quranm◉

Surah Ad-Dukhan transliteration

◉ ಸೂರಾ · ∞

44:1

حمٓ ﴿1﴾

Transliteration: Hameem

Translation: ಹಾ-ಮೀಮ್.

44:2

وَٱلۡكِتَٰبِ ٱلۡمُبِينِ ﴿2﴾

Transliteration: Waalkitabi almubeeni

Translation: ಸ್ಪಷ್ಟ ಗ್ರಂಥದ ಮೇಲಾಣೆ!

44:3

إِنَّآ أَنزَلۡنَٰهُ فِي لَيۡلَةٖ مُّبَٰرَكَةٍۚ إِنَّا كُنَّا مُنذِرِينَ ﴿3﴾

Transliteration: Inna anzalnahu fee laylatin mubarakatin inna kunna munthireena

Translation: ನಿಶ್ಚಯವಾಗಿಯೂ ನಾವು ಇದನ್ನು ಒಂದು ಸಮೃದ್ಧ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇನೆ. ನಿಶ್ಚಯವಾಗಿಯೂ ನಾವು ಮುನ್ನೆಚ್ಚರಿಕೆ ನೀಡುವವರಾಗಿದ್ದೇವೆ.

44:4

فِيهَا يُفۡرَقُ كُلُّ أَمۡرٍ حَكِيمٍ ﴿4﴾

Transliteration: Feeha yufraqu kullu amrin hakeemin

Translation: ಆ ರಾತ್ರಿಯಲ್ಲಿ ಎಲ್ಲಾ ಕಟ್ಟುನಿಟ್ಟಿನ ಕಾರ್ಯಗಳನ್ನು ನಿರ್ಣಯಿಸಲಾಗುವುದು.

44:5

أَمۡرٗا مِّنۡ عِندِنَآۚ إِنَّا كُنَّا مُرۡسِلِينَ ﴿5﴾

Transliteration: Amran min AAindina inna kunna mursileena

Translation: ನಮ್ಮ ಕಡೆಯ ಆಜ್ಞೆಯಿಂದ! ನಿಶ್ಚಯವಾಗಿಯೂ ನಾವೇ (ಸಂದೇಶವಾಹಕರನ್ನು) ಕಳುಹಿಸುವವರು.

44:6

رَحۡمَةٗ مِّن رَّبِّكَۚ إِنَّهُۥ هُوَ ٱلسَّمِيعُ ٱلۡعَلِيمُ ﴿6﴾

Transliteration: Rahmatan min rabbika innahu huwa alssameeAAu alAAaleemu

Translation: ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯಿಂದ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

44:7

رَبِّ ٱلسَّمَٰوَٰتِ وَٱلۡأَرۡضِ وَمَا بَيۡنَهُمَآۖ إِن كُنتُم مُّوقِنِينَ ﴿7﴾

Transliteration: Rabbi alssamawati waalardi wama baynahuma in kuntum mooqineena

Translation: ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ದೃಢವಾಗಿ ವಿಶ್ವಾಸವಿಡುವವರಾಗಿದ್ದರೆ.

44:8

لَآ إِلَٰهَ إِلَّا هُوَ يُحۡيِۦ وَيُمِيتُۖ رَبُّكُمۡ وَرَبُّ ءَابَآئِكُمُ ٱلۡأَوَّلِينَ ﴿8﴾

Transliteration: La ilaha illa huwa yuhyee wayumeetu rabbukum warabbu abaikumu alawwaleena

Translation: ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ. ಅವನು ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕನಾಗಿದ್ದಾನೆ.

44:9

بَلۡ هُمۡ فِي شَكّٖ يَلۡعَبُونَ ﴿9﴾

Transliteration: Bal hum fee shakkin yalAAaboona

Translation: ಆದರೆ ಅವರು ಸಂಶಯದಲ್ಲಿ ಬಿದ್ದು ಆಡುತ್ತಿದ್ದಾರೆ.

44:10

فَٱرۡتَقِبۡ يَوۡمَ تَأۡتِي ٱلسَّمَآءُ بِدُخَانٖ مُّبِينٖ ﴿10﴾

Transliteration: Fairtaqib yawma tatee alssamao bidukhanin mubeenin

Translation: ಆಕಾಶವು ಸ್ಪಷ್ಟವಾಗಿ ಕಾಣುವ ಹೊಗೆಯನ್ನು ತರುವ ದಿನವನ್ನು ನಿರೀಕ್ಷಿಸಿ.

44:11

يَغۡشَى ٱلنَّاسَۖ هَٰذَا عَذَابٌ أَلِيمٞ ﴿11﴾

Transliteration: Yaghsha alnnasa hatha AAathabun aleemun

Translation: ಅದು ಮನುಷ್ಯರನ್ನು ಆವರಿಸಿಕೊಳ್ಳುವುದು. ಇದು ಯಾತನಾಮಯ ಶಿಕ್ಷೆಯಾಗಿದೆ.

44:12

رَّبَّنَا ٱكۡشِفۡ عَنَّا ٱلۡعَذَابَ إِنَّا مُؤۡمِنُونَ ﴿12﴾

Transliteration: Rabbana ikshif AAanna alAAathaba inna muminoona

Translation: (ಅವರು ಹೇಳುವರು): “ನಮ್ಮ ಪರಿಪಾಲಕನೇ! ನಮ್ಮಿಂದ ಈ ಶಿಕ್ಷೆಯನ್ನು ನಿವಾರಿಸು. ನಿಶ್ಚಯವಾಗಿಯೂ ನಾವು ವಿಶ್ವಾಸವಿಡುತ್ತೇವೆ.”

44:13

أَنَّىٰ لَهُمُ ٱلذِّكۡرَىٰ وَقَدۡ جَآءَهُمۡ رَسُولٞ مُّبِينٞ ﴿13﴾

Transliteration: Anna lahumu alththikra waqad jaahum rasoolun mubeenun

Translation: ಅವರಿಗೆ ಉಪದೇಶವು ಪ್ರಯೋಜನಪಡುವುದು ಹೇಗೆ? (ವಿಷಯವನ್ನು) ಸ್ಪಷ್ಟವಾಗಿ ವಿವರಿಸುವ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದಿದ್ದರು.

44:14

ثُمَّ تَوَلَّوۡاْ عَنۡهُ وَقَالُواْ مُعَلَّمٞ مَّجۡنُونٌ ﴿14﴾

Transliteration: Thumma tawallaw AAanhu waqaloo muAAallamun majnoonun

Translation: ಆದರೂ ಅವರು ಆ ಸಂದೇಶವಾಹಕರಿಂದ ವಿಮುಖರಾದರು. ಅವರು ಹೇಳಿದರು: “ಇವನು ಕಲಿಸಿಕೊಡಲಾದ ಮಾನಸಿಕ ಅಸ್ವಸ್ಥ!”

44:15

إِنَّا كَاشِفُواْ ٱلۡعَذَابِ قَلِيلًاۚ إِنَّكُمۡ عَآئِدُونَ ﴿15﴾

Transliteration: Inna kashifoo alAAathabi qaleelan innakum AAaidoona

Translation: ನಿಶ್ಚಯವಾಗಿಯೂ ನಾವು ಶಿಕ್ಷೆಯನ್ನು ಸ್ವಲ್ಪ ನಿವಾರಿಸುವೆವು. ಆದರೆ ನೀವು ನಿಶ್ಚಯವಾಗಿಯೂ (ಹಿಂದಿನ ಸ್ಥಿತಿಗೇ) ಮರಳುವಿರಿ!

44:16

يَوۡمَ نَبۡطِشُ ٱلۡبَطۡشَةَ ٱلۡكُبۡرَىٰٓ إِنَّا مُنتَقِمُونَ ﴿16﴾

Transliteration: Yawma nabtishu albatshata alkubra inna muntaqimoona

Translation: ನಾವು ಅತ್ಯಂತ ಬಲಿಷ್ಠ ಹಿಡಿತದೊಂದಿಗೆ ಹಿಡಿಯುವ ದಿನ! ನಿಶ್ಚಯವಾಗಿಯೂ ನಾವು ಪ್ರತೀಕಾರ ಪಡೆಯುವೆವು.

44:17

وَلَقَدۡ فَتَنَّا قَبۡلَهُمۡ قَوۡمَ فِرۡعَوۡنَ وَجَآءَهُمۡ رَسُولٞ كَرِيمٌ ﴿17﴾

Transliteration: Walaqad fatanna qablahum qawma firAAawna wajaahum rasoolun kareemun

Translation: ಅವರಿಗಿಂತ ಮೊದಲು ಫರೋಹನ ಜನರನ್ನು ನಾವು ಪರೀಕ್ಷಿಸಿದ್ದೆವು. ಒಬ್ಬ ಗೌರವಾನ್ವಿತ ಸಂದೇಶವಾಹಕರು (ಮೂಸಾ) ಅವರ ಬಳಿಗೆ ಬಂದಿದ್ದರು.

44:18

أَنۡ أَدُّوٓاْ إِلَيَّ عِبَادَ ٱللَّهِۖ إِنِّي لَكُمۡ رَسُولٌ أَمِينٞ ﴿18﴾

Transliteration: An addoo ilayya AAibada Allahi innee lakum rasoolun ameenun

Translation: (ಅವರು ಹೇಳಿದರು): “ಅಲ್ಲಾಹನ ದಾಸರನ್ನು ನನಗೆ ಒಪ್ಪಿಸಿರಿ. ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಬಂದ ಒಬ್ಬ ವಿಶ್ವಾಸಾರ್ಹ ಸಂದೇಶವಾಹಕನಾಗಿದ್ದೇನೆ.

44:19

وَأَن لَّا تَعۡلُواْ عَلَى ٱللَّهِۖ إِنِّيٓ ءَاتِيكُم بِسُلۡطَٰنٖ مُّبِينٖ ﴿19﴾

Transliteration: Waan la taAAloo AAala Allahi innee ateekum bisultanin mubeenin

Translation: ನೀವು ಅಲ್ಲಾಹನ ಮುಂದೆ ದರ್ಪ ತೋರಬೇಡಿ. ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯವನ್ನು ತರುವೆನು.

44:20

وَإِنِّي عُذۡتُ بِرَبِّي وَرَبِّكُمۡ أَن تَرۡجُمُونِ ﴿20﴾

Transliteration: Wainnee AAuthtu birabbee warabbikum an tarjumooni

Translation: ನೀವು ನನಗೆ ಕಲ್ಲೆಸೆಯದಿರಲು ನಾನು ನನ್ನ ಮತ್ತು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಯಾಚಿಸುತ್ತೇನೆ.

44:21

وَإِن لَّمۡ تُؤۡمِنُواْ لِي فَٱعۡتَزِلُونِ ﴿21﴾

Transliteration: Wain lam tuminoo lee faiAAtazilooni

Translation: ನೀವು ನನ್ನಲ್ಲಿ ವಿಶ್ವಾಸವಿಡುವುದಿಲ್ಲ ಎಂದಾದರೆ ನನ್ನಿಂದ ಬೇರೆ ಹೋಗಿರಿ.”

44:22

فَدَعَا رَبَّهُۥٓ أَنَّ هَـٰٓؤُلَآءِ قَوۡمٞ مُّجۡرِمُونَ ﴿22﴾

Transliteration: FadaAAa rabbahu anna haolai qawmun mujrimoona

Translation: ಇವರೆಲ್ಲರೂ ಅಪರಾಧಿಗಳಾದ ಜನರು ಎಂದು ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು.

44:23

فَأَسۡرِ بِعِبَادِي لَيۡلًا إِنَّكُم مُّتَّبَعُونَ ﴿23﴾

Transliteration: Faasri biAAibadee laylan innakum muttabaAAoona

Translation: (ಅಲ್ಲಾಹು ಹೇಳಿದನು): “ನೀವು ರಾತ್ರಿ ವೇಳೆ ನನ್ನ ದಾಸರೊಡನೆ ಹೊರಡಿರಿ. ನಿಶ್ಚಯವಾಗಿಯೂ ವೈರಿಗಳು ನಿಮ್ಮನ್ನು ಹಿಂಬಾಲಿಸುವರು.

44:24

وَٱتۡرُكِ ٱلۡبَحۡرَ رَهۡوًاۖ إِنَّهُمۡ جُندٞ مُّغۡرَقُونَ ﴿24﴾

Transliteration: Waotruki albahra rahwan innahum jundun mughraqoona

Translation: ನೀವು ಸಮುದ್ರವನ್ನು ಶಾಂತ ಸ್ಥಿತಿಯಲ್ಲಿ ಬಿಟ್ಟುಬಿಡಿ. ನಿಶ್ಚಯವಾಗಿಯೂ ಈ ಸೈನ್ಯವನ್ನು ಮುಳುಗಿಸಲಾಗುವುದು.

44:25

كَمۡ تَرَكُواْ مِن جَنَّـٰتٖ وَعُيُونٖ ﴿25﴾

Transliteration: Kam tarakoo min jannatin waAAuyoonin

Translation: ಅವರು ಎಷ್ಟೊಂದು ತೋಟಗಳನ್ನು ಮತ್ತು ತೊರೆಗಳನ್ನು ಬಿಟ್ಟು ಹೋದರು!

44:26

وَزُرُوعٖ وَمَقَامٖ كَرِيمٖ ﴿26﴾

Transliteration: WazurooAAin wamaqamin kareemin

Translation: ಎಷ್ಟೊಂದು ಕೃಷಿಗಳನ್ನು ಮತ್ತು ಗೌರವಾನ್ವಿತ ವಸತಿಗಳನ್ನು!

44:27

وَنَعۡمَةٖ كَانُواْ فِيهَا فَٰكِهِينَ ﴿27﴾

Transliteration: WanaAAmatin kanoo feeha fakiheena

Translation: ಅವರು ಆನಂದದಿಂದ ಅನುಭವಿಸುತ್ತಿದ್ದ ಎಷ್ಟೊಂದು ಸವಲತ್ತುಗಳನ್ನು!

44:28

كَذَٰلِكَۖ وَأَوۡرَثۡنَٰهَا قَوۡمًا ءَاخَرِينَ ﴿28﴾

Transliteration: Kathalika waawrathnaha qawman akhareena

Translation: ಈ ರೀತಿ ಅದು ಸಂಭವಿಸಿತು. ನಾವು ಅವೆಲ್ಲವನ್ನೂ ಬೇರೆ ಜನರಿಗೆ ಉತ್ತರಾಧಿಕಾರವಾಗಿ ನೀಡಿದೆವು.

44:29

فَمَا بَكَتۡ عَلَيۡهِمُ ٱلسَّمَآءُ وَٱلۡأَرۡضُ وَمَا كَانُواْ مُنظَرِينَ ﴿29﴾

Transliteration: Fama bakat AAalayhimu alssamao waalardu wama kanoo munthareena

Translation: ಆಕಾಶ ಅಥವಾ ಭೂಮಿ ಅವರಿಗಾಗಿ ಅಳಲಿಲ್ಲ. ಅವರಿಗೆ ಕಾಲಾವಕಾಶವೂ ದೊರೆಯಲಿಲ್ಲ.

44:30

وَلَقَدۡ نَجَّيۡنَا بَنِيٓ إِسۡرَـٰٓءِيلَ مِنَ ٱلۡعَذَابِ ٱلۡمُهِينِ ﴿30﴾

Transliteration: Walaqad najjayna banee israeela mina alAAathabi almuheeni

Translation: ನಾವು ಇಸ್ರಾಯೇಲ್ ಮಕ್ಕಳನ್ನು ಅವಮಾನಕರ ಶಿಕ್ಷೆಯಿಂದ ಪಾರು ಮಾಡಿದೆವು.

44:31

مِن فِرۡعَوۡنَۚ إِنَّهُۥ كَانَ عَالِيٗا مِّنَ ٱلۡمُسۡرِفِينَ ﴿31﴾

Transliteration: Min firAAawna innahu kana AAaliyan mina almusrifeena

Translation: ಫರೋಹ‍ನಿಂದ. ನಿಶ್ಚಯವಾಗಿಯೂ ಅವನು ಅಹಂಕಾರಿಯಾಗಿದ್ದು ಎಲ್ಲೆ ಮೀರಿದವರಲ್ಲಿ ಸೇರಿದ್ದನು.

44:32

وَلَقَدِ ٱخۡتَرۡنَٰهُمۡ عَلَىٰ عِلۡمٍ عَلَى ٱلۡعَٰلَمِينَ ﴿32﴾

Transliteration: Walaqadi ikhtarnahum AAala AAilmin AAala alAAalameena

Translation: ನಿಶ್ಚಯವಾಗಿಯೂ ನಾವು ತಿಳಿದೂ ಸಹ ಇಸ್ರಾಯೇಲ್ ಮಕ್ಕಳನ್ನು (ಸಮಕಾಲೀನ) ಜಗತ್ತಿನಲ್ಲಿ ಶ್ರೇಷ್ಠಗೊಳಿಸಿದೆವು.

44:33

وَءَاتَيۡنَٰهُم مِّنَ ٱلۡأٓيَٰتِ مَا فِيهِ بَلَـٰٓؤٞاْ مُّبِينٌ ﴿33﴾

Transliteration: Waataynahum mina alayati ma feehi balaon mubeenun

Translation: ನಾವು ಅವರಿಗೆ ಸ್ಪಷ್ಟ ಪರೀಕ್ಷೆಯನ್ನು ಹೊಂದಿದ್ದ ದೃಷ್ಟಾಂತಗಳನ್ನು ನೀಡಿದೆವು.

44:34

إِنَّ هَـٰٓؤُلَآءِ لَيَقُولُونَ ﴿34﴾

Transliteration: Inna haolai layaqooloona

Translation: ನಿಶ್ಚಯವಾಗಿಯೂ ಇವರು (ಸತ್ಯನಿಷೇಧಿಗಳು) ಹೇಳುತ್ತಾರೆ:

44:35

إِنۡ هِيَ إِلَّا مَوۡتَتُنَا ٱلۡأُولَىٰ وَمَا نَحۡنُ بِمُنشَرِينَ ﴿35﴾

Transliteration: In hiya illa mawtatuna aloola wama nahnu bimunshareena

Translation: “ನಮ್ಮ ಮೊದಲ ಸಾವಲ್ಲದೆ ಬೇರೇನೂ ಇಲ್ಲ. ನಮ್ಮನ್ನು ಪುನಃ ಜೀವಂತಗೊಳಿಸಲಾಗುವುದೂ ಇಲ್ಲ.

44:36

فَأۡتُواْ بِـَٔابَآئِنَآ إِن كُنتُمۡ صَٰدِقِينَ ﴿36﴾

Transliteration: Fatoo biabaina in kuntum sadiqeena

Translation: ನೀವು ಸತ್ಯವಂತರಾಗಿದ್ದರೆ (ಸತ್ತು ಹೋದ) ನಮ್ಮ ಪೂರ್ವಜರನ್ನು ಕರೆದುಕೊಂಡು ಬನ್ನಿ.”

44:37

أَهُمۡ خَيۡرٌ أَمۡ قَوۡمُ تُبَّعٖ وَٱلَّذِينَ مِن قَبۡلِهِمۡ أَهۡلَكۡنَٰهُمۡۚ إِنَّهُمۡ كَانُواْ مُجۡرِمِينَ ﴿37﴾

Transliteration: Ahum khayrun am qawmu tubbaAAin waallatheena min qablihim ahlaknahum innahum kanoo mujrimeena

Translation: ಇವರು ಶ್ರೇಷ್ಠರೋ? ಅಥವಾ ತುಬ್ಬಅ್‌ನ ಜನರು[1] ಮತ್ತು ಅವರಿಗಿಂತ ಮೊದಲಿನವರೋ? ನಾವು ಅವರೆಲ್ಲರನ್ನು ನಾಶ ಮಾಡಿದೆವು. ನಿಶ್ಚಯವಾಗಿಯೂ ಅವರು ಅಪರಾಧಿಗಳಾಗಿದ್ದರು.

44:38

وَمَا خَلَقۡنَا ٱلسَّمَٰوَٰتِ وَٱلۡأَرۡضَ وَمَا بَيۡنَهُمَا لَٰعِبِينَ ﴿38﴾

Transliteration: Wama khalaqna alssamawati waalarda wama baynahuma laAAibeena

Translation: ನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಆಟಕ್ಕಾಗಿ ಸೃಷ್ಟಿಸಿಲ್ಲ.

44:39

مَا خَلَقۡنَٰهُمَآ إِلَّا بِٱلۡحَقِّ وَلَٰكِنَّ أَكۡثَرَهُمۡ لَا يَعۡلَمُونَ ﴿39﴾

Transliteration: Ma khalaqnahuma illa bialhaqqi walakinna aktharahum la yaAAlamoona

Translation: ನಾವು ಅವುಗಳನ್ನು ಸರಿಯಾದ ಉದ್ದೇಶದಿಂದಲೇ ಸೃಷ್ಟಿಸಿದ್ದೇವೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

44:40

إِنَّ يَوۡمَ ٱلۡفَصۡلِ مِيقَٰتُهُمۡ أَجۡمَعِينَ ﴿40﴾

Transliteration: Inna yawma alfasli meeqatuhum ajmaAAeena

Translation: ನಿಶ್ಚಯವಾಗಿಯೂ ತೀರ್ಪು ನೀಡುವ ದಿನವು ಅವರೆಲ್ಲರಿಗೂ ನಿಶ್ಚಯಿಸಲಾದ ದಿನವಾಗಿದೆ.

44:41

يَوۡمَ لَا يُغۡنِي مَوۡلًى عَن مَّوۡلٗى شَيۡـٔٗا وَلَا هُمۡ يُنصَرُونَ ﴿41﴾

Transliteration: Yawma la yughnee mawlan AAan mawlan shayan wala hum yunsaroona

Translation: ಅಂದು ಒಬ್ಬ ಗೆಳೆಯ ಇನ್ನೊಬ್ಬ ಗೆಳೆಯನಿಗೆ ಯಾವುದೇ ಉಪಕಾರ ಮಾಡುವುದಿಲ್ಲ. ಅವರಿಗೆ ಸಹಾಯವೂ ದೊರೆಯುವುದಿಲ್ಲ.

44:42

إِلَّا مَن رَّحِمَ ٱللَّهُۚ إِنَّهُۥ هُوَ ٱلۡعَزِيزُ ٱلرَّحِيمُ ﴿42﴾

Transliteration: Illa man rahima Allahu innahu huwa alAAazeezu alrraheemu

Translation: ಅಲ್ಲಾಹು ದಯೆ ತೋರಿದವರ ಹೊರತು. ನಿಶ್ಚಯವಾಗಿಯೂ ಅವನು ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

44:43

إِنَّ شَجَرَتَ ٱلزَّقُّومِ ﴿43﴾

Transliteration: Inna shajarata alzzaqqoomi

Translation: ನಿಶ್ಚಯವಾಗಿಯೂ ಝಕ್ಕೂಮ್ ಮರವು,

44:44

طَعَامُ ٱلۡأَثِيمِ ﴿44﴾

Transliteration: TaAAamu alatheemi

Translation: ಪಾಪಿಗಳ ಆಹಾರವಾಗಿದೆ.

44:45

كَٱلۡمُهۡلِ يَغۡلِي فِي ٱلۡبُطُونِ ﴿45﴾

Transliteration: Kaalmuhli yaghlee fee albutooni

Translation: ಅದು ಕಾಯಿಸಿದ ಲೋಹದಂತಿದೆ. ಅದು ಹೊಟ್ಟೆಯಲ್ಲಿ ಕುದಿಯುತ್ತದೆ.

44:46

كَغَلۡيِ ٱلۡحَمِيمِ ﴿46﴾

Transliteration: Kaghalyi alhameemi

Translation: ಬಿಸಿ ನೀರು ಕುದಿಯುವಂತೆ.

44:47

خُذُوهُ فَٱعۡتِلُوهُ إِلَىٰ سَوَآءِ ٱلۡجَحِيمِ ﴿47﴾

Transliteration: Khuthoohu faiAAtiloohu ila sawai aljaheemi

Translation: “ಅವನನ್ನು ಹಿಡಿಯಿರಿ ಮತ್ತು ನರಕಾಗ್ನಿಯ ಮಧ್ಯಭಾಗಕ್ಕೆ ಎಳೆದೊಯ್ಯಿರಿ!

44:48

ثُمَّ صُبُّواْ فَوۡقَ رَأۡسِهِۦ مِنۡ عَذَابِ ٱلۡحَمِيمِ ﴿48﴾

Transliteration: Thumma subboo fawqa rasihi min AAathabi alhameemi

Translation: ನಂತರ ಅವನ ತಲೆಯ ಮೇಲೆ ಕುದಿಯುವ ನೀರಿನ ಶಿಕ್ಷೆಯನ್ನು ಸುರಿಯಿರಿ!”

44:49

ذُقۡ إِنَّكَ أَنتَ ٱلۡعَزِيزُ ٱلۡكَرِيمُ ﴿49﴾

Transliteration: Thuq innaka anta alAAazeezu alkareemu

Translation: (ಅವನೊಡನೆ ಹೇಳಲಾಗುವುದು): “ಇದರ ರುಚಿ ನೋಡು! ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ಗೌರವಾನ್ವಿತನಾಗಿದ್ದೆ!

44:50

إِنَّ هَٰذَا مَا كُنتُم بِهِۦ تَمۡتَرُونَ ﴿50﴾

Transliteration: Inna hatha ma kuntum bihi tamtaroona

Translation: ನಿಶ್ಚಯವಾಗಿಯೂ ಇದು ನೀವು ಸಂಶಯಪಡುತ್ತಿದ್ದ ವಿಷಯವಾಗಿದೆ.”

44:51

إِنَّ ٱلۡمُتَّقِينَ فِي مَقَامٍ أَمِينٖ ﴿51﴾

Transliteration: Inna almuttaqeena fee maqamin ameenin

Translation: ನಿಶ್ಚಯವಾಗಿಯೂ ದೇವಭಯವುಳ್ಳವರು ನಿರ್ಭಯ ಸ್ಥಳದಲ್ಲಿರುವರು.

44:52

فِي جَنَّـٰتٖ وَعُيُونٖ ﴿52﴾

Transliteration: Fee jannatin waAAuyoonin

Translation: ತೋಟಗಳಲ್ಲಿ ಮತ್ತು ತೊರೆಗಳಲ್ಲಿ.

44:53

يَلۡبَسُونَ مِن سُندُسٖ وَإِسۡتَبۡرَقٖ مُّتَقَٰبِلِينَ ﴿53﴾

Transliteration: Yalbasoona min sundusin waistabraqin mutaqabileena

Translation: ನಯ ಮತ್ತು ದಪ್ಪ ರೇಷ್ಮೆ ಉಡುಪುಗಳನ್ನು ಧರಿಸಿ, ಪರಸ್ಪರ ಎದುರು-ಬದುರು ಕುಳಿತಿರುವರು.

44:54

كَذَٰلِكَ وَزَوَّجۡنَٰهُم بِحُورٍ عِينٖ ﴿54﴾

Transliteration: Kathalika wazawwajnahum bihoorin AAeenin

Translation: (ಅವರ ಸ್ಥಿತಿ) ಈ ರೀತಿಯಾಗಿದೆ. ನಾವು ಅರಳಿದ ಕಣ್ಣುಗಳ ಬೆಳ್ಳಗಿನ ಸ್ತ್ರೀಯರನ್ನು ಅವರಿಗೆ ವಿವಾಹ ಮಾಡಿಕೊಡುವೆವು.

44:55

يَدۡعُونَ فِيهَا بِكُلِّ فَٰكِهَةٍ ءَامِنِينَ ﴿55﴾

Transliteration: YadAAoona feeha bikulli fakihatin amineena

Translation: ಅವರು ನಿರ್ಭಯ ಸ್ಥಿತಿಯಲ್ಲಿದ್ದು ಎಲ್ಲ ತರಹದ ಹಣ್ಣುಗಳನ್ನು ಬೇಡುವರು.

44:56

لَا يَذُوقُونَ فِيهَا ٱلۡمَوۡتَ إِلَّا ٱلۡمَوۡتَةَ ٱلۡأُولَىٰۖ وَوَقَىٰهُمۡ عَذَابَ ٱلۡجَحِيمِ ﴿56﴾

Transliteration: La yathooqoona feeha almawta illa almawtata aloola wawaqahum AAathaba aljaheemi

Translation: ಅವರು ಮೊದಲನೆಯ ಮರಣದ ಹೊರತು ಬೇರೊಂದು ಮರಣದ ರುಚಿಯನ್ನು ನೋಡುವುದಿಲ್ಲ. ಅವನು ಅವರನ್ನು ನರಕ ಶಿಕ್ಷೆಯಿಂದ ಪಾರು ಮಾಡುವನು.

44:57

فَضۡلٗا مِّن رَّبِّكَۚ ذَٰلِكَ هُوَ ٱلۡفَوۡزُ ٱلۡعَظِيمُ ﴿57﴾

Transliteration: Fadlan min rabbika thalika huwa alfawzu alAAatheemu

Translation: ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಔದಾರ್ಯವಾಗಿದೆ. ಇದೇ ಮಹಾ ಯಶಸ್ಸು.

44:58

فَإِنَّمَا يَسَّرۡنَٰهُ بِلِسَانِكَ لَعَلَّهُمۡ يَتَذَكَّرُونَ ﴿58﴾

Transliteration: Fainnama yassarnahu bilisanika laAAallahum yatathakkaroona

Translation: ಅವರು ಉಪದೇಶವನ್ನು ಪಡೆಯುವುದಕ್ಕಾಗಿ ನಾವು ಇದನ್ನು (ಕುರ್‌ಆನನ್ನು) ನಿಮ್ಮ ಭಾಷೆಯಲ್ಲಿ ಸರಳಗೊಳಿಸಿದ್ದೇವೆ.

44:59

فَٱرۡتَقِبۡ إِنَّهُم مُّرۡتَقِبُونَ ﴿59﴾

Transliteration: Fairtaqib innahum murtaqiboona

Translation: ನೀವು ಕಾಯಿರಿ. ಅವರು ಕೂಡ ಕಾಯುತ್ತಿದ್ದಾರೆ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download