quranm◉

Surah Al-Haqqah transliteration

◉ ಸೂರಾ · ∞

69:1

ٱلۡحَآقَّةُ ﴿1﴾

Transliteration: Alhaqqatu

Translation: ಸತ್ಯವಾಗಿ ಸಂಭವಿಸುವಂತದ್ದು.

69:2

مَا ٱلۡحَآقَّةُ ﴿2﴾

Transliteration: Ma alhaqqatu

Translation: ಸತ್ಯವಾಗಿ ಸಂಭವಿಸುವಂತದ್ದು ಏನು?

69:3

وَمَآ أَدۡرَىٰكَ مَا ٱلۡحَآقَّةُ ﴿3﴾

Transliteration: Wama adraka ma alhaqqatu

Translation: ಸತ್ಯವಾಗಿ ಸಂಭವಿಸುವಂತದ್ದು ಏನೆಂದು ನಿಮಗೇನು ಗೊತ್ತು?

69:4

كَذَّبَتۡ ثَمُودُ وَعَادُۢ بِٱلۡقَارِعَةِ ﴿4﴾

Transliteration: Kaththabat thamoodu waAAadun bialqariAAati

Translation: ಸಮೂದ್ ಮತ್ತು ಆದ್ ಗೋತ್ರದವರು ಆ ಭಯಾನಕ ಘಟನೆಯನ್ನು (ಪುನರುತ್ಥಾನವನ್ನು) ನಿಷೇಧಿಸಿದರು.

69:5

فَأَمَّا ثَمُودُ فَأُهۡلِكُواْ بِٱلطَّاغِيَةِ ﴿5﴾

Transliteration: Faamma thamoodu faohlikoo bialttaghiyati

Translation: ಸಮೂದ್ ಗೋತ್ರದವರನ್ನು ಮಿತಿಮೀರಿದ (ಭಯಾನಕ ಸದ್ದಿನ) ಮೂಲಕ ನಾಶ ಮಾಡಲಾಯಿತು.

69:6

وَأَمَّا عَادٞ فَأُهۡلِكُواْ بِرِيحٖ صَرۡصَرٍ عَاتِيَةٖ ﴿6﴾

Transliteration: Waamma AAadun faohlikoo bireehin sarsarin AAatiyatin

Translation: ಆದ್ ಗೋತ್ರದವರನ್ನು ಅತಿಶೀತ ಉಗ್ರ ಗಾಳಿಯ ಮೂಲಕ ನಾಶ ಮಾಡಲಾಯಿತು.

69:7

سَخَّرَهَا عَلَيۡهِمۡ سَبۡعَ لَيَالٖ وَثَمَٰنِيَةَ أَيَّامٍ حُسُومٗاۖ فَتَرَى ٱلۡقَوۡمَ فِيهَا صَرۡعَىٰ كَأَنَّهُمۡ أَعۡجَازُ نَخۡلٍ خَاوِيَةٖ ﴿7﴾

Transliteration: Sakhkharaha AAalayhim sabAAa layalin wathamaniyata ayyamin husooman fatara alqawma feeha sarAAa kaannahum aAAjazu nakhlin khawiyatun

Translation: ಅಲ್ಲಾಹು ಅದನ್ನು ಅವರ ಮೇಲೆ ಏಳು ರಾತ್ರಿಗಳು ಮತ್ತು ಎಂಟು ದಿನಗಳ ಕಾಲ ನಿರಂತರವಾಗಿ ಹೇರಿದನು; ನಂತರ ಆ ಜನರು—ಕುಸಿದು ಬಿದ್ದ ಖರ್ಜೂರ ಮರಗಳ ಕಾಂಡಗಳೋ ಎಂಬಂತೆ—ಬೋರಲು ಬಿದ್ದು ಸತ್ತಿರುವುದು ನಿಮಗೆ ಕಾಣಬಹುದು.

69:8

فَهَلۡ تَرَىٰ لَهُم مِّنۢ بَاقِيَةٖ ﴿8﴾

Transliteration: Fahal tara lahum min baqiyatin

Translation: ಅವರಲ್ಲಿ ಯಾರಾದರೂ ಬಾಕಿಯುಳಿದದ್ದನ್ನು ನೀವು ಕಂಡಿದ್ದೀರಾ?

69:9

وَجَآءَ فِرۡعَوۡنُ وَمَن قَبۡلَهُۥ وَٱلۡمُؤۡتَفِكَٰتُ بِٱلۡخَاطِئَةِ ﴿9﴾

Transliteration: Wajaa firAAawnu waman qablahu waalmutafikatu bialkhatiati

Translation: ಫರೋಹ, ಅವನಿಗಿಂತ ಮೊದಲಿನವರು ಮತ್ತು ಬುಡಮೇಲುಗೊಳಿಸಲಾದ ಊರಿನವರು ಪಾಪಗಳೊಂದಿಗೆ ಬಂದರು.

69:10

فَعَصَوۡاْ رَسُولَ رَبِّهِمۡ فَأَخَذَهُمۡ أَخۡذَةٗ رَّابِيَةً ﴿10﴾

Transliteration: FaAAasaw rasoola rabbihim faakhathahum akhthatan rabiyatan

Translation: ಅವರು ಅವರ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಿಗೆ ಅವಿಧೇಯತೆ ತೋರಿದರು. ಆಗ ಅಲ್ಲಾಹು ಅವರನ್ನು ಕಠೋರವಾದ ಹಿಡಿತದಿಂದ ಹಿಡಿದನು.

69:11

إِنَّا لَمَّا طَغَا ٱلۡمَآءُ حَمَلۡنَٰكُمۡ فِي ٱلۡجَارِيَةِ ﴿11﴾

Transliteration: Inna lamma tagha almao hamalnakum fee aljariyati

Translation: ನಿಶ್ಚಯವಾಗಿಯೂ ನೀರು ಎಲ್ಲೆ ಮೀರಿ ಹರಿದಾಗ ನಾವು ನಿಮ್ಮನ್ನು ನಾವೆಯಲ್ಲಿ ಹೊತ್ತೊಯ್ದೆವು.

69:12

لِنَجۡعَلَهَا لَكُمۡ تَذۡكِرَةٗ وَتَعِيَهَآ أُذُنٞ وَٰعِيَةٞ ﴿12﴾

Transliteration: LinajAAalaha lakum tathkiratan wataAAiyaha othunun waAAiyatun

Translation: ನಾವು ಅದನ್ನು ನಿಮಗೆ ಒಂದು ನೆನಪಾಗಿ ಮಾಡಲು ಮತ್ತು ಜಾಗೃತ ಕಿವಿಯು ಅದರ ಬಗ್ಗೆ ಜಾಗೃತವಾಗಿರಲು.

69:13

فَإِذَا نُفِخَ فِي ٱلصُّورِ نَفۡخَةٞ وَٰحِدَةٞ ﴿13﴾

Transliteration: Faitha nufikha fee alssoori nafkhatun wahidatun

Translation: ಕಹಳೆಯಲ್ಲಿ ಒಂದು ಊದುವಿಕೆಯನ್ನು ಊದಲಾದಾಗ.

69:14

وَحُمِلَتِ ٱلۡأَرۡضُ وَٱلۡجِبَالُ فَدُكَّتَا دَكَّةٗ وَٰحِدَةٗ ﴿14﴾

Transliteration: Wahumilati alardu waaljibalu fadukkata dakkatan wahidatan

Translation: ಭೂಮಿ ಮತ್ತು ಪರ್ವತಗಳನ್ನು ಎತ್ತಲಾಗುವುದು ಮತ್ತು ಅವೆರಡನ್ನು ಒಂದೇ ಹೊಡೆತಕ್ಕೆ ಪುಡಿಪುಡಿ ಮಾಡಲಾಗುವುದು.

69:15

فَيَوۡمَئِذٖ وَقَعَتِ ٱلۡوَاقِعَةُ ﴿15﴾

Transliteration: Fayawmaithin waqaAAati alwaqiAAatu

Translation: ಅಂದು ಆ ಸಂಭವಿಸುವಿಕೆಯು (ಪುನರುತ್ಥಾನವು) ಸಂಭವಿಸುವುದು.

69:16

وَٱنشَقَّتِ ٱلسَّمَآءُ فَهِيَ يَوۡمَئِذٖ وَاهِيَةٞ ﴿16﴾

Transliteration: Wainshaqqati alssamao fahiya yawmaithin wahiyatun

Translation: ಆಕಾಶವು ಇಬ್ಭಾಗವಾಗುವುದು ಮತ್ತು ಅಂದು ಅದು ಬಲಹೀನವಾಗಿರುವುದು.

69:17

وَٱلۡمَلَكُ عَلَىٰٓ أَرۡجَآئِهَاۚ وَيَحۡمِلُ عَرۡشَ رَبِّكَ فَوۡقَهُمۡ يَوۡمَئِذٖ ثَمَٰنِيَةٞ ﴿17﴾

Transliteration: Waalmalaku AAala arjaiha wayahmilu AAarsha rabbika fawqahum yawmaithin thamaniyatun

Translation: ದೇವದೂತರುಗಳು ಅದರ ತುದಿಗಳಲ್ಲಿರುವರು. ಅಂದು ಅವರ ಮೇಲ್ಭಾಗದಲ್ಲಿ ಎಂಟು (ದೇವದೂತರು) ನಿಮ್ಮ ಪರಿಪಾಲಕನ (ಅಲ್ಲಾಹನ) ಸಿಂಹಾಸನವನ್ನು ಎತ್ತಿಕೊಂಡಿರುವರು.

69:18

يَوۡمَئِذٖ تُعۡرَضُونَ لَا تَخۡفَىٰ مِنكُمۡ خَافِيَةٞ ﴿18﴾

Transliteration: Yawmaithin tuAAradoona la takhfa minkum khafiyatun

Translation: ಅಂದು ನಿಮ್ಮೆಲ್ಲರನ್ನೂ ಪ್ರದರ್ಶಿಸಲಾಗುವುದು. ನಿಮ್ಮ ಯಾವುದೇ ರಹಸ್ಯಗಳು ರಹಸ್ಯವಾಗಿರುವುದಿಲ್ಲ.

69:19

فَأَمَّا مَنۡ أُوتِيَ كِتَٰبَهُۥ بِيَمِينِهِۦ فَيَقُولُ هَآؤُمُ ٱقۡرَءُواْ كِتَٰبِيَهۡ ﴿19﴾

Transliteration: Faamma man ootiya kitabahu biyameenihi fayaqoolu haomu iqraoo kitabiyah

Translation: ಆದ್ದರಿಂದ ಯಾರಿಗೆ ಅವನ ಕರ್ಮಪುಸ್ತಕವನ್ನು ಬಲಗೈಯಲ್ಲಿ ನೀಡಲಾಗುತ್ತದೋ ಅವನು ಹೇಳುವನು: “ಇಗೋ! ನನ್ನ ಕರ್ಮಪುಸ್ತಕವನ್ನು ಓದಿರಿ!

69:20

إِنِّي ظَنَنتُ أَنِّي مُلَٰقٍ حِسَابِيَهۡ ﴿20﴾

Transliteration: Innee thanantu annee mulaqin hisabiyah

Translation: ನಿಶ್ಚಯವಾಗಿಯೂ, ನಾನು ನನ್ನ ವಿಚಾರಣೆಯನ್ನು ಎದುರಿಸಬೇಕಾಗಿದೆಯೆಂದು ನನಗೆ ಪೂರ್ಣ ನಂಬಿಕೆಯಿತ್ತು.”

69:21

فَهُوَ فِي عِيشَةٖ رَّاضِيَةٖ ﴿21﴾

Transliteration: Fahuwa fee AAeeshatin radiyatin

Translation: ಆದ್ದರಿಂದ ಅವನು ಸಂತೃಪ್ತ ಜೀವನದಲ್ಲಿರುವನು.

69:22

فِي جَنَّةٍ عَالِيَةٖ ﴿22﴾

Transliteration: Fee jannatin AAaliyatin

Translation: ಉನ್ನತ ಸ್ವರ್ಗದಲ್ಲಿ.

69:23

قُطُوفُهَا دَانِيَةٞ ﴿23﴾

Transliteration: Qutoofuha daniyatun

Translation: ಅದರ ಹಣ್ಣುಗಳು ಬಾಗಿಕೊಂಡಿರುವುವು.

69:24

كُلُواْ وَٱشۡرَبُواْ هَنِيٓـَٔۢا بِمَآ أَسۡلَفۡتُمۡ فِي ٱلۡأَيَّامِ ٱلۡخَالِيَةِ ﴿24﴾

Transliteration: Kuloo waishraboo haneean bima aslaftum fee alayyami alkhaliyati

Translation: (ಅವರೊಡನೆ ಹೇಳಲಾಗುವುದು): “ಕಳೆದುಹೋದ ದಿನಗಳಲ್ಲಿ ನೀವು ಮುಂದಕ್ಕೆ ಕಳುಹಿಸಿದ ಸತ್ಕರ್ಮಗಳ ಕಾರಣದಿಂದ ಸಂತೋಷವಾಗಿ ತಿನ್ನಿರಿ ಮತ್ತು ಕುಡಿಯಿರಿ.”

69:25

وَأَمَّا مَنۡ أُوتِيَ كِتَٰبَهُۥ بِشِمَالِهِۦ فَيَقُولُ يَٰلَيۡتَنِي لَمۡ أُوتَ كِتَٰبِيَهۡ ﴿25﴾

Transliteration: Waamma man ootiya kitabahu bishimalihi fayaqoolu ya laytanee lam oota kitabiyah

Translation: ಆದರೆ ಯಾರಿಗೆ ಅವನ ಕರ್ಮಪುಸ್ತಕವನ್ನು ಎಡಗೈಯಲ್ಲಿ ನೀಡಲಾಗುತ್ತದೋ ಅವನು ಹೇಳುವನು: “ನನಗೆ ನನ್ನ ಕರ್ಮಪುಸ್ತಕವನ್ನು ನೀಡದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!

69:26

وَلَمۡ أَدۡرِ مَا حِسَابِيَهۡ ﴿26﴾

Transliteration: Walam adri ma hisabiyah

Translation: ನನ್ನ ವಿಚಾರಣೆ ಏನೆಂದು ನನಗೆ ತಿಳಿಯದಿರುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!

69:27

يَٰلَيۡتَهَا كَانَتِ ٱلۡقَاضِيَةَ ﴿27﴾

Transliteration: Ya laytaha kanati alqadiyatu

Translation: ಮರಣದೊಂದಿಗೆ ಎಲ್ಲವೂ ಕೊನೆಗೊಳ್ಳುತ್ತಿದ್ದರೆ ಎಷ್ಟು ಚೆನ್ನಾಗಿತ್ತು!

69:28

مَآ أَغۡنَىٰ عَنِّي مَالِيَهۡۜ ﴿28﴾

Transliteration: Ma aghna AAannee maliyah

Translation: ನನಗೆ ನನ್ನ ಆಸ್ತಿ ಪ್ರಯೋಜನ ನೀಡಲಿಲ್ಲ.

69:29

هَلَكَ عَنِّي سُلۡطَٰنِيَهۡ ﴿29﴾

Transliteration: Halaka AAannee sultaniyah

Translation: ನನ್ನ ಅಧಿಕಾರವು ನನ್ನಿಂದ ಹೊರಟುಹೋಗಿದೆ.”

69:30

خُذُوهُ فَغُلُّوهُ ﴿30﴾

Transliteration: Khuthoohu faghulloohu

Translation: (ಆಗ ಹೀಗೆ ಆಜ್ಞಾಪಿಸಲಾಗುವುದು): “ಅವನನ್ನು ಹಿಡಿಯಿರಿ; ಮತ್ತು ಅವನಿಗೆ ಸಂಕೋಲೆಯನ್ನು ತೊಡಿಸಿರಿ.

69:31

ثُمَّ ٱلۡجَحِيمَ صَلُّوهُ ﴿31﴾

Transliteration: Thumma aljaheema salloohu

Translation: ನಂತರ ಅವನನ್ನು ನರಕದಲ್ಲಿ ಹಾಕಿರಿ.

69:32

ثُمَّ فِي سِلۡسِلَةٖ ذَرۡعُهَا سَبۡعُونَ ذِرَاعٗا فَٱسۡلُكُوهُ ﴿32﴾

Transliteration: Thumma fee silsilatin tharAAuha sabAAoona thiraAAan faoslukoohu

Translation: ನಂತರ ಎಪ್ಪತ್ತು ಮೊಳ ಅಳತೆಯಿರುವ ಸಂಕೋಲೆಯಲ್ಲಿ ಅವನನ್ನು ನುಸುಳಿಸಿರಿ.

69:33

إِنَّهُۥ كَانَ لَا يُؤۡمِنُ بِٱللَّهِ ٱلۡعَظِيمِ ﴿33﴾

Transliteration: Innahu kana la yuminu biAllahi alAAatheemi

Translation: ನಿಶ್ಚಯವಾಗಿಯೂ, ಅವನು ಪರಮೋಚ್ಛನಾದ ಅಲ್ಲಾಹನಲ್ಲಿ ವಿಶ್ವಾಸವಿಡುತ್ತಿರಲಿಲ್ಲ.

69:34

وَلَا يَحُضُّ عَلَىٰ طَعَامِ ٱلۡمِسۡكِينِ ﴿34﴾

Transliteration: Wala yahuddu AAala taAAami almiskeeni

Translation: ಅವನು ಬಡವರಿಗೆ ಅನ್ನ ನೀಡಲು ಪ್ರೇರೇಪಿಸುತ್ತಿರಲಿಲ್ಲ.

69:35

فَلَيۡسَ لَهُ ٱلۡيَوۡمَ هَٰهُنَا حَمِيمٞ ﴿35﴾

Transliteration: Falaysa lahu alyawma hahuna hameemun

Translation: ಆದ್ದರಿಂದ ಇಂದು ಅವನಿಗೆ ಇಲ್ಲಿ ಯಾವುದೇ ಆತ್ಮೀಯ ಗೆಳೆಯನಿಲ್ಲ.

69:36

وَلَا طَعَامٌ إِلَّا مِنۡ غِسۡلِينٖ ﴿36﴾

Transliteration: Wala taAAamun illa min ghisleenin

Translation: ಕೀವಿನಿಂದಲೇ ಹೊರತು ಅವನಿಗೆ ಬೇರೆ ಆಹಾರವಿಲ್ಲ.

69:37

لَّا يَأۡكُلُهُۥٓ إِلَّا ٱلۡخَٰطِـُٔونَ ﴿37﴾

Transliteration: La yakuluhu illa alkhatioona

Translation: ಅದನ್ನು ಪಾಪಿಗಳ ಹೊರತಾಗಿ ಯಾರೂ ಸೇವಿಸುವುದಿಲ್ಲ.

69:38

فَلَآ أُقۡسِمُ بِمَا تُبۡصِرُونَ ﴿38﴾

Transliteration: Fala oqsimu bima tubsiroona

Translation: ಆದ್ದರಿಂದ ನೀವು ನೋಡುತ್ತಿರುವುದರ ಮೇಲೆ ನಾನು ಆಣೆ ಮಾಡುತ್ತೇನೆ.

69:39

وَمَا لَا تُبۡصِرُونَ ﴿39﴾

Transliteration: Wama la tubsiroona

Translation: ನೀವು ನೋಡದಿರುವವುಗಳ ಮೇಲೂ (ಆಣೆ ಮಾಡುತ್ತೇನೆ).

69:40

إِنَّهُۥ لَقَوۡلُ رَسُولٖ كَرِيمٖ ﴿40﴾

Transliteration: Innahu laqawlu rasoolin kareemin

Translation: ನಿಶ್ಚಯವಾಗಿಯೂ ಇದು (ಕುರ್‌ಆನ್) ಒಬ್ಬ ಗಣ್ಯ ಸಂದೇಶವಾಹಕನ ವಚನವಾಗಿದೆ.

69:41

وَمَا هُوَ بِقَوۡلِ شَاعِرٖۚ قَلِيلٗا مَّا تُؤۡمِنُونَ ﴿41﴾

Transliteration: Wama huwa biqawli shaAAirin qaleelan ma tuminoona

Translation: ಇದು ಯಾವುದೇ ಕವಿಯ ಮಾತುಗಳಲ್ಲ. ನೀವು ಸ್ವಲ್ಪವೇ ವಿಶ್ವಾಸವಿಡುತ್ತೀರಿ.

69:42

وَلَا بِقَوۡلِ كَاهِنٖۚ قَلِيلٗا مَّا تَذَكَّرُونَ ﴿42﴾

Transliteration: Wala biqawli kahinin qaleelan ma tathakkaroona

Translation: ಇದು ಜ್ಯೋತಿಷಿಯ ಮಾತುಗಳೂ ಅಲ್ಲ. ನೀವು ಸ್ವಲ್ಪವೇ ಉಪದೇಶ ಪಡೆಯುತ್ತೀರಿ.

69:43

تَنزِيلٞ مِّن رَّبِّ ٱلۡعَٰلَمِينَ ﴿43﴾

Transliteration: Tanzeelun min rabbi alAAalameena

Translation: ಇದು ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಗ್ರಂಥವಾಗಿದೆ.

69:44

وَلَوۡ تَقَوَّلَ عَلَيۡنَا بَعۡضَ ٱلۡأَقَاوِيلِ ﴿44﴾

Transliteration: Walaw taqawwala AAalayna baAAda alaqaweeli

Translation: ಅವರು (ಪ್ರವಾದಿ) ನಮ್ಮ ಮೇಲೆ ಕೆಲವು (ಸುಳ್ಳು) ಮಾತುಗಳನ್ನು ಆರೋಪಿಸುತ್ತಿದ್ದರೆ,

69:45

لَأَخَذۡنَا مِنۡهُ بِٱلۡيَمِينِ ﴿45﴾

Transliteration: Laakhathna minhu bialyameeni

Translation: ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು.

69:46

ثُمَّ لَقَطَعۡنَا مِنۡهُ ٱلۡوَتِينَ ﴿46﴾

Transliteration: Thumma laqataAAna minhu alwateena

Translation: ನಂತರ ನಾವು ಅವರ ಅಪಧಮನಿಯನ್ನು ಕತ್ತರಿಸುತ್ತಿದ್ದೆವು.

69:47

فَمَا مِنكُم مِّنۡ أَحَدٍ عَنۡهُ حَٰجِزِينَ ﴿47﴾

Transliteration: Fama minkum min ahadin AAanhu hajizeena

Translation: ಆಗ ಅವರನ್ನು (ನಮ್ಮಿಂದ) ತಡೆಯುವವರು ನಿಮ್ಮಲ್ಲಿ ಯಾರೂ ಇರಲಾರರು.

69:48

وَإِنَّهُۥ لَتَذۡكِرَةٞ لِّلۡمُتَّقِينَ ﴿48﴾

Transliteration: Wainnahu latathkiratun lilmuttaqeena

Translation: ನಿಶ್ಚಯವಾಗಿಯೂ ಇದು ದೇವಭಯವುಳ್ಳವರಿಗೆ ಒಂದು ಉಪದೇಶವಾಗಿದೆ.

69:49

وَإِنَّا لَنَعۡلَمُ أَنَّ مِنكُم مُّكَذِّبِينَ ﴿49﴾

Transliteration: Wainna lanaAAlamu anna minkum mukaththibeena

Translation: ನಿಶ್ಚಯವಾಗಿಯೂ ನಿಮ್ಮಲ್ಲಿ ಇದನ್ನು ನಿಷೇಧಿಸುವವರಿದ್ದಾರೆಂದು ನಮಗೆ ಬಹಳ ಚೆನ್ನಾಗಿ ತಿಳಿದಿದೆ.

69:50

وَإِنَّهُۥ لَحَسۡرَةٌ عَلَى ٱلۡكَٰفِرِينَ ﴿50﴾

Transliteration: Wainnahu lahasratun AAala alkafireena

Translation: ನಿಶ್ಚಯವಾಗಿಯೂ ಅದು (ನಿಷೇಧಿಸುವುದು) ಸತ್ಯನಿಷೇಧಿಗಳ ವಿಷಾದಕ್ಕೆ ಕಾರಣವಾಗಲಿದೆ.

69:51

وَإِنَّهُۥ لَحَقُّ ٱلۡيَقِينِ ﴿51﴾

Transliteration: Wainnahu lahaqqu alyaqeeni

Translation: ನಿಶ್ಚಯವಾಗಿಯೂ ಅದು ಖಚಿತ ಸತ್ಯವಾಗಿದೆ.

69:52

فَسَبِّحۡ بِٱسۡمِ رَبِّكَ ٱلۡعَظِيمِ ﴿52﴾

Transliteration: Fasabbih biismi rabbika alAAatheemi

Translation: ಆದ್ದರಿಂದ ನೀವು ಪರಮೋಚ್ಛನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಅವನ ಪರಿಶುದ್ಧಿಯನ್ನು ಕೊಂಡಾಡಿರಿ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download