quranm◉

Surah Al-Insan transliteration

◉ ಸೂರಾ · ∞

76:1

هَلۡ أَتَىٰ عَلَى ٱلۡإِنسَٰنِ حِينٞ مِّنَ ٱلدَّهۡرِ لَمۡ يَكُن شَيۡـٔٗا مَّذۡكُورًا ﴿1﴾

Transliteration: Hal ata AAala alinsani heenun mina alddahri lam yakun shayan mathkooran

Translation: ಮನುಷ್ಯನು ಪ್ರಸ್ತಾಪಯೋಗ್ಯವೇ ಆಗಿರದಿದ್ದ ಒಂದು ಕಾಲವು ಅವನ ಮೇಲೆ ಕಳೆದುಹೋಗಿಲ್ಲವೇ?

76:2

إِنَّا خَلَقۡنَا ٱلۡإِنسَٰنَ مِن نُّطۡفَةٍ أَمۡشَاجٖ نَّبۡتَلِيهِ فَجَعَلۡنَٰهُ سَمِيعَۢا بَصِيرًا ﴿2﴾

Transliteration: Inna khalaqna alinsana min nutfatin amshajin nabtaleehi fajaAAalnahu sameeAAan baseeran

Translation: ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಸಮ್ಮಿಶ್ರ ವೀರ್ಯದಿಂದ ಸೃಷ್ಟಿಸಿದೆವು. ಅವನನ್ನು ಪರೀಕ್ಷಿಸುವುದಕ್ಕಾಗಿ. ನಾವು ಅವನನ್ನು ಕೇಳುವವನಾಗಿ ಮತ್ತು ನೋಡುವವನಾಗಿ ಮಾಡಿದೆವು.

76:3

إِنَّا هَدَيۡنَٰهُ ٱلسَّبِيلَ إِمَّا شَاكِرٗا وَإِمَّا كَفُورًا ﴿3﴾

Transliteration: Inna hadaynahu alssabeela imma shakiran waimma kafooran

Translation: ನಿಶ್ಚಯವಾಗಿಯೂ ನಾವು ಅವನಿಗೆ ಮಾರ್ಗವನ್ನು ತೋರಿಸಿದೆವು. ಅವನು ಒಂದೋ ಕೃತಜ್ಞನಾಗಲೆಂದು ಅಥವಾ ಕೃತಘ್ನನಾಗಲೆಂದು.

76:4

إِنَّآ أَعۡتَدۡنَا لِلۡكَٰفِرِينَ سَلَٰسِلَاْ وَأَغۡلَٰلٗا وَسَعِيرًا ﴿4﴾

Transliteration: Inna aAAtadna lilkafireena salasila waaghlalan wasaAAeeran

Translation: ನಿಶ್ಚಯವಾಗಿಯೂ ನಾವು ಸತ್ಯನಿಷೇಧಿಗಳಿಗೆ ಸಂಕೋಲೆಗಳನ್ನು, ಬೇಡಿಗಳನ್ನು ಮತ್ತು ಜ್ವಲಿಸುವ ನರಕವನ್ನು ಸಿದ್ಧಗೊಳಿಸಿದ್ದೇವೆ.

76:5

إِنَّ ٱلۡأَبۡرَارَ يَشۡرَبُونَ مِن كَأۡسٖ كَانَ مِزَاجُهَا كَافُورًا ﴿5﴾

Transliteration: Inna alabrara yashraboona min kasin kana mizajuha kafooran

Translation: ನಿಶ್ಚಯವಾಗಿಯೂ ನೀತಿವಂತರು ಒಂದು ಲೋಟದಿಂದ ಕುಡಿಯುವರು. ಅದರ ಮಿಶ್ರಣವು ಕರ್ಪೂರವಾಗಿರುವುದು.

76:6

عَيۡنٗا يَشۡرَبُ بِهَا عِبَادُ ٱللَّهِ يُفَجِّرُونَهَا تَفۡجِيرٗا ﴿6﴾

Transliteration: AAaynan yashrabu biha AAibadu Allahi yufajjiroonaha tafjeeran

Translation: ಅದೊಂದು ಚಿಲುಮೆಯ ನೀರಾಗಿದೆ. ಅಲ್ಲಾಹನ ದಾಸರು ಅದರಿಂದ ಕುಡಿಯುವರು. ಅವರು (ಬಯಸಿದ ಸ್ಥಳದಲ್ಲಿ) ಅದನ್ನು ಚಿಮ್ಮಿ ಹರಿಯುವಂತೆ ಮಾಡುವರು.

76:7

يُوفُونَ بِٱلنَّذۡرِ وَيَخَافُونَ يَوۡمٗا كَانَ شَرُّهُۥ مُسۡتَطِيرٗا ﴿7﴾

Transliteration: Yoofoona bialnnathri wayakhafoona yawman kana sharruhu mustateeran

Translation: ಅವರು (ಅಲ್ಲಾಹನ ದಾಸರು) ಯಾರೆಂದರೆ, ಹರಕೆಗಳನ್ನು ಈಡೇರಿಸುವವರು ಮತ್ತು ನಾಲ್ಕೂ ಕಡೆ ಕೆಡುಕು ಹರಡುವ ಒಂದು ದಿನವನ್ನು ಭಯಪಡುವವರು.

76:8

وَيُطۡعِمُونَ ٱلطَّعَامَ عَلَىٰ حُبِّهِۦ مِسۡكِينٗا وَيَتِيمٗا وَأَسِيرًا ﴿8﴾

Transliteration: WayutAAimona alttaAAama AAala hubbihi miskeenan wayateeman waaseeran

Translation: ಅವರು ಆಹಾರದ ಮೇಲೆ ಪ್ರೀತಿಯಿದ್ದೂ ಸಹ ಅದನ್ನು ಬಡವರಿಗೆ, ಅನಾಥರಿಗೆ ಮತ್ತು ಖೈದಿಗಳಿಗೆ ನೀಡುವವರು.

76:9

إِنَّمَا نُطۡعِمُكُمۡ لِوَجۡهِ ٱللَّهِ لَا نُرِيدُ مِنكُمۡ جَزَآءٗ وَلَا شُكُورًا ﴿9﴾

Transliteration: Innama nutAAimukum liwajhi Allahi la nureedu minkum jazaan wala shukooran

Translation: (ಅವರು ಹೇಳುತ್ತಾರೆ): “ನಾವು ನಿಮಗೆ ಆಹಾರ ನೀಡುವುದು ಅಲ್ಲಾಹನ ಸಂಪ್ರೀತಿಗಾಗಿ ಮಾತ್ರ. ನಾವು ನಿಮ್ಮಿಂದ ಯಾವುದೇ ಪ್ರತಿಫಲ ಅಥವಾ ಕೃತಜ್ಞತೆಯನ್ನು ಬಯಸುವುದಿಲ್ಲ.

76:10

إِنَّا نَخَافُ مِن رَّبِّنَا يَوۡمًا عَبُوسٗا قَمۡطَرِيرٗا ﴿10﴾

Transliteration: Inna nakhafu min rabbina yawman AAaboosan qamtareeran

Translation: ನಾವು ನಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಆ ಕಠೋರ ಮತ್ತು ಆತಂಕಕಾರಿ ದಿನವನ್ನು ಭಯಪಡುತ್ತೇವೆ.”

76:11

فَوَقَىٰهُمُ ٱللَّهُ شَرَّ ذَٰلِكَ ٱلۡيَوۡمِ وَلَقَّىٰهُمۡ نَضۡرَةٗ وَسُرُورٗا ﴿11﴾

Transliteration: Fawaqahumu Allahu sharra thalika alyawmi walaqqahum nadratan wasurooran

Translation: ಆದ್ದರಿಂದ ಅಲ್ಲಾಹು ಅವರನ್ನು ಆ ದಿನದ ಕೆಡುಕಿನಿಂದ ಕಾಪಾಡುವನು ಮತ್ತು ಅವರಿಗೆ ತಾಜಾತನ ಹಾಗೂ ಸಂತೋಷವನ್ನು ದಯಪಾಲಿಸುವನು.

76:12

وَجَزَىٰهُم بِمَا صَبَرُواْ جَنَّةٗ وَحَرِيرٗا ﴿12﴾

Transliteration: Wajazahum bima sabaroo jannatan wahareeran

Translation: ಅವರು ತಾಳ್ಮೆ ವಹಿಸಿದ್ದಕ್ಕೆ ಪ್ರತಿಫಲವಾಗಿ ಅವರಿಗೆ ಸ್ವರ್ಗವನ್ನು ಮತ್ತು ರೇಷ್ಮೆ ಉಡುಪುಗಳನ್ನು ನೀಡುವನು.

76:13

مُّتَّكِـِٔينَ فِيهَا عَلَى ٱلۡأَرَآئِكِۖ لَا يَرَوۡنَ فِيهَا شَمۡسٗا وَلَا زَمۡهَرِيرٗا ﴿13﴾

Transliteration: Muttakieena feeha AAala alaraiki la yarawna feeha shamsan wala zamhareeran

Translation: ಅವರು ಅಲ್ಲಿ ಸುಖಾಸನಗಳಲ್ಲಿ ಒರಗಿ ಕುಳಿತಿರುವರು. ಅವರು ಅಲ್ಲಿ ಬಿಸಿಲಿನ ಬೇಗೆಯನ್ನು ಅಥವಾ ಚಳಿಯ ಕಠೋರತೆಯನ್ನು ನೋಡಲಾರರು.

76:14

وَدَانِيَةً عَلَيۡهِمۡ ظِلَٰلُهَا وَذُلِّلَتۡ قُطُوفُهَا تَذۡلِيلٗا ﴿14﴾

Transliteration: Wadaniyatan AAalayhim thilaluha wathullilat qutoofuha tathleelan

Translation: ಆ ಸ್ವರ್ಗಗಳ ನೆರಳು ಅವರ ಮೇಲೆ ಚಾಚಿಕೊಂಡಿರುವುದು. ಅದರ ಹಣ್ಣುಗಳು ಮತ್ತು ಗೊಂಚಲುಗಳು ಬಾಗಿಕೊಂಡಿರುವುವು.

76:15

وَيُطَافُ عَلَيۡهِم بِـَٔانِيَةٖ مِّن فِضَّةٖ وَأَكۡوَابٖ كَانَتۡ قَوَارِيرَا۠ ﴿15﴾

Transliteration: Wayutafu AAalayhim bianiyatin min fiddatin waakwabin kanat qawareera

Translation: ಅವರ ಸುತ್ತಲೂ ಬೆಳ್ಳಿಯ ಪಾತ್ರೆಗಳು ಮತ್ತು ಸ್ಫಟಿಕದ ಲೋಟಗಳೊಂದಿಗೆ (ಪರಿಚಾರಕರು) ಸುತ್ತುತ್ತಿರುವರು.

76:16

قَوَارِيرَاْ مِن فِضَّةٖ قَدَّرُوهَا تَقۡدِيرٗا ﴿16﴾

Transliteration: Qawareera min fiddatin qaddarooha taqdeeran

Translation: ಅವು ಬೆಳ್ಳಿಯ ಸ್ಫಟಿಕಗಳಾಗಿವೆ. ಅವರು ಅದನ್ನು ಸರಿಯಾದ ಅಳತೆಯಿಂದ ನಿರ್ಣಯಿಸುವರು.

76:17

وَيُسۡقَوۡنَ فِيهَا كَأۡسٗا كَانَ مِزَاجُهَا زَنجَبِيلًا ﴿17﴾

Transliteration: Wayusqawna feeha kasan kana mizajuha zanjabeelan

Translation: ಅಲ್ಲಿ ಅವರಿಗೆ ಒಂದು ಲೋಟವನ್ನು ಕುಡಿಯಲು ನೀಡಲಾಗುವುದು. ಅದರ ಮಿಶ್ರಣವು ಶುಂಠಿಯದ್ದಾಗಿರುವುದು.

76:18

عَيۡنٗا فِيهَا تُسَمَّىٰ سَلۡسَبِيلٗا ﴿18﴾

Transliteration: AAaynan feeha tusamma salsabeelan

Translation: ಸ್ವರ್ಗದ ಸಲ್ಸಬೀಲ್ ಎಂಬ ಹೆಸರಿನ ಒಂದು ಚಿಲುಮೆಯಿಂದ.

76:19

وَيَطُوفُ عَلَيۡهِمۡ وِلۡدَٰنٞ مُّخَلَّدُونَ إِذَا رَأَيۡتَهُمۡ حَسِبۡتَهُمۡ لُؤۡلُؤٗا مَّنثُورٗا ﴿19﴾

Transliteration: Wayatoofu AAalayhim wildanun mukhalladoona itha raaytahum hasibtahum luluan manthooran

Translation: ಅವರ ಸುತ್ತಲೂ ಚಿರಂಜೀವಿಗಳಾದ ಹುಡುಗರು ಸುತ್ತುತ್ತಿರುವರು. ನೀವು ಅವರನ್ನು ನೋಡಿದರೆ ಅವರನ್ನು ಚದುರಿದ ಮುತ್ತುಗಳೆಂದು ಭಾವಿಸುವಿರಿ.

76:20

وَإِذَا رَأَيۡتَ ثَمَّ رَأَيۡتَ نَعِيمٗا وَمُلۡكٗا كَبِيرًا ﴿20﴾

Transliteration: Waitha raayta thamma raayta naAAeeman wamulkan kabeeran

Translation: ನೀವು ಅಲ್ಲಿ ಯಾವ ಕಡೆಗೆ ದೃಷ್ಟಿ ಹರಿಸಿದರೂ ಅಲ್ಲಿ ಐಶ್ವರ್ಯಗಳನ್ನು ಮತ್ತು ಮಹಾ ಸಾಮ್ರಾಜ್ಯವನ್ನು ಕಾಣುವಿರಿ.

76:21

عَٰلِيَهُمۡ ثِيَابُ سُندُسٍ خُضۡرٞ وَإِسۡتَبۡرَقٞۖ وَحُلُّوٓاْ أَسَاوِرَ مِن فِضَّةٖ وَسَقَىٰهُمۡ رَبُّهُمۡ شَرَابٗا طَهُورًا ﴿21﴾

Transliteration: AAaliyahum thiyabu sundusin khudrun waistabraqun wahulloo asawira min fiddatin wasaqahum rabbuhum sharaban tahooran

Translation: ಅವರ ಮೇಲೆ ಹಸಿರು ಬಣ್ಣದ ನಯವಾದ ಮತ್ತು ದಪ್ಪಗಿನ ರೇಷ್ಮೆ ಉಡುಪುಗಳಿರುವುವು. ಅವರಿಗೆ ಬೆಳ್ಳಿಯ ಕಡಗಗಳನ್ನು ತೊಡಿಸಲಾಗುವುದು. ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಶುದ್ಧವಾದ ಪಾನೀಯವನ್ನು ಕುಡಿಸುವನು.

76:22

إِنَّ هَٰذَا كَانَ لَكُمۡ جَزَآءٗ وَكَانَ سَعۡيُكُم مَّشۡكُورًا ﴿22﴾

Transliteration: Inna hatha kana lakum jazaan wakana saAAyukum mashkooran

Translation: (ಅವರೊಡನೆ ಹೇಳಲಾಗುವುದು): “ಇವೆಲ್ಲವೂ ನಿಮಗಿರುವ ಪ್ರತಿಫಲವಾಗಿವೆ. ನಿಮ್ಮ ಪರಿಶ್ರಮಗಳು ಶ್ಲಾಘನಾರ್ಹವಾಗಿವೆ.”

76:23

إِنَّا نَحۡنُ نَزَّلۡنَا عَلَيۡكَ ٱلۡقُرۡءَانَ تَنزِيلٗا ﴿23﴾

Transliteration: Inna nahnu nazzalna AAalayka alqurana tanzeelan

Translation: ನಿಶ್ಚಯವಾಗಿಯೂ ನಾವು ನಿಮಗೆ ಈ ಕುರ್‌ಆನನ್ನು ಹಂತ ಹಂತವಾಗಿ ಅವತೀರ್ಣಗೊಳಿಸಿದ್ದೇವೆ.

76:24

فَٱصۡبِرۡ لِحُكۡمِ رَبِّكَ وَلَا تُطِعۡ مِنۡهُمۡ ءَاثِمًا أَوۡ كَفُورٗا ﴿24﴾

Transliteration: Faisbir lihukmi rabbika wala tutiAA minhum athiman aw kafooran

Translation: ಆದ್ದರಿಂದ ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ತೀರ್ಪನ್ನು ತಾಳ್ಮೆಯಿಂದ ಕಾಯುತ್ತಿರಿ. ಅವರಲ್ಲಿ ಯಾವುದೇ ಪಾಪಿಯನ್ನು ಅಥವಾ ಕೃತಜ್ಞತೆಯಿಲ್ಲದವನನ್ನು ಅನುಸರಿಸಬೇಡಿ.

76:25

وَٱذۡكُرِ ٱسۡمَ رَبِّكَ بُكۡرَةٗ وَأَصِيلٗا ﴿25﴾

Transliteration: Waothkuri isma rabbika bukratan waaseelan

Translation: ಮುಂಜಾನೆ ಮತ್ತು ಸಂಜೆ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿರಿ.

76:26

وَمِنَ ٱلَّيۡلِ فَٱسۡجُدۡ لَهُۥ وَسَبِّحۡهُ لَيۡلٗا طَوِيلًا ﴿26﴾

Transliteration: Wamina allayli faosjud lahu wasabbihhu laylan taweelan

Translation: ರಾತ್ರಿಯಲ್ಲಿ ಅವನಿಗೆ ಸಾಷ್ಟಾಂಗ ಮಾಡಿರಿ ಮತ್ತು ದೀರ್ಘ ರಾತ್ರಿಯ ತನಕ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ.

76:27

إِنَّ هَـٰٓؤُلَآءِ يُحِبُّونَ ٱلۡعَاجِلَةَ وَيَذَرُونَ وَرَآءَهُمۡ يَوۡمٗا ثَقِيلٗا ﴿27﴾

Transliteration: Inna haolai yuhibboona alAAajilata wayatharoona waraahum yawman thaqeelan

Translation: ನಿಶ್ಚಯವಾಗಿಯೂ ಇವರು ಇಹಲೋಕವನ್ನು ಇಷ್ಟಪಡುತ್ತಾರೆ ಮತ್ತು ಭಾರವಾದ ಒಂದು ದಿನವನ್ನು ತಮ್ಮ ಬೆನ್ನ ಹಿಂದೆ ತೊರೆಯುತ್ತಾರೆ.

76:28

نَّحۡنُ خَلَقۡنَٰهُمۡ وَشَدَدۡنَآ أَسۡرَهُمۡۖ وَإِذَا شِئۡنَا بَدَّلۡنَآ أَمۡثَٰلَهُمۡ تَبۡدِيلًا ﴿28﴾

Transliteration: Nahnu khalaqnahum washadadna asrahum waitha shina baddalna amthalahum tabdeelan

Translation: ನಾವು ಅವರನ್ನು ಸೃಷ್ಟಿಸಿದ್ದೇವೆ ಮತ್ತು ಅವರ ದೇಹ ರಚನೆಯನ್ನು ಸದೃಢಗೊಳಿಸಿದ್ದೇವೆ. ನಾವು ಇಚ್ಛಿಸಿದರೆ ಅವರ ಬದಲಿಗೆ ಅವರಂತಿರುವವರನ್ನು ತರುತ್ತೇವೆ.

76:29

إِنَّ هَٰذِهِۦ تَذۡكِرَةٞۖ فَمَن شَآءَ ٱتَّخَذَ إِلَىٰ رَبِّهِۦ سَبِيلٗا ﴿29﴾

Transliteration: Inna hathihi tathkiratun faman shaa ittakhatha ila rabbihi sabeelan

Translation: ನಿಶ್ಚಯವಾಗಿಯೂ ಇದೊಂದು ಉಪದೇಶವಾಗಿದೆ. ಆದ್ದರಿಂದ ಇಚ್ಛೆಯುಳ್ಳವನು ತನ್ನ ಪರಿಪಾಲಕನ (ಅಲ್ಲಾಹನ) ಕಡೆಗಿರುವ ಮಾರ್ಗವನ್ನು ಸ್ವೀಕರಿಸಲಿ.

76:30

وَمَا تَشَآءُونَ إِلَّآ أَن يَشَآءَ ٱللَّهُۚ إِنَّ ٱللَّهَ كَانَ عَلِيمًا حَكِيمٗا ﴿30﴾

Transliteration: Wama tashaoona illa an yashaa Allahu inna Allaha kana AAaleeman hakeeman

Translation: ಅಲ್ಲಾಹು ಇಚ್ಛಿಸದೆ ನೀವು ಇಚ್ಛಿಸುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

76:31

يُدۡخِلُ مَن يَشَآءُ فِي رَحۡمَتِهِۦۚ وَٱلظَّـٰلِمِينَ أَعَدَّ لَهُمۡ عَذَابًا أَلِيمَۢا ﴿31﴾

Transliteration: Yudkhilu man yashao fee rahmatihi waalththalimeena aAAadda lahum AAathaban aleeman

Translation: ಅವನು ಇಚ್ಛಿಸುವವರನ್ನು ಅವನ ದಯೆಯಲ್ಲಿ ಸೇರಿಸುತ್ತಾನೆ. ಅಕ್ರಮಿಗಳಿಗೆ ಅವನು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download