quranm◉

Surah Al-Qamar transliteration

◉ ಸೂರಾ · ∞

54:1

ٱقۡتَرَبَتِ ٱلسَّاعَةُ وَٱنشَقَّ ٱلۡقَمَرُ ﴿1﴾

Transliteration: Iqtarabati alssaAAatu wainshaqqa alqamaru

Translation: ಅಂತ್ಯಸಮಯವು ಹತ್ತಿರವಾಗಿದೆ ಮತ್ತು ಚಂದ್ರ ಇಬ್ಭಾಗವಾಗಿದೆ.[1]

54:2

وَإِن يَرَوۡاْ ءَايَةٗ يُعۡرِضُواْ وَيَقُولُواْ سِحۡرٞ مُّسۡتَمِرّٞ ﴿2﴾

Transliteration: Wain yaraw ayatan yuAAridoo wayaqooloo sihrun mustamirrun

Translation: ಅವರು ಯಾವುದೇ ದೃಷ್ಟಾಂತವನ್ನು ನೋಡಿದರೂ ವಿಮುಖರಾಗುತ್ತಾರೆ ಮತ್ತು “ಇದು ಹಿಂದಿನಿಂದಲೇ ನಡೆದು ಬರುತ್ತಿರುವ ಮಾಟಗಾರಿಕೆ” ಎಂದು ಹೇಳುತ್ತಾರೆ.

54:3

وَكَذَّبُواْ وَٱتَّبَعُوٓاْ أَهۡوَآءَهُمۡۚ وَكُلُّ أَمۡرٖ مُّسۡتَقِرّٞ ﴿3﴾

Transliteration: Wakaththaboo waittabaAAoo ahwaahum wakullu amrin mustaqirrun

Translation: ಅವರು ನಿಷೇಧಿಸಿದರು ಮತ್ತು ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಎಲ್ಲಾ ವಿಷಯಗಳಿಗೂ ಒಂದು ನಿಶ್ಚಿತ ಸಮಯವನ್ನು ನಿರ್ಣಯಿಸಲಾಗಿದೆ.

54:4

وَلَقَدۡ جَآءَهُم مِّنَ ٱلۡأَنۢبَآءِ مَا فِيهِ مُزۡدَجَرٌ ﴿4﴾

Transliteration: Walaqad jaahum mina alanbai ma feehi muzdajarun

Translation: ನಿಶ್ಚಯವಾಗಿಯೂ ಅವರ ಬಳಿಗೆ ಗದರಿಕೆಯ (ಉಪದೇಶವಿರುವ) ಸಮಾಚಾರಗಳು ಬಂದಿವೆ.

54:5

حِكۡمَةُۢ بَٰلِغَةٞۖ فَمَا تُغۡنِ ٱلنُّذُرُ ﴿5﴾

Transliteration: Hikmatun balighatun fama tughnee alnnuthuru

Translation: ಪೂರ್ಣರೂಪದ ವಿವೇಕಯುಕ್ತ ಮಾತುಗಳು. ಆದರೂ ಆ ಮುನ್ನೆಚ್ಚರಿಕೆಗಳು ಪ್ರಯೋಜನ ನೀಡಲಿಲ್ಲ.

54:6

فَتَوَلَّ عَنۡهُمۡۘ يَوۡمَ يَدۡعُ ٱلدَّاعِ إِلَىٰ شَيۡءٖ نُّكُرٍ ﴿6﴾

Transliteration: Fatawalla AAanhum yawma yadAAu alddaAAi ila shayin nukurin

Translation: ಆದ್ದರಿಂದ (ಪ್ರವಾದಿಯವರೇ!) ನೀವು ಅವರಿಂದ ವಿಮುಖರಾಗಿ ಬಿಡಿ. ಕರೆ ನೀಡುವವನು ಅನಿಷ್ಟಕರ ವಿಷಯದ ಕಡೆಗೆ ಕರೆ ನೀಡುವ ದಿನ.

54:7

خُشَّعًا أَبۡصَٰرُهُمۡ يَخۡرُجُونَ مِنَ ٱلۡأَجۡدَاثِ كَأَنَّهُمۡ جَرَادٞ مُّنتَشِرٞ ﴿7﴾

Transliteration: KhushshaAAan absaruhum yakhrujoona mina alajdathi kaannahum jaradun muntashirun

Translation: ಅವರ ಕಣ್ಣುಗಳು ವಿನಮ್ರವಾಗಿರುವುವು. ದಿಕ್ಕೆಟ್ಟು ಹಾರಾಡುವ ಮಿಡತೆಗಳಂತೆ ಅವರು ಸಮಾಧಿಗಳಿಂದ ಹೊರಬರುವರು.

54:8

مُّهۡطِعِينَ إِلَى ٱلدَّاعِۖ يَقُولُ ٱلۡكَٰفِرُونَ هَٰذَا يَوۡمٌ عَسِرٞ ﴿8﴾

Transliteration: MuhtiAAeena ila alddaAAi yaqoolu alkafiroona hatha yawmun AAasirun

Translation: ಅವರು ಕರೆ ನೀಡುವವನ ಕಡೆಗೆ ಆತುರದಿಂದ ಓಡುವರು. ಸತ್ಯನಿಷೇಧಿಗಳು ಹೇಳುವರು: “ಇದು ಕಠೋರ ದಿನವಾಗಿದೆ.”

54:9

كَذَّبَتۡ قَبۡلَهُمۡ قَوۡمُ نُوحٖ فَكَذَّبُواْ عَبۡدَنَا وَقَالُواْ مَجۡنُونٞ وَٱزۡدُجِرَ ﴿9﴾

Transliteration: Kaththabat qablahum qawmu noohin fakaththaboo AAabdana waqaloo majnoonun waizdujira

Translation: ಅವರಿಗಿಂತ ಮೊದಲು ನೂಹರ ಜನರು ನಿಷೇಧಿಸಿದ್ದರು. ಅವರು ನಮ್ಮ ದಾಸನನ್ನು ನಿಷೇಧಿಸಿದರು. ಮಾನಸಿಕ ಅಸ್ವಸ್ಥ ಎಂದು ಜರೆಯುತ್ತಾ ಅವರನ್ನು ಗದರಿಸಿದರು.

54:10

فَدَعَا رَبَّهُۥٓ أَنِّي مَغۡلُوبٞ فَٱنتَصِرۡ ﴿10﴾

Transliteration: FadaAAa rabbahu annee maghloobun faintasir

Translation: ಆಗ ನೂಹ್ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು: “ನಾನು ಅಸಹಾಯಕನಾಗಿದ್ದೇನೆ. ನನಗೆ ಸಹಾಯ ಮಾಡು.”

54:11

فَفَتَحۡنَآ أَبۡوَٰبَ ٱلسَّمَآءِ بِمَآءٖ مُّنۡهَمِرٖ ﴿11﴾

Transliteration: Fafatahna abwaba alssamai bimain munhamirin

Translation: ಆಗ ರಭಸವಾಗಿ ಸುರಿಯುವ ಮಳೆಗಾಗಿ ನಾವು ಆಕಾಶದ್ವಾರಗಳನ್ನು ತೆರೆದೆವು.

54:12

وَفَجَّرۡنَا ٱلۡأَرۡضَ عُيُونٗا فَٱلۡتَقَى ٱلۡمَآءُ عَلَىٰٓ أَمۡرٖ قَدۡ قُدِرَ ﴿12﴾

Transliteration: Wafajjarna alarda AAuyoonan failtaqa almao AAala amrin qad qudira

Translation: ನಾವು ಭೂಮಿಯಲ್ಲಿ ಒರತೆಗಳನ್ನು ಚಿಮ್ಮುವಂತೆ ಮಾಡಿದೆವು. ಈಗಾಗಲೇ ನಿರ್ಣಯಿಸಿದ ವಿಷಯಕ್ಕಾಗಿ (ಆಕಾಶ ಮತ್ತು ಭೂಮಿಯ) ನೀರು ಸಂಗಮವಾಯಿತು.

54:13

وَحَمَلۡنَٰهُ عَلَىٰ ذَاتِ أَلۡوَٰحٖ وَدُسُرٖ ﴿13﴾

Transliteration: Wahamalnahu AAala thati alwahin wadusurin

Translation: ನಾವು ಅವರನ್ನು ಹಲಗೆಗಳು ಮತ್ತು ಮೊಳೆಗಳಿಂದ (ನಿರ್ಮಿಸಿದ ಹಡಗಿನಲ್ಲಿ) ಒಯ್ದೆವು.

54:14

تَجۡرِي بِأَعۡيُنِنَا جَزَآءٗ لِّمَن كَانَ كُفِرَ ﴿14﴾

Transliteration: Tajree biaAAyunina jazaan liman kana kufira

Translation: ಅದು ನಮ್ಮ ಕಣ್ಣುಗಳ ಮುಂಭಾಗದಲ್ಲಿ ಚಲಿಸುತ್ತಿತ್ತು. ಯಾರನ್ನು ನಿಷೇಧಿಸಲಾಯಿತೋ ಅವರಿಗೆ (ನೂಹರಿಗೆ) ಪ್ರತಿಫಲವಾಗಿ.

54:15

وَلَقَد تَّرَكۡنَٰهَآ ءَايَةٗ فَهَلۡ مِن مُّدَّكِرٖ ﴿15﴾

Transliteration: Walaqad taraknaha ayatan fahal min muddakirin

Translation: ನಿಶ್ಚಯವಾಗಿಯೂ ನಾವು ಆ ಘಟನೆಯನ್ನು ಒಂದು ದೃಷ್ಟಾಂತವಾಗಿ ಉಳಿಸಿದೆವು. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?

54:16

فَكَيۡفَ كَانَ عَذَابِي وَنُذُرِ ﴿16﴾

Transliteration: Fakayfa kana AAathabee wanuthuri

Translation: ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು (ಎಂದು ಹೇಳಿರಿ).

54:17

وَلَقَدۡ يَسَّرۡنَا ٱلۡقُرۡءَانَ لِلذِّكۡرِ فَهَلۡ مِن مُّدَّكِرٖ ﴿17﴾

Transliteration: Walaqad yassarna alqurana lilththikri fahal min muddakirin

Translation: ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?

54:18

كَذَّبَتۡ عَادٞ فَكَيۡفَ كَانَ عَذَابِي وَنُذُرِ ﴿18﴾

Transliteration: Kaththabat AAadun fakayfa kana AAathabee wanuthuri

Translation: ಆದ್ ಗೋತ್ರದವರು ನಿಷೇಧಿಸಿದರು. ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು?

54:19

إِنَّآ أَرۡسَلۡنَا عَلَيۡهِمۡ رِيحٗا صَرۡصَرٗا فِي يَوۡمِ نَحۡسٖ مُّسۡتَمِرّٖ ﴿19﴾

Transliteration: Inna arsalna AAalayhim reehan sarsaran fee yawmi nahsin mustamirrin

Translation: ನಿಶ್ಚಯವಾಗಿಯೂ ನಾವು ನಿರಂತರವಾಗಿ ಬೀಸುವ ಭೀಕರ ಚಳಿಗಾಳಿಯನ್ನು ಅಶುಭ ದಿನಗಳಲ್ಲಿ ಅವರ ಕಡೆಗೆ ಕಳುಹಿಸಿದೆವು.

54:20

تَنزِعُ ٱلنَّاسَ كَأَنَّهُمۡ أَعۡجَازُ نَخۡلٖ مُّنقَعِرٖ ﴿20﴾

Transliteration: TanziAAu alnnasa kaannahum aAAjazu nakhlin munqaAAirin

Translation: ಅದು ಮನುಷ್ಯರನ್ನು ಎತ್ತಿ ಎಸೆಯುತ್ತಿತ್ತು. ಅವರು ಬುಡಸಮೇತ ಕೀಳಲಾದ ಖರ್ಜೂರ ಮರದ ಕಾಂಡಗಳೋ ಎಂಬಂತೆ.

54:21

فَكَيۡفَ كَانَ عَذَابِي وَنُذُرِ ﴿21﴾

Transliteration: Fakayfa kana AAathabee wanuthuri

Translation: ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು?

54:22

وَلَقَدۡ يَسَّرۡنَا ٱلۡقُرۡءَانَ لِلذِّكۡرِ فَهَلۡ مِن مُّدَّكِرٖ ﴿22﴾

Transliteration: Walaqad yassarna alqurana lilththikri fahal min muddakirin

Translation: ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?

54:23

كَذَّبَتۡ ثَمُودُ بِٱلنُّذُرِ ﴿23﴾

Transliteration: Kaththabat thamoodu bialnnuthuri

Translation: ಸಮೂದ್ ಗೋತ್ರದವರು ಎಚ್ಚರಿಕೆಗಳನ್ನು ನಿಷೇಧಿಸಿದರು.

54:24

فَقَالُوٓاْ أَبَشَرٗا مِّنَّا وَٰحِدٗا نَّتَّبِعُهُۥٓ إِنَّآ إِذٗا لَّفِي ضَلَٰلٖ وَسُعُرٍ ﴿24﴾

Transliteration: Faqaloo abasharan minna wahidan nattabiAAuhu inna ithan lafee dalalin wasuAAurin

Translation: ಅವರು ಹೇಳಿದರು: “ನಮ್ಮವರಲ್ಲೇ ಸೇರಿದ ಒಬ್ಬನನ್ನು ನಾವು ಅನುಸರಿಸಬೇಕೇ? ಹಾಗೇನಾದರೂ ಆದರೆ ನಿಶ್ಚಯವಾಗಿಯೂ ನಾವು ಪ್ರಮಾದದಲ್ಲಿ ಬೀಳುವೆವು ಮತ್ತು ಮತಿಯಿಲ್ಲದವರಾಗಿ ಬಿಡುವೆವು.

54:25

أَءُلۡقِيَ ٱلذِّكۡرُ عَلَيۡهِ مِنۢ بَيۡنِنَا بَلۡ هُوَ كَذَّابٌ أَشِرٞ ﴿25﴾

Transliteration: Aolqiya alththikru AAalayhi min baynina bal huwa kaththabun ashirun

Translation: ನಮ್ಮ ನಡುವೆ ಅವನಿಗೆ ಮಾತ್ರ ದೇವವಾಣಿ ನೀಡಲಾಗುತ್ತಿದೆಯೇ? ಅಲ್ಲ, ವಾಸ್ತವವಾಗಿ ಅವನು ಸುಳ್ಳುಗಾರ ಮತ್ತು ಅಹಂಭಾವಿಯಾಗಿದ್ದಾನೆ.”

54:26

سَيَعۡلَمُونَ غَدٗا مَّنِ ٱلۡكَذَّابُ ٱلۡأَشِرُ ﴿26﴾

Transliteration: SayaAAlamoona ghadan mani alkaththabu alashiru

Translation: ಸುಳ್ಳುಗಾರ ಮತ್ತು ಅಹಂಭಾವಿ ಯಾರೆಂದು ಅವರು ನಾಳೆ ತಿಳಿಯುವರು.

54:27

إِنَّا مُرۡسِلُواْ ٱلنَّاقَةِ فِتۡنَةٗ لَّهُمۡ فَٱرۡتَقِبۡهُمۡ وَٱصۡطَبِرۡ ﴿27﴾

Transliteration: Inna mursiloo alnnaqati fitnatan lahum fairtaqibhum waistabir

Translation: ನಿಶ್ಚಯವಾಗಿಯೂ ನಾವು ಅವರಿಗೆ ಪರೀಕ್ಷೆಯಾಗಿ ಒಂದು ಒಂಟೆಯನ್ನು ಕಳುಹಿಸುವೆವು. (ಓ ಸ್ವಾಲಿಹ್) ನೀವು ಅವರನ್ನು ಗಮನಿಸುತ್ತಿರಿ ಮತ್ತು ತಾಳ್ಮೆಯಿಂದಿರಿ.

54:28

وَنَبِّئۡهُمۡ أَنَّ ٱلۡمَآءَ قِسۡمَةُۢ بَيۡنَهُمۡۖ كُلُّ شِرۡبٖ مُّحۡتَضَرٞ ﴿28﴾

Transliteration: Wanabbihum anna almaa qismatun baynahum kullu shirbin muhtadarun

Translation: ನೀರನ್ನು ಅವರ ಮಧ್ಯೆ (ಅವರಿಗೆ ಮತ್ತು ಒಂಟೆಗೆ) ಪಾಲು ಮಾಡಲಾಗಿದೆಯೆಂದು ಅವರಿಗೆ ತಿಳಿಸಿರಿ. ಪ್ರತಿಯೊಬ್ಬರೂ ತಮ್ಮ ಸರದಿ ಬಂದಾಗ ಉಪಸ್ಥಿತರಾಗಲಿ.

54:29

فَنَادَوۡاْ صَاحِبَهُمۡ فَتَعَاطَىٰ فَعَقَرَ ﴿29﴾

Transliteration: Fanadaw sahibahum fataAAata faAAaqara

Translation: ಆದರೆ ಅವರು ಅವರ ಗೆಳೆಯನನ್ನು ಕರೆದರು. ಅವನು ಆ ಒಂಟೆಯನ್ನು ಹಿಡಿದು ಅದರ ಕಾಲುಗಳನ್ನು ಕತ್ತರಿಸಿದನು.

54:30

فَكَيۡفَ كَانَ عَذَابِي وَنُذُرِ ﴿30﴾

Transliteration: Fakayfa kana AAathabee wanuthuri

Translation: ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು?

54:31

إِنَّآ أَرۡسَلۡنَا عَلَيۡهِمۡ صَيۡحَةٗ وَٰحِدَةٗ فَكَانُواْ كَهَشِيمِ ٱلۡمُحۡتَظِرِ ﴿31﴾

Transliteration: Inna arsalna AAalayhim sayhatan wahidatan fakanoo kahasheemi almuhtathiri

Translation: ನಾವು ಅವರ ಮೇಲೆ ಒಂದೇ ಚೀತ್ಕಾರವನ್ನು ಕಳುಹಿಸಿದೆವು. ಆಗ ಅವರು ಹಟ್ಟಿ ನಿರ್ಮಿಸುವವನು ಎಸೆದ ಹುಲ್ಲಿನಂತಾಗಿ ಬಿಟ್ಟರು.

54:32

وَلَقَدۡ يَسَّرۡنَا ٱلۡقُرۡءَانَ لِلذِّكۡرِ فَهَلۡ مِن مُّدَّكِرٖ ﴿32﴾

Transliteration: Walaqad yassarna alqurana lilththikri fahal min muddakirin

Translation: ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?

54:33

كَذَّبَتۡ قَوۡمُ لُوطِۭ بِٱلنُّذُرِ ﴿33﴾

Transliteration: Kaththabat qawmu lootin bialnnuthuri

Translation: ಲೂತ‌ರ ಜನರು ಎಚ್ಚರಿಕೆಗಳನ್ನು ನಿಷೇಧಿಸಿದರು.

54:34

إِنَّآ أَرۡسَلۡنَا عَلَيۡهِمۡ حَاصِبًا إِلَّآ ءَالَ لُوطٖۖ نَّجَّيۡنَٰهُم بِسَحَرٖ ﴿34﴾

Transliteration: Inna arsalna AAalayhim hasiban illa ala lootin najjaynahum bisaharin

Translation: ನಿಶ್ಚಯವಾಗಿಯೂ ನಾವು ಅವರ ಮೇಲೆ ಕಲ್ಲುಗಳ ಬಿರುಗಾಳಿಯನ್ನು ಕಳುಹಿಸಿದೆವು. ಲೂತ‌ರ ಕುಟುಂಬದ ಹೊರತು. ನಾವು ಅವರನ್ನು ಸಹರಿಯ ವೇಳೆಯಲ್ಲಿ (ರಾತ್ರಿಯ ಕೊನೆಯ ಸಮಯ) ರಕ್ಷಿಸಿದೆವು.

54:35

نِّعۡمَةٗ مِّنۡ عِندِنَاۚ كَذَٰلِكَ نَجۡزِي مَن شَكَرَ ﴿35﴾

Transliteration: NiAAmatan min AAindina kathalika najzee man shakara

Translation: ನಮ್ಮ ಕಡೆಯ ಒಂದು ಉಪಕಾರವಾಗಿ. ಕೃತಜ್ಞರಾಗಿರುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು.

54:36

وَلَقَدۡ أَنذَرَهُم بَطۡشَتَنَا فَتَمَارَوۡاْ بِٱلنُّذُرِ ﴿36﴾

Transliteration: Walaqad antharahum batshatana fatamaraw bialnnuthuri

Translation: ನಮ್ಮ ಹಿಡಿತದ ಬಗ್ಗೆ ಅವರು (ಲೂತ್) ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅವರು ಆ ಎಚ್ಚರಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

54:37

وَلَقَدۡ رَٰوَدُوهُ عَن ضَيۡفِهِۦ فَطَمَسۡنَآ أَعۡيُنَهُمۡ فَذُوقُواْ عَذَابِي وَنُذُرِ ﴿37﴾

Transliteration: Walaqad rawadoohu AAan dayfihi fatamasna aAAyunahum fathooqoo AAathabee wanuthuri

Translation: ಅವರು ಲೂತರನ್ನು ಅವರ ಅತಿಥಿಗಳ ವಿಷಯದಲ್ಲಿ ಪುಸಲಾಯಿಸಿದರು. ಆಗ ನಾವು ಅವರ ಕಣ್ಣುಗಳನ್ನು ಕುರುಡಾಗಿಸಿದೆವು. (ನಾವು ಹೇಳಿದೆವು): “ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳ ರುಚಿಯನ್ನು ನೋಡಿರಿ.”

54:38

وَلَقَدۡ صَبَّحَهُم بُكۡرَةً عَذَابٞ مُّسۡتَقِرّٞ ﴿38﴾

Transliteration: Walaqad sabbahahum bukratan AAathabun mustaqirrun

Translation: ಮುಂಜಾನೆಯೇ ಅವರನ್ನು ಒಂದೇ ಸ್ಥಳದಲ್ಲಿ ಹಿಡಿದಿಡುವ ಶಿಕ್ಷೆಯು ಅವರ ಮೇಲೆರಗಿಬಿಟ್ಟಿತು.

54:39

فَذُوقُواْ عَذَابِي وَنُذُرِ ﴿39﴾

Transliteration: Fathooqoo AAathabee wanuthuri

Translation: (ನಾವು ಹೇಳಿದೆವು): “ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳ ರುಚಿಯನ್ನು ನೋಡಿರಿ.”

54:40

وَلَقَدۡ يَسَّرۡنَا ٱلۡقُرۡءَانَ لِلذِّكۡرِ فَهَلۡ مِن مُّدَّكِرٖ ﴿40﴾

Transliteration: Walaqad yassarna alqurana lilththikri fahal min muddakirin

Translation: ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?

54:41

وَلَقَدۡ جَآءَ ءَالَ فِرۡعَوۡنَ ٱلنُّذُرُ ﴿41﴾

Transliteration: Walaqad jaa ala firAAawna alnnuthuru

Translation: ಫರೋಹನ ಜನರಿಗೂ ಎಚ್ಚರಿಕೆಗಳು ಬಂದಿದ್ದವು.

54:42

كَذَّبُواْ بِـَٔايَٰتِنَا كُلِّهَا فَأَخَذۡنَٰهُمۡ أَخۡذَ عَزِيزٖ مُّقۡتَدِرٍ ﴿42﴾

Transliteration: Kaththaboo biayatina kulliha faakhathnahum akhtha AAazeezin muqtadirin

Translation: ಅವರು ನಮ್ಮ ದೃಷ್ಟಾಂತಗಳೆಲ್ಲವನ್ನೂ ನಿಷೇಧಿಸಿದರು. ಆಗ ನಾವು ಮಹಾ ಪ್ರಬಲನು ಮತ್ತು ಶಕ್ತಿವಂತನು ಹಿಡಿಯುವಂತೆ ಅವರನ್ನು ಹಿಡಿದೆವು.

54:43

أَكُفَّارُكُمۡ خَيۡرٞ مِّنۡ أُوْلَـٰٓئِكُمۡ أَمۡ لَكُم بَرَآءَةٞ فِي ٱلزُّبُرِ ﴿43﴾

Transliteration: Akuffarukum khayrun min olaikum am lakum baraatun fee alzzuburi

Translation: (ಓ ಕುರೈಶರೇ) ನಿಮ್ಮ ಸತ್ಯನಿಷೇಧಿಗಳು ಇವರಿಗಿಂತ ಒಳ್ಳೆಯವರೇ? ಅಥವಾ ನಿಮಗೆ ಪೂರ್ವ ಗ್ರಂಥಗಳಲ್ಲಿ ವಿನಾಯಿತಿ ನಿಶ್ಚಯಿಸಲಾಗಿದೆಯೇ?

54:44

أَمۡ يَقُولُونَ نَحۡنُ جَمِيعٞ مُّنتَصِرٞ ﴿44﴾

Transliteration: Am yaqooloona nahnu jameeAAun muntasirun

Translation: ಅಥವಾ, “ನಾವು ಗೆಲ್ಲುವ ಸಂಘವಾಗಿದ್ದೇವೆ” ಎಂದು ಅವರು ಹೇಳುತ್ತಿದ್ದಾರೆಯೇ?

54:45

سَيُهۡزَمُ ٱلۡجَمۡعُ وَيُوَلُّونَ ٱلدُّبُرَ ﴿45﴾

Transliteration: Sayuhzamu aljamAAu wayuwalloona alddubura

Translation: ಅವರ ಸಂಘವು ಸದ್ಯವೇ ಪರಾಭವಗೊಳ್ಳಲಿದೆ ಮತ್ತು ಅವರು ಬೆನ್ನು ತೋರಿಸಿ ಓಡಲಿದ್ದಾರೆ.

54:46

بَلِ ٱلسَّاعَةُ مَوۡعِدُهُمۡ وَٱلسَّاعَةُ أَدۡهَىٰ وَأَمَرُّ ﴿46﴾

Transliteration: Bali alssaAAatu mawAAiduhum waalssaAAatu adha waamarru

Translation: ಅಲ್ಲ, ಅಂತ್ಯಸಮಯವು (ಪುನರುತ್ಥಾನ ದಿನವು) ಅವರಿಗೆ ವಾಗ್ದಾನ ಮಾಡಲಾದ ಸಮಯವಾಗಿದೆ. ಅಂತ್ಯಸಮಯವು ಅತ್ಯಂತ ಕಠೋರ ಮತ್ತು ಅತ್ಯಂತ ಕಹಿಯಾಗಿದೆ.

54:47

إِنَّ ٱلۡمُجۡرِمِينَ فِي ضَلَٰلٖ وَسُعُرٖ ﴿47﴾

Transliteration: Inna almujrimeena fee dalalin wasuAAurin

Translation: ನಿಶ್ಚಯವಾಗಿಯೂ ಅಪರಾಧಿಗಳು ದುರ್ಮಾರ್ಗದಲ್ಲಿ ಮತ್ತು ಶಿಕ್ಷೆಯಲ್ಲಿದ್ದಾರೆ.

54:48

يَوۡمَ يُسۡحَبُونَ فِي ٱلنَّارِ عَلَىٰ وُجُوهِهِمۡ ذُوقُواْ مَسَّ سَقَرَ ﴿48﴾

Transliteration: Yawma yushaboona fee alnnari AAala wujoohihim thooqoo massa saqara

Translation: ಅವರನ್ನು ಅವರ ಮುಖದ ಮೇಲೆ ನರಕಾಗ್ನಿಯಲ್ಲಿ ಎಳೆದೊಯ್ಯಲಾಗುವ ದಿನ! (ಅವರೊಡನೆ ಹೇಳಲಾಗುವುದು): “ನೀವು ನರಕ ಸ್ಪರ್ಶದ ರುಚಿಯನ್ನು ನೋಡಿರಿ.”

54:49

إِنَّا كُلَّ شَيۡءٍ خَلَقۡنَٰهُ بِقَدَرٖ ﴿49﴾

Transliteration: Inna kulla shayin khalaqnahu biqadarin

Translation: ನಿಶ್ಚಯವಾಗಿಯೂ ನಾವು ಎಲ್ಲಾ ವಸ್ತುಗಳನ್ನು ಒಂದು (ನಿಶ್ಚಿತ) ನಿರ್ಣಯದಂತೆ ಸೃಷ್ಟಿಸಿದ್ದೇವೆ.

54:50

وَمَآ أَمۡرُنَآ إِلَّا وَٰحِدَةٞ كَلَمۡحِۭ بِٱلۡبَصَرِ ﴿50﴾

Transliteration: Wama amruna illa wahidatun kalamhin bialbasari

Translation: ನಮ್ಮ ಆಜ್ಞೆಯು ಕಣ್ಣೆವೆಯಿಕ್ಕುವಂತೆ ಒಂದು ಮಾತು ಮಾತ್ರವಾಗಿದೆ.

54:51

وَلَقَدۡ أَهۡلَكۡنَآ أَشۡيَاعَكُمۡ فَهَلۡ مِن مُّدَّكِرٖ ﴿51﴾

Transliteration: Walaqad ahlakna ashyaAAakum fahal min muddakirin

Translation: ನಾವು ನಿಮ್ಮಂತಹ ಅನೇಕರನ್ನು ನಾಶ ಮಾಡಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?

54:52

وَكُلُّ شَيۡءٖ فَعَلُوهُ فِي ٱلزُّبُرِ ﴿52﴾

Transliteration: Wakullu shayin faAAaloohu fee alzzuburi

Translation: ಅವರು ಮಾಡಿದ ಕರ್ಮಗಳೆಲ್ಲವೂ ಕರ್ಮಪುಸ್ತಕಗಳಲ್ಲಿವೆ.

54:53

وَكُلُّ صَغِيرٖ وَكَبِيرٖ مُّسۡتَطَرٌ ﴿53﴾

Transliteration: Wakullu sagheerin wakabeerin mustatarun

Translation: ಚಿಕ್ಕ ಮತ್ತು ದೊಡ್ಡದಾದ ಎಲ್ಲವನ್ನೂ ನಮೂದಿಸಲಾಗಿದೆ.

54:54

إِنَّ ٱلۡمُتَّقِينَ فِي جَنَّـٰتٖ وَنَهَرٖ ﴿54﴾

Transliteration: Inna almuttaqeena fee jannatin wanaharin

Translation: ನಿಶ್ಚಯವಾಗಿಯೂ ದೇವಭಯವುಳ್ಳವರು ಸ್ವರ್ಗೋದ್ಯಾನಗಳಲ್ಲಿ ಮತ್ತು ನದಿಗಳಲ್ಲಿರುವರು.

54:55

فِي مَقۡعَدِ صِدۡقٍ عِندَ مَلِيكٖ مُّقۡتَدِرِۭ ﴿55﴾

Transliteration: Fee maqAAadi sidqin AAinda maleekin muqtadirin

Translation: ಗೌರವದ ಆಸನದಲ್ಲಿ, ಬಲಿಷ್ಠ ಸಾಮ್ರಾಟನ ಬಳಿಯಲ್ಲಿ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download