quranm◉

Surah Al-Qiyamah transliteration

◉ ಸೂರಾ · ∞

75:1

لَآ أُقۡسِمُ بِيَوۡمِ ٱلۡقِيَٰمَةِ ﴿1﴾

Transliteration: La oqsimu biyawmi alqiyamati

Translation: ನಾನು ಪುನರುತ್ಥಾನದ ದಿನದ ಮೇಲೆ ಆಣೆ ಮಾಡುತ್ತೇನೆ.

75:2

وَلَآ أُقۡسِمُ بِٱلنَّفۡسِ ٱللَّوَّامَةِ ﴿2﴾

Transliteration: Wala oqsimu bialnnafsi allawwamati

Translation: ನಾನು ಆಕ್ಷೇಪಿಸುವ ಮನಸ್ಸಿನ ಮೇಲೆ ಆಣೆ ಮಾಡುತ್ತೇನೆ.

75:3

أَيَحۡسَبُ ٱلۡإِنسَٰنُ أَلَّن نَّجۡمَعَ عِظَامَهُۥ ﴿3﴾

Transliteration: Ayahsabu alinsanu allan najmaAAa AAithamahu

Translation: ಮನುಷ್ಯನು ಭಾವಿಸುತ್ತಿದ್ದಾನೆಯೇ ನಾವು ಅವನ ಮೂಳೆಗಳನ್ನು ಜೋಡಿಸಲಾರೆವು ಎಂದು?

75:4

بَلَىٰ قَٰدِرِينَ عَلَىٰٓ أَن نُّسَوِّيَ بَنَانَهُۥ ﴿4﴾

Transliteration: Bala qadireena AAala an nusawwiya bananahu

Translation: ಹೌದು! ನಮಗೆ ಅವನ ಬೆರಳ ತುದಿಗಳನ್ನು ಕೂಡ ಸರಿಪಡಿಸುವ ಸಾಮರ್ಥ್ಯವಿದೆ.

75:5

بَلۡ يُرِيدُ ٱلۡإِنسَٰنُ لِيَفۡجُرَ أَمَامَهُۥ ﴿5﴾

Transliteration: Bal yureedu alinsanu liyafjura amamahu

Translation: ಆದರೆ ಮನುಷ್ಯನು ಮುಂದೆಯೂ ಕೂಡ ಅವಿಧೇಯನಾಗಿಯೇ ಇರಲು ಬಯಸುತ್ತಾನೆ.

75:6

يَسۡـَٔلُ أَيَّانَ يَوۡمُ ٱلۡقِيَٰمَةِ ﴿6﴾

Transliteration: Yasalu ayyana yawmu alqiyamati

Translation: ಅವನು ಕೇಳುತ್ತಾನೆ: “ಪುನರುತ್ಥಾನ ದಿನ ಯಾವಾಗ ಸಂಭವಿಸುತ್ತದೆ?”

75:7

فَإِذَا بَرِقَ ٱلۡبَصَرُ ﴿7﴾

Transliteration: Faitha bariqa albasaru

Translation: ದೃಷ್ಟಿಯು ಕೋರೈಸುವಾಗ.

75:8

وَخَسَفَ ٱلۡقَمَرُ ﴿8﴾

Transliteration: Wakhasafa alqamaru

Translation: ಚಂದ್ರ ಪ್ರಕಾಶ ರಹಿತವಾಗುವಾಗ.

75:9

وَجُمِعَ ٱلشَّمۡسُ وَٱلۡقَمَرُ ﴿9﴾

Transliteration: WajumiAAa alshshamsu waalqamaru

Translation: ಸೂರ್ಯ-ಚಂದ್ರರನ್ನು ಜೋಡಿಸಲಾಗುವಾಗ.[1]

75:10

يَقُولُ ٱلۡإِنسَٰنُ يَوۡمَئِذٍ أَيۡنَ ٱلۡمَفَرُّ ﴿10﴾

Transliteration: Yaqoolu alinsanu yawmaithin ayna almafarru

Translation: ಅಂದು ಮನುಷ್ಯನು ಕೇಳುವನು: “ಪಲಾಯನ ಮಾಡಲು ಸ್ಥಳವೆಲ್ಲಿದೆ?”

75:11

كَلَّا لَا وَزَرَ ﴿11﴾

Transliteration: Kalla la wazara

Translation: ಇಲ್ಲ, ಯಾವುದೇ ರಕ್ಷಣೆಯೂ ಇಲ್ಲ.

75:12

إِلَىٰ رَبِّكَ يَوۡمَئِذٍ ٱلۡمُسۡتَقَرُّ ﴿12﴾

Transliteration: Ila rabbika yawmaithin almustaqarru

Translation: ಅಂದು ನಿನ್ನ ವಾಸ್ತವ್ಯವು ನಿನ್ನ ಪರಿಪಾಲಕನ (ಅಲ್ಲಾಹನ) ಕಡೆಗೇ ಆಗಿದೆ.

75:13

يُنَبَّؤُاْ ٱلۡإِنسَٰنُ يَوۡمَئِذِۭ بِمَا قَدَّمَ وَأَخَّرَ ﴿13﴾

Transliteration: Yunabbao alinsanu yawmaithin bima qaddama waakhkhara

Translation: ಅಂದು ಮನುಷ್ಯನಿಗೆ ಅವನು ಮುಂದಕ್ಕೆ ಕಳುಹಿಸಿರುವ ಮತ್ತು ಹಿಂದೆ ಬಿಟ್ಟಿರುವ ಕರ್ಮಗಳ ಬಗ್ಗೆ ತಿಳಿಸಲಾಗುವುದು.

75:14

بَلِ ٱلۡإِنسَٰنُ عَلَىٰ نَفۡسِهِۦ بَصِيرَةٞ ﴿14﴾

Transliteration: Bali alinsanu AAala nafsihi baseeratun

Translation: ಅಲ್ಲ, ವಾಸ್ತವವಾಗಿ ಮನುಷ್ಯನು ಅವನ ವಿರುದ್ಧವೇ ಸಾಕ್ಷಿಯಾಗಿದ್ದಾನೆ.

75:15

وَلَوۡ أَلۡقَىٰ مَعَاذِيرَهُۥ ﴿15﴾

Transliteration: Walaw alqa maAAatheerahu

Translation: ಅವನು ಎಷ್ಟೇ ನೆಪಗಳನ್ನು ಒಡ್ಡಿದರೂ ಸಹ.

75:16

لَا تُحَرِّكۡ بِهِۦ لِسَانَكَ لِتَعۡجَلَ بِهِۦٓ ﴿16﴾

Transliteration: La tuharrik bihi lisanaka litaAAjala bihi

Translation: (ಪ್ರವಾದಿಯವರೇ) ನೀವು ಕುರ್‌ಆನನ್ನು ಆತುರದಿಂದ ಕಂಠಪಾಠ ಮಾಡಲು ನಿಮ್ಮ ನಾಲಗೆಯನ್ನು ಅಲುಗಾಡಿಸಬೇಡಿ.

75:17

إِنَّ عَلَيۡنَا جَمۡعَهُۥ وَقُرۡءَانَهُۥ ﴿17﴾

Transliteration: Inna AAalayna jamAAahu waquranahu

Translation: ನಿಶ್ಚಯವಾಗಿಯೂ ಅದನ್ನು ಕ್ರೋಢೀಕರಿಸುವುದು ಮತ್ತು ನೀವು ಅದನ್ನು ಪಠಿಸುವಂತೆ ಮಾಡುವುದು ನಮ್ಮ ಹೊಣೆಯಾಗಿದೆ.[1]

75:18

فَإِذَا قَرَأۡنَٰهُ فَٱتَّبِعۡ قُرۡءَانَهُۥ ﴿18﴾

Transliteration: Faitha qaranahu faittabiAA quranahu

Translation: ನಾವು ಅದನ್ನು ಪಠಿಸಿದರೆ ನೀವು ಆ ಪಠಣವನ್ನು ಹಿಂಬಾಲಿಸಿರಿ.

75:19

ثُمَّ إِنَّ عَلَيۡنَا بَيَانَهُۥ ﴿19﴾

Transliteration: Thumma inna AAalayna bayanahu

Translation: ನಂತರ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ.

75:20

كَلَّا بَلۡ تُحِبُّونَ ٱلۡعَاجِلَةَ ﴿20﴾

Transliteration: Kalla bal tuhibboona alAAajilata

Translation: ಇಲ್ಲ, ನೀವು ಇಹಲೋಕವನ್ನು ಪ್ರೀತಿಸುತ್ತೀರಿ.

75:21

وَتَذَرُونَ ٱلۡأٓخِرَةَ ﴿21﴾

Transliteration: Watatharoona alakhirata

Translation: ಪರಲೋಕವನ್ನು ತೊರೆಯುತ್ತೀರಿ.

75:22

وُجُوهٞ يَوۡمَئِذٖ نَّاضِرَةٌ ﴿22﴾

Transliteration: Wujoohun yawmaithin nadiratun

Translation: ಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು.

75:23

إِلَىٰ رَبِّهَا نَاظِرَةٞ ﴿23﴾

Transliteration: Ila rabbiha nathiratun

Translation: ಅದರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುತ್ತಿರುವುವು.

75:24

وَوُجُوهٞ يَوۡمَئِذِۭ بَاسِرَةٞ ﴿24﴾

Transliteration: Wawujoohun yawmaithin basiratun

Translation: ಅಂದು ಬಹಳಷ್ಟು ಮುಖಗಳು ವಿಷಣ್ಣವಾಗಿರುವುವು.

75:25

تَظُنُّ أَن يُفۡعَلَ بِهَا فَاقِرَةٞ ﴿25﴾

Transliteration: Tathunnu an yufAAala biha faqiratun

Translation: ಅವರೊಡನೆ ಬೆನ್ನು ತುಂಡಾಗಿಸುವ ರೀತಿಯಲ್ಲಿ ವ್ಯವಹರಿಸಲಾಗುವುದೆಂದು ಅವರು ಭಾವಿಸುವರು.

75:26

كَلَّآ إِذَا بَلَغَتِ ٱلتَّرَاقِيَ ﴿26﴾

Transliteration: Kalla itha balaghati alttaraqiya

Translation: ಇಲ್ಲ, ಆತ್ಮವು ಕೊರಳ ಮೂಳೆಗೆ ತಲುಪಿದಾಗ.

75:27

وَقِيلَ مَنۡۜ رَاقٖ ﴿27﴾

Transliteration: Waqeela man raqin

Translation: “ಮಂತ್ರಿಸುವವರು ಯಾರಾದರೂ ಇದ್ದಾರೆಯೇ?” ಎಂದು ಕೇಳಲಾಗುವಾಗ.

75:28

وَظَنَّ أَنَّهُ ٱلۡفِرَاقُ ﴿28﴾

Transliteration: Wathanna annahu alfiraqu

Translation: ಅದು ಅಗಲಿಕೆಯ ಸಮಯವೆಂದು ಅವನಿಗೆ ಖಾತ್ರಿಯಾದಾಗ.

75:29

وَٱلۡتَفَّتِ ٱلسَّاقُ بِٱلسَّاقِ ﴿29﴾

Transliteration: Wailtaffati alssaqu bialssaqi

Translation: ಕಣಕಾಲು ಕಣಕಾಲಿನೊಂದಿಗೆ ಸುತ್ತುವಾಗ.

75:30

إِلَىٰ رَبِّكَ يَوۡمَئِذٍ ٱلۡمَسَاقُ ﴿30﴾

Transliteration: Ila rabbika yawmaithin almasaqu

Translation: ಅಂದು (ಅವನನ್ನು) ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಸಾಗಿಸಲಾಗುವುದು.

75:31

فَلَا صَدَّقَ وَلَا صَلَّىٰ ﴿31﴾

Transliteration: Fala saddaqa wala salla

Translation: ಅವನು ವಿಶ್ವಾಸವಿಡಲಿಲ್ಲ, ನಮಾಝ್ ಕೂಡ ಮಾಡಲಿಲ್ಲ.

75:32

وَلَٰكِن كَذَّبَ وَتَوَلَّىٰ ﴿32﴾

Transliteration: Walakin kaththaba watawalla

Translation: ಆದರೆ ಅವನು ನಿಷೇಧಿಸಿದನು ಮತ್ತು ಮುಖ ತಿರುಗಿಸಿ ನಡೆದನು.

75:33

ثُمَّ ذَهَبَ إِلَىٰٓ أَهۡلِهِۦ يَتَمَطَّىٰٓ ﴿33﴾

Transliteration: Thumma thahaba ila ahlihi yatamatta

Translation: ನಂತರ ಎದೆಯುಬ್ಬಿಸಿ ತನ್ನ ಮನೆಯವರ ಕಡೆಗೆ ಹೊರಟನು.

75:34

أَوۡلَىٰ لَكَ فَأَوۡلَىٰ ﴿34﴾

Transliteration: Awla laka faawla

Translation: ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ.

75:35

ثُمَّ أَوۡلَىٰ لَكَ فَأَوۡلَىٰٓ ﴿35﴾

Transliteration: Thumma awla laka faawla

Translation: ಪುನಃ ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ.

75:36

أَيَحۡسَبُ ٱلۡإِنسَٰنُ أَن يُتۡرَكَ سُدًى ﴿36﴾

Transliteration: Ayahsabu alinsanu an yutraka sudan

Translation: ಮನುಷ್ಯನು ಭಾವಿಸುತ್ತಾನೆಯೇ ಅವನನ್ನು ಸುಮ್ಮನೆ ಬಿಟ್ಟುಬಿಡಲಾಗುವುದೆಂದು?

75:37

أَلَمۡ يَكُ نُطۡفَةٗ مِّن مَّنِيّٖ يُمۡنَىٰ ﴿37﴾

Transliteration: Alam yaku nutfatan min manayyin yumna

Translation: ಅವನು ಸ್ರವಿಸಲಾದ ವೀರ್ಯದ ಒಂದು ಬಿಂದುವಾಗಿರಲಿಲ್ಲವೇ?

75:38

ثُمَّ كَانَ عَلَقَةٗ فَخَلَقَ فَسَوَّىٰ ﴿38﴾

Transliteration: Thumma kana AAalaqatan fakhalaqa fasawwa

Translation: ನಂತರ ಅವನು ರಕ್ತಪಿಂಡವಾದನು. ನಂತರ ಅಲ್ಲಾಹು ಅವನನ್ನು ಸೃಷ್ಟಿಸಿದನು ಮತ್ತು ಸರಿಪಡಿಸಿದನು.

75:39

فَجَعَلَ مِنۡهُ ٱلزَّوۡجَيۡنِ ٱلذَّكَرَ وَٱلۡأُنثَىٰٓ ﴿39﴾

Transliteration: FajaAAala minhu alzzawjayni alththakara waalontha

Translation: ನಂತರ ಅವನಿಂದ ಗಂಡು ಮತ್ತು ಹೆಣ್ಣು ಎಂಬ ಜೋಡಿಯನ್ನು ಮಾಡಿದನು.

75:40

أَلَيۡسَ ذَٰلِكَ بِقَٰدِرٍ عَلَىٰٓ أَن يُحۡـِۧيَ ٱلۡمَوۡتَىٰ ﴿40﴾

Transliteration: Alaysa thalika biqadirin AAala an yuhyiya almawta

Translation: ಅಂತಹವನು ಸತ್ತವರಿಗೆ ಜೀವ ನೀಡುವ ಸಾಮರ್ಥ್ಯವನ್ನು ಹೊಂದಿಲ್ಲವೇ?

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download