quranm◉

Surah Al-Fajr transliteration

◉ ಸೂರಾ · ∞

89:1

وَٱلۡفَجۡرِ ﴿1﴾

Transliteration: Waalfajri

Translation: ಪ್ರಭಾತದ ಮೇಲಾಣೆ!

89:2

وَلَيَالٍ عَشۡرٖ ﴿2﴾

Transliteration: Walayalin AAashrin

Translation: ಹತ್ತು ರಾತ್ರಿಗಳ ಮೇಲಾಣೆ![1]

89:3

وَٱلشَّفۡعِ وَٱلۡوَتۡرِ ﴿3﴾

Transliteration: WaalshshafAAi waalwatri

Translation: ಸಮ ಮತ್ತು ಬೆಸಗಳ ಮೇಲಾಣೆ!

89:4

وَٱلَّيۡلِ إِذَا يَسۡرِ ﴿4﴾

Transliteration: Waallayli itha yasri

Translation: ರಾತ್ರಿಯ ಮೇಲಾಣೆ! ಅದು ಚಲಿಸತೊಡಗುವಾಗ.

89:5

هَلۡ فِي ذَٰلِكَ قَسَمٞ لِّذِي حِجۡرٍ ﴿5﴾

Transliteration: Hal fee thalika qasamun lithee hijrin

Translation: ಇವುಗಳಲ್ಲಿ ಬುದ್ಧಿಯಿರುವವನ ಮಟ್ಟಿಗೆ ಪರ್ಯಾಪ್ತ ಆಣೆಯಿದೆಯೇ?

89:6

أَلَمۡ تَرَ كَيۡفَ فَعَلَ رَبُّكَ بِعَادٍ ﴿6﴾

Transliteration: Alam tara kayfa faAAala rabbuka biAAadin

Translation: ನಿಮ್ಮ ಪರಿಪಾಲಕನು (ಅಲ್ಲಾಹು) ಆದ್ ಗೋತ್ರದವರೊಂದಿಗೆ ಏನು ಮಾಡಿದನೆಂದು ನೀವು ನೋಡಿಲ್ಲವೇ?

89:7

إِرَمَ ذَاتِ ٱلۡعِمَادِ ﴿7﴾

Transliteration: Irama thati alAAimadi

Translation: ಸ್ತಂಭಗಳ ಜನರಾದ ಇರಮ್ ಗೋತ್ರದವರೊಂದಿಗೆ.[1]

89:8

ٱلَّتِي لَمۡ يُخۡلَقۡ مِثۡلُهَا فِي ٱلۡبِلَٰدِ ﴿8﴾

Transliteration: Allatee lam yukhlaq mithluha fee albiladi

Translation: ಅವರಂತಿರುವ ಜನರನ್ನು ಯಾವುದೇ ಊರಲ್ಲೂ ಸೃಷ್ಟಿಸಲಾಗಿಲ್ಲ.

89:9

وَثَمُودَ ٱلَّذِينَ جَابُواْ ٱلصَّخۡرَ بِٱلۡوَادِ ﴿9﴾

Transliteration: Wathamooda allatheena jaboo alssakhra bialwadi

Translation: ಕಣಿವೆಯಲ್ಲಿ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಗೋತ್ರದವರೊಂದಿಗೆ.

89:10

وَفِرۡعَوۡنَ ذِي ٱلۡأَوۡتَادِ ﴿10﴾

Transliteration: WafirAAawna thee alawtadi

Translation: ಗೂಟಗಳ ಒಡೆಯನಾದ ಫರೋಹ‍ನೊಂದಿಗೆ.[1]

89:11

ٱلَّذِينَ طَغَوۡاْ فِي ٱلۡبِلَٰدِ ﴿11﴾

Transliteration: Allatheena taghaw fee albiladi

Translation: ಅವರೆಲ್ಲರೂ ಊರುಗಳಲ್ಲಿ ಅತಿರೇಕವೆಸಗುತ್ತಿದ್ದರು.

89:12

فَأَكۡثَرُواْ فِيهَا ٱلۡفَسَادَ ﴿12﴾

Transliteration: Faaktharoo feeha alfasada

Translation: ಕಿಡಿಗೇಡಿತನವನ್ನು ಅತಿಯಾಗಿ ಹಬ್ಬಿಸಿದ್ದರು.

89:13

فَصَبَّ عَلَيۡهِمۡ رَبُّكَ سَوۡطَ عَذَابٍ ﴿13﴾

Transliteration: Fasabba AAalayhim rabbuka sawta AAathabin

Translation: ಕೊನೆಗೆ ನಿಮ್ಮ ಪರಿಪಾಲಕನು (ಅಲ್ಲಾಹು) ಅವರೆಲ್ಲರ ಮೇಲೆ ಶಿಕ್ಷೆಯ ಕೊರಡನ್ನು ಸುರಿಸಿದನು.

89:14

إِنَّ رَبَّكَ لَبِٱلۡمِرۡصَادِ ﴿14﴾

Transliteration: Inna rabbaka labialmirsadi

Translation: ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ನಿಗಾವಣೆಯಲ್ಲಿದ್ದಾನೆ.[1]

89:15

فَأَمَّا ٱلۡإِنسَٰنُ إِذَا مَا ٱبۡتَلَىٰهُ رَبُّهُۥ فَأَكۡرَمَهُۥ وَنَعَّمَهُۥ فَيَقُولُ رَبِّيٓ أَكۡرَمَنِ ﴿15﴾

Transliteration: Faamma alinsanu itha ma ibtalahu rabbuhu faakramahu wanaAAAAamahu fayaqoolu rabbee akramani

Translation: ಮನುಷ್ಯನ ಸ್ಥಿತಿ ಹೇಗಿದೆಯೆಂದರೆ, ಅವನ ಪರಿಪಾಲಕನು (ಅಲ್ಲಾಹು) ಅವನನ್ನು ಪರೀಕ್ಷಿಸಿ ಅವನಿಗೆ ಗೌರವ ಮತ್ತು ಅನುಗ್ರಹವನ್ನು ದಯಪಾಲಿಸಿದರೆ, ಅವನು ಹೇಳುತ್ತಾನೆ: “ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ಗಣ್ಯ ವ್ಯಕ್ತಿಯಾಗಿ ಮಾಡಿದ್ದಾನೆ.”

89:16

وَأَمَّآ إِذَا مَا ٱبۡتَلَىٰهُ فَقَدَرَ عَلَيۡهِ رِزۡقَهُۥ فَيَقُولُ رَبِّيٓ أَهَٰنَنِ ﴿16﴾

Transliteration: Waamma itha ma ibtalahu faqadara AAalayhi rizqahu fayaqoolu rabbee ahanani

Translation: ಆದರೆ ಅವನು ಮನುಷ್ಯನನ್ನು ಪರೀಕ್ಷಿಸಿ ಅವನ ಉಪಜೀವನವನ್ನು ಇಕ್ಕಟ್ಟುಗೊಳಿಸಿದರೆ, ಅವನು ಹೇಳುತ್ತಾನೆ: “ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ನಿಂದನಾರ್ಹನಾಗಿ ಮಾಡಿದ್ದಾನೆ.”

89:17

كَلَّاۖ بَل لَّا تُكۡرِمُونَ ٱلۡيَتِيمَ ﴿17﴾

Transliteration: Kalla bal la tukrimoona alyateema

Translation: ಇಲ್ಲವೇ ಇಲ್ಲ, ವಾಸ್ತವವಾಗಿ ನೀವು ಅನಾಥರಿಗೆ ಗೌರವ ನೀಡುವುದಿಲ್ಲ.

89:18

وَلَا تَحَـٰٓضُّونَ عَلَىٰ طَعَامِ ٱلۡمِسۡكِينِ ﴿18﴾

Transliteration: Wala tahaddoona AAala taAAami almiskeeni

Translation: ಬಡವರಿಗೆ ಅನ್ನ ನೀಡಲು ಪರಸ್ಪರ ಉತ್ತೇಜಿಸುವುದಿಲ್ಲ.

89:19

وَتَأۡكُلُونَ ٱلتُّرَاثَ أَكۡلٗا لَّمّٗا ﴿19﴾

Transliteration: Watakuloona altturatha aklan lamman

Translation: ನೀವು ಉತ್ತರಾಧಿಕಾರದ ಆಸ್ತಿಯನ್ನು ಬಾಚಿ ಬಾಚಿ ತಿನ್ನುತ್ತೀರಿ.

89:20

وَتُحِبُّونَ ٱلۡمَالَ حُبّٗا جَمّٗا ﴿20﴾

Transliteration: Watuhibboona almala hubban jamman

Translation: ನೀವು ಧನವನ್ನು ಅತಿಯಾಗಿ ಪ್ರೀತಿಸುತ್ತೀರಿ.

89:21

كَلَّآۖ إِذَا دُكَّتِ ٱلۡأَرۡضُ دَكّٗا دَكّٗا ﴿21﴾

Transliteration: Kalla itha dukkati alardu dakkan dakkan

Translation: ಅಲ್ಲ (ನಿಮ್ಮ ಸ್ಥಿತಿ ಹಾಗಾಗಬಾರದು). ಭೂಮಿಯನ್ನು ಸಂಪೂರ್ಣ ಪುಡಿ ಮಾಡಿ ಸಮತಟ್ಟುಗೊಳಿಸುವಾಗ.

89:22

وَجَآءَ رَبُّكَ وَٱلۡمَلَكُ صَفّٗا صَفّٗا ﴿22﴾

Transliteration: Wajaa rabbuka waalmalaku saffan saffan

Translation: ನಿಮ್ಮ ಪರಿಪಾಲಕನು (ಅಲ್ಲಾಹು) ಬರುವಾಗ ಮತ್ತು ಸಾಲುಸಾಲಾಗಿ ದೇವದೂತರು‍ಗಳು ಬರುವಾಗ.

89:23

وَجِاْيٓءَ يَوۡمَئِذِۭ بِجَهَنَّمَۚ يَوۡمَئِذٖ يَتَذَكَّرُ ٱلۡإِنسَٰنُ وَأَنَّىٰ لَهُ ٱلذِّكۡرَىٰ ﴿23﴾

Transliteration: Wajeea yawmaithin bijahannama yawmaithin yatathakkaru alinsanu waanna lahu alththikra

Translation: ಆ ದಿನ ನರಕವನ್ನು ತರಲಾಗುವುದು. ಅಂದು ಮನುಷ್ಯನಿಗೆ ಮನವರಿಕೆಯಾಗುವುದು. ಆದರೆ ಆಗ ಮನವರಿಕೆಯಾಗುವುದರಿಂದ ಏನು ಪ್ರಯೋಜನ?

89:24

يَقُولُ يَٰلَيۡتَنِي قَدَّمۡتُ لِحَيَاتِي ﴿24﴾

Transliteration: Yaqoolu ya laytanee qaddamtu lihayatee

Translation: ಅವನು ಹೇಳುವನು: “ಅಯ್ಯೋ! ನಾನು ನನ್ನ ಈ ಜೀವನಕ್ಕಾಗಿ ಏನಾದರೂ ಸಿದ್ಧತೆಗಳನ್ನು ಮಾಡಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!”

89:25

فَيَوۡمَئِذٖ لَّا يُعَذِّبُ عَذَابَهُۥٓ أَحَدٞ ﴿25﴾

Transliteration: Fayawmaithin la yuAAaththibu AAathabahu ahadun

Translation: ಅಂದು ಅಲ್ಲಾಹು ನೀಡುವಂತಹ (ಕಠೋರ) ಶಿಕ್ಷೆಯನ್ನು ನೀಡಲು ಯಾರಿಗೂ ಸಾಧ್ಯವಿಲ್ಲ.

89:26

وَلَا يُوثِقُ وَثَاقَهُۥٓ أَحَدٞ ﴿26﴾

Transliteration: Wala yoothiqu wathaqahu ahadun

Translation: ಅವನು ಹಿಡಿದು ಬಂಧಿಸುವಂತೆ ಹಿಡಿದು ಬಂಧಿಸಲು ಯಾರಿಗೂ ಸಾಧ್ಯವಿಲ್ಲ.

89:27

يَـٰٓأَيَّتُهَا ٱلنَّفۡسُ ٱلۡمُطۡمَئِنَّةُ ﴿27﴾

Transliteration: Ya ayyatuha alnnafsu almutmainnatu

Translation: ಓ ಸಮಾಧಾನದಲ್ಲಿರುವ ಆತ್ಮವೇ!

89:28

ٱرۡجِعِيٓ إِلَىٰ رَبِّكِ رَاضِيَةٗ مَّرۡضِيَّةٗ ﴿28﴾

Transliteration: IrjiAAee ila rabbiki radiyatan mardiyyatan

Translation: ನಿನ್ನ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳು—ನೀನು ಅವನ ಬಗ್ಗೆ ಸಂಪ್ರೀತನಾಗಿರುವ ಮತ್ತು ಅವನು ನಿನ್ನ ಬಗ್ಗೆ ಸಂಪ್ರೀತನಾಗಿರುವ ಸ್ಥಿತಿಯಲ್ಲಿ.

89:29

فَٱدۡخُلِي فِي عِبَٰدِي ﴿29﴾

Transliteration: Faodkhulee fee AAibadee

Translation: ನನ್ನ ವಿಶೇಷ ದಾಸರೊಡನೆ ಸೇರಿಕೋ.

89:30

وَٱدۡخُلِي جَنَّتِي ﴿30﴾

Transliteration: Waodkhulee jannatee

Translation: ನನ್ನ ಸ್ವರ್ಗಕ್ಕೆ ಪ್ರವೇಶಿಸು.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download