وَٱلذَّـٰرِيَٰتِ ذَرۡوٗا ﴿1﴾وَٱلذَّـٰرِيَٰتِ ذَرۡوٗا
Transliteration: Waalththariyati tharwan
Translation: ಬಲವಾಗಿ ಧೂಳಿಯನ್ನು ಹರಡುವ (ಗಾಳಿಯ) ಮೇಲಾಣೆ!
وَٱلذَّـٰرِيَٰتِ ذَرۡوٗا ﴿1﴾وَٱلذَّـٰرِيَٰتِ ذَرۡوٗا
Transliteration: Waalththariyati tharwan
Translation: ಬಲವಾಗಿ ಧೂಳಿಯನ್ನು ಹರಡುವ (ಗಾಳಿಯ) ಮೇಲಾಣೆ!
فَٱلۡحَٰمِلَٰتِ وِقۡرٗا ﴿2﴾فَٱلۡحَٰمِلَٰتِ وِقۡرٗا
Transliteration: Faalhamilati wiqran
Translation: ಭಾರವನ್ನು ಹೊರುವ (ಮೋಡಗಳ) ಮೇಲಾಣೆ!
فَٱلۡجَٰرِيَٰتِ يُسۡرٗا ﴿3﴾فَٱلۡجَٰرِيَٰتِ يُسۡرٗا
Transliteration: Faaljariyati yusran
Translation: ಸುಗಮವಾಗಿ ಸಂಚರಿಸುವ (ಹಡಗುಗಳ) ಮೇಲಾಣೆ!
فَٱلۡمُقَسِّمَٰتِ أَمۡرًا ﴿4﴾فَٱلۡمُقَسِّمَٰتِ أَمۡرًا
Transliteration: Faalmuqassimati amran
Translation: ಕಾರ್ಯಗಳನ್ನು ವಿಂಗಡಿಸಿಕೊಡುವ (ದೇವದೂತರುಗಳ) ಮೇಲಾಣೆ!
إِنَّمَا تُوعَدُونَ لَصَادِقٞ ﴿5﴾إِنَّمَا تُوعَدُونَ لَصَادِقٞ
Transliteration: Innama tooAAadoona lasadiqun
Translation: ನಿಶ್ಚಯವಾಗಿಯೂ ನಿಮಗೆ ಎಚ್ಚರಿಕೆ ನೀಡಲಾಗುವ ವಿಷಯವು ಸತ್ಯವಾಗಿದೆ.
وَإِنَّ ٱلدِّينَ لَوَٰقِعٞ ﴿6﴾وَإِنَّ ٱلدِّينَ لَوَٰقِعٞ
Transliteration: Wainna alddeena lawaqiAAun
Translation: ನಿಶ್ಚಯವಾಗಿಯೂ ವಿಚಾರಣೆಯು ಸಂಭವಿಸಿಯೇ ತೀರುತ್ತದೆ.
وَٱلسَّمَآءِ ذَاتِ ٱلۡحُبُكِ ﴿7﴾وَٱلسَّمَآءِ ذَاتِ ٱلۡحُبُكِ
Transliteration: Waalssamai thati alhubuki
Translation: ಕಕ್ಷೆಗಳನ್ನು ಹೊಂದಿರುವ ಆಕಾಶದ ಮೇಲಾಣೆ!
إِنَّكُمۡ لَفِي قَوۡلٖ مُّخۡتَلِفٖ ﴿8﴾إِنَّكُمۡ لَفِي قَوۡلٖ مُّخۡتَلِفٖ
Transliteration: Innakum lafee qawlin mukhtalifin
Translation: ನಿಶ್ಚಯವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲಿದ್ದೀರಿ.
يُؤۡفَكُ عَنۡهُ مَنۡ أُفِكَ ﴿9﴾يُؤۡفَكُ عَنۡهُ مَنۡ أُفِكَ
Transliteration: Yufaku AAanhu man ofika
Translation: (ಸತ್ಯದಿಂದ) ತಪ್ಪಿಸಲ್ಪಟ್ಟವನು ಅದರಿಂದ (ಕುರ್‌ಆನ್‍ನಿಂದ) ತಪ್ಪಿಸಲ್ಪಡುತ್ತಾನೆ.
قُتِلَ ٱلۡخَرَّـٰصُونَ ﴿10﴾قُتِلَ ٱلۡخَرَّـٰصُونَ
Transliteration: Qutila alkharrasoona
Translation: ಆಧಾರರಹಿತ ಮಾತುಗಳನ್ನು ಹೇಳುವವರು ನಾಶವಾಗಿದ್ದಾರೆ.
ٱلَّذِينَ هُمۡ فِي غَمۡرَةٖ سَاهُونَ ﴿11﴾ٱلَّذِينَ هُمۡ فِي غَمۡرَةٖ سَاهُونَ
Transliteration: Allatheena hum fee ghamratin sahoona
Translation: ಅವರು ಅಜ್ಞಾನದಲ್ಲಿದ್ದಾರೆ ಮತ್ತು ಮರೆತುಬಿಟ್ಟಿದ್ದಾರೆ.
يَسۡـَٔلُونَ أَيَّانَ يَوۡمُ ٱلدِّينِ ﴿12﴾يَسۡـَٔلُونَ أَيَّانَ يَوۡمُ ٱلدِّينِ
Transliteration: Yasaloona ayyana yawmu alddeeni
Translation: “ಪ್ರತಿಫಲದ ದಿನ ಯಾವಾಗ?” ಎಂದು ಅವರು ಕೇಳುತ್ತಾರೆ.
يَوۡمَ هُمۡ عَلَى ٱلنَّارِ يُفۡتَنُونَ ﴿13﴾يَوۡمَ هُمۡ عَلَى ٱلنَّارِ يُفۡتَنُونَ
Transliteration: Yawma hum AAala alnnari yuftanoona
Translation: ಅವರನ್ನು ನರಕಾಗ್ನಿಯಲ್ಲಿ ಶಿಕ್ಷಿಸಲಾಗುವ ದಿನ.
ذُوقُواْ فِتۡنَتَكُمۡ هَٰذَا ٱلَّذِي كُنتُم بِهِۦ تَسۡتَعۡجِلُونَ ﴿14﴾ذُوقُواْ فِتۡنَتَكُمۡ هَٰذَا ٱلَّذِي كُنتُم بِهِۦ تَسۡتَعۡجِلُونَ
Transliteration: Thooqoo fitnatakum hatha allathee kuntum bihi tastaAAjiloona
Translation: (ಅವರೊಂದಿಗೆ ಹೇಳಲಾಗುವುದು): “ನಿಮ್ಮ ಶಿಕ್ಷೆಯ ರುಚಿಯನ್ನು ನೋಡಿರಿ. ಇದಕ್ಕೇ ನೀವು ತ್ವರೆ ಮಾಡುತ್ತಿದ್ದಿರಿ.”
إِنَّ ٱلۡمُتَّقِينَ فِي جَنَّـٰتٖ وَعُيُونٍ ﴿15﴾إِنَّ ٱلۡمُتَّقِينَ فِي جَنَّـٰتٖ وَعُيُونٍ
Transliteration: Inna almuttaqeena fee jannatin waAAuyoonin
Translation: ನಿಶ್ಚಯವಾಗಿಯೂ ದೇವಭಯವುಳ್ಳವರು ಸ್ವರ್ಗೋದ್ಯಾನಗಳಲ್ಲಿ ಮತ್ತು ತೊರೆಗಳಲ್ಲಿರುವರು.
ءَاخِذِينَ مَآ ءَاتَىٰهُمۡ رَبُّهُمۡۚ إِنَّهُمۡ كَانُواْ قَبۡلَ ذَٰلِكَ مُحۡسِنِينَ ﴿16﴾ءَاخِذِينَ مَآ ءَاتَىٰهُمۡ رَبُّهُمۡۚ إِنَّهُمۡ كَانُواْ قَبۡلَ ذَٰلِكَ مُحۡسِنِينَ
Transliteration: Akhitheena ma atahum rabbuhum innahum kanoo qabla thalika muhsineena
Translation: ಅವರಿಗೆ ಅವರ ಪರಿಪಾಲಕನು (ಅಲ್ಲಾಹು) ನೀಡಿದ್ದನ್ನು ಅವರು ಪಡೆಯುವರು. ನಿಶ್ಚಯವಾಗಿಯೂ ಇದಕ್ಕಿಂತ ಮೊದಲು ಅವರು ನೀತಿವಂತರಾಗಿದ್ದರು.
كَانُواْ قَلِيلٗا مِّنَ ٱلَّيۡلِ مَا يَهۡجَعُونَ ﴿17﴾كَانُواْ قَلِيلٗا مِّنَ ٱلَّيۡلِ مَا يَهۡجَعُونَ
Transliteration: Kanoo qaleelan mina allayli ma yahjaAAoona
Translation: ಅವರು ರಾತ್ರಿಯಲ್ಲಿ ಬಹಳ ಕಡಿಮೆ ನಿದ್ರಿಸುತ್ತಿದ್ದರು.
وَبِٱلۡأَسۡحَارِ هُمۡ يَسۡتَغۡفِرُونَ ﴿18﴾وَبِٱلۡأَسۡحَارِ هُمۡ يَسۡتَغۡفِرُونَ
Transliteration: Wabialashari hum yastaghfiroona
Translation: ಸಹರಿಯ ಸಮಯದಲ್ಲಿ ಅವರು (ಅಲ್ಲಾಹನಲ್ಲಿ) ಕ್ಷಮೆಯಾಚಿಸುತ್ತಿದ್ದರು.
وَفِيٓ أَمۡوَٰلِهِمۡ حَقّٞ لِّلسَّآئِلِ وَٱلۡمَحۡرُومِ ﴿19﴾وَفِيٓ أَمۡوَٰلِهِمۡ حَقّٞ لِّلسَّآئِلِ وَٱلۡمَحۡرُومِ
Transliteration: Wafee amwalihim haqqun lilssaili waalmahroomi
Translation: ಅವರ ಧನದಲ್ಲಿ ಬೇಡುವವರಿಗೆ ಮತ್ತು (ಉಪಜೀವನ) ತಡೆಯಲ್ಪಟ್ಟವರಿಗೆ ಹಕ್ಕಿತ್ತು.
وَفِي ٱلۡأَرۡضِ ءَايَٰتٞ لِّلۡمُوقِنِينَ ﴿20﴾وَفِي ٱلۡأَرۡضِ ءَايَٰتٞ لِّلۡمُوقِنِينَ
Transliteration: Wafee alardi ayatun lilmooqineena
Translation: ದೃಢವಿಶ್ವಾಸವುಳ್ಳವರಿಗೆ ಭೂಮಿಯಲ್ಲಿ ಅನೇಕ ದೃಷ್ಟಾಂತಗಳಿವೆ.
وَفِيٓ أَنفُسِكُمۡۚ أَفَلَا تُبۡصِرُونَ ﴿21﴾وَفِيٓ أَنفُسِكُمۡۚ أَفَلَا تُبۡصِرُونَ
Transliteration: Wafee anfusikum afala tubsiroona
Translation: ನಿಮ್ಮ ದೇಹಗಳಲ್ಲೂ ಕೂಡ. ಆದರೂ ನೀವು ನೋಡುವುದಿಲ್ಲವೇ?
وَفِي ٱلسَّمَآءِ رِزۡقُكُمۡ وَمَا تُوعَدُونَ ﴿22﴾وَفِي ٱلسَّمَآءِ رِزۡقُكُمۡ وَمَا تُوعَدُونَ
Transliteration: Wafee alssamai rizqukum wama tooAAadoona
Translation: ಆಕಾಶದಲ್ಲಿ ನಿಮ್ಮ ಉಪಜೀವನ ಮತ್ತು ನಿಮಗೆ ವಾಗ್ದಾನ ಮಾಡಲಾಗುವ ಎಲ್ಲವೂ ಇದೆ.
فَوَرَبِّ ٱلسَّمَآءِ وَٱلۡأَرۡضِ إِنَّهُۥ لَحَقّٞ مِّثۡلَ مَآ أَنَّكُمۡ تَنطِقُونَ ﴿23﴾فَوَرَبِّ ٱلسَّمَآءِ وَٱلۡأَرۡضِ إِنَّهُۥ لَحَقّٞ مِّثۡلَ مَآ أَنَّكُمۡ تَنطِقُونَ
Transliteration: Fawarabbi alssamai waalardi innahu lahaqqun mithla ma annakum tantiqoona
Translation: ಭೂಮ್ಯಾಕಾಶಗಳ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನೀವು ಹೇಗೆ ಮಾತನಾಡುತ್ತಿರುವಿರೋ ಹಾಗೆಯೇ ಇವೆಲ್ಲವೂ ಸತ್ಯವಾಗಿದೆ.[1]
هَلۡ أَتَىٰكَ حَدِيثُ ضَيۡفِ إِبۡرَٰهِيمَ ٱلۡمُكۡرَمِينَ ﴿24﴾هَلۡ أَتَىٰكَ حَدِيثُ ضَيۡفِ إِبۡرَٰهِيمَ ٱلۡمُكۡرَمِينَ
Transliteration: Hal ataka hadeethu dayfi ibraheema almukrameena
Translation: ಇಬ್ರಾಹೀಮರ ಸನ್ಮಾನ್ಯ ಅತಿಥಿಗಳ ಸಮಾಚಾರವು ನಿಮಗೆ ತಲುಪಿದೆಯೇ?
إِذۡ دَخَلُواْ عَلَيۡهِ فَقَالُواْ سَلَٰمٗاۖ قَالَ سَلَٰمٞ قَوۡمٞ مُّنكَرُونَ ﴿25﴾إِذۡ دَخَلُواْ عَلَيۡهِ فَقَالُواْ سَلَٰمٗاۖ قَالَ سَلَٰمٞ قَوۡمٞ مُّنكَرُونَ
Transliteration: Ith dakhaloo AAalayhi faqaloo salaman qala salamun qawmun munkaroona
Translation: ಅವರು ಇಬ್ರಾಹೀಮರ ಬಳಿಗೆ ಬಂದು ಸಲಾಂ ಹೇಳಿದ ಸಂದರ್ಭ. ಇಬ್ರಾಹೀಮ್ ಸಲಾಂಗೆ ಉತ್ತರಿಸಿ ಹೇಳಿದರು: “ನೀವು ಅಪರಿಚಿತ ಜನರಂತೆ ಕಾಣುತ್ತೀರಿ.”
فَرَاغَ إِلَىٰٓ أَهۡلِهِۦ فَجَآءَ بِعِجۡلٖ سَمِينٖ ﴿26﴾فَرَاغَ إِلَىٰٓ أَهۡلِهِۦ فَجَآءَ بِعِجۡلٖ سَمِينٖ
Transliteration: Faragha ila ahlihi fajaa biAAijlin sameenin
Translation: ನಂತರ ಅವರು ಆತುರದಿಂದ ತಮ್ಮ ಮನೆಯವರ ಕಡೆಗೆ ತೆರಳಿ ಒಂದು ಕೊಬ್ಬಿದ ಕರುವನ್ನು (ಬೇಯಿಸಿ) ತಂದರು.
فَقَرَّبَهُۥٓ إِلَيۡهِمۡ قَالَ أَلَا تَأۡكُلُونَ ﴿27﴾فَقَرَّبَهُۥٓ إِلَيۡهِمۡ قَالَ أَلَا تَأۡكُلُونَ
Transliteration: Faqarrabahu ilayhim qala ala takuloona
Translation: ಅದನ್ನು ಅವರ ಮುಂದೆ ಇಟ್ಟರು. ನಂತರ ಕೇಳಿದರು: “ನೀವೇಕೆ ತಿನ್ನುವುದಿಲ್ಲ?”
فَأَوۡجَسَ مِنۡهُمۡ خِيفَةٗۖ قَالُواْ لَا تَخَفۡۖ وَبَشَّرُوهُ بِغُلَٰمٍ عَلِيمٖ ﴿28﴾فَأَوۡجَسَ مِنۡهُمۡ خِيفَةٗۖ قَالُواْ لَا تَخَفۡۖ وَبَشَّرُوهُ بِغُلَٰمٍ عَلِيمٖ
Transliteration: Faawjasa minhum kheefatan qaloo la takhaf wabashsharoohu bighulamin AAaleemin
Translation: ಇಬ್ರಾಹೀಮರಿಗೆ ಅವರ ಬಗ್ಗೆ ಮನಸ್ಸಿನಲ್ಲಿ ಗಾಬರಿ ಉಂಟಾಯಿತು. ಅವರು ಹೇಳಿದರು: “ಗಾಬರಿಯಾಗಬೇಡಿ.” ಅವರು ಇಬ್ರಾಹೀಮರಿಗೆ ಜ್ಞಾನವಂತ ಮಗುವಿನ (ಜನನದ ಬಗ್ಗೆ) ಸುವಾರ್ತೆ ತಿಳಿಸಿದರು.
فَأَقۡبَلَتِ ٱمۡرَأَتُهُۥ فِي صَرَّةٖ فَصَكَّتۡ وَجۡهَهَا وَقَالَتۡ عَجُوزٌ عَقِيمٞ ﴿29﴾فَأَقۡبَلَتِ ٱمۡرَأَتُهُۥ فِي صَرَّةٖ فَصَكَّتۡ وَجۡهَهَا وَقَالَتۡ عَجُوزٌ عَقِيمٞ
Transliteration: Faaqbalati imraatuhu fee sarratin fasakkat wajhaha waqalat AAajoozun AAaqeemun
Translation: ಅವರ ಪತ್ನಿ ಸದ್ದು ಮಾಡುತ್ತಾ ಮುಂದಕ್ಕೆ ಬಂದು ತನ್ನ ಮುಖಕ್ಕೆ ಬಡಿದು ಹೇಳಿದರು: “ನಾನೊಬ್ಬ ಮುದುಕಿ ಮತ್ತು ಬಂಜೆಯಾಗಿದ್ದೇನೆ.”
قَالُواْ كَذَٰلِكِ قَالَ رَبُّكِۖ إِنَّهُۥ هُوَ ٱلۡحَكِيمُ ٱلۡعَلِيمُ ﴿30﴾قَالُواْ كَذَٰلِكِ قَالَ رَبُّكِۖ إِنَّهُۥ هُوَ ٱلۡحَكِيمُ ٱلۡعَلِيمُ
Transliteration: Qaloo kathaliki qala rabbuki innahu huwa alhakeemu alAAaleemu
Translation: ದೇವದೂತರುಗಳು ಹೇಳಿದರು: “ಈ ರೀತಿ ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದ್ದಾನೆ. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.”
قَالَ فَمَا خَطۡبُكُمۡ أَيُّهَا ٱلۡمُرۡسَلُونَ ﴿31﴾۞قَالَ فَمَا خَطۡبُكُمۡ أَيُّهَا ٱلۡمُرۡسَلُونَ
Transliteration: Qala fama khatbukum ayyuha almursaloona
Translation: ಇಬ್ರಾಹೀಮ್ ಕೇಳಿದರು: “ಓ ದೂತರೇ! ಇಲ್ಲಿ ನಿಮಗೇನು ಕೆಲಸವಿದೆಯೆಂದು ಬಂದಿದ್ದೀರಿ?”
قَالُوٓاْ إِنَّآ أُرۡسِلۡنَآ إِلَىٰ قَوۡمٖ مُّجۡرِمِينَ ﴿32﴾قَالُوٓاْ إِنَّآ أُرۡسِلۡنَآ إِلَىٰ قَوۡمٖ مُّجۡرِمِينَ
Transliteration: Qaloo inna orsilna ila qawmin mujrimeena
Translation: ಅವರು ಉತ್ತರಿಸಿದರು: “ನಮ್ಮನ್ನು ಅಪರಾಧಿಗಳಾದ ಜನರ ಬಳಿಗೆ ಕಳುಹಿಸಲಾಗಿದೆ.
لِنُرۡسِلَ عَلَيۡهِمۡ حِجَارَةٗ مِّن طِينٖ ﴿33﴾لِنُرۡسِلَ عَلَيۡهِمۡ حِجَارَةٗ مِّن طِينٖ
Transliteration: Linursila AAalayhim hijaratan min teenin
Translation: ಅವರ ಮೇಲೆ ಜೇಡಿಮಣ್ಣಿನ ಕಲ್ಲುಗಳನ್ನು ಸುರಿಸುವುದಕ್ಕಾಗಿ.
مُّسَوَّمَةً عِندَ رَبِّكَ لِلۡمُسۡرِفِينَ ﴿34﴾مُّسَوَّمَةً عِندَ رَبِّكَ لِلۡمُسۡرِفِينَ
Transliteration: Musawwamatan AAinda rabbika lilmusrifeena
Translation: ಅದು ಎಲ್ಲೆ ಮೀರಿದ ಜನರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಗುರುತು ಹಾಕಲಾದ ಕಲ್ಲುಗಳಾಗಿವೆ.”
فَأَخۡرَجۡنَا مَن كَانَ فِيهَا مِنَ ٱلۡمُؤۡمِنِينَ ﴿35﴾فَأَخۡرَجۡنَا مَن كَانَ فِيهَا مِنَ ٱلۡمُؤۡمِنِينَ
Transliteration: Faakhrajna man kana feeha mina almumineena
Translation: ನಾವು ಅಲ್ಲಿದ್ದ ಎಲ್ಲಾ ಸತ್ಯವಿಶ್ವಾಸಿಗಳನ್ನು ಹೊರತೆಗೆದೆವು (ರಕ್ಷಿಸಿದೆವು).
فَمَا وَجَدۡنَا فِيهَا غَيۡرَ بَيۡتٖ مِّنَ ٱلۡمُسۡلِمِينَ ﴿36﴾فَمَا وَجَدۡنَا فِيهَا غَيۡرَ بَيۡتٖ مِّنَ ٱلۡمُسۡلِمِينَ
Transliteration: Fama wajadna feeha ghayra baytin mina almuslimeena
Translation: ಆದರೆ ನಾವು ಅಲ್ಲಿ ಮುಸ್ಲಿಮರಿಗೆ ಸೇರಿದ ಒಂದೇ ಒಂದು ಮನೆಯನ್ನು ಮಾತ್ರ ಕಂಡೆವು.
وَتَرَكۡنَا فِيهَآ ءَايَةٗ لِّلَّذِينَ يَخَافُونَ ٱلۡعَذَابَ ٱلۡأَلِيمَ ﴿37﴾وَتَرَكۡنَا فِيهَآ ءَايَةٗ لِّلَّذِينَ يَخَافُونَ ٱلۡعَذَابَ ٱلۡأَلِيمَ
Transliteration: Watarakna feeha ayatan lillatheena yakhafoona alAAathaba alaleema
Translation: ಯಾತನಾಮಯ ಶಿಕ್ಷೆಯನ್ನು ಭಯಪಡುವವರಿಗೆ ನಾವು ಅಲ್ಲಿ ಒಂದು ದೃಷ್ಟಾಂತವನ್ನು ಉಳಿಸಿದೆವು.
وَفِي مُوسَىٰٓ إِذۡ أَرۡسَلۡنَٰهُ إِلَىٰ فِرۡعَوۡنَ بِسُلۡطَٰنٖ مُّبِينٖ ﴿38﴾وَفِي مُوسَىٰٓ إِذۡ أَرۡسَلۡنَٰهُ إِلَىٰ فِرۡعَوۡنَ بِسُلۡطَٰنٖ مُّبِينٖ
Transliteration: Wafee moosa ith arsalnahu ila firAAawna bisultanin mubeenin
Translation: ಮೂಸಾರ ಸಮಾಚಾರದಲ್ಲೂ (ದೃಷ್ಟಾಂತಗಳಿವೆ). ನಾವು ಅವರನ್ನು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಫರೋಹನ ಬಳಿಗೆ ಕಳುಹಿಸಿದ ಸಂದರ್ಭ.
فَتَوَلَّىٰ بِرُكۡنِهِۦ وَقَالَ سَٰحِرٌ أَوۡ مَجۡنُونٞ ﴿39﴾فَتَوَلَّىٰ بِرُكۡنِهِۦ وَقَالَ سَٰحِرٌ أَوۡ مَجۡنُونٞ
Transliteration: Fatawalla biruknihi waqala sahirun aw majnoonun
Translation: ಆದರೆ ಅವನು ತನ್ನ ಶಕ್ತಿಸಾಮರ್ಥ್ಯಕ್ಕೆ ಮರುಳಾಗಿ ಮುಖ ತಿರುಗಿಸುತ್ತಾ ಹೇಳಿದನು: “ಇವನೊಬ್ಬ ಮಾಟಗಾರ ಅಥವಾ ಮಾನಸಿಕ ಅಸ್ವಸ್ಥ.”
فَأَخَذۡنَٰهُ وَجُنُودَهُۥ فَنَبَذۡنَٰهُمۡ فِي ٱلۡيَمِّ وَهُوَ مُلِيمٞ ﴿40﴾فَأَخَذۡنَٰهُ وَجُنُودَهُۥ فَنَبَذۡنَٰهُمۡ فِي ٱلۡيَمِّ وَهُوَ مُلِيمٞ
Transliteration: Faakhathnahu wajunoodahu fanabathnahum fee alyammi wahuwa muleemun
Translation: ಆದ್ದರಿಂದ ನಾವು ಅವನನ್ನು ಮತ್ತು ಅವನ ಸೈನ್ಯಗಳನ್ನು ಹಿಡಿದು ಸಮುದ್ರಕ್ಕೆ ಎಸೆದವು. ಅವನು ಆಕ್ಷೇಪಾರ್ಹನಾಗಿದ್ದನು.
وَفِي عَادٍ إِذۡ أَرۡسَلۡنَا عَلَيۡهِمُ ٱلرِّيحَ ٱلۡعَقِيمَ ﴿41﴾وَفِي عَادٍ إِذۡ أَرۡسَلۡنَا عَلَيۡهِمُ ٱلرِّيحَ ٱلۡعَقِيمَ
Transliteration: Wafee AAadin ith arsalna AAalayhimu alrreeha alAAaqeema
Translation: ಆದ್ ಗೋತ್ರದಲ್ಲೂ (ದೃಷ್ಟಾಂತವಿದೆ). ನಾವು ಅವರ ವಿರುದ್ಧ ಬರಡು ಗಾಳಿಯನ್ನು ಕಳುಹಿಸಿದ ಸಂದರ್ಭ.
مَا تَذَرُ مِن شَيۡءٍ أَتَتۡ عَلَيۡهِ إِلَّا جَعَلَتۡهُ كَٱلرَّمِيمِ ﴿42﴾مَا تَذَرُ مِن شَيۡءٍ أَتَتۡ عَلَيۡهِ إِلَّا جَعَلَتۡهُ كَٱلرَّمِيمِ
Transliteration: Ma tatharu min shayin atat AAalayhi illa jaAAalathu kaalrrameemi
Translation: ಅದು ಯಾವೆಲ್ಲಾ ವಸ್ತುಗಳ ಮೇಲೆ ಬೀಸುತ್ತಿತ್ತೋ ಅವೆಲ್ಲವನ್ನೂ ಕೊಳೆತ ತುಣುಕುಗಳಂತೆ (ಚೂರು ಚೂರು) ಮಾಡುತ್ತಿತ್ತು.
وَفِي ثَمُودَ إِذۡ قِيلَ لَهُمۡ تَمَتَّعُواْ حَتَّىٰ حِينٖ ﴿43﴾وَفِي ثَمُودَ إِذۡ قِيلَ لَهُمۡ تَمَتَّعُواْ حَتَّىٰ حِينٖ
Transliteration: Wafee thamooda ith qeela lahum tamattaAAoo hatta heenin
Translation: ಸಮೂದ್ ಗೋತ್ರದಲ್ಲೂ (ದೃಷ್ಟಾಂತವಿದೆ). “ಒಂದು ಅವಧಿಯವರೆಗೆ ಆನಂದಿಸಿರಿ” ಎಂದು ಅವರೊಡನೆ ಹೇಳಲಾದ ಸಂದರ್ಭ.
فَعَتَوۡاْ عَنۡ أَمۡرِ رَبِّهِمۡ فَأَخَذَتۡهُمُ ٱلصَّـٰعِقَةُ وَهُمۡ يَنظُرُونَ ﴿44﴾فَعَتَوۡاْ عَنۡ أَمۡرِ رَبِّهِمۡ فَأَخَذَتۡهُمُ ٱلصَّـٰعِقَةُ وَهُمۡ يَنظُرُونَ
Transliteration: FaAAataw AAan amri rabbihim faakhathathumu alssaAAiqatu wahum yanthuroona
Translation: ಆದರೆ ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಧಿಕ್ಕರಿಸಿದರು. ಆಗ ಅವರು ನೋಡುತ್ತಿದ್ದಂತೆಯೇ ಭಯಾನಕ ಶಬ್ದವು ಅವರನ್ನು ಹಿಡಿಯಿತು.
فَمَا ٱسۡتَطَٰعُواْ مِن قِيَامٖ وَمَا كَانُواْ مُنتَصِرِينَ ﴿45﴾فَمَا ٱسۡتَطَٰعُواْ مِن قِيَامٖ وَمَا كَانُواْ مُنتَصِرِينَ
Transliteration: Fama istataAAoo min qiyamin wama kanoo muntasireena
Translation: ಅವರಿಗೆ ಎದ್ದು ನಿಲ್ಲಲು ಕೂಡ ಸಾಧ್ಯವಾಗಲಿಲ್ಲ. ಅವರಿಗೆ ಸ್ವಯಂ ರಕ್ಷಿಸಿಕೊಳ್ಳಲೂ ಸಾಧ್ಯವಾಗಲಿಲ್ಲ.
وَقَوۡمَ نُوحٖ مِّن قَبۡلُۖ إِنَّهُمۡ كَانُواْ قَوۡمٗا فَٰسِقِينَ ﴿46﴾وَقَوۡمَ نُوحٖ مِّن قَبۡلُۖ إِنَّهُمۡ كَانُواْ قَوۡمٗا فَٰسِقِينَ
Transliteration: Waqawma noohin min qablu innahum kanoo qawman fasiqeena
Translation: ಅದಕ್ಕಿಂತ ಮೊದಲು ನೂಹರ ಜನರಿಗೂ (ಇದೇ ಸ್ಥಿತಿ ಉಂಟಾಗಿತ್ತು). ನಿಶ್ಚಯವಾಗಿಯೂ ಅವರು ದುಷ್ಕರ್ಮಿಗಳಾದ ಜನರಾಗಿದ್ದರು.
وَٱلسَّمَآءَ بَنَيۡنَٰهَا بِأَيۡيْدٖ وَإِنَّا لَمُوسِعُونَ ﴿47﴾وَٱلسَّمَآءَ بَنَيۡنَٰهَا بِأَيۡيْدٖ وَإِنَّا لَمُوسِعُونَ
Transliteration: Waalssamaa banaynaha biaydin wainna lamoosiAAoona
Translation: ನಾವು ಆಕಾಶವನ್ನು ಕೈಗಳಿಂದ ನಿರ್ಮಿಸಿದ್ದೇವೆ. ನಿಶ್ಚಯವಾಗಿಯೂ ನಾವು ವಿಸ್ತರಿಸುವವರಾಗಿದ್ದೇವೆ.
وَٱلۡأَرۡضَ فَرَشۡنَٰهَا فَنِعۡمَ ٱلۡمَٰهِدُونَ ﴿48﴾وَٱلۡأَرۡضَ فَرَشۡنَٰهَا فَنِعۡمَ ٱلۡمَٰهِدُونَ
Transliteration: Waalarda farashnaha faniAAma almahidoona
Translation: ನಾವು ಭೂಮಿಯನ್ನು ಹಾಸಿನಂತೆ ಹರಡಿದ್ದೇವೆ. ನಾವು ಅತ್ಯುತ್ತಮವಾಗಿ ಹಾಸುವವರಾಗಿದ್ದೇವೆ.
وَمِن كُلِّ شَيۡءٍ خَلَقۡنَا زَوۡجَيۡنِ لَعَلَّكُمۡ تَذَكَّرُونَ ﴿49﴾وَمِن كُلِّ شَيۡءٍ خَلَقۡنَا زَوۡجَيۡنِ لَعَلَّكُمۡ تَذَكَّرُونَ
Transliteration: Wamin kulli shayin khalaqna zawjayni laAAallakum tathakkaroona
Translation: ನಾವು ಎಲ್ಲ ವಸ್ತುಗಳನ್ನೂ ಜೋಡಿಯಾಗಿ ಸೃಷ್ಟಿಸಿದ್ದೇವೆ. ನೀವು ಉಪದೇಶ ಸ್ವೀಕರಿಸುವುದಕ್ಕಾಗಿ.
فَفِرُّوٓاْ إِلَى ٱللَّهِۖ إِنِّي لَكُم مِّنۡهُ نَذِيرٞ مُّبِينٞ ﴿50﴾فَفِرُّوٓاْ إِلَى ٱللَّهِۖ إِنِّي لَكُم مِّنۡهُ نَذِيرٞ مُّبِينٞ
Transliteration: Fafirroo ila Allahi innee lakum minhu natheerun mubeenun
Translation: ಆದ್ದರಿಂದ ನೀವು ಅಲ್ಲಾಹನ ಕಡೆಗೆ (ಪಶ್ಚಾತ್ತಾಪದೊಂದಿಗೆ) ಧಾವಿಸಿರಿ. ನಿಶ್ಚಯವಾಗಿಯೂ ನಾನು ನಿಮಗೆ ಅವನ ಕಡೆಯ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.
وَلَا تَجۡعَلُواْ مَعَ ٱللَّهِ إِلَٰهًا ءَاخَرَۖ إِنِّي لَكُم مِّنۡهُ نَذِيرٞ مُّبِينٞ ﴿51﴾وَلَا تَجۡعَلُواْ مَعَ ٱللَّهِ إِلَٰهًا ءَاخَرَۖ إِنِّي لَكُم مِّنۡهُ نَذِيرٞ مُّبِينٞ
Transliteration: Wala tajAAaloo maAAa Allahi ilahan akhara innee lakum minhu natheerun mubeenun
Translation: ನೀವು ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ಮಾಡಿಕೊಳ್ಳಬೇಡಿ. ನಿಶ್ಚಯವಾಗಿಯೂ ನಾನು ನಿಮಗೆ ಅವನ ಕಡೆಯ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.
كَذَٰلِكَ مَآ أَتَى ٱلَّذِينَ مِن قَبۡلِهِم مِّن رَّسُولٍ إِلَّا قَالُواْ سَاحِرٌ أَوۡ مَجۡنُونٌ ﴿52﴾كَذَٰلِكَ مَآ أَتَى ٱلَّذِينَ مِن قَبۡلِهِم مِّن رَّسُولٍ إِلَّا قَالُواْ سَاحِرٌ أَوۡ مَجۡنُونٌ
Transliteration: Kathalika ma ata allatheena min qablihim min rasoolin illa qaloo sahirun aw majnoonun
Translation: ಈ ರೀತಿ ಇವರಿಗಿಂತ ಮೊದಲಿನವರ ಬಳಿಗೆ ಸಂದೇಶವಾಹಕರು ಬಂದಾಗಲೆಲ್ಲಾ ಅವರು ಅವರನ್ನು ಮಾಟಗಾರ ಅಥವಾ ಮಾನಸಿಕ ಅಸ್ವಸ್ಥ ಎಂದೇ ಹೇಳುತ್ತಿದ್ದರು.
أَتَوَاصَوۡاْ بِهِۦۚ بَلۡ هُمۡ قَوۡمٞ طَاغُونَ ﴿53﴾أَتَوَاصَوۡاْ بِهِۦۚ بَلۡ هُمۡ قَوۡمٞ طَاغُونَ
Transliteration: Atawasaw bihi bal hum qawmun taghoona
Translation: ಇವರು ಈ ಮಾತನ್ನು ಪರಸ್ಪರ ಉಪದೇಶ ಮಾಡಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅವರು ಅತಿರೇಕಿಗಳಾದ ಜನರಾಗಿದ್ದಾರೆ.
فَتَوَلَّ عَنۡهُمۡ فَمَآ أَنتَ بِمَلُومٖ ﴿54﴾فَتَوَلَّ عَنۡهُمۡ فَمَآ أَنتَ بِمَلُومٖ
Transliteration: Fatawalla AAanhum fama anta bimaloomin
Translation: ಆದ್ದರಿಂದ ನೀವು ಅವರನ್ನು ಬಿಟ್ಟು ವಿಮುಖರಾಗಿರಿ. ನಿಮ್ಮ ಮೇಲೆ ಯಾವುದೇ ಆಕ್ಷೇಪವಿಲ್ಲ.
وَذَكِّرۡ فَإِنَّ ٱلذِّكۡرَىٰ تَنفَعُ ٱلۡمُؤۡمِنِينَ ﴿55﴾وَذَكِّرۡ فَإِنَّ ٱلذِّكۡرَىٰ تَنفَعُ ٱلۡمُؤۡمِنِينَ
Transliteration: Wathakkir fainna alththikra tanfaAAu almumineena
Translation: ನೀವು ಉಪದೇಶ ಮಾಡಿರಿ. ನಿಶ್ಚಯವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಪ್ರಯೋಜನ ನೀಡುತ್ತದೆ.
وَمَا خَلَقۡتُ ٱلۡجِنَّ وَٱلۡإِنسَ إِلَّا لِيَعۡبُدُونِ ﴿56﴾وَمَا خَلَقۡتُ ٱلۡجِنَّ وَٱلۡإِنسَ إِلَّا لِيَعۡبُدُونِ
Transliteration: Wama khalaqtu aljinna waalinsa illa liyaAAbudooni
Translation: ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿದ್ದು ನನ್ನನ್ನು ಆರಾಧಿಸುವುದಕ್ಕಾಗಿ ಮಾತ್ರ.
مَآ أُرِيدُ مِنۡهُم مِّن رِّزۡقٖ وَمَآ أُرِيدُ أَن يُطۡعِمُونِ ﴿57﴾مَآ أُرِيدُ مِنۡهُم مِّن رِّزۡقٖ وَمَآ أُرِيدُ أَن يُطۡعِمُونِ
Transliteration: Ma oreedu minhum min rizqin wama oreedu an yutAAimooni
Translation: ನಾನು ಅವರಿಂದ ಯಾವುದೇ ಉಪಜೀವನವನ್ನು ಬಯಸುವುದಿಲ್ಲ. ಅವರು ನನಗೆ ಆಹಾರ ನೀಡಬೇಕೆಂದೂ ನಾನು ಬಯಸುವುದಿಲ್ಲ.
إِنَّ ٱللَّهَ هُوَ ٱلرَّزَّاقُ ذُو ٱلۡقُوَّةِ ٱلۡمَتِينُ ﴿58﴾إِنَّ ٱللَّهَ هُوَ ٱلرَّزَّاقُ ذُو ٱلۡقُوَّةِ ٱلۡمَتِينُ
Transliteration: Inna Allaha huwa alrrazzaqu thoo alquwwati almateenu
Translation: ನಿಶ್ಚಯವಾಗಿಯೂ ಅಲ್ಲಾಹನೇ ಎಲ್ಲರಿಗೂ ಉಪಜೀವನ ನೀಡುವವನು. ಅವನು ಮಹಾಶಕ್ತಿಶಾಲಿ ಮತ್ತು ಬಲಿಷ್ಠನಾಗಿದ್ದಾನೆ.
فَإِنَّ لِلَّذِينَ ظَلَمُواْ ذَنُوبٗا مِّثۡلَ ذَنُوبِ أَصۡحَٰبِهِمۡ فَلَا يَسۡتَعۡجِلُونِ ﴿59﴾فَإِنَّ لِلَّذِينَ ظَلَمُواْ ذَنُوبٗا مِّثۡلَ ذَنُوبِ أَصۡحَٰبِهِمۡ فَلَا يَسۡتَعۡجِلُونِ
Transliteration: Fainna lillatheena thalamoo thanooban mithla thanoobi ashabihim fala yastaAAjiloona
Translation: ಅಕ್ರಮವೆಸಗಿದವರಿಗೆ ಅವರ ಸಂಗಡಿಗರಿಗೆ ದೊರೆತ (ಶಿಕ್ಷೆಯ) ಪಾಲಿನಂತೆಯೇ ಒಂದು ಪಾಲು ದೊರೆಯಲಿದೆ. ಆದ್ದರಿಂದ ಅವರು ನನ್ನೊಡನೆ ತ್ವರೆ ಮಾಡದಿರಲಿ.
فَوَيۡلٞ لِّلَّذِينَ كَفَرُواْ مِن يَوۡمِهِمُ ٱلَّذِي يُوعَدُونَ ﴿60﴾فَوَيۡلٞ لِّلَّذِينَ كَفَرُواْ مِن يَوۡمِهِمُ ٱلَّذِي يُوعَدُونَ
Transliteration: Fawaylun lillatheena kafaroo min yawmihimu allathee yooAAadoona
Translation: ಅವರಿಗೆ ವಾಗ್ದಾನ ಮಾಡಲಾದ ಆ ದಿನದ ಕಾರಣದಿಂದ ಸತ್ಯನಿಷೇಧಿಗಳಿಗೆ ವಿನಾಶವಿದೆ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download