವಿಶಾಲವಾದ ಮಾರ್ಗಗಳನ್ನು ಮಾಡಿದೆವು. ಅವರು ದಾರಿ ಕಾಣುವುದಕ್ಕಾಗಿ.

21:32

وَجَعَلۡنَا ٱلسَّمَآءَ سَقۡفٗا مَّحۡفُوظٗاۖ وَهُمۡ عَنۡ ءَايَٰتِهَا مُعۡرِضُونَ ﴿32﴾

Transliteration: WajaAAalna alssamaa saqfan mahfoothan wahum AAan ayatiha muAAridoona

Translation: ನಾವು ಆಕಾಶವನ್ನು ಭದ್ರ ಮೇಲ್ಛಾವಣಿಯನ್ನಾಗಿ ಮಾಡಿದೆವು. ಆದರೆ ಅವರು ಆಕಾಶದ ದೃಷ್ಟಾಂತಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದಾರೆ.

21:33

وَهُوَ ٱلَّذِي خَلَقَ ٱلَّيۡلَ وَٱلنَّهَارَ وَٱلشَّمۡسَ وَٱلۡقَمَرَۖ كُلّٞ فِي فَلَكٖ يَسۡبَحُونَ ﴿33﴾

Transliteration: Wahuwa allathee khalaqa allayla waalnnahara waalshshamsa waalqamara kullun fee falakin yasbahoona

Translation: ಅವನೇ ರಾತ್ರಿ-ಹಗಲು ಮತ್ತು ಸೂರ್ಯ-ಚಂದ್ರರನ್ನು ಸೃಷ್ಟಿಸಿದವನು. ಎಲ್ಲವೂ ಒಂದು ನಿಗದಿತ ಕಕ್ಷೆಯಲ್ಲಿ ಈಜುತ್ತಿವೆ.

21:34

وَمَا جَعَلۡنَا لِبَشَرٖ مِّن قَبۡلِكَ ٱلۡخُلۡدَۖ أَفَإِيْن مِّتَّ فَهُمُ ٱلۡخَٰلِدُونَ ﴿34﴾

Transliteration: Wama jaAAalna libasharin min qablika alkhulda afain mitta fahumu alkhalidoona

Translation: (ಪ್ರವಾದಿಯವರೇ) ನಿಮಗಿಂತ ಮೊದಲು ನಾವು ಯಾವುದೇ ವ್ಯಕ್ತಿಗೂ ಶಾಶ್ವತ ಬದುಕನ್ನು ನೀಡಿಲ್ಲ. ಹೀಗಿರುವಾಗ, ನೀವು ನಿಧನರಾದರೆ ಅವರು ಶಾಶ್ವತವಾಗಿ ಉಳಿಯುವರೇ?

21:35

كُلُّ نَفۡسٖ ذَآئِقَةُ ٱلۡمَوۡتِۗ وَنَبۡلُوكُم بِٱلشَّرِّ وَٱلۡخَيۡرِ فِتۡنَةٗۖ وَإِلَيۡنَا تُرۡجَعُونَ ﴿35﴾

Transliteration: Kullu nafsin thaiqatu almawti wanablookum bialshsharri waalkhayri fitnatan wailayna turjaAAoona

Translation: ಪ್ರತಿಯೊಂದು ಜೀವಿಯೂ ಮರಣದ ರುಚಿಯನ್ನು ನೋಡಲಿದೆ. ನಾವು ಪರೀಕ್ಷೆಯ ರೂಪದಲ್ಲಿ ನಿಮ್ಮಲ್ಲರನ್ನೂ ಒಳಿತು ಮತ್ತು ಕೆಡುಕುಗಳಲ್ಲಿ ಪರೀಕ್ಷಿಸುತ್ತೇವೆ. ನೀವೆಲ್ಲರೂ ನಮ್ಮ ಬಳಿಗೇ ಮರಳಿ ಬರುವಿರಿ.

21:36

وَإِذَا رَءَاكَ ٱلَّذِينَ كَفَرُوٓاْ إِن يَتَّخِذُونَكَ إِلَّا هُزُوًا أَهَٰذَا ٱلَّذِي يَذۡكُرُ ءَالِهَتَكُمۡ وَهُم بِذِكۡرِ ٱلرَّحۡمَٰنِ هُمۡ كَٰفِرُونَ ﴿36﴾

Transliteration: Waitha raaka allatheena kafaroo in yattakhithoonaka illa huzuwan ahatha allathee yathkuru alihatakum wahum bithikri alrrahmani hum kafiroona

Translation: ಸತ್ಯನಿಷೇಧಿಗಳು ನಿಮ್ಮನ್ನು ನೋಡಿದಾಗಲೆಲ್ಲಾ ನಿಮ್ಮನ್ನು ತಮಾಷೆ ಮಾಡುತ್ತಾ, “ನಿಮ್ಮ ದೇವರುಗಳ ಬಗ್ಗೆ ಅವಹೇಳನದ ಮಾತುಗಳನ್ನು ಹೇಳುವವನು ಇವನೇ ಏನು?” ಎಂದು (ಪರಸ್ಪರ) ಕೇಳುತ್ತಾರೆ. ಅವರಂತೂ ಪರಮ ದಯಾಮಯನ (ಅಲ್ಲಾಹನ) ಸ್ಮರಣೆಯನ್ನು ನಿಷೇಧಿಸಿದ್ದಾರೆ.

21:37

خُلِقَ ٱلۡإِنسَٰنُ مِنۡ عَجَلٖۚ سَأُوْرِيكُمۡ ءَايَٰتِي فَلَا تَسۡتَعۡجِلُونِ ﴿37﴾

Transliteration: Khuliqa alinsanu min AAajalin saoreekum ayatee fala tastaAAjiloona

Translation: ಮಾನವನನ್ನು ಆತುರ ಜೀವಿಯಾಗಿ ಸೃಷ್ಟಿಸಲಾಗಿದೆ. ನಾನು ಸದ್ಯವೇ ನನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡಲಿದ್ದೇನೆ. ಆದ್ದರಿಂದ ನೀವು ನನ್ನೊಂದಿಗೆ ತ್ವರೆ ಮಾಡಬೇಡಿ.

21:38

وَيَقُولُونَ مَتَىٰ هَٰذَا ٱلۡوَعۡدُ إِن كُنتُمۡ صَٰدِقِينَ ﴿38﴾

Transliteration: Wayaqooloona mata hatha alwaAAdu in kuntum sadiqeena

Translation: ಅವರು ಕೇಳುತ್ತಾರೆ: “ನೀವು ಸತ್ಯವನ್ನೇ ಹೇಳುವವರಾಗಿದ್ದರೆ ಈ ವಾಗ್ದಾನವು ನಿಜವಾಗುವುದು ಯಾವಾಗ ಎಂದು ಹೇಳಿರಿ?”

21:39

لَوۡ يَعۡلَمُ ٱلَّذِينَ كَفَرُواْ حِينَ لَا يَكُفُّونَ عَن وُجُوهِهِمُ ٱلنَّارَ وَلَا عَن ظُهُورِهِمۡ وَلَا هُمۡ يُنصَرُونَ ﴿39﴾

Transliteration: Law yaAAlamu allatheena kafaroo heena la yakuffoona AAan wujoohihimu alnnara wala AAan thuhoorihim wala hum yunsaroona

Translation: ತಮ್ಮ ಮುಖಗಳಿಂದ ಮತ್ತು ಬೆನ್ನುಗಳಿಂದ ಬೆಂಕಿಯನ್ನು ತಡೆಯಲು ಸಾಧ್ಯವಾಗದ ಮತ್ತು ಯಾವುದೇ ಸಹಾಯವು ದೊರಕದ ಆ ಒಂದು ಸಮಯದ ಬಗ್ಗೆ ಸತ್ಯನಿಷೇಧಿಗಳು ತಿಳಿದಿದ್ದರೆ!

21:40

بَلۡ تَأۡتِيهِم بَغۡتَةٗ فَتَبۡهَتُهُمۡ فَلَا يَسۡتَطِيعُونَ رَدَّهَا وَلَا هُمۡ يُنظَرُونَ ﴿40﴾

Transliteration: Bal tateehim baghtatan fatabhatuhum fala yastateeAAoona raddaha wala hum yuntharoona

Translation: ಅಲ್ಲ; ಅಂತ್ಯ ಸಮಯವು ಅವರ ಬಳಿಗೆ ಹಠಾತ್ತನೆ ಬರಲಿದೆ. ಅದು ಅವರನ್ನು ತಬ್ಬಿಬ್ಬುಗೊಳಿಸಲಿದೆ. ಅದನ್ನು ತಡೆಗಟ್ಟಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗುವುದಿಲ್ಲ.

21:41

وَلَقَدِ ٱسۡتُهۡزِئَ بِرُسُلٖ مِّن قَبۡلِكَ فَحَاقَ بِٱلَّذِينَ سَخِرُواْ مِنۡهُم مَّا كَانُواْ بِهِۦ يَسۡتَهۡزِءُونَ ﴿41﴾

Transliteration: Walaqadi istuhzia birusulin min qablika fahaqa biallatheena sakhiroo minhum ma kanoo bihi yastahzioona

Translation: ನಿಮಗಿಂತ ಮೊದಲು ಅನೇಕ ಸಂದೇಶವಾಹಕರು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಅವರನ್ನು ಅಪಹಾಸ್ಯ ಮಾಡಿದವರನ್ನು ನಂತರ ಅವರು ಅಪಹಾಸ್ಯ ಮಾಡುತ್ತಿದ್ದ ವಿಷಯವೇ ಆವರಿಸಿಬಿಟ್ಟಿತು.

21:42

قُلۡ مَن يَكۡلَؤُكُم بِٱلَّيۡلِ وَٱلنَّهَارِ مِنَ ٱلرَّحۡمَٰنِۚ بَلۡ هُمۡ عَن ذِكۡرِ رَبِّهِم مُّعۡرِضُونَ ﴿42﴾

Transliteration: Qul man yaklaokum biallayli waalnnahari mina alrrahmani bal hum AAan thikri rabbihim muAAridoona

Translation: ಕೇಳಿರಿ: “ನಿಮ್ಮನ್ನು ಪರಮ ದಯಾಮಯನಿಂದ (ಅಲ್ಲಾಹನಿಂದ) ಹಗಲು-ರಾತ್ರಿ ರಕ್ಷಣೆ ಮಾಡಲು ಯಾರಿದ್ದಾರೆ?” ಅಲ್ಲ; ವಾಸ್ತವವಾಗಿ ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಸ್ಮರಣೆಯಿಂದ ವಿಮುಖರಾಗಿದ್ದಾರೆ.

21:43

أَمۡ لَهُمۡ ءَالِهَةٞ تَمۡنَعُهُم مِّن دُونِنَاۚ لَا يَسۡتَطِيعُونَ نَصۡرَ أَنفُسِهِمۡ وَلَا هُم مِّنَّا يُصۡحَبُونَ ﴿43﴾

Transliteration: Am lahum alihatun tamnaAAuhum min doonina la yastateeAAoona nasra anfusihim wala hum minna yushaboona

Translation: ಅವರ ರಕ್ಷಣೆ ಮಾಡಲು ಅವರಿಗೆ ನಮ್ಮ ಹೊರತು ಬೇರೆ ದೇವರುಗಳು ಇದ್ದಾರೆಯೇ? ಆ ದೇವರುಗಳಿಗೆ ಸ್ವಯಂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಅವರಿಗೆ ನಮ್ಮ ಕಡೆಯಿಂದಲೂ ರಕ್ಷಣೆ ಸಿಗುವುದಿಲ್ಲ.

21:44

بَلۡ مَتَّعۡنَا هَـٰٓؤُلَآءِ وَءَابَآءَهُمۡ حَتَّىٰ طَالَ عَلَيۡهِمُ ٱلۡعُمُرُۗ أَفَلَا يَرَوۡنَ أَنَّا نَأۡتِي ٱلۡأَرۡضَ نَنقُصُهَا مِنۡ أَطۡرَافِهَآۚ أَفَهُمُ ٱلۡغَٰلِبُونَ ﴿44﴾

Transliteration: Bal mattaAAna haolai waabaahum hatta tala AAalayhimu alAAumuru afala yarawna anna natee alarda nanqusuha min atrafiha afahumu alghaliboona

Translation: ಅಲ್ಲ; ನಾವು ಇವರಿಗೆ ಮತ್ತು ಇವರ ಪೂರ್ವಜರಿಗೆ ಸವಲತ್ತುಗಳನ್ನು ನೀಡಿದೆವು. ಹೀಗೆ ಅವರು ದೀರ್ಘಕಾಲ ಬಾಳಿ ಬದುಕಿದರು. ನಾವು ಭೂಮಿಯನ್ನು ಅದರ ಅಂಚುಗಳಿಂದ ಕುಗ್ಗಿಸುತ್ತಿರುವುದನ್ನು ಅವರು ನೋಡುವುದಿಲ್ಲವೇ?[1] ಹೀಗಿದ್ದೂ ಅವರೇ ವಿಜಯಿಗಳಾಗುವರೇ?

21:45

قُلۡ إِنَّمَآ أُنذِرُكُم بِٱلۡوَحۡيِۚ وَلَا يَسۡمَعُ ٱلصُّمُّ ٱلدُّعَآءَ إِذَا مَا يُنذَرُونَ ﴿45﴾

Transliteration: Qul innama onthirukum bialwahyi wala yasmaAAu alssummu aldduAAaa itha ma yuntharoona

Translation: (ಪ್ರವಾದಿಯವರೇ) ಹೇಳಿರಿ: “ನಾನು ನಿಮಗೆ ದೇವವಾಣಿಯ ಆಧಾರದಲ್ಲಿ ಎಚ್ಚರಿಕೆ ನೀಡುತ್ತಿದ್ದೇನೆ.” ಅವರಿಗೆ ಎಚ್ಚರಿಕೆ ನೀಡಲಾಗುವಾಗ ಕಿವಿ ಕೇಳದವರು ಆ ಕರೆಯನ್ನು ಕೇಳಲಾರರು.

21:46

وَلَئِن مَّسَّتۡهُمۡ نَفۡحَةٞ مِّنۡ عَذَابِ رَبِّكَ لَيَقُولُنَّ يَٰوَيۡلَنَآ إِنَّا كُنَّا ظَٰلِمِينَ ﴿46﴾

Transliteration: Walain massathum nafhatun min AAathabi rabbika layaqoolunna ya waylana inna kunna thalimeena

Translation: ಅವರಿಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯ ಒಂದು ಸುಳಿವು ತಾಗಿದರೆ ಸಾಕು, ಅವರು ಹೇಳುವರು: “ಅಯ್ಯೋ! ನಮ್ಮ ದುರ್ಗತಿಯೇ! ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು.”

21:47

وَنَضَعُ ٱلۡمَوَٰزِينَ ٱلۡقِسۡطَ لِيَوۡمِ ٱلۡقِيَٰمَةِ فَلَا تُظۡلَمُ نَفۡسٞ شَيۡـٔٗاۖ وَإِن كَانَ مِثۡقَالَ حَبَّةٖ مِّنۡ خَرۡدَلٍ أَتَيۡنَا بِهَاۗ وَكَفَىٰ بِنَا حَٰسِبِينَ ﴿47﴾

Transliteration: WanadaAAu almawazeena alqista liyawmi alqiyamati fala tuthlamu nafsun shayan wain kana mithqala habbatin min khardalin atayna biha wakafa bina hasibeena

Translation: ಪುನರುತ್ಥಾನ ದಿನದಂದು ನಾವು ನ್ಯಾಯಯುತ ತಕ್ಕಡಿಗಳನ್ನು ಸ್ಥಾಪಿಸುವೆವು. ಅಂದು ಯಾವುದೇ ವ್ಯಕ್ತಿಗೂ ಅನ್ಯಾಯವಾಗುವುದಿಲ್ಲ. ಅವರು ಮಾಡಿದ ಕರ್ಮವು ಒಂದು ಸಾಸಿವೆ ಕಾಳಿನ ತೂಕದಷ್ಟಿದ್ದರೂ ನಾವು ಅದನ್ನು ತರುವೆವು. ವಿಚಾರಣೆ ಮಾಡುವವರಾಗಿ ನಾವು ಯಥೇಷ್ಟ ಸಾಕು.

21:48

وَلَقَدۡ ءَاتَيۡنَا مُوسَىٰ وَهَٰرُونَ ٱلۡفُرۡقَانَ وَضِيَآءٗ وَذِكۡرٗا لِّلۡمُتَّقِينَ ﴿48﴾

Transliteration: Walaqad atayna moosa waharoona alfurqana wadiyaan wathikran lilmuttaqeena

Translation: ನಾವು ಮೂಸಾ ಮತ್ತು ಹಾರೂನರಿಗೆ ಸತ್ಯಾಸತ್ಯ ವಿವೇಚನೆಯನ್ನು, ಪ್ರಕಾಶವನ್ನು ಮತ್ತು ದೇವಭಯವುಳ್ಳವರಿಗೆ ಉಪದೇಶವನ್ನು ನೀಡಿದೆವು.

21:49

ٱلَّذِينَ يَخۡشَوۡنَ رَبَّهُم بِٱلۡغَيۡبِ وَهُم مِّنَ ٱلسَّاعَةِ مُشۡفِقُونَ ﴿49﴾

Transliteration: Allatheena yakhshawna rabbahum bialghaybi wahum mina alssaAAati mushfiqoona

Translation: ಅವರು (ದೇವಭಯವುಳ್ಳವರು) ಯಾರೆಂದರೆ, ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಅದೃಶ್ಯರೂಪದಲ್ಲಿ ಭಯಪಡುವವರು ಮತ್ತು ಅಂತ್ಯಸಮಯದ ವಿಷಯದಲ್ಲಿ ಅತೀವ ಆತಂಕದಲ್ಲಿರುವವರು.

21:50

وَهَٰذَا ذِكۡرٞ مُّبَارَكٌ أَنزَلۡنَٰهُۚ أَفَأَنتُمۡ لَهُۥ مُنكِرُونَ ﴿50﴾

Transliteration: Wahatha thikrun mubarakun anzalnahu afaantum lahu munkiroona

Translation: ಇದು (ಕುರ್‌ಆನ್) ನಾವು ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಉಪದೇಶವಾಗಿದೆ. ಆದರೂ ನೀವು ಅದನ್ನು ನಿರಾಕರಿಸುತ್ತೀರಾ?

21:51

وَلَقَدۡ ءَاتَيۡنَآ إِبۡرَٰهِيمَ رُشۡدَهُۥ مِن قَبۡلُ وَكُنَّا بِهِۦ عَٰلِمِينَ ﴿51﴾

Transliteration: Walaqad atayna ibraheema rushdahu min qablu wakunna bihi AAalimeena

Translation: ಇದಕ್ಕೆ ಮೊದಲು ನಾವು ಇಬ್ರಾಹೀಮರಿಗೆ ವಿವೇಚನೆಯನ್ನು ನೀಡಿದ್ದೆವು. ನಾವು ಅವರ ಸ್ಥಿತಿಗತಿಗಳ ಬಗ್ಗೆ ತಿಳಿದವರಾಗಿದ್ದೆವು.

21:52

إِذۡ قَالَ لِأَبِيهِ وَقَوۡمِهِۦ مَا هَٰذِهِ ٱلتَّمَاثِيلُ ٱلَّتِيٓ أَنتُمۡ لَهَا عَٰكِفُونَ ﴿52﴾

Transliteration: Ith qala liabeehi waqawmihi ma hathihi alttamatheelu allatee antum laha AAakifoona

Translation: ಅವರು ತಮ್ಮ ತಂದೆ ಮತ್ತು ಊರ ಜನರೊಡನೆ ಕೇಳಿದ ಸಂದರ್ಭ: “ನೀವು ಧ್ಯಾನ ನಿರತರಾಗಿ ಕುಳಿತುಕೊಳ್ಳುವ ಈ ವಿಗ್ರಹಗಳು ಏನು?”

21:53

قَالُواْ وَجَدۡنَآ ءَابَآءَنَا لَهَا عَٰبِدِينَ ﴿53﴾

Transliteration: Qaloo wajadna abaana laha AAabideena

Translation: ಅವರು ಉತ್ತರಿಸಿದರು: “ನಮ್ಮ ಪೂರ್ವಜರು ಇವುಗಳನ್ನು ಆರಾಧಿಸುವುದನ್ನು ನಾವು ನೋಡಿದ್ದೇವೆ.”

21:54

قَالَ لَقَدۡ كُنتُمۡ أَنتُمۡ وَءَابَآؤُكُمۡ فِي ضَلَٰلٖ مُّبِينٖ ﴿54﴾

Transliteration: Qala laqad kuntum antum waabaokum fee dalalin mubeenin

Translation: ಇಬ್ರಾಹೀಮ್ ಹೇಳಿದರು: “ನಿಜಕ್ಕೂ ನೀವು ಮತ್ತು ನಿಮ್ಮ ಪೂರ್ವಜರು ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ.”

21:55

قَالُوٓاْ أَجِئۡتَنَا بِٱلۡحَقِّ أَمۡ أَنتَ مِنَ ٱللَّـٰعِبِينَ ﴿55﴾

Transliteration: Qaloo ajitana bialhaqqi am anta mina allaAAibeena

Translation: ಅವರು ಕೇಳಿದರು: “ನೀನು ನಮ್ಮ ಬಳಿಗೆ ಸತ್ಯವನ್ನು ತಂದಿದ್ದೀಯಾ? ಅಥವಾ ಕೇವಲ ತಮಾಷೆಗಾಗಿ ಹೇಳುತ್ತಿದ್ದೀಯಾ?”

21:56

قَالَ بَل رَّبُّكُمۡ رَبُّ ٱلسَّمَٰوَٰتِ وَٱلۡأَرۡضِ ٱلَّذِي فَطَرَهُنَّ وَأَنَا۠ عَلَىٰ ذَٰلِكُم مِّنَ ٱلشَّـٰهِدِينَ ﴿56﴾

Transliteration: Qala bal rabbukum rabbu alssamawati waalardi allathee fatarahunna waana AAala thalikum mina alshshahideena

Translation: ಇಬ್ರಾಹೀಮ್ ಹೇಳಿದರು: “ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಅವುಗಳ ಪರಿಪಾಲಕನೇ (ಅಲ್ಲಾಹನೇ) ನಿಮ್ಮ ಪರಿಪಾಲಕ. ನಾನು ಅದಕ್ಕೆ ಸಾಕ್ಷಿಯಾಗಿರುವವರಲ್ಲಿ ಒಬ್ಬನು.

21:57

وَتَٱللَّهِ لَأَكِيدَنَّ أَصۡنَٰمَكُم بَعۡدَ أَن تُوَلُّواْ مُدۡبِرِينَ ﴿57﴾

Transliteration: WataAllahi laakeedanna asnamakum baAAda an tuwalloo mudbireena

Translation: ಅಲ್ಲಾಹನಾಣೆ! ನೀವು ಇಲ್ಲಿಂದ ತಿರುಗಿ ಹೊರಟುಹೋದ ಬಳಿಕ ನಾನು ನಿಮ್ಮ ವಿಗ್ರಹಗಳ ವಿರುದ್ಧ ಒಂದು ಸಂಚು ರೂಪಿಸುತ್ತೇನೆ.”

21:58

فَجَعَلَهُمۡ جُذَٰذًا إِلَّا كَبِيرٗا لَّهُمۡ لَعَلَّهُمۡ إِلَيۡهِ يَرۡجِعُونَ ﴿58﴾

Transliteration: FajaAAalahum juthathan illa kabeeran lahum laAAallahum ilayhi yarjiAAoona

Translation: ನಂತರ ಇಬ್ರಾಹೀಮ್ ಆ ಎಲ್ಲಾ ವಿಗ್ರಹಗಳನ್ನು ಧ್ವಂಸ ಮಾಡಿದರು. ಆದರೆ ಅವುಗಳಲ್ಲಿ ದೊಡ್ಡ ವಿಗ್ರಹವನ್ನು ಹಾಗೆಯೇ ಬಿಟ್ಟರು. ಜನರು ಅದರ ಬಳಿಗೆ ಹಿಂದಿರುಗಿ ಬರುವುದಕ್ಕಾಗಿ.

21:59

قَالُواْ مَن فَعَلَ هَٰذَا بِـَٔالِهَتِنَآ إِنَّهُۥ لَمِنَ ٱلظَّـٰلِمِينَ ﴿59﴾

Transliteration: Qaloo man faAAala hatha bialihatina innahu lamina alththalimeena

Translation: ಜನರು ಕೇಳಿದರು: “ನಮ್ಮ ದೇವರುಗಳೊಡನೆ ಇಂತಹ ಕೃತ್ಯವನ್ನು ಮಾಡಿದ್ದು ಯಾರು? ನಿಶ್ಚಯವಾಗಿಯೂ ಅವನು ಅಕ್ರಮಿಯಾಗಿದ್ದಾನೆ.”

21:60

قَالُواْ سَمِعۡنَا فَتٗى يَذۡكُرُهُمۡ يُقَالُ لَهُۥٓ إِبۡرَٰهِيمُ ﴿60﴾

Transliteration: Qaloo samiAAna fatan yathkuruhum yuqalu lahu ibraheemu

Translation: ಕೆಲವರು ಹೇಳಿದರು: “ಇಬ್ರಾಹೀಮ್ ಎಂಬ ಹೆಸರಿನ ಒಬ್ಬ ಯುವಕ ಈ ದೇವರುಗಳ ಬಗ್ಗೆ ಮಾತನಾಡುವುದನ್ನು ನಾವು ಕೇಳಿದ್ದೇವೆ.”

21:61

قَالُواْ فَأۡتُواْ بِهِۦ عَلَىٰٓ أَعۡيُنِ ٱلنَّاسِ لَعَلَّهُمۡ يَشۡهَدُونَ ﴿61﴾

Transliteration: Qaloo fatoo bihi AAala aAAyuni alnnasi laAAallahum yashhadoona

Translation: ಜನರು ಹೇಳಿದರು: “ಅವನನ್ನು ಜನರ ಕಣ್ಣ ಮುಂದೆ ತಂದು ನಿಲ್ಲಿಸಿ. ಎಲ್ಲರೂ ಅವನನ್ನು ನೋಡಲಿ.”

21:62

قَالُوٓاْ ءَأَنتَ فَعَلۡتَ هَٰذَا بِـَٔالِهَتِنَا يَـٰٓإِبۡرَٰهِيمُ ﴿62﴾

Transliteration: Qaloo aanta faAAalta hatha bialihatina ya ibraheemu

Translation: ಅವರು ಕೇಳಿದರು: “ಓ ಇಬ್ರಾಹೀಮ್! ನಮ್ಮ ದೇವರುಗಳೊಂದಿಗೆ ಈ ಕೃತ್ಯವನ್ನು ಮಾಡಿದ್ದು ನೀನೇ ಏನು?”

21:63

قَالَ بَلۡ فَعَلَهُۥ كَبِيرُهُمۡ هَٰذَا فَسۡـَٔلُوهُمۡ إِن كَانُواْ يَنطِقُونَ ﴿63﴾

Transliteration: Qala bal faAAalahu kabeeruhum hatha faisaloohum in kanoo yantiqoona

Translation: ಇಬ್ರಾಹೀಮ್ ಉತ್ತರಿಸಿದರು: “ಅಲ್ಲ; ಈ ದೊಡ್ಡ ವಿಗ್ರಹವೇ ಇದನ್ನು ಮಾಡಿದ್ದು. ನೀವು ಆ (ಧ್ವಂಸವಾದ) ವಿಗ್ರಹಗಳೊಡನೆ ಕೇಳಿ ನೋಡಿ. ಅವುಗಳಿಗೆ ಮಾತನಾಡಲು ಸಾಧ್ಯವಿದ್ದರೆ.”

21:64

فَرَجَعُوٓاْ إِلَىٰٓ أَنفُسِهِمۡ فَقَالُوٓاْ إِنَّكُمۡ أَنتُمُ ٱلظَّـٰلِمُونَ ﴿64﴾

Transliteration: FarajaAAoo ila anfusihim faqaloo innakum antumu alththalimoona

Translation: ಅವರು (ಸತ್ಯವನ್ನು ಅರಿತು) ಪರಸ್ಪರರ ಕಡೆಗೆ ತಿರುಗಿ ಹೇಳಿದರು: “ನಿಜವಾಗಿಯೂ ನೀವೇ ಅಕ್ರಮಿಗಳು.”[1]

21:65

ثُمَّ نُكِسُواْ عَلَىٰ رُءُوسِهِمۡ لَقَدۡ عَلِمۡتَ مَا هَـٰٓؤُلَآءِ يَنطِقُونَ ﴿65﴾

Transliteration: Thumma nukisoo AAala ruoosihim laqad AAalimta ma haolai yantiqoona

Translation: ನಂತರ ಅವರು ಉಲ್ಟಾ ಹೊಡೆದು ಹೇಳಿದರು: “ಈ ವಿಗ್ರಹಗಳು ಮಾತನಾಡುವುದಿಲ್ಲವೆಂದು ನಿನಗೆ ಗೊತ್ತಿಲ್ಲವೇ?”

21:66

قَالَ أَفَتَعۡبُدُونَ مِن دُونِ ٱللَّهِ مَا لَا يَنفَعُكُمۡ شَيۡـٔٗا وَلَا يَضُرُّكُمۡ ﴿66﴾

Transliteration: Qala afataAAbudoona min dooni Allahi ma la yanfaAAukum shayan wala yadurrukum

Translation: ಇಬ್ರಾಹೀಮ್ ಕೇಳಿದರು: “ಹಾಗಾದರೆ ನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಯಾವುದೇ ಉಪಕಾರ ಅಥವಾ ತೊಂದರೆ ಮಾಡದ ಈ ವಸ್ತುಗಳನ್ನು ಆರಾಧಿಸುತ್ತಿದ್ದೀರಾ?

21:67

أُفّٖ لَّكُمۡ وَلِمَا تَعۡبُدُونَ مِن دُونِ ٱللَّهِۚ أَفَلَا تَعۡقِلُونَ ﴿67﴾

Transliteration: Offin lakum walima taAAbudoona min dooni Allahi afala taAAqiloona

Translation: ನಿಮಗೆ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವ ಈ ದೇವರುಗಳಿಗೆ ನಾಚಿಕೆಯಾಗಬೇಕು! ನೀವು ಆಲೋಚಿಸುವುದಿಲ್ಲವೇ?”[1]

21:68

قَالُواْ حَرِّقُوهُ وَٱنصُرُوٓاْ ءَالِهَتَكُمۡ إِن كُنتُمۡ فَٰعِلِينَ ﴿68﴾

Transliteration: Qaloo harriqoohu waonsuroo alihatakum in kuntum faAAileena

Translation: ಜನರು ಹೇಳಿದರು: “ಅವನನ್ನು ಸುಟ್ಟುಬಿಡಿ; ಮತ್ತು ನಿಮ್ಮ ದೇವರುಗಳಿಗೆ ಸಹಾಯ ಮಾಡಿ. ನೀವೇನಾದರೂ ಮಾಡುವುದಿದ್ದರೆ.”

21:69

قُلۡنَا يَٰنَارُ كُونِي بَرۡدٗا وَسَلَٰمًا عَلَىٰٓ إِبۡرَٰهِيمَ ﴿69﴾

Transliteration: Qulna ya naru koonee bardan wasalaman AAala ibraheema

Translation: ನಾವು ಹೇಳಿದೆವು: “ಓ ಬೆಂಕಿಯೇ! ನೀನು ಇಬ್ರಾಹೀಮರಿಗೆ ತಂಪು ಮತ್ತು ಸುರಕ್ಷೆಯಾಗಿ ಮಾರ್ಪಡು.”

21:70

وَأَرَادُواْ بِهِۦ كَيۡدٗا فَجَعَلۡنَٰهُمُ ٱلۡأَخۡسَرِينَ ﴿70﴾

Transliteration: Waaradoo bihi kaydan fajaAAalnahumu alakhsareena

Translation: ಅವರು ಇಬ್ರಾಹೀಮರ ಮೇಲೆ ತಂತ್ರ ಪ್ರಯೋಗಿಸಲು ಬಯಸಿದ್ದರು. ಆದರೆ ನಾವು ಅವರ (ತಂತ್ರವನ್ನು) ವಿಫಲಗೊಳಿಸಿದೆವು.

21:71

وَنَجَّيۡنَٰهُ وَلُوطًا إِلَى ٱلۡأَرۡضِ ٱلَّتِي بَٰرَكۡنَا فِيهَا لِلۡعَٰلَمِينَ ﴿71﴾

Transliteration: Wanajjaynahu walootan ila alardi allatee barakna feeha lilAAalameena

Translation: ನಾವು ಅವರನ್ನು ಮತ್ತು ಲೂತರನ್ನು ಪಾರು ಮಾಡಿ ನಾವು ಸರ್ವಲೋಕದವರಿಗಾಗಿ ಸಮೃದ್ಧಗೊಳಿಸಿದ ಪ್ರದೇಶಕ್ಕೆ ಸಾಗಿಸಿದೆವು.

21:72

وَوَهَبۡنَا لَهُۥٓ إِسۡحَٰقَ وَيَعۡقُوبَ نَافِلَةٗۖ وَكُلّٗا جَعَلۡنَا صَٰلِحِينَ ﴿72﴾

Transliteration: Wawahabna lahu ishaqa wayaAAqooba nafilatan wakullan jaAAalna saliheena

Translation: ನಾವು ಅವರಿಗೆ ಇಸ್‍ಹಾಕರನ್ನು ಮತ್ತು ಹೆಚ್ಚಿಗೆಯಾಗಿ ಯಾಕೂಬರನ್ನು ದಯಪಾಲಿಸಿದೆವು. ಅವರೆಲ್ಲರನ್ನೂ ನಾವು ನೀತಿವಂತರನ್ನಾಗಿ ಮಾಡಿದೆವು.

21:73

وَجَعَلۡنَٰهُمۡ أَئِمَّةٗ يَهۡدُونَ بِأَمۡرِنَا وَأَوۡحَيۡنَآ إِلَيۡهِمۡ فِعۡلَ ٱلۡخَيۡرَٰتِ وَإِقَامَ ٱلصَّلَوٰةِ وَإِيتَآءَ ٱلزَّكَوٰةِۖ وَكَانُواْ لَنَا عَٰبِدِينَ ﴿73﴾

Transliteration: WajaAAalnahum aimmatan yahdoona biamrina waawhayna ilayhim fiAAla alkhayrati waiqama alssalati waeetaa alzzakati wakanoo lana AAabideena

Translation: ನಾವು ಅವರನ್ನು ನಮ್ಮ ಆಜ್ಞೆಯಂತೆ ಮಾರ್ಗದರ್ಶನ ಮಾಡುವ ಮುಖಂಡರನ್ನಾಗಿ ಮಾಡಿದೆವು. ನಾವು ಅವರಿಗೆ ಸತ್ಕರ್ಮಗಳನ್ನು ಮಾಡಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ದೇವವಾಣಿಯನ್ನು (ನಿರ್ದೇಶನವನ್ನು) ನೀಡಿದೆವು. ಅವರು ನಮ್ಮನ್ನು ಮಾತ್ರ ಆರಾಧಿಸುವ ದಾಸರಾಗಿದ್ದರು.

21:74

وَلُوطًا ءَاتَيۡنَٰهُ حُكۡمٗا وَعِلۡمٗا وَنَجَّيۡنَٰهُ مِنَ ٱلۡقَرۡيَةِ ٱلَّتِي كَانَت تَّعۡمَلُ ٱلۡخَبَـٰٓئِثَۚ إِنَّهُمۡ كَانُواْ قَوۡمَ سَوۡءٖ فَٰسِقِينَ ﴿74﴾

Transliteration: Walootan ataynahu hukman waAAilman wanajjaynahu mina alqaryati allatee kanat taAAmalu alkhabaitha innahum kanoo qawma sawin fasiqeena

Translation: ನಾವು ಲೂತರಿಗೆ ತೀರ್ಪುಗಾರಿಕೆ ಮತ್ತು ಜ್ಞಾನವನ್ನು ದಯಪಾಲಿಸಿದೆವು. ಅಶ್ಲೀಲಕೃತ್ಯವನ್ನು ಮಾಡುತ್ತಿದ್ದ ಊರಿನಿಂದ ನಾವು ಅವರನ್ನು ಪಾರು ಮಾಡಿದೆವು. ನಿಶ್ಚಯವಾಗಿಯೂ ಆ ಊರಿನವರು ದುಷ್ಟ ಅವಿಧೇಯ ಜನರಾಗಿದ್ದರು.

21:75

وَأَدۡخَلۡنَٰهُ فِي رَحۡمَتِنَآۖ إِنَّهُۥ مِنَ ٱلصَّـٰلِحِينَ ﴿75﴾

Transliteration: Waadkhalnahu fee rahmatina innahu mina alssaliheena

Translation: ನಾವು ಅವರನ್ನು (ಲೂತ್‍ರನ್ನು) ನಮ್ಮ ದಯೆಯಲ್ಲಿ ಸೇರಿಸಿದೆವು. ನಿಶ್ಚಯವಾಗಿಯೂ ಅವರು ನೀತಿವಂತರಲ್ಲಿ ಸೇರಿದ್ದರು.

21:76

وَنُوحًا إِذۡ نَادَىٰ مِن قَبۡلُ فَٱسۡتَجَبۡنَا لَهُۥ فَنَجَّيۡنَٰهُ وَأَهۡلَهُۥ مِنَ ٱلۡكَرۡبِ ٱلۡعَظِيمِ ﴿76﴾

Transliteration: Wanoohan ith nada min qablu faistajabna lahu fanajjaynahu waahlahu mina alkarbi alAAatheemi

Translation: ನೂಹರನ್ನು ಕೂಡ ನೆನಪಿಸಿಕೊಳ್ಳಿ! ಇದಕ್ಕೆ ಮೊದಲು ಅವರು ನಮ್ಮನ್ನು ಕರೆದು ಪ್ರಾರ್ಥಿಸಿದ ಸಂದರ್ಭದಲ್ಲಿ ನಾವು ಅವರ ಕರೆಗೆ ಉತ್ತರಿಸಿದೆವು. ನಂತರ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ಮಹಾ ದುರಂತದಿಂದ ಪಾರು ಮಾಡಿದೆವು.

21:77

وَنَصَرۡنَٰهُ مِنَ ٱلۡقَوۡمِ ٱلَّذِينَ كَذَّبُواْ بِـَٔايَٰتِنَآۚ إِنَّهُمۡ كَانُواْ قَوۡمَ سَوۡءٖ فَأَغۡرَقۡنَٰهُمۡ أَجۡمَعِينَ ﴿77﴾

Transliteration: Wanasarnahu mina alqawmi allatheena kaththaboo biayatina innahum kanoo qawma sawin faaghraqnahum ajmaAAeena

Translation: ನಮ್ಮ ವಚನಗಳನ್ನು ನಿಷೇಧಿಸಿದ ಜನರ ವಿರುದ್ಧ ನಾವು ಅವರಿಗೆ (ನೂಹರಿಗೆ) ಸಹಾಯ ಮಾಡಿದೆವು. ನಿಶ್ಚಯವಾಗಿಯೂ ಅವರು ದುಷ್ಟ ಜನರಾಗಿದ್ದರು. ಆದ್ದರಿಂದ ನಾವು ಅವರೆಲ್ಲರನ್ನೂ ಮುಳುಗಿಸಿ ಕೊಂದೆವು.

21:78

وَدَاوُۥدَ وَسُلَيۡمَٰنَ إِذۡ يَحۡكُمَانِ فِي ٱلۡحَرۡثِ إِذۡ نَفَشَتۡ فِيهِ غَنَمُ ٱلۡقَوۡمِ وَكُنَّا لِحُكۡمِهِمۡ شَٰهِدِينَ ﴿78﴾

Transliteration: Wadawooda wasulaymana ith yahkumani fee alharthi ith nafashat feehi ghanamu alqawmi wakunna lihukmihim shahideena

Translation: ದಾವೂದ್ ಮತ್ತು ಸುಲೈಮಾನರನ್ನು ನೆನಪಿಸಿಕೊಳ್ಳಿ! ಅವರಿಬ್ಬರು ಒಂದು ಹೊಲದ ವಿಷಯದಲ್ಲಿ ತೀರ್ಪು ನೀಡುತ್ತಿದ್ದರು. ಆ ಹೊಲಕ್ಕೆ ಕೆಲವು ಜನರ ಕುರಿಗಳು ನುಸುಳಿದ್ದವು. ಅವರು ನೀಡುವ ತೀರ್ಪಿಗೆ ನಾವು ಸಾಕ್ಷಿಯಾಗಿದ್ದೆವು.

21:79

فَفَهَّمۡنَٰهَا سُلَيۡمَٰنَۚ وَكُلًّا ءَاتَيۡنَا حُكۡمٗا وَعِلۡمٗاۚ وَسَخَّرۡنَا مَعَ دَاوُۥدَ ٱلۡجِبَالَ يُسَبِّحۡنَ وَٱلطَّيۡرَۚ وَكُنَّا فَٰعِلِينَ ﴿79﴾

Transliteration: Fafahhamnaha sulaymana wakullan atayna hukman waAAilman wasakhkharna maAAa dawooda aljibala yusabbihna waalttayra wakunna faAAileena

Translation: ನಾವು ಸುಲೈಮಾನರಿಗೆ ಈ ಪ್ರಕರಣವು ಸರಿಯಾಗಿ ಅರ್ಥವಾಗುವಂತೆ ಮಾಡಿದೆವು.[1] ಅವರಿಬ್ಬರಿಗೂ ನಾವು ತೀರ್ಪುಗಾರಿಕೆ ಮತ್ತು ಜ್ಞಾನವನ್ನು ನೀಡಿದ್ದೆವು. ದಾವೂದರೊಂದಿಗೆ ಸ್ತುತಿಕೀರ್ತನೆ ಮಾಡಲು ನಾವು ಪರ್ವತಗಳನ್ನು ಮತ್ತು ಪಕ್ಷಿಗಳನ್ನು ಅವರಿಗೆ ಅಧೀನಗೊಳಿಸಿದೆವು. ನಾವು (ಅದನ್ನೆಲ್ಲಾ) ಮಾಡುವವರಾಗಿದ್ದೆವು.

21:80

وَعَلَّمۡنَٰهُ صَنۡعَةَ لَبُوسٖ لَّكُمۡ لِتُحۡصِنَكُم مِّنۢ بَأۡسِكُمۡۖ فَهَلۡ أَنتُمۡ شَٰكِرُونَ ﴿80﴾

Transliteration: WaAAallamnahu sanAAata laboosin lakum lituhsinakum min basikum fahal antum shakiroona

Translation: ಯುದ್ಧದಲ್ಲಿ (ವೈರಿಗಳ ಏಟುಗಳಿಂದ) ನಿಮಗೆ ರಕ್ಷಣೆ ಒದಗಿಸುವ ಅಂಗಿಗಳ ತಯಾರಿಕೆಯನ್ನು ನಾವು ದಾವೂದರಿಗೆ ಕಲಿಸಿಕೊಟ್ಟೆವು.[1] ಆದರೂ ನೀವು ಕೃತಜ್ಞರಾಗುವುದಿಲ್ಲವೇ?

21:81

وَلِسُلَيۡمَٰنَ ٱلرِّيحَ عَاصِفَةٗ تَجۡرِي بِأَمۡرِهِۦٓ إِلَى ٱلۡأَرۡضِ ٱلَّتِي بَٰرَكۡنَا فِيهَاۚ وَكُنَّا بِكُلِّ شَيۡءٍ عَٰلِمِينَ ﴿81﴾

Transliteration: Walisulaymana alrreeha AAasifatan tajree biamrihi ila alardi allatee barakna feeha wakunna bikulli shayin AAalimeena

Translation: ನಾವು ಸುಲೈಮಾನರಿಗೆ ಬಲವಾಗಿ ಬೀಸುವ ಗಾಳಿಯನ್ನು ಅಧೀನಗೊಳಿಸಿದೆವು. ಅದು ಅವರ ಆಜ್ಞೆಯಂತೆ ನಾವು ಸಮೃದ್ಧಗೊಳಿಸಿದ ಭೂಪ್ರದೇಶಕ್ಕೆ ಚಲಿಸುತ್ತಿತ್ತು.[1] ನಾವು ಎಲ್ಲಾ ವಿಷಯಗಳ ಬಗ್ಗೆಯೂ ಜ್ಞಾನವುಳ್ಳವರಾಗಿದ್ದೇವೆ.

21:82

وَمِنَ ٱلشَّيَٰطِينِ مَن يَغُوصُونَ لَهُۥ وَيَعۡمَلُونَ عَمَلٗا دُونَ ذَٰلِكَۖ وَكُنَّا لَهُمۡ حَٰفِظِينَ ﴿82﴾

Transliteration: Wamina alshshayateeni man yaghoosoona lahu wayaAAmaloona AAamalan doona thalika wakunna lahum hafitheena

Translation: ಶೈತಾನರಲ್ಲಿ ಕೆಲವರನ್ನು ಅವರಿಗೆ ಅಧೀನಗೊಳಿಸಿದೆವು. ಅವರು ಸುಲೈಮಾನರಿಗಾಗಿ ಸಮುದ್ರದಲ್ಲಿ ಮುಳುಗುತ್ತಿದ್ದರು. ಇದಲ್ಲದೆ ಇನ್ನಿತರ ಅನೇಕ ಕೆಲಸಗಳನ್ನು ಅವರು ಮಾಡುತ್ತಿದ್ದರು. ನಾವು ಅವರೆಲ್ಲರ ಪಾಲಕರಾಗಿದ್ದೆವು.

21:83

وَأَيُّوبَ إِذۡ نَادَىٰ رَبَّهُۥٓ أَنِّي مَسَّنِيَ ٱلضُّرُّ وَأَنتَ أَرۡحَمُ ٱلرَّـٰحِمِينَ ﴿83﴾

Transliteration: Waayyooba ith nada rabbahu annee massaniya alddurru waanta arhamu alrrahimeena

Translation: ಅಯ್ಯೂಬರನ್ನು ಕೂಡ ನೆನಪಿಸಿಕೊಳ್ಳಿ! ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದ ಸಂದರ್ಭ. “ನಿಶ್ಚಯವಾಗಿಯೂ ನನಗೆ ತೊಂದರೆ ತಗುಲಿದೆ. ನೀನಾದರೋ ದಯೆ ತೋರುವವರಲ್ಲೇ ಅತ್ಯಧಿಕ ದಯೆ ತೋರುವವನು.”

21:84

فَٱسۡتَجَبۡنَا لَهُۥ فَكَشَفۡنَا مَا بِهِۦ مِن ضُرّٖۖ وَءَاتَيۡنَٰهُ أَهۡلَهُۥ وَمِثۡلَهُم مَّعَهُمۡ رَحۡمَةٗ مِّنۡ عِندِنَا وَذِكۡرَىٰ لِلۡعَٰبِدِينَ ﴿84﴾

Transliteration: Faistajabna lahu fakashafna ma bihi min durrin waataynahu ahlahu wamithlahum maAAahum rahmatan min AAindina wathikra lilAAabideena

Translation: ಆಗ ನಾವು ಅವರ ಕರೆಗೆ ಉತ್ತರ ನೀಡಿ ಅವರು ಬಳಲುತ್ತಿದ್ದ ತೊಂದರೆಯನ್ನು ನಿವಾರಿಸಿದೆವು. ನಾವು ಅವರಿಗೆ ಅವರ ಕುಟುಂಬವನ್ನು ಮತ್ತು ಅವರೊಂದಿಗೆ ಅವರಷ್ಟೇ ಇತರರನ್ನು ನೀಡಿದೆವು. ಇದು ನಮ್ಮ ಕಡೆಯ ದಯೆಯಾಗಿದೆ ಮತ್ತು ಆರಾಧಕರಿಗೆ ಒಂದು ಉಪದೇಶವಾಗಿದೆ.

21:85

وَإِسۡمَٰعِيلَ وَإِدۡرِيسَ وَذَا ٱلۡكِفۡلِۖ كُلّٞ مِّنَ ٱلصَّـٰبِرِينَ ﴿85﴾

Transliteration: WaismaAAeela waidreesa watha alkifli kullun mina alssabireena

Translation: ಇಸ್ಮಾಈಲ್‍, ಇದ್ರೀಸ್‍ ಮತ್ತು ದುಲ್-ಕಿಫ್ಲರನ್ನು ಕೂಡ ನೆನಪಿಸಿಕೊಳ್ಳಿ! ಅವರೆಲ್ಲರೂ ತಾಳ್ಮೆಯುಳ್ಳವರಾಗಿದ್ದರು.

21:86

وَأَدۡخَلۡنَٰهُمۡ فِي رَحۡمَتِنَآۖ إِنَّهُم مِّنَ ٱلصَّـٰلِحِينَ ﴿86﴾

Transliteration: Waadkhalnahum fee rahmatina innahum mina alssaliheena

Translation: ನಾವು ಅವರನ್ನು ನಮ್ಮ ಕಾರುಣ್ಯದಲ್ಲಿ ಸೇರಿಸಿದೆವು. ನಿಶ್ಚಯವಾಗಿಯೂ ಅವರು ಸಜ್ಜನರಲ್ಲಿ ಸೇರಿದವರಾಗಿರುವರು.

21:87

وَذَا ٱلنُّونِ إِذ ذَّهَبَ مُغَٰضِبٗا فَظَنَّ أَن لَّن نَّقۡدِرَ عَلَيۡهِ فَنَادَىٰ فِي ٱلظُّلُمَٰتِ أَن لَّآ إِلَٰهَ إِلَّآ أَنتَ سُبۡحَٰنَكَ إِنِّي كُنتُ مِنَ ٱلظَّـٰلِمِينَ ﴿87﴾

Transliteration: Watha alnnooni ith thahaba mughadiban fathanna an lan naqdira AAalayhi fanada fee alththulumati an la ilaha illa anta subhanaka innee kuntu mina alththalimeena

Translation: ದುನ್ನೂನರನ್ನು[1] (ಯೂನುಸ್) ಕೂಡ ನೆನಪಿಸಿಕೊಳ್ಳಿ! ಅವರು ಕೋಪದಿಂದ ಹೊರಟುಹೋದ ಸಂದರ್ಭ. ನಮಗೆ ಅವರನ್ನು ಹಿಡಿಯಲು ಸಾಧ್ಯವಿಲ್ಲವೆಂದು ಅವರು ಭಾವಿಸಿದ್ದರು. ನಂತರ ಅವರು ಅಂಧಕಾರಗಳ ಒಳಗಿನಿಂದ ಕೂಗಿ ಕರೆದರು: “ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವನಿಲ್ಲ. ನೀನು ಪರಿಶುದ್ಧನು! ನಿಶ್ಚಯವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿದ್ದೆ.”

21:88

فَٱسۡتَجَبۡنَا لَهُۥ وَنَجَّيۡنَٰهُ مِنَ ٱلۡغَمِّۚ وَكَذَٰلِكَ نُـۨجِي ٱلۡمُؤۡمِنِينَ ﴿88﴾

Transliteration: Faistajabna lahu wanajjaynahu mina alghammi wakathalika nunjee almumineena

Translation: ಆಗ ನಾವು ಅವರ ಕರೆಗೆ ಉತ್ತರ ನೀಡಿದೆವು ಮತ್ತು ಅವರನ್ನು ಆ ಸಂಕಟದಿಂದ ಪಾರು ಮಾಡಿದೆವು. ನಾವು ಇದೇ ರೀತಿ ಸತ್ಯವಿಶ್ವಾಸಿಗಳನ್ನು ಪಾರು ಮಾಡುತ್ತೇವೆ.

21:89

وَزَكَرِيَّآ إِذۡ نَادَىٰ رَبَّهُۥ رَبِّ لَا تَذَرۡنِي فَرۡدٗا وَأَنتَ خَيۡرُ ٱلۡوَٰرِثِينَ ﴿89﴾

Transliteration: Wazakariyya ith nada rabbahu rabbi la tatharnee fardan waanta khayru alwaritheena

Translation: ಝಕರಿಯ್ಯರನ್ನು ಕೂಡ ನೆನಪಿಸಿಕೊಳ್ಳಿ! ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದ ಸಂದರ್ಭ: “ಓ ನನ್ನ ಪರಿಪಾಲಕನೇ! ನನ್ನನ್ನು ಒಂಟಿಯಾಗಿ ಬಿಟ್ಟುಬಿಡಬೇಡ. ನೀನು ಅತ್ಯುತ್ತಮ ವಾರಸುದಾರನಾಗಿರುವೆ.”

21:90

فَٱسۡتَجَبۡنَا لَهُۥ وَوَهَبۡنَا لَهُۥ يَحۡيَىٰ وَأَصۡلَحۡنَا لَهُۥ زَوۡجَهُۥٓۚ إِنَّهُمۡ كَانُواْ يُسَٰرِعُونَ فِي ٱلۡخَيۡرَٰتِ وَيَدۡعُونَنَا رَغَبٗا وَرَهَبٗاۖ وَكَانُواْ لَنَا خَٰشِعِينَ ﴿90﴾

Transliteration: Faistajabna lahu wawahabna lahu yahya waaslahna lahu zawjahu innahum kanoo yusariAAoona fee alkhayrati wayadAAoonana raghaban warahaban wakanoo lana khashiAAeena

Translation: ಆಗ ನಾವು ಅವರ ಕರೆಗೆ ಉತ್ತರ ನೀಡಿದೆವು. ಅವರಿಗೆ ಯಹ್ಯಾ ಎಂಬ ಪುತ್ರನನ್ನು ದಯಪಾಲಿಸಿದೆವು. ಅವರ ಪತ್ನಿಯನ್ನು (ಗರ್ಭಧಾರಣೆಗೆ) ಯೋಗ್ಯಳನ್ನಾಗಿಸಿದೆವು. ನಿಶ್ಚಯವಾಗಿಯೂ ಈ ಎಲ್ಲಾ ಪ್ರವಾದಿಗಳು ಸತ್ಕರ್ಮಗಳನ್ನು ಮಾಡಲು ತ್ವರೆ ಮಾಡುತ್ತಿದ್ದರು ಮತ್ತು ನಿರೀಕ್ಷೆ ಹಾಗೂ ಭಯದಿಂದ ನಮ್ಮನ್ನು ಕರೆದು ಪ್ರಾರ್ಥಿಸುತ್ತಿದ್ದರು. ಅವರು ನಮಗೆ ವಿನಮ್ರರಾಗಿದ್ದರು.

21:91

وَٱلَّتِيٓ أَحۡصَنَتۡ فَرۡجَهَا فَنَفَخۡنَا فِيهَا مِن رُّوحِنَا وَجَعَلۡنَٰهَا وَٱبۡنَهَآ ءَايَةٗ لِّلۡعَٰلَمِينَ ﴿91﴾

Transliteration: Waallatee ahsanat farjaha fanafakhna feeha min roohina wajaAAalnaha waibnaha ayatan lilAAalameena

Translation: ತನ್ನ ಕನ್ಯತ್ವವನ್ನು ಸಂರಕ್ಷಿಸಿದ ಆ ಪರಿಶುದ್ಧ ಮಹಿಳೆಯನ್ನು (ಮರ್ಯಮರನ್ನು) ಕೂಡ ನೆನಪಿಸಿಕೊಳ್ಳಿ. ನಾವು ಅವರೊಳಗೆ ಆತ್ಮವನ್ನು ಊದಿದೆವು. ಅವರನ್ನು ಮತ್ತು ಅವರ ಪುತ್ರನನ್ನು ಸರ್ವಲೋಕದವರಿಗೆ ದೃಷ್ಟಾಂತವೆಂಬಂತೆ ಮಾಡಿದೆವು.

21:92

إِنَّ هَٰذِهِۦٓ أُمَّتُكُمۡ أُمَّةٗ وَٰحِدَةٗ وَأَنَا۠ رَبُّكُمۡ فَٱعۡبُدُونِ ﴿92﴾

Transliteration: Inna hathihi ommatukum ommatan wahidatan waana rabbukum faoAAbudooni

Translation: ನಿಶ್ಚಯವಾಗಿಯೂ, ಇದೇ ನಿಮ್ಮ ಸಮುದಾಯ. ಏಕೈಕ ಸಮುದಾಯ! ಮತ್ತು ನಾನೇ ನಿಮ್ಮ ಪರಿಪಾಲಕ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ.

21:93

وَتَقَطَّعُوٓاْ أَمۡرَهُم بَيۡنَهُمۡۖ كُلٌّ إِلَيۡنَا رَٰجِعُونَ ﴿93﴾

Transliteration: WataqattaAAoo amrahum baynahum kullun ilayna rajiAAoona

Translation: ಆದರೆ ಜನರು ತಮ್ಮ ಧರ್ಮದ ವಿಷಯದಲ್ಲಿ ಒಡೆದು ಭಿನ್ನರಾದರು. ಎಲ್ಲರೂ ನಮ್ಮ ಬಳಿಗೆ ಮರಳಿ ಬರುವರು.

21:94

فَمَن يَعۡمَلۡ مِنَ ٱلصَّـٰلِحَٰتِ وَهُوَ مُؤۡمِنٞ فَلَا كُفۡرَانَ لِسَعۡيِهِۦ وَإِنَّا لَهُۥ كَٰتِبُونَ ﴿94﴾

Transliteration: Faman yaAAmal mina alssalihati wahuwa muminun fala kufrana lisaAAyihi wainna lahu katiboona

Translation: ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮಗಳನ್ನು ಮಾಡುತ್ತಾನೋ, ಅವನ ಪರಿಶ್ರಮಗಳನ್ನು ನಿರಾಕರಿಸಲಾಗುವುದಿಲ್ಲ. ನಿಶ್ಚಯವಾಗಿಯೂ ನಾವು ಅವುಗಳನ್ನು ದಾಖಲಿಸಿಡುವೆವು.

21:95

وَحَرَٰمٌ عَلَىٰ قَرۡيَةٍ أَهۡلَكۡنَٰهَآ أَنَّهُمۡ لَا يَرۡجِعُونَ ﴿95﴾

Transliteration: Waharamun AAala qaryatin ahlaknaha annahum la yarjiAAoona

Translation: ನಾವು ಯಾವೆಲ್ಲಾ ಊರುಗಳನ್ನು ನಾಶ ಮಾಡಿದ್ದೇವೆಯೋ ಅವುಗಳ ನಿವಾಸಿಗಳು (ಭೂಮಿಗೆ) ಮರಳಿ ಬರುವುದಿಲ್ಲ ಎಂಬುದು ಅನಿಷೇಧ್ಯ ಸತ್ಯವಾಗಿದೆ.

21:96

حَتَّىٰٓ إِذَا فُتِحَتۡ يَأۡجُوجُ وَمَأۡجُوجُ وَهُم مِّن كُلِّ حَدَبٖ يَنسِلُونَ ﴿96﴾

Transliteration: Hatta itha futihat yajooju wamajooju wahum min kulli hadabin yansiloona

Translation: ಎಲ್ಲಿಯವರೆಗೆಂದರೆ, ಯಾ‌ಜೂಜ್-ಮಾ‌ಜೂಜರನ್ನು ತೆರೆದು ಬಿಡಲಾಗುವುದು ಮತ್ತು ಅವರು ಎಲ್ಲ ದಿಬ್ಬಗಳಿಂದಲೂ ಇಳಿದು ಬರುವರು.

21:97

وَٱقۡتَرَبَ ٱلۡوَعۡدُ ٱلۡحَقُّ فَإِذَا هِيَ شَٰخِصَةٌ أَبۡصَٰرُ ٱلَّذِينَ كَفَرُواْ يَٰوَيۡلَنَا قَدۡ كُنَّا فِي غَفۡلَةٖ مِّنۡ هَٰذَا بَلۡ كُنَّا ظَٰلِمِينَ ﴿97﴾

Transliteration: Waiqtaraba alwaAAdu alhaqqu faitha hiya shakhisatun absaru allatheena kafaroo ya waylana qad kunna fee ghaflatin min hatha bal kunna thalimeena

Translation: ಆ ಸತ್ಯ ವಾಗ್ದಾನವು ಸಮೀಪಿಸಿದಾಗ ಸತ್ಯನಿಷೇಧಿಗಳ ದೃಷ್ಟಿಗಳು ಎವೆಯಿಕ್ಕದೆ ದಿಟ್ಟಿಸುತ್ತಿರುವುದು. (ಅವರು ಹೇಳುವರು): “ಅಯ್ಯೋ! ನಮ್ಮ ದುರ್ಗತಿಯೇ! ನಾವು ಇದರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯದಲ್ಲಿದ್ದೆವು. ಅಲ್ಲ, ನಾವು ಅಕ್ರಮಿಗಳಾಗಿದ್ದೆವು.”

21:98

إِنَّكُمۡ وَمَا تَعۡبُدُونَ مِن دُونِ ٱللَّهِ حَصَبُ جَهَنَّمَ أَنتُمۡ لَهَا وَٰرِدُونَ ﴿98﴾

Transliteration: Innakum wama taAAbudoona min dooni Allahi hasabu jahannama antum laha waridoona

Translation: ನಿಶ್ಚಯವಾಗಿಯೂ, ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುವ ದೇವರುಗಳು ನರಕದ ಇಂಧನವಾಗಲಿದ್ದಾರೆ. ನೀವೆಲ್ಲರೂ ಅದಕ್ಕೇ ಹೋಗಿ ಸೇರುವಿರಿ.

21:99

لَوۡ كَانَ هَـٰٓؤُلَآءِ ءَالِهَةٗ مَّا وَرَدُوهَاۖ وَكُلّٞ فِيهَا خَٰلِدُونَ ﴿99﴾

Transliteration: Law kana haolai alihatan ma waradooha wakullun feeha khalidoona

Translation: ಇವರು ನಿಜಕ್ಕೂ ದೇವರುಗಳಾಗಿದ್ದರೆ ಇವರು ನರಕಕ್ಕೆ ಹೋಗುತ್ತಿರಲಿಲ್ಲ. ಎಲ್ಲರೂ ಅದರಲ್ಲೇ ಶಾಶ್ವತವಾಗಿರುವರು.

21:100

لَهُمۡ فِيهَا زَفِيرٞ وَهُمۡ فِيهَا لَا يَسۡمَعُونَ ﴿100﴾

Transliteration: Lahum feeha zafeerun wahum feeha la yasmaAAoona

Translation: ಅಲ್ಲಿ ಅವರು ದೀರ್ಘ ನಿಟ್ಟುಸಿರುಗಳನ್ನು ಬಿಡುವರು. ಅದರಲ್ಲಿ ಅವರಿಗೆ ಏನೂ ಕೇಳಿಸಲಾರದು.

21:101

إِنَّ ٱلَّذِينَ سَبَقَتۡ لَهُم مِّنَّا ٱلۡحُسۡنَىٰٓ أُوْلَـٰٓئِكَ عَنۡهَا مُبۡعَدُونَ ﴿101﴾

Transliteration: Inna allatheena sabaqat lahum minna alhusna olaika AAanha mubAAadoona

Translation: ನಿಶ್ಚಯವಾಗಿಯೂ, ನಮ್ಮ ಕಡೆಯಿಂದ ಯಾರಿಗೆ ಒಳಿತನ್ನು ಮೊದಲೇ ನೀಡಲಾಗಿದೆಯೋ ಅವರನ್ನು ಅದರಿಂದ (ನರಕದಿಂದ) ದೂರವಿರಿಸಲಾಗುವುದು.[1]

21:102

لَا يَسۡمَعُونَ حَسِيسَهَاۖ وَهُمۡ فِي مَا ٱشۡتَهَتۡ أَنفُسُهُمۡ خَٰلِدُونَ ﴿102﴾

Transliteration: La yasmaAAoona haseesaha wahum fee ma ishtahat anfusuhum khalidoona

Translation: ಅವರಿಗೆ ನರಕದ ಕಿರಿಚಾಟಗಳು ಕೇಳುವುದಿಲ್ಲ. ಅವರ ಮನಸ್ಸುಗಳು ಅಸೆಪಡುವ ಸುಖಗಳಲ್ಲಿ ಅವರು ಸದಾಕಾಲ ವಾಸಿಸುವರು.

21:103

لَا يَحۡزُنُهُمُ ٱلۡفَزَعُ ٱلۡأَكۡبَرُ وَتَتَلَقَّىٰهُمُ ٱلۡمَلَـٰٓئِكَةُ هَٰذَا يَوۡمُكُمُ ٱلَّذِي كُنتُمۡ تُوعَدُونَ ﴿103﴾

Transliteration: La yahzunuhumu alfazaAAu alakbaru watatalaqqahumu almalaikatu hatha yawmukumu allathee kuntum tooAAadoona

Translation: ಆ ಮಹಾ ದಿಗಿಲಿನಿಂದಲೂ ಅವರು ಸಂಕಟಪಡಲಾರರು. ದೇವದೂತರುಗಳು ಅವರನ್ನು ಬರಮಾಡಿಕೊಳ್ಳುತ್ತಾ ಹೇಳುವರು: “ಇದು ನಿಮಗೆ ವಾಗ್ದಾನ ಮಾಡಲಾದ ನಿಮ್ಮ ದಿನವಾಗಿದೆ.”

21:104

يَوۡمَ نَطۡوِي ٱلسَّمَآءَ كَطَيِّ ٱلسِّجِلِّ لِلۡكُتُبِۚ كَمَا بَدَأۡنَآ أَوَّلَ خَلۡقٖ نُّعِيدُهُۥۚ وَعۡدًا عَلَيۡنَآۚ إِنَّا كُنَّا فَٰعِلِينَ ﴿104﴾

Transliteration: Yawma natwee alssamaa katayyi alssijlli lilkutubi kama badana awwala khalqin nuAAeeduhu waAAdan AAalayna inna kunna faAAileena

Translation: ಪುಸ್ತಕದ ಹಾಳೆಗಳನ್ನು ಸುರುಳಿಯಾಗಿ ಸುತ್ತುವಂತೆ ನಾವು ಆಕಾಶವನ್ನು ಸುತ್ತುವ ದಿನ. ನಾವು ಪ್ರಥಮ ಬಾರಿ ಸೃಷ್ಟಿಸಿದಂತೆ ಮತ್ತೊಮ್ಮೆ ಸೃಷ್ಟಿಸುವೆವು. ಅದು ನಾವು ನೆರವೇರಿಸಬೇಕಾದ ವಾಗ್ದಾನವಾಗಿದೆ. ನಿಶ್ಚಯವಾಗಿಯೂ ನಾವು ಅದನ್ನು ನೆರವೇರಿಸುತ್ತೇವೆ.

21:105

وَلَقَدۡ كَتَبۡنَا فِي ٱلزَّبُورِ مِنۢ بَعۡدِ ٱلذِّكۡرِ أَنَّ ٱلۡأَرۡضَ يَرِثُهَا عِبَادِيَ ٱلصَّـٰلِحُونَ ﴿105﴾

Transliteration: Walaqad katabna fee alzzaboori min baAAdi alththikri anna alarda yarithuha AAibadiya alssalihoona

Translation: ನಿಶ್ಚಯವಾಗಿಯೂ ನೀತಿವಂತರಾದ ನನ್ನ ದಾಸರೇ ಭೂಮಿಯ ವಾರಸುದಾರರಾಗುವರು ಎಂದು ನಾವು ಝಬೂರ್‌ನಲ್ಲಿ ಉಪದೇಶದ ನಂತರ ದಾಖಲಿಸಿದ್ದೇವೆ.

21:106

إِنَّ فِي هَٰذَا لَبَلَٰغٗا لِّقَوۡمٍ عَٰبِدِينَ ﴿106﴾

Transliteration: Inna fee hatha labalaghan liqawmin AAabideena

Translation: ನಿಶ್ಚಯವಾಗಿಯೂ ಇದರಲ್ಲಿ ಆರಾಧನೆ ಮಾಡುವವರಿಗೆ ದೊಡ್ಡ ಸಂದೇಶವಿದೆ.

21:107

وَمَآ أَرۡسَلۡنَٰكَ إِلَّا رَحۡمَةٗ لِّلۡعَٰلَمِينَ ﴿107﴾

Transliteration: Wama arsalnaka illa rahmatan lilAAalameena

Translation: (ಪ್ರವಾದಿಯವರೇ) ನಾವು ನಿಮ್ಮನ್ನು ಸರ್ವಲೋಕದವರಿಗೆ ಒಂದು ದಯೆಯಾಗಿಯೇ ಕಳುಹಿಸಿದ್ದೇವೆ.

21:108

قُلۡ إِنَّمَا يُوحَىٰٓ إِلَيَّ أَنَّمَآ إِلَٰهُكُمۡ إِلَٰهٞ وَٰحِدٞۖ فَهَلۡ أَنتُم مُّسۡلِمُونَ ﴿108﴾

Transliteration: Qul innama yooha ilayya annama ilahukum ilahun wahidun fahal antum muslimoona

Translation: ಹೇಳಿರಿ: “ನಿಮ್ಮ ದೇವನು ಏಕೈಕ ದೇವನೆಂದು ನನಗೆ ದೇವವಾಣಿ ನೀಡಲಾಗುತ್ತಿದೆ. ಇನ್ನಾದರೂ ನೀವು ಮುಸ್ಲಿಮರಾಗುವಿರಾ?”

21:109

فَإِن تَوَلَّوۡاْ فَقُلۡ ءَاذَنتُكُمۡ عَلَىٰ سَوَآءٖۖ وَإِنۡ أَدۡرِيٓ أَقَرِيبٌ أَم بَعِيدٞ مَّا تُوعَدُونَ ﴿109﴾

Transliteration: Fain tawallaw faqul athantukum AAala sawain wain adree aqareebun am baAAeedun ma tooAAadoona

Translation: ಅವರೇನಾದರೂ ಮುಖ ತಿರುಗಿಸಿ ನಡೆದರೆ ಹೇಳಿರಿ: “ನಾನು ನಿಮಗೆ ಸಮಾನ ರೂಪದಲ್ಲಿ ಎಚ್ಚರಿಸಿದ್ದೇನೆ.[1] ನಿಮಗೆ ವಾಗ್ದಾನ ಮಾಡಲಾಗಿರುವ ಸಂಗತಿಯು ಹತ್ತಿರದಲ್ಲಿದೆಯೋ ಅಥವಾ ವಿದೂರದಲ್ಲಿದೆಯೋ ಎಂದು ನನಗೆ ತಿಳಿದಿಲ್ಲ.

21:110

إِنَّهُۥ يَعۡلَمُ ٱلۡجَهۡرَ مِنَ ٱلۡقَوۡلِ وَيَعۡلَمُ مَا تَكۡتُمُونَ ﴿110﴾

Transliteration: Innahu yaAAlamu aljahra mina alqawli wayaAAlamu ma taktumoona

Translation: ನಿಶ್ಚಯವಾಗಿಯೂ ಅಲ್ಲಾಹು ಬಹಿರಂಗ ಮಾತುಗಳನ್ನು ತಿಳಿಯುತ್ತಾನೆ ಮತ್ತು ನೀವು ರಹಸ್ಯವಾಗಿಡುವುದನ್ನೂ ತಿಳಿಯುತ್ತಾನೆ.

21:111

وَإِنۡ أَدۡرِي لَعَلَّهُۥ فِتۡنَةٞ لَّكُمۡ وَمَتَٰعٌ إِلَىٰ حِينٖ ﴿111﴾

Transliteration: Wain adree laAAallahu fitnatun lakum wamataAAun ila heenin

Translation: ನನಗೆ ಗೊತ್ತಿಲ್ಲ! ಬಹುಶಃ ಅದು ನಿಮಗೆ ಒಂದು ಪರೀಕ್ಷೆ ಮತ್ತು ನಿಶ್ಚಿತ ಕಾಲದವರೆಗಿನ ಆನಂದವಾಗಿರಬಹುದು.”

21:112

قَٰلَ رَبِّ ٱحۡكُم بِٱلۡحَقِّۗ وَرَبُّنَا ٱلرَّحۡمَٰنُ ٱلۡمُسۡتَعَانُ عَلَىٰ مَا تَصِفُونَ ﴿112﴾

Transliteration: Qala rabbi ohkum bialhaqqi warabbuna alrrahmanu almustaAAanu AAala ma tasifoona

Translation: ಅವರು (ಪ್ರವಾದಿ) ಹೇಳಿದರು: “ನನ್ನ ಪರಿಪಾಲಕನೇ! ಸತ್ಯವಾಗಿ ತೀರ್ಪು ನೀಡು. ನಮ್ಮ ಪರಿಪಾಲಕನು (ಅಲ್ಲಾಹು) ಪರಮ ದಯಾಳುವಾಗಿದ್ದಾನೆ. ನೀವು ಸುಳ್ಳು ಸುಳ್ಳಾಗಿ ಆರೋಪಿಸುವ ಎಲ್ಲಾ ವಿಷಯಗಳ ಬಗ್ಗೆ ಸಹಾಯ ಬೇಡಲಾಗುವವನು ಅವನೇ.”

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download