quranm◉

Surah As-Saffat transliteration

◉ ಸೂರಾ · ∞

37:1

وَٱلصَّـٰٓفَّـٰتِ صَفّٗا ﴿1﴾

Transliteration: Waalssaffati saffan

Translation: ಸಾಲುಗಟ್ಟಿ ನಿಂತ ದೇವದೂತರುಗಳ ಮೇಲಾಣೆ!

37:2

فَٱلزَّـٰجِرَٰتِ زَجۡرٗا ﴿2﴾

Transliteration: Faalzzajirati zajran

Translation: ತೀಕ್ಷ್ಣವಾಗಿ ಗದರಿಸುವವರ ಮೇಲಾಣೆ!

37:3

فَٱلتَّـٰلِيَٰتِ ذِكۡرًا ﴿3﴾

Transliteration: Faalttaliyati thikran

Translation: ಉಪದೇಶವನ್ನು ಪಠಿಸುವವರ ಮೇಲಾಣೆ!

37:4

إِنَّ إِلَٰهَكُمۡ لَوَٰحِدٞ ﴿4﴾

Transliteration: Inna ilahakum lawahidun

Translation: ಖಂಡಿತವಾಗಿಯೂ ನಿಮ್ಮ ದೇವನು ಏಕೈಕನಾಗಿದ್ದಾನೆ.

37:5

رَّبُّ ٱلسَّمَٰوَٰتِ وَٱلۡأَرۡضِ وَمَا بَيۡنَهُمَا وَرَبُّ ٱلۡمَشَٰرِقِ ﴿5﴾

Transliteration: Rabbu alssamawati waalardi wama baynahuma warabbu almashariqi

Translation: ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ ಹಾಗೂ ಉದಯ ಸ್ಥಾನಗಳ ಪರಿಪಾಲಕನಾಗಿದ್ದಾನೆ.

37:6

إِنَّا زَيَّنَّا ٱلسَّمَآءَ ٱلدُّنۡيَا بِزِينَةٍ ٱلۡكَوَاكِبِ ﴿6﴾

Transliteration: Inna zayyanna alssamaa alddunya bizeenatin alkawakibi

Translation: ನಿಶ್ಚಯವಾಗಿಯೂ ನಾವು ಸಮೀಪದ ಆಕಾಶವನ್ನು ನಕ್ಷತ್ರಗಳ ಶೃಂಗಾರದಿಂದ ಅಲಂಕರಿಸಿದ್ದೇವೆ.

37:7

وَحِفۡظٗا مِّن كُلِّ شَيۡطَٰنٖ مَّارِدٖ ﴿7﴾

Transliteration: Wahifthan min kulli shaytanin maridin

Translation: ವಿದ್ರೋಹಿಗಳಾದ ಎಲ್ಲಾ ಶೈತಾನರಿಂದ ನಾವು ಅದನ್ನು ಭದ್ರಪಡಿಸಿದ್ದೇವೆ.

37:8

لَّا يَسَّمَّعُونَ إِلَى ٱلۡمَلَإِ ٱلۡأَعۡلَىٰ وَيُقۡذَفُونَ مِن كُلِّ جَانِبٖ ﴿8﴾

Transliteration: La yassammaAAoona ila almalai alaAAla wayuqthafoona min kulli janibin

Translation: ಉಪರಿಲೋಕದ ದೇವದೂತರುಗಳ ಮಾತುಗಳಿಗೆ ಕಿವಿಗೊಡಲು ಅವರಿಗೆ ಸಾಧ್ಯವಾಗುವುದಿಲ್ಲ. ಎಲ್ಲಾ ದಿಕ್ಕುಗಳಿಂದಲೂ ಅವರಿಗೆ ಎಸೆಯಲಾಗುತ್ತದೆ.

37:9

دُحُورٗاۖ وَلَهُمۡ عَذَابٞ وَاصِبٌ ﴿9﴾

Transliteration: Duhooran walahum AAathabun wasibun

Translation: ಅವರನ್ನು ಓಡಿಸುವುದಕ್ಕಾಗಿ. ಅವರಿಗೆ ಶಾಶ್ವತ ಶಿಕ್ಷೆಯೂ ಇದೆ.

37:10

إِلَّا مَنۡ خَطِفَ ٱلۡخَطۡفَةَ فَأَتۡبَعَهُۥ شِهَابٞ ثَاقِبٞ ﴿10﴾

Transliteration: Illa man khatifa alkhatfata faatbaAAahu shihabun thaqibun

Translation: ಆದರೆ, ಅವರಲ್ಲಿ ಯಾರಾದರೂ (ದೇವದೂತರ) ಮಾತನ್ನು ಕದ್ದು ಕೇಳಿ ಓಡಿದರೆ, (ತಕ್ಷಣ) ಜ್ವಲಿಸುವ ಒಂದು ಜ್ವಾಲೆಯು ಅವನನ್ನು ಹಿಂಬಾಲಿಸುತ್ತದೆ.

37:11

فَٱسۡتَفۡتِهِمۡ أَهُمۡ أَشَدُّ خَلۡقًا أَم مَّنۡ خَلَقۡنَآۚ إِنَّا خَلَقۡنَٰهُم مِّن طِينٖ لَّازِبِۭ ﴿11﴾

Transliteration: Faistaftihim ahum ashaddu khalqan am man khalaqna inna khalaqnahum min teenin lazibin

Translation: (ಪ್ರವಾದಿಯವರೇ) ಅವರೊಡನೆ ಕೇಳಿರಿ: “ಅವರನ್ನು ಸೃಷ್ಟಿಸುವುದು ಕಷ್ಟವೋ? ಅಥವಾ ನಾವು ಸೃಷ್ಟಿಸಿದ ಇತರ ಸೃಷ್ಟಿಗಳನ್ನೋ?” ನಿಶ್ಚಯವಾಗಿಯೂ ನಾವು ಅವರನ್ನು ಅಂಟಿಕೊಳ್ಳುವ ಜೇಡಿಮಣ್ಣಿನಿಂದ ಸೃಷ್ಟಿಸಿದ್ದೇವೆ.

37:12

بَلۡ عَجِبۡتَ وَيَسۡخَرُونَ ﴿12﴾

Transliteration: Bal AAajibta wayaskharoona

Translation: ಅಲ್ಲ, ನಿಮಗೆ ಅಚ್ಚರಿಯಾಗುತ್ತದೆ.[1] ಆದರೆ ಅವರು ತಮಾಷೆ ಮಾಡುತ್ತಾರೆ!

37:13

وَإِذَا ذُكِّرُواْ لَا يَذۡكُرُونَ ﴿13﴾

Transliteration: Waitha thukkiroo la yathkuroona

Translation: ಅವರಿಗೆ ಉಪದೇಶ ನೀಡಲಾದರೆ ಅವರು ಅದನ್ನು ಸ್ವೀಕರಿಸುವುದಿಲ್ಲ.

37:14

وَإِذَا رَأَوۡاْ ءَايَةٗ يَسۡتَسۡخِرُونَ ﴿14﴾

Transliteration: Waitha raaw ayatan yastaskhiroona

Translation: ಅವರು ಯಾವುದಾದರೂ ದೃಷ್ಟಾಂತವನ್ನು ಕಂಡರೆ ಲೇವಡಿ ಮಾಡುತ್ತಾರೆ.

37:15

وَقَالُوٓاْ إِنۡ هَٰذَآ إِلَّا سِحۡرٞ مُّبِينٌ ﴿15﴾

Transliteration: Waqaloo in hatha illa sihrun mubeenun

Translation: ಅವರು ಹೇಳುತ್ತಾರೆ: “ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಇನ್ನೇನಲ್ಲ.

37:16

أَءِذَا مِتۡنَا وَكُنَّا تُرَابٗا وَعِظَٰمًا أَءِنَّا لَمَبۡعُوثُونَ ﴿16﴾

Transliteration: Aitha mitna wakunna turaban waAAithaman ainna lamabAAoothoona

Translation: ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವ ನೀಡಿ ಎಬ್ಬಿಸಲಾಗುವುದೇ?

37:17

أَوَءَابَآؤُنَا ٱلۡأَوَّلُونَ ﴿17﴾

Transliteration: Awaabaona alawwaloona

Translation: ಮತ್ತು ನಮ್ಮ ಪೂರ್ವಜರನ್ನು ಕೂಡ?”

37:18

قُلۡ نَعَمۡ وَأَنتُمۡ دَٰخِرُونَ ﴿18﴾

Transliteration: Qul naAAam waantum dakhiroona

Translation: ಹೇಳಿರಿ: “ಹೌದು! ನೀವು ಅವಮಾನಿತರಾಗುವಿರಿ.”

37:19

فَإِنَّمَا هِيَ زَجۡرَةٞ وَٰحِدَةٞ فَإِذَا هُمۡ يَنظُرُونَ ﴿19﴾

Transliteration: Fainnama hiya zajratun wahidatun faitha hum yanthuroona

Translation: ಅದು ಒಂದು ತೀಕ್ಷ್ಣ ಗದರಿಕೆ ಮಾತ್ರವಾಗಿರುವುದು. ಆಗ ಅಗೋ! ಅವರು ನೋಡ ತೊಡಗುವರು.

37:20

وَقَالُواْ يَٰوَيۡلَنَا هَٰذَا يَوۡمُ ٱلدِّينِ ﴿20﴾

Transliteration: Waqaloo ya waylana hatha yawmu alddeeni

Translation: ಅವರು ಹೇಳುವರು: “ಅಯ್ಯೋ! ನಮ್ಮ ದುರ್ಗತಿಯೇ! ಇದು ಪ್ರತಿಫಲದ ದಿನ!”

37:21

هَٰذَا يَوۡمُ ٱلۡفَصۡلِ ٱلَّذِي كُنتُم بِهِۦ تُكَذِّبُونَ ﴿21﴾

Transliteration: Hatha yawmu alfasli allathee kuntum bihi tukaththiboona

Translation: ಇದು ನೀವು ನಿಷೇಧಿಸುತ್ತಿದ್ದ ಅಂತಿಮ ತೀರ್ಪು ನೀಡುವ ದಿನವಾಗಿದೆ.

37:22

ٱحۡشُرُواْ ٱلَّذِينَ ظَلَمُواْ وَأَزۡوَٰجَهُمۡ وَمَا كَانُواْ يَعۡبُدُونَ ﴿22﴾

Transliteration: Ohshuroo allatheena thalamoo waazwajahum wama kanoo yaAAbudoona

Translation: (ಅಲ್ಲಾಹು ಆದೇಶಿಸುವನು): “ಅಕ್ರಮವೆಸಗಿದವರನ್ನು, ಅವರ ಸಹಚರರನ್ನು ಮತ್ತು ಅವರು ಆರಾಧಿಸುತ್ತಿದ್ದವುಗಳನ್ನು ಒಟ್ಟುಗೂಡಿಸಿರಿ.

37:23

مِن دُونِ ٱللَّهِ فَٱهۡدُوهُمۡ إِلَىٰ صِرَٰطِ ٱلۡجَحِيمِ ﴿23﴾

Transliteration: Min dooni Allahi faihdoohum ila sirati aljaheemi

Translation: ಅಲ್ಲಾಹನನ್ನು ಬಿಟ್ಟು (ಆರಾಧಿಸುತ್ತಿದ್ದವುಗಳನ್ನು). ಅವರೆಲ್ಲರಿಗೂ ನರಕದ ದಾರಿಯನ್ನು ತೋರಿಸಿ.

37:24

وَقِفُوهُمۡۖ إِنَّهُم مَّسۡـُٔولُونَ ﴿24﴾

Transliteration: Waqifoohum innahum masooloona

Translation: ಅವರನ್ನು ನಿಲ್ಲಿಸಿ! ಅವರೊಡನೆ ಪ್ರಶ್ನಿಸಬೇಕಾಗಿದೆ.”

37:25

مَا لَكُمۡ لَا تَنَاصَرُونَ ﴿25﴾

Transliteration: Ma lakum la tanasaroona

Translation: (ಅವರೊಡನೆ ಕೇಳಲಾಗುವುದು): “ನಿಮಗೇನಾಗಿದೆ? ನೀವೇಕೆ ಪರಸ್ಪರ ಸಹಾಯ ಮಾಡುವುದಿಲ್ಲ?”

37:26

بَلۡ هُمُ ٱلۡيَوۡمَ مُسۡتَسۡلِمُونَ ﴿26﴾

Transliteration: Bal humu alyawma mustaslimoona

Translation: ಅಲ್ಲ, ವಾಸ್ತವವಾಗಿ ಇಂದು ಅವರು (ಸಂಪೂರ್ಣ) ಶರಣಾಗಿದ್ದಾರೆ.

37:27

وَأَقۡبَلَ بَعۡضُهُمۡ عَلَىٰ بَعۡضٖ يَتَسَآءَلُونَ ﴿27﴾

Transliteration: Waaqbala baAAduhum AAala baAAdin yatasaaloona

Translation: ಅವರಲ್ಲಿ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು.

37:28

قَالُوٓاْ إِنَّكُمۡ كُنتُمۡ تَأۡتُونَنَا عَنِ ٱلۡيَمِينِ ﴿28﴾

Transliteration: Qaloo innakum kuntum tatoonana AAani alyameeni

Translation: ಅವರು ಹೇಳುವರು: “ನಿಶ್ಚಯವಾಗಿಯೂ ನೀವು ನಮ್ಮ ಬಲಭಾಗದಿಂದ ನಮ್ಮ ಬಳಿಗೆ ಬರುತ್ತಿದ್ದಿರಿ.”

37:29

قَالُواْ بَل لَّمۡ تَكُونُواْ مُؤۡمِنِينَ ﴿29﴾

Transliteration: Qaloo bal lam takoonoo mumineena

Translation: ಅವರು ಉತ್ತರಿಸುವರು: “ಅಲ್ಲ, ನೀವು ಸತ್ಯವಿಶ್ವಾಸಿಗಳಾಗಿರಲಿಲ್ಲ.

37:30

وَمَا كَانَ لَنَا عَلَيۡكُم مِّن سُلۡطَٰنِۭۖ بَلۡ كُنتُمۡ قَوۡمٗا طَٰغِينَ ﴿30﴾

Transliteration: Wama kana lana AAalaykum min sultanin bal kuntum qawman tagheena

Translation: ನಮಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಬದಲಿಗೆ, ನೀವು ಅತಿರೇಕಿಗಳಾದ ಜನರಾಗಿದ್ದಿರಿ.

37:31

فَحَقَّ عَلَيۡنَا قَوۡلُ رَبِّنَآۖ إِنَّا لَذَآئِقُونَ ﴿31﴾

Transliteration: Fahaqqa AAalayna qawlu rabbina inna lathaiqoona

Translation: ಆದ್ದರಿಂದ ನಮ್ಮ ಪರಿಪಾಲಕನ (ಅಲ್ಲಾಹನ) ವಚನವು ನಮ್ಮ ಮೇಲೆ ಖಾತ್ರಿಯಾಯಿತು. ನಿಶ್ಚಯವಾಗಿಯೂ ನಾವು ಶಿಕ್ಷೆಯ ರುಚಿಯನ್ನು ನೋಡುವೆವು.

37:32

فَأَغۡوَيۡنَٰكُمۡ إِنَّا كُنَّا غَٰوِينَ ﴿32﴾

Transliteration: Faaghwaynakum inna kunna ghaweena

Translation: ನಾವು ನಿಮ್ಮನ್ನು ದಾರಿತಪ್ಪಿಸಿದೆವು. (ಏಕೆಂದರೆ) ನಾವು ಸ್ವತಃ ದಾರಿತಪ್ಪಿದ್ದೆವು.”

37:33

فَإِنَّهُمۡ يَوۡمَئِذٖ فِي ٱلۡعَذَابِ مُشۡتَرِكُونَ ﴿33﴾

Transliteration: Fainnahum yawmaithin fee alAAathabi mushtarikoona

Translation: ಆದ್ದರಿಂದ ಆ ದಿನದಂದು ಅವರೆಲ್ಲರೂ ಶಿಕ್ಷೆಯಲ್ಲಿ ಪಾಲುದಾರರಾಗುವರು.

37:34

إِنَّا كَذَٰلِكَ نَفۡعَلُ بِٱلۡمُجۡرِمِينَ ﴿34﴾

Transliteration: Inna kathalika nafAAalu bialmujrimeena

Translation: ನಿಶ್ಚಯವಾಗಿಯೂ ನಾವು ಅಪರಾಧಿಗಳೊಡನೆ ಹೀಗೆಯೇ ವರ್ತಿಸುವೆವು.

37:35

إِنَّهُمۡ كَانُوٓاْ إِذَا قِيلَ لَهُمۡ لَآ إِلَٰهَ إِلَّا ٱللَّهُ يَسۡتَكۡبِرُونَ ﴿35﴾

Transliteration: Innahum kanoo itha qeela lahum la ilaha illa Allahu yastakbiroona

Translation: ಅವರೊಡನೆ, “ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ” ಎಂದು ಹೇಳಲಾದರೆ ಅವರು ಅಹಂಕಾರ ತೋರುತ್ತಿದ್ದರು.

37:36

وَيَقُولُونَ أَئِنَّا لَتَارِكُوٓاْ ءَالِهَتِنَا لِشَاعِرٖ مَّجۡنُونِۭ ﴿36﴾

Transliteration: Wayaqooloona ainna latarikoo alihatina lishaAAirin majnoonin

Translation: ಅವರು ಹೇಳುತ್ತಿದ್ದರು: “ಒಬ್ಬ ಮಾನಸಿಕ ಅಸ್ವಸ್ಥ ಕವಿಯ ಮಾತು ಕೇಳಿ ನಾವು ನಮ್ಮ ದೇವರುಗಳನ್ನು ಬಿಟ್ಟುಬಿಡಬೇಕೇ?”

37:37

بَلۡ جَآءَ بِٱلۡحَقِّ وَصَدَّقَ ٱلۡمُرۡسَلِينَ ﴿37﴾

Transliteration: Bal jaa bialhaqqi wasaddaqa almursaleena

Translation: ಅಲ್ಲ, ವಾಸ್ತವವಾಗಿ ಅವರು (ಪ್ರವಾದಿ) ಸತ್ಯದೊಂದಿಗೆ ಬಂದಿದ್ದರು ಮತ್ತು ಅವರು (ಮೊದಲಿನ) ಪ್ರವಾದಿಗಳನ್ನು ದೃಢೀಕರಿಸಿದ್ದರು.

37:38

إِنَّكُمۡ لَذَآئِقُواْ ٱلۡعَذَابِ ٱلۡأَلِيمِ ﴿38﴾

Transliteration: Innakum lathaiqoo alAAathabi alaleemi

Translation: ನಿಶ್ಚಯವಾಗಿಯೂ ನೀವು ಯಾತನಾಮಯ ಶಿಕ್ಷೆಯ ರುಚಿಯನ್ನು ನೋಡುವಿರಿ.

37:39

وَمَا تُجۡزَوۡنَ إِلَّا مَا كُنتُمۡ تَعۡمَلُونَ ﴿39﴾

Transliteration: Wama tujzawna illa ma kuntum taAAmaloona

Translation: ನೀವು ಮಾಡಿದ ಕರ್ಮಗಳ ಪ್ರತಿಫಲವನ್ನೇ ಹೊರತು ಬೇರೇನೂ ನಿಮಗೆ ನೀಡಲಾಗುವುದಿಲ್ಲ.

37:40

إِلَّا عِبَادَ ٱللَّهِ ٱلۡمُخۡلَصِينَ ﴿40﴾

Transliteration: Illa AAibada Allahi almukhlaseena

Translation: ಆದರೆ, ಅಲ್ಲಾಹನ ನಿಷ್ಕಳಂಕ ದಾಸರು ಇದರಿಂದ ಹೊರತಾಗಿದ್ದಾರೆ.

37:41

أُوْلَـٰٓئِكَ لَهُمۡ رِزۡقٞ مَّعۡلُومٞ ﴿41﴾

Transliteration: Olaika lahum rizqun maAAloomun

Translation: ಅವರಿಗೆ ನಿಶ್ಚಿತ ಉಪಜೀವನವಿದೆ.

37:42

فَوَٰكِهُ وَهُم مُّكۡرَمُونَ ﴿42﴾

Transliteration: Fawakihu wahum mukramoona

Translation: ಹಣ್ಣು-ಹಂಪಲುಗಳಿವೆ! ಅವರನ್ನು ಅಲ್ಲಿ ಗೌರವಿಸಲಾಗುವುದು.

37:43

فِي جَنَّـٰتِ ٱلنَّعِيمِ ﴿43﴾

Transliteration: Fee jannati alnnaAAeemi

Translation: ಸುಖಸಮೃದ್ಧವಾದ ಸ್ವರ್ಗೋದ್ಯಾನಗಳಲ್ಲಿ.

37:44

عَلَىٰ سُرُرٖ مُّتَقَٰبِلِينَ ﴿44﴾

Transliteration: AAala sururin mutaqabileena

Translation: ಅವರು ಪರಸ್ಪರ ಎದುರು-ಬದುರಾಗಿ ಮಂಚಗಳಲ್ಲಿ ಕುಳಿತಿರುವರು.

37:45

يُطَافُ عَلَيۡهِم بِكَأۡسٖ مِّن مَّعِينِۭ ﴿45﴾

Transliteration: Yutafu AAalayhim bikasin min maAAeenin

Translation: ಹರಿಯುವ ಚಿಲುಮೆಯ ನೀರು ತುಂಬಿದ ಲೋಟಗಳನ್ನು ಅವರ ಸುತ್ತಲೂ ತರಲಾಗುವುದು.

37:46

بَيۡضَآءَ لَذَّةٖ لِّلشَّـٰرِبِينَ ﴿46﴾

Transliteration: Baydaa laththatin lilshsharibeena

Translation: ಅದು ಬೆಳ್ಳಗಿದ್ದು ಕುಡಿಯುವವರಿಗೆ ಆಹ್ಲಾದಕರವಾಗಿರುವುದು.

37:47

لَا فِيهَا غَوۡلٞ وَلَا هُمۡ عَنۡهَا يُنزَفُونَ ﴿47﴾

Transliteration: La feeha ghawlun wala hum AAanha yunzafoona

Translation: ಅದರಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲ. ಅದರಿಂದ ನಶೆಯೂ ಉಂಟಾಗುವುದಿಲ್ಲ.

37:48

وَعِندَهُمۡ قَٰصِرَٰتُ ٱلطَّرۡفِ عِينٞ ﴿48﴾

Transliteration: WaAAindahum qasiratu alttarfi AAeenun

Translation: ದೃಷ್ಟಿಯನ್ನು ನಿಯಂತ್ರಿಸುವ[1] ಮತ್ತು ಅರಳಿದ ನೇತ್ರಗಳುಳ್ಳ ಅಪ್ಸರೆಯರು ಅವರ ಬಳಿಯಿರುವರು.

37:49

كَأَنَّهُنَّ بَيۡضٞ مَّكۡنُونٞ ﴿49﴾

Transliteration: Kaannahunna baydun maknoonun

Translation: ಅವರು ಜೋಪಾನವಾಗಿಡಲಾದ ಮೊಟ್ಟೆಗಳಂತೆ ಇರುವರು.

37:50

فَأَقۡبَلَ بَعۡضُهُمۡ عَلَىٰ بَعۡضٖ يَتَسَآءَلُونَ ﴿50﴾

Transliteration: Faaqbala baAAduhum AAala baAAdin yatasaaloona

Translation: ಅವರು ಪರಸ್ಪರ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು.

37:51

قَالَ قَآئِلٞ مِّنۡهُمۡ إِنِّي كَانَ لِي قَرِينٞ ﴿51﴾

Transliteration: Qala qailun minhum innee kana lee qareenun

Translation: ಅವರಲ್ಲಿ ಒಬ್ಬನು ಹೇಳುವನು: “ನಿಜಕ್ಕೂ ನನಗೊಬ್ಬ ಗೆಳೆಯನಿದ್ದನು.

37:52

يَقُولُ أَءِنَّكَ لَمِنَ ٱلۡمُصَدِّقِينَ ﴿52﴾

Transliteration: Yaqoolu ainnaka lamina almusaddiqeena

Translation: ಅವನು ಕೇಳುತ್ತಿದ್ದನು: ನೀನು (ಪರಲೋಕದಲ್ಲಿ) ವಿಶ್ವಾಸವಿಡುತ್ತೀಯಾ?

37:53

أَءِذَا مِتۡنَا وَكُنَّا تُرَابٗا وَعِظَٰمًا أَءِنَّا لَمَدِينُونَ ﴿53﴾

Transliteration: Aitha mitna wakunna turaban waAAithaman ainna lamadeenoona

Translation: ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕವೂ ನಮಗೆ ನಮ್ಮ ಕರ್ಮಫಲಗಳನ್ನು ನೀಡಲಾಗುತ್ತದೆಯೇ?”

37:54

قَالَ هَلۡ أَنتُم مُّطَّلِعُونَ ﴿54﴾

Transliteration: Qala hal antum muttaliAAoona

Translation: ಅವನು (ಅವನು ತನ್ನ ಬಳಿಯಿರುವವರೊಡನೆ) ಕೇಳುವನು: “ನೀವು ಅವನನ್ನು ನೋಡಲು ಬಯಸುತ್ತೀರಾ?”

37:55

فَٱطَّلَعَ فَرَءَاهُ فِي سَوَآءِ ٱلۡجَحِيمِ ﴿55﴾

Transliteration: FaittalaAAa faraahu fee sawai aljaheemi

Translation: ಆಗ ಅವನು ಇಣುಕಿ ನೋಡಿದಾಗ ಆತ ನರಕದ ಮಧ್ಯಭಾಗದಲ್ಲಿರುವುದನ್ನು ಕಾಣುವನು.

37:56

قَالَ تَٱللَّهِ إِن كِدتَّ لَتُرۡدِينِ ﴿56﴾

Transliteration: Qala taAllahi in kidta laturdeeni

Translation: ಅವನು ಹೇಳುವನು: “ಅಲ್ಲಾಹನಾಣೆ! ನೀನು ನನ್ನನ್ನು ಇನ್ನೇನು ನಾಶ ಮಾಡಿಯೇ ಬಿಡುತ್ತಿದ್ದೆ.

37:57

وَلَوۡلَا نِعۡمَةُ رَبِّي لَكُنتُ مِنَ ٱلۡمُحۡضَرِينَ ﴿57﴾

Transliteration: Walawla niAAmatu rabbee lakuntu mina almuhdareena

Translation: ನನ್ನ ಪರಿಪಾಲಕನ (ಅಲ್ಲಾಹನ) ಅನುಗ್ರಹವಿಲ್ಲದಿರುತ್ತಿದ್ದರೆ, ನಾನು ಕೂಡ (ನರಕಕ್ಕೆ) ಹಾಜರುಪಡಿಸಲಾಗುವವರಲ್ಲಿ ಸೇರಿರುತ್ತಿದ್ದೆ.”

37:58

أَفَمَا نَحۡنُ بِمَيِّتِينَ ﴿58﴾

Transliteration: Afama nahnu bimayyiteena

Translation: (ಸ್ವರ್ಗವಾಸಿಗಳು ಹೇಳುವರು): “ಇನ್ನು ನಾವು ಸಾಯುವುದಿಲ್ಲ.

37:59

إِلَّا مَوۡتَتَنَا ٱلۡأُولَىٰ وَمَا نَحۡنُ بِمُعَذَّبِينَ ﴿59﴾

Transliteration: Illa mawtatana aloola wama nahnu bimuAAaththabeena

Translation: ನಮ್ಮ ಮೊದಲ ಸಾವಿನ ಹೊರತು. ಇನ್ನು ನಮಗೆ ಶಿಕ್ಷೆಯೂ ಇಲ್ಲ.”

37:60

إِنَّ هَٰذَا لَهُوَ ٱلۡفَوۡزُ ٱلۡعَظِيمُ ﴿60﴾

Transliteration: Inna hatha lahuwa alfawzu alAAatheemu

Translation: ನಿಶ್ಚಯವಾಗಿಯೂ ಇದೇ ಮಹಾ ವಿಜಯ.

37:61

لِمِثۡلِ هَٰذَا فَلۡيَعۡمَلِ ٱلۡعَٰمِلُونَ ﴿61﴾

Transliteration: Limithli hatha falyaAAmali alAAamiloona

Translation: ಕರ್ಮವೆಸಗುವವರು ಇಂತಹ (ವಿಜಯಕ್ಕಾಗಿಯೇ) ಕರ್ಮವೆಸಗಲಿ.

37:62

أَذَٰلِكَ خَيۡرٞ نُّزُلًا أَمۡ شَجَرَةُ ٱلزَّقُّومِ ﴿62﴾

Transliteration: Athalika khayrun nuzulan am shajaratu alzzaqqoomi

Translation: ಈ ಆತಿಥ್ಯವು ಉತ್ತಮವೋ? ಅಥವಾ ಝಕ್ಕೂಮ್ ಮರವೋ?[1]

37:63

إِنَّا جَعَلۡنَٰهَا فِتۡنَةٗ لِّلظَّـٰلِمِينَ ﴿63﴾

Transliteration: Inna jaAAalnaha fitnatan lilththalimeena

Translation: ನಿಶ್ಚಯವಾಗಿಯೂ ನಾವು ಅದನ್ನು ಅಕ್ರಮಿಗಳಿಗೆ ಪರೀಕ್ಷೆಯಾಗಿ ಮಾಡಿದ್ದೇವೆ.

37:64

إِنَّهَا شَجَرَةٞ تَخۡرُجُ فِيٓ أَصۡلِ ٱلۡجَحِيمِ ﴿64﴾

Transliteration: Innaha shajaratun takhruju fee asli aljaheemi

Translation: ಅದು ನರಕಾಗ್ನಿಯ ತಳಭಾಗದಿಂದ ಹೊರಹೊಮ್ಮುವ ಮರವಾಗಿದೆ.

37:65

طَلۡعُهَا كَأَنَّهُۥ رُءُوسُ ٱلشَّيَٰطِينِ ﴿65﴾

Transliteration: TalAAuha kaannahu ruoosu alshshayateeni

Translation: ಅದರ ಮೊಗ್ಗುಗಳು ಶೈತಾನರ ತಲೆ ಬುರುಡೆಗಳಂತಿವೆ.

37:66

فَإِنَّهُمۡ لَأٓكِلُونَ مِنۡهَا فَمَالِـُٔونَ مِنۡهَا ٱلۡبُطُونَ ﴿66﴾

Transliteration: Fainnahum laakiloona minha famalioona minha albutoona

Translation: ನಿಶ್ಚಯವಾಗಿಯೂ ಅವರು ಅದರಿಂದ ತಿನ್ನುವರು ಮತ್ತು ಹೊಟ್ಟೆ ತುಂಬಿಸುವರು.

37:67

ثُمَّ إِنَّ لَهُمۡ عَلَيۡهَا لَشَوۡبٗا مِّنۡ حَمِيمٖ ﴿67﴾

Transliteration: Thumma inna lahum AAalayha lashawban min hameemin

Translation: ನಂತರ ಅವರಿಗೆ ಮಿಶ್ರಣಗೊಂಡ ಕುದಿಯುವ ಪಾನೀಯವನ್ನು ನೀಡಲಾಗುವುದು.

37:68

ثُمَّ إِنَّ مَرۡجِعَهُمۡ لَإِلَى ٱلۡجَحِيمِ ﴿68﴾

Transliteration: Thumma inna marjiAAahum laila aljaheemi

Translation: ನಂತರ ಅವರೆಲ್ಲರೂ ಮರಳುವುದು ನರಕದ ಕಡೆಗಾಗಿದೆ.

37:69

إِنَّهُمۡ أَلۡفَوۡاْ ءَابَآءَهُمۡ ضَآلِّينَ ﴿69﴾

Transliteration: Innahum alfaw abaahum dalleena

Translation: ನಿಶ್ಚಯವಾಗಿಯೂ ಅವರು ತಮ್ಮ ಪೂರ್ವಜರನ್ನು ದಾರಿತಪ್ಪಿದ್ದಾಗಿ ಕಂಡಿದ್ದರು.

37:70

فَهُمۡ عَلَىٰٓ ءَاثَٰرِهِمۡ يُهۡرَعُونَ ﴿70﴾

Transliteration: Fahum AAala atharihim yuhraAAoona

Translation: ಇವರು ಅವರ ಹೆಜ್ಜೆಗಳನ್ನು (ಹಿಂಬಾಲಿಸಿ) ಧಾವಿಸುತ್ತಿದ್ದಾರೆ.

37:71

وَلَقَدۡ ضَلَّ قَبۡلَهُمۡ أَكۡثَرُ ٱلۡأَوَّلِينَ ﴿71﴾

Transliteration: Walaqad dalla qablahum aktharu alawwaleena

Translation: ಇವರಿಗಿಂತ ಮೊದಲಿನ ಜನರಲ್ಲಿ ಹೆಚ್ಚಿನವರು ದಾರಿತಪ್ಪಿದ್ದರು.

37:72

وَلَقَدۡ أَرۡسَلۡنَا فِيهِم مُّنذِرِينَ ﴿72﴾

Transliteration: Walaqad arsalna feehim munthireena

Translation: ನಾವು ಅವರಿಗೆ ಮುನ್ನೆಚ್ಚರಿಕೆಗಾರರನ್ನು (ಪ್ರವಾದಿಗಳನ್ನು) ಕಳುಹಿಸಿದ್ದೆವು.

37:73

فَٱنظُرۡ كَيۡفَ كَانَ عَٰقِبَةُ ٱلۡمُنذَرِينَ ﴿73﴾

Transliteration: Faonthur kayfa kana AAaqibatu almunthareena

Translation: ಮುನ್ನೆಚ್ಚರಿಕೆ ನೀಡಲಾದವರ ಅಂತ್ಯವು ಹೇಗಿತ್ತೆಂದು ನೋಡಿರಿ.

37:74

إِلَّا عِبَادَ ٱللَّهِ ٱلۡمُخۡلَصِينَ ﴿74﴾

Transliteration: Illa AAibada Allahi almukhlaseena

Translation: ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿದ್ದಾರೆ.

37:75

وَلَقَدۡ نَادَىٰنَا نُوحٞ فَلَنِعۡمَ ٱلۡمُجِيبُونَ ﴿75﴾

Transliteration: Walaqad nadana noohun falaniAAma almujeeboona

Translation: ನೂಹ್ ನಮ್ಮನ್ನು ಕರೆದು ಪ್ರಾರ್ಥಿಸಿದ್ದರು. ನಾವು ಪ್ರಾರ್ಥನೆಗೆ ಎಷ್ಟು ಚೆನ್ನಾಗಿ ಉತ್ತರಿಸುತ್ತೇವೆ.

37:76

وَنَجَّيۡنَٰهُ وَأَهۡلَهُۥ مِنَ ٱلۡكَرۡبِ ٱلۡعَظِيمِ ﴿76﴾

Transliteration: Wanajjaynahu waahlahu mina alkarbi alAAatheemi

Translation: ನಾವು ಅವರನ್ನು ಮತ್ತು ಅವರ ಜನರನ್ನು ಮಹಾ ದುರಂತದಿಂದ ಪಾರು ಮಾಡಿದೆವು.

37:77

وَجَعَلۡنَا ذُرِّيَّتَهُۥ هُمُ ٱلۡبَاقِينَ ﴿77﴾

Transliteration: WajaAAalna thurriyyatahu humu albaqeena

Translation: ನಾವು ಅವರ ಸಂತಾನವನ್ನು (ಭೂಮಿಯಲ್ಲಿ) ಅವಶೇಷಿಸಿದವರನ್ನಾಗಿ ಮಾಡಿದೆವು.

37:78

وَتَرَكۡنَا عَلَيۡهِ فِي ٱلۡأٓخِرِينَ ﴿78﴾

Transliteration: Watarakna AAalayhi fee alakhireena

Translation: ನಾವು ನಂತರದ ತಲೆಮಾರುಗಳಲ್ಲಿ ಅವರ (ಉತ್ತಮ ಹೆಸರನ್ನು) ಉಳಿಸಿದೆವು.

37:79

سَلَٰمٌ عَلَىٰ نُوحٖ فِي ٱلۡعَٰلَمِينَ ﴿79﴾

Transliteration: Salamun AAala noohin fee alAAalameena

Translation: ಸರ್ವಲೋಕದವರಲ್ಲಿ ನೂಹರ ಮೇಲೆ ಶಾಂತಿಯಿರಲಿ!

37:80

إِنَّا كَذَٰلِكَ نَجۡزِي ٱلۡمُحۡسِنِينَ ﴿80﴾

Transliteration: Inna kathalika najzee almuhsineena

Translation: ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಹೀಗೆಯೇ ಪ್ರತಿಫಲವನ್ನು ನೀಡುವೆವು.

37:81

إِنَّهُۥ مِنۡ عِبَادِنَا ٱلۡمُؤۡمِنِينَ ﴿81﴾

Transliteration: Innahu min AAibadina almumineena

Translation: ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದ್ದಾರೆ.

37:82

ثُمَّ أَغۡرَقۡنَا ٱلۡأٓخَرِينَ ﴿82﴾

Transliteration: Thumma aghraqna alakhareena

Translation: ನಂತರ ನಾವು ಉಳಿದವರನ್ನು ಮುಳುಗಿಸಿದೆವು.

37:83

وَإِنَّ مِن شِيعَتِهِۦ لَإِبۡرَٰهِيمَ ﴿83﴾

Transliteration: Wainna min sheeAAatihi laibraheema

Translation: ನಿಶ್ಚಯವಾಗಿಯೂ ಇಬ್ರಾಹೀಮ್ ಕೂಡ ಅವರ ಗುಂಪಿಗೆ ಸೇರಿದವರು.

37:84

إِذۡ جَآءَ رَبَّهُۥ بِقَلۡبٖ سَلِيمٍ ﴿84﴾

Transliteration: Ith jaa rabbahu biqalbin saleemin

Translation: ಅವರು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಸುರಕ್ಷಿತ ಹೃದಯದೊಂದಿಗೆ ಬಂದ ಸಂದರ್ಭ!

37:85

إِذۡ قَالَ لِأَبِيهِ وَقَوۡمِهِۦ مَاذَا تَعۡبُدُونَ ﴿85﴾

Transliteration: Ith qala liabeehi waqawmihi matha taAAbudoona

Translation: ಅವರು ತಮ್ಮ ತಂದೆ ಮತ್ತು ಊರ ಜನರೊಡನೆ ಕೇಳಿದರು: “ನೀವು ಏನು ಆರಾಧಿಸುತ್ತಿದ್ದೀರಿ?

37:86

أَئِفۡكًا ءَالِهَةٗ دُونَ ٱللَّهِ تُرِيدُونَ ﴿86﴾

Transliteration: Aifkan alihatan doona Allahi tureedoona

Translation: ನೀವು ಅಲ್ಲಾಹನನ್ನು ಬಿಟ್ಟು ಮಿಥ್ಯ ದೇವರುಗಳನ್ನು ಬಯಸುತ್ತೀರಾ?

37:87

فَمَا ظَنُّكُم بِرَبِّ ٱلۡعَٰلَمِينَ ﴿87﴾

Transliteration: Fama thannukum birabbi alAAalameena

Translation: ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಬಗ್ಗೆ ನಿಮ್ಮ ಕಲ್ಪನೆಯೇನು?”

37:88

فَنَظَرَ نَظۡرَةٗ فِي ٱلنُّجُومِ ﴿88﴾

Transliteration: Fanathara nathratan fee alnnujoomi

Translation: ನಂತರ ಅವರು ನಕ್ಷತ್ರಗಳ ಕಡೆಗೆ ಒಂದು ನೋಟವನ್ನು ಬೀರಿದರು.

37:89

فَقَالَ إِنِّي سَقِيمٞ ﴿89﴾

Transliteration: Faqala innee saqeemun

Translation: ಅವರು ಹೇಳಿದರು: “ನಾನು ಅಸ್ವಸ್ಥನಾಗಿದ್ದೇನೆ.”

37:90

فَتَوَلَّوۡاْ عَنۡهُ مُدۡبِرِينَ ﴿90﴾

Transliteration: Fatawallaw AAanhu mudbireena

Translation: ಆಗ ಜನರು ಇಬ್ರಾಹೀಮ‌ರನ್ನು ಬಿಟ್ಟು ತಿರುಗಿ ನಡೆದರು.

37:91

فَرَاغَ إِلَىٰٓ ءَالِهَتِهِمۡ فَقَالَ أَلَا تَأۡكُلُونَ ﴿91﴾

Transliteration: Faragha ila alihatihim faqala ala takuloona

Translation: ಇಬ್ರಾಹೀಮ್ ಅವರ ದೇವರುಗಳ ಕಡೆಗೆ ತಿರುಗಿ ಕೇಳಿದರು: “ನೀವೇಕೆ ತಿನ್ನುವುದಿಲ್ಲ?

37:92

مَا لَكُمۡ لَا تَنطِقُونَ ﴿92﴾

Transliteration: Ma lakum la tantiqoona

Translation: ನಿಮಗೇನಾಗಿದೆ? ನೀವೇಕೆ ಮಾತನಾಡುವುದಿಲ್ಲ?”

37:93

فَرَاغَ عَلَيۡهِمۡ ضَرۡبَۢا بِٱلۡيَمِينِ ﴿93﴾

Transliteration: Faragha AAalayhim darban bialyameeni

Translation: ನಂತರ ಅವರು ಅವುಗಳ ಕಡೆಗೆ ತಿರುಗಿ ಬಲಗೈಯಿಂದ ಬಲವಾದ ಏಟು ಕೊಟ್ಟರು.

37:94

فَأَقۡبَلُوٓاْ إِلَيۡهِ يَزِفُّونَ ﴿94﴾

Transliteration: Faaqbaloo ilayhi yaziffoona

Translation: ಜನರು ಅವರ ಬಳಿಗೆ ಓಡೋಡಿ ಬಂದರು.

37:95

قَالَ أَتَعۡبُدُونَ مَا تَنۡحِتُونَ ﴿95﴾

Transliteration: Qala ataAAbudoona ma tanhitoona

Translation: ಇಬ್ರಾಹೀಮ್ ಕೇಳಿದರು: “ನೀವೇ ಸ್ವತಃ ಕಡೆದು ನಿರ್ಮಿಸಿದ್ದನ್ನು ನೀವು ಆರಾಧಿಸುತ್ತಿದ್ದೀರಾ?

37:96

وَٱللَّهُ خَلَقَكُمۡ وَمَا تَعۡمَلُونَ ﴿96﴾

Transliteration: WaAllahu khalaqakum wama taAAmaloona

Translation: ವಾಸ್ತವವಾಗಿ, ಅಲ್ಲಾಹನೇ ನಿಮ್ಮನ್ನು ಮತ್ತು ನೀವು ನಿರ್ಮಿಸುವುದನ್ನು ಸೃಷ್ಟಿಸಿದವನು.”

37:97

قَالُواْ ٱبۡنُواْ لَهُۥ بُنۡيَٰنٗا فَأَلۡقُوهُ فِي ٱلۡجَحِيمِ ﴿97﴾

Transliteration: Qaloo ibnoo lahu bunyanan faalqoohu fee aljaheemi

Translation: ಜನರು ಹೇಳಿದರು: “ನೀವು ಅವನಿಗೆ ಒಂದು ದೊಡ್ಡ ಅಗ್ನಿಕುಂಡವನ್ನು ನಿರ್ಮಿಸಿ, ಅವನನ್ನು ಜ್ವಲಿಸುವ ಅಗ್ನಿಗೆ ಎಸೆಯಿರಿ.”

37:98

فَأَرَادُواْ بِهِۦ كَيۡدٗا فَجَعَلۡنَٰهُمُ ٱلۡأَسۡفَلِينَ ﴿98﴾

Transliteration: Faaradoo bihi kaydan fajaAAalnahumu alasfaleena

Translation: ಅವರು ಇಬ್ರಾಹೀಮರನ್ನು ಕುತಂತ್ರದಿಂದ ನಾಶ ಮಾಡಲು ಬಯಸಿದ್ದರು. ಆದರೆ ನಾವು ಅವರನ್ನು ಅತ್ಯಂತ ಅಧಮರನ್ನಾಗಿ ಮಾಡಿದೆವು.

37:99

وَقَالَ إِنِّي ذَاهِبٌ إِلَىٰ رَبِّي سَيَهۡدِينِ ﴿99﴾

Transliteration: Waqala innee thahibun ila rabbee sayahdeeni

Translation: ಇಬ್ರಾಹೀಮ್ ಹೇಳಿದರು: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ತೆರಳುತ್ತೇನೆ. ಅವನು ನನಗೆ ದಾರಿ ತೋರಿಸುವನು.

37:100

رَبِّ هَبۡ لِي مِنَ ٱلصَّـٰلِحِينَ ﴿100﴾

Transliteration: Rabbi hab lee mina alssaliheena

Translation: ನನ್ನ ಪರಿಪಾಲಕನೇ! ನನಗೆ ನೀತಿವಂತರಲ್ಲಿ ಸೇರಿದ ಮಗುವನ್ನು ಕರುಣಿಸು.”

37:101

فَبَشَّرۡنَٰهُ بِغُلَٰمٍ حَلِيمٖ ﴿101﴾

Transliteration: Fabashsharnahu bighulamin haleemin

Translation: ಆಗ ನಾವು ಅವರಿಗೆ ಸಹಿಷ್ಣುತೆಯುಳ್ಳ ಮಗು ಜನಿಸುವ ಬಗ್ಗೆ ಸುವಾರ್ತೆಯನ್ನು ತಿಳಿಸಿದೆವು.

37:102

فَلَمَّا بَلَغَ مَعَهُ ٱلسَّعۡيَ قَالَ يَٰبُنَيَّ إِنِّيٓ أَرَىٰ فِي ٱلۡمَنَامِ أَنِّيٓ أَذۡبَحُكَ فَٱنظُرۡ مَاذَا تَرَىٰۚ قَالَ يَـٰٓأَبَتِ ٱفۡعَلۡ مَا تُؤۡمَرُۖ سَتَجِدُنِيٓ إِن شَآءَ ٱللَّهُ مِنَ ٱلصَّـٰبِرِينَ ﴿102﴾

Transliteration: Falamma balagha maAAahu alssaAAya qala ya bunayya innee ara fee almanami annee athbahuka faonthur matha tara qala ya abati ifAAal ma tumaru satajidunee in shaa Allahu mina alssabireena

Translation: ನಂತರ ಅವನು (ಮಗು) ತಂದೆಯೊಂದಿಗೆ ಓಡಾಡುವ ಪ್ರಾಯಕ್ಕೆ ತಲುಪಿದಾಗ ಅವರು (ಇಬ್ರಾಹೀಂ) ಹೇಳಿದರು: “ಮಗೂ! ನಾನು ನಿನ್ನ ಕತ್ತು ಕೊಯ್ಯುತ್ತಿರುವಂತೆ ಕನಸು ಕಾಣುತ್ತಿದ್ದೇನೆ. ನಿನ್ನ ಅಭಿಪ್ರಾಯವೇನೆಂದು ಹೇಳು?” ಮಗ ಹೇಳಿದನು: “ಅಪ್ಪಾ! ನಿಮಗೆ ಆಜ್ಞಾಪಿಸಲಾಗಿರುವುದನ್ನು ನಿರ್ವಹಿಸಿರಿ. ಅಲ್ಲಾಹು ಬಯಸಿದರೆ ನಿಶ್ಚಯವಾಗಿಯೂ ನೀವು ನನ್ನನ್ನು ತಾಳ್ಮೆ ವಹಿಸುವವರಲ್ಲಿ ಕಾಣುವಿರಿ.”

37:103

فَلَمَّآ أَسۡلَمَا وَتَلَّهُۥ لِلۡجَبِينِ ﴿103﴾

Transliteration: Falamma aslama watallahu liljabeeni

Translation: ನಂತರ ಅವರಿಬ್ಬರೂ (ಅಲ್ಲಾಹನ ಆಜ್ಞೆಗೆ) ಶರಣಾಗಿ, ಅವರು ಮಗನನ್ನು ಹಣೆಯ ಮೇಲೆ ಮಲಗಿಸಿದಾಗ.

37:104

وَنَٰدَيۡنَٰهُ أَن يَـٰٓإِبۡرَٰهِيمُ ﴿104﴾

Transliteration: Wanadaynahu an ya ibraheemu

Translation: ನಾವು ಅವರನ್ನು ಕರೆದು ಹೇಳಿದೆವು: “ಓ ಇಬ್ರಾಹೀಮ್!

37:105

قَدۡ صَدَّقۡتَ ٱلرُّءۡيَآۚ إِنَّا كَذَٰلِكَ نَجۡزِي ٱلۡمُحۡسِنِينَ ﴿105﴾

Transliteration: Qad saddaqta alrruya inna kathalika najzee almuhsineena

Translation: ನಿಶ್ಚಯವಾಗಿಯೂ ನೀವು ಕನಸನ್ನು ನಿಜಪಡಿಸಿದ್ದೀರಿ.” ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.

37:106

إِنَّ هَٰذَا لَهُوَ ٱلۡبَلَـٰٓؤُاْ ٱلۡمُبِينُ ﴿106﴾

Transliteration: Inna hatha lahuwa albalao almubeenu

Translation: ನಿಶ್ಚಯವಾಗಿಯೂ ಇದು ಸ್ಪಷ್ಟ ಪರೀಕ್ಷೆಯಾಗಿತ್ತು.

37:107

وَفَدَيۡنَٰهُ بِذِبۡحٍ عَظِيمٖ ﴿107﴾

Transliteration: Wafadaynahu bithibhin AAatheemin

Translation: ನಾವು ಅವರ (ಮಗನ) ಬದಲಿಗೆ ಬಲಿ ನೀಡಲು ಒಂದು ಮಹಾ ಬಲಿಮೃಗವನ್ನು ನೀಡಿದೆವು.

37:108

وَتَرَكۡنَا عَلَيۡهِ فِي ٱلۡأٓخِرِينَ ﴿108﴾

Transliteration: Watarakna AAalayhi fee alakhireena

Translation: ನಾವು ಅವರ (ಇಬ್ರಾಹೀಮ‌ರ) ಕೀರ್ತಿಯನ್ನು ಅವರ ನಂತರದವರಲ್ಲಿ ಉಳಿಸಿದೆವು.

37:109

سَلَٰمٌ عَلَىٰٓ إِبۡرَٰهِيمَ ﴿109﴾

Transliteration: Salamun AAala ibraheema

Translation: ಇಬ್ರಾಹೀಮ‌ರ ಮೇಲೆ ಶಾಂತಿಯಿರಲಿ!

37:110

كَذَٰلِكَ نَجۡزِي ٱلۡمُحۡسِنِينَ ﴿110﴾

Transliteration: Kathalika najzee almuhsineena

Translation: ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.

37:111

إِنَّهُۥ مِنۡ عِبَادِنَا ٱلۡمُؤۡمِنِينَ ﴿111﴾

Transliteration: Innahu min AAibadina almumineena

Translation: ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು.

37:112

وَبَشَّرۡنَٰهُ بِإِسۡحَٰقَ نَبِيّٗا مِّنَ ٱلصَّـٰلِحِينَ ﴿112﴾

Transliteration: Wabashsharnahu biishaqa nabiyyan mina alssaliheena

Translation: ನಾವು ಅವರಿಗೆ ಇಸ್‍ಹಾಕರ ಜನನದ ಬಗ್ಗೆ ಸುವಾರ್ತೆಯನ್ನು ತಿಳಿಸಿದೆವು. ಅವರು ಸಜ್ಜನರಲ್ಲಿ ಸೇರಿದ ಒಬ್ಬ ಪ್ರವಾದಿಯಾಗಿದ್ದರು.

37:113

وَبَٰرَكۡنَا عَلَيۡهِ وَعَلَىٰٓ إِسۡحَٰقَۚ وَمِن ذُرِّيَّتِهِمَا مُحۡسِنٞ وَظَالِمٞ لِّنَفۡسِهِۦ مُبِينٞ ﴿113﴾

Transliteration: Wabarakna AAalayhi waAAala ishaqa wamin thurriyyatihima muhsinun wathalimun linafsihi mubeenun

Translation: ನಾವು ಅವರಿಗೆ ಮತ್ತು ಇಸ್‍ಹಾಕರಿಗೆ ಸಮೃದ್ಧಿಯನ್ನು ದಯಪಾಲಿಸಿದೆವು. ಅವರಿಬ್ಬರ ಸಂತಾನದಲ್ಲಿ ಒಳಿತು ಮಾಡುವವರಿದ್ದಾರೆ. ಸ್ವತಃ ಅವರೊಡನೆಯೇ ಸ್ಪಷ್ಟವಾಗಿ ಅಕ್ರಮವೆಸಗುವವರೂ ಇದ್ದಾರೆ.

37:114

وَلَقَدۡ مَنَنَّا عَلَىٰ مُوسَىٰ وَهَٰرُونَ ﴿114﴾

Transliteration: Walaqad mananna AAala moosa waharoona

Translation: ನಿಶ್ಚಯವಾಗಿಯೂ ನಾವು ಮೂಸಾ ಮತ್ತು ಹಾರೂನರಿಗೆ ಉಪಕಾರ ಮಾಡಿದ್ದೆವು.

37:115

وَنَجَّيۡنَٰهُمَا وَقَوۡمَهُمَا مِنَ ٱلۡكَرۡبِ ٱلۡعَظِيمِ ﴿115﴾

Transliteration: Wanajjaynahuma waqawmahuma mina alkarbi alAAatheemi

Translation: ನಾವು ಅವರನ್ನು ಮತ್ತು ಅವರ ಜನರನ್ನು ಮಹಾ ದುರಂತದಿಂದ ರಕ್ಷಿಸಿದೆವು.

37:116

وَنَصَرۡنَٰهُمۡ فَكَانُواْ هُمُ ٱلۡغَٰلِبِينَ ﴿116﴾

Transliteration: Wanasarnahum fakanoo humu alghalibeena

Translation: ನಾವು ಅವರಿಗೆ ಸಹಾಯ ಮಾಡಿದೆವು. ಆಗ ಅವರೇ ವಿಜಯಿಗಳಾದರು.

37:117

وَءَاتَيۡنَٰهُمَا ٱلۡكِتَٰبَ ٱلۡمُسۡتَبِينَ ﴿117﴾

Transliteration: Waataynahuma alkitaba almustabeena

Translation: ನಾವು ಅವರಿಗೆ (ವಿಷಯಗಳನ್ನು) ಸ್ಪಷ್ಟಪಡಿಸುವ ಗ್ರಂಥವನ್ನು ನೀಡಿದೆವು.

37:118

وَهَدَيۡنَٰهُمَا ٱلصِّرَٰطَ ٱلۡمُسۡتَقِيمَ ﴿118﴾

Transliteration: Wahadaynahuma alssirata almustaqeema

Translation: ನಾವು ಅವರನ್ನು ನೇರ ಮಾರ್ಗದಲ್ಲಿ ದೃಢವಾಗಿ ನಿಲ್ಲಿಸಿದೆವು.

37:119

وَتَرَكۡنَا عَلَيۡهِمَا فِي ٱلۡأٓخِرِينَ ﴿119﴾

Transliteration: Watarakna AAalayhima fee alakhireena

Translation: ನಾವು ಅವರ ಕೀರ್ತಿಯನ್ನು ನಂತರದ ತಲೆಮಾರುಗಳಲ್ಲಿ ಉಳಿಸಿದೆವು.

37:120

سَلَٰمٌ عَلَىٰ مُوسَىٰ وَهَٰرُونَ ﴿120﴾

Transliteration: Salamun AAala moosa waharoona

Translation: ಮೂಸಾ ಮತ್ತು ಹಾರೂನರ ಮೇಲೆ ಶಾಂತಿಯಿರಲಿ!

37:121

إِنَّا كَذَٰلِكَ نَجۡزِي ٱلۡمُحۡسِنِينَ ﴿121﴾

Transliteration: Inna kathalika najzee almuhsineena

Translation: ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.

37:122

إِنَّهُمَا مِنۡ عِبَادِنَا ٱلۡمُؤۡمِنِينَ ﴿122﴾

Transliteration: Innahuma min AAibadina almumineena

Translation: ನಿಶ್ಚಯವಾಗಿಯೂ ಅವರಿಬ್ಬರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು.

37:123

وَإِنَّ إِلۡيَاسَ لَمِنَ ٱلۡمُرۡسَلِينَ ﴿123﴾

Transliteration: Wainna ilyasa lamina almursaleena

Translation: ನಿಶ್ಚಯವಾಗಿಯೂ ಇಲ್ಯಾಸ್ ಪ್ರವಾದಿಗಳಲ್ಲಿ ಒಬ್ಬರಾಗಿದ್ದರು.

37:124

إِذۡ قَالَ لِقَوۡمِهِۦٓ أَلَا تَتَّقُونَ ﴿124﴾

Transliteration: Ith qala liqawmihi ala tattaqoona

Translation: ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?”

37:125

أَتَدۡعُونَ بَعۡلٗا وَتَذَرُونَ أَحۡسَنَ ٱلۡخَٰلِقِينَ ﴿125﴾

Transliteration: AtadAAoona baAAlan watatharoona ahsana alkhaliqeena

Translation: ನೀವು ಬಾಲ್ (ವಿಗ್ರಹವನ್ನು) ಕರೆದು ಪ್ರಾರ್ಥಿಸುತ್ತೀರಾ? ಮತ್ತು ಅತ್ಯುತ್ತಮ ಸೃಷ್ಟಿಕರ್ತನನ್ನು ತೊರೆಯುತ್ತೀರಾ?

37:126

ٱللَّهَ رَبَّكُمۡ وَرَبَّ ءَابَآئِكُمُ ٱلۡأَوَّلِينَ ﴿126﴾

Transliteration: Allaha rabbakum warabba abaikumu alawwaleena

Translation: ಅಂದರೆ ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕನಾದ ಅಲ್ಲಾಹನನ್ನು?

37:127

فَكَذَّبُوهُ فَإِنَّهُمۡ لَمُحۡضَرُونَ ﴿127﴾

Transliteration: Fakaththaboohu fainnahum lamuhdaroona

Translation: ಆದರೆ ಅವರು ಅವರನ್ನು ನಿಷೇಧಿಸಿದರು. ನಿಶ್ಚಯವಾಗಿಯೂ ಅವರನ್ನು (ಶಿಕ್ಷೆಗೆ) ಹಾಜರುಪಡಿಸಲಾಗುವುದು.

37:128

إِلَّا عِبَادَ ٱللَّهِ ٱلۡمُخۡلَصِينَ ﴿128﴾

Transliteration: Illa AAibada Allahi almukhlaseena

Translation: ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿದ್ದಾರೆ.

37:129

وَتَرَكۡنَا عَلَيۡهِ فِي ٱلۡأٓخِرِينَ ﴿129﴾

Transliteration: Watarakna AAalayhi fee alakhireena

Translation: ನಂತರದ ತಲೆಮಾರುಗಳಲ್ಲಿ ನಾವು ಅವರ ಕೀರ್ತಿಯನ್ನು ಉಳಿಸಿದೆವು.

37:130

سَلَٰمٌ عَلَىٰٓ إِلۡ يَاسِينَ ﴿130﴾

Transliteration: Salamun AAala il yaseena

Translation: ಇಲ್ಯಾಸರ ಮೇಲೆ ಶಾಂತಿಯಿರಲಿ!

37:131

إِنَّا كَذَٰلِكَ نَجۡزِي ٱلۡمُحۡسِنِينَ ﴿131﴾

Transliteration: Inna kathalika najzee almuhsineena

Translation: ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.

37:132

إِنَّهُۥ مِنۡ عِبَادِنَا ٱلۡمُؤۡمِنِينَ ﴿132﴾

Transliteration: Innahu min AAibadina almumineena

Translation: ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು.

37:133

وَإِنَّ لُوطٗا لَّمِنَ ٱلۡمُرۡسَلِينَ ﴿133﴾

Transliteration: Wainna lootan lamina almursaleena

Translation: ನಿಶ್ಚಯವಾಗಿಯೂ ಲೂತ್ ಸಂದೇಶವಾಹಕರಲ್ಲಿ ಸೇರಿದವರಾಗಿದ್ದರು.

37:134

إِذۡ نَجَّيۡنَٰهُ وَأَهۡلَهُۥٓ أَجۡمَعِينَ ﴿134﴾

Transliteration: Ith najjaynahu waahlahu ajmaAAeena

Translation: ನಾವು ಅವರನ್ನು ಮತ್ತು ಅವರ ಕುಟುಂಬವನ್ನು ಸಂಪೂರ್ಣವಾಗಿ ರಕ್ಷಿಸಿದ ಸಂದರ್ಭ!

37:135

إِلَّا عَجُوزٗا فِي ٱلۡغَٰبِرِينَ ﴿135﴾

Transliteration: Illa AAajoozan fee alghabireena

Translation: ಹಿಂದೆ ಉಳಿದವರಲ್ಲಿ ಸೇರಿದ ಒಬ್ಬ ವೃದ್ಧೆಯ ಹೊರತು.

37:136

ثُمَّ دَمَّرۡنَا ٱلۡأٓخَرِينَ ﴿136﴾

Transliteration: Thumma dammarna alakhareena

Translation: ನಂತರ ಇತರರನ್ನು ನಾವು ನಾಶ ಮಾಡಿದೆವು.

37:137

وَإِنَّكُمۡ لَتَمُرُّونَ عَلَيۡهِم مُّصۡبِحِينَ ﴿137﴾

Transliteration: Wainnakum latamurroona AAalayhim musbiheena

Translation: ನೀವು ಬೆಳಗಾಗುವಾಗ ಅವರ ಊರುಗಳ ಬಳಿಯಿಂದ ಸಾಗುತ್ತೀರಿ.

37:138

وَبِٱلَّيۡلِۚ أَفَلَا تَعۡقِلُونَ ﴿138﴾

Transliteration: Wabiallayli afala taAAqiloona

Translation: ರಾತ್ರಿ ಕೂಡ. ಆದರೂ ನೀವು ಆಲೋಚಿಸುವುದಿಲ್ಲವೇ?

37:139

وَإِنَّ يُونُسَ لَمِنَ ٱلۡمُرۡسَلِينَ ﴿139﴾

Transliteration: Wainna yoonusa lamina almursaleena

Translation: ನಿಶ್ಚಯವಾಗಿಯೂ ಯೂನುಸ್ ಸಂದೇಶವಾಹಕರಲ್ಲಿ ಸೇರಿದವರಾಗಿದ್ದರು.

37:140

إِذۡ أَبَقَ إِلَى ٱلۡفُلۡكِ ٱلۡمَشۡحُونِ ﴿140﴾

Transliteration: Ith abaqa ila alfulki almashhooni

Translation: ಅವರು ತುಂಬಿ ತುಳುಕುವ ನಾವೆಯ ಬಳಿಗೆ ಪಲಾಯನ ಮಾಡಿದ ಸಂದರ್ಭ!

37:141

فَسَاهَمَ فَكَانَ مِنَ ٱلۡمُدۡحَضِينَ ﴿141﴾

Transliteration: Fasahama fakana mina almudhadeena

Translation: ನಂತರ ಅಲ್ಲಿ ಚೀಟಿಯೆತ್ತಲಾದಾಗ ಅವರು ಪರಾಜಿತರಾದರು.

37:142

فَٱلۡتَقَمَهُ ٱلۡحُوتُ وَهُوَ مُلِيمٞ ﴿142﴾

Transliteration: Failtaqamahu alhootu wahuwa muleemun

Translation: ನಂತರ ಅವರು ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗ ಮೀನು ಅವರನ್ನು ನುಂಗಿತು.

37:143

فَلَوۡلَآ أَنَّهُۥ كَانَ مِنَ ٱلۡمُسَبِّحِينَ ﴿143﴾

Transliteration: Falawla annahu kana mina almusabbiheena

Translation: ಆದರೆ ಅವರು ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುವವರಲ್ಲಿ ಸೇರದಿರುತ್ತಿದ್ದರೆ

37:144

لَلَبِثَ فِي بَطۡنِهِۦٓ إِلَىٰ يَوۡمِ يُبۡعَثُونَ ﴿144﴾

Transliteration: Lalabitha fee batnihi ila yawmi yubAAathoona

Translation: ಜನರಿಗೆ ಜೀವ ನೀಡಿ ಎಬ್ಬಿಸಲಾಗುವ ದಿನದವರೆಗೂ ಅವರು ಅದರ ಹೊಟ್ಟೆಯಲ್ಲೇ ಉಳಿಯುತ್ತಿದ್ದರು!

37:145

فَنَبَذۡنَٰهُ بِٱلۡعَرَآءِ وَهُوَ سَقِيمٞ ﴿145﴾

Transliteration: Fanabathnahu bialAAarai wahuwa saqeemun

Translation: ನಂತರ ನಾವು ಅವರನ್ನು ಬಯಲು ಪ್ರದೇಶಕ್ಕೆ ಎಸೆದೆವು. ಆಗ ಅವರು ಅಸ್ವಸ್ಥರಾಗಿದ್ದರು.

37:146

وَأَنۢبَتۡنَا عَلَيۡهِ شَجَرَةٗ مِّن يَقۡطِينٖ ﴿146﴾

Transliteration: Waanbatna AAalayhi shajaratan min yaqteenin

Translation: ನಾವು ಅವರಿಗೆ (ನೆರಳು ನೀಡುವ) ಸೋರೆ ಬಳ್ಳಿಯ ಮರವನ್ನು ಬೆಳೆಸಿದೆವು.

37:147

وَأَرۡسَلۡنَٰهُ إِلَىٰ مِاْئَةِ أَلۡفٍ أَوۡ يَزِيدُونَ ﴿147﴾

Transliteration: Waarsalnahu ila miati alfin aw yazeedoona

Translation: ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಜನರ ಬಳಿಗೆ ಕಳುಹಿಸಿದೆವು.

37:148

فَـَٔامَنُواْ فَمَتَّعۡنَٰهُمۡ إِلَىٰ حِينٖ ﴿148﴾

Transliteration: Faamanoo famattaAAnahum ila heenin

Translation: ಅವರು (ಆ ಜನರು) ವಿಶ್ವಾಸವಿಟ್ಟರು. ಆದ್ದರಿಂದ ನಾವು ಅವರಿಗೆ ಒಂದು ಕಾಲದವರೆಗೆ ಸುಖ ಜೀವನವನ್ನು ಒದಗಿಸಿದೆವು.

37:149

فَٱسۡتَفۡتِهِمۡ أَلِرَبِّكَ ٱلۡبَنَاتُ وَلَهُمُ ٱلۡبَنُونَ ﴿149﴾

Transliteration: Faistaftihim alirabbika albanatu walahumu albanoona

Translation: (ಓ ಪ್ರವಾದಿಯವರೇ!) ಅವರೊಂದಿಗೆ ಕೇಳಿರಿ: “ನಿಮ್ಮ ಪರಿಪಾಲಕನಿಗೆ ಹೆಣ್ಣು ಮಕ್ಕಳು ಮತ್ತು ಅವರಿಗೆ ಗಂಡುಮಕ್ಕಳೇ?

37:150

أَمۡ خَلَقۡنَا ٱلۡمَلَـٰٓئِكَةَ إِنَٰثٗا وَهُمۡ شَٰهِدُونَ ﴿150﴾

Transliteration: Am khalaqna almalaikata inathan wahum shahidoona

Translation: ಅಥವಾ ನಾವು ದೇವದೂತರು‍ಗಳನ್ನು ಸ್ತ್ರೀಯರನ್ನಾಗಿ ಸೃಷ್ಟಿಸುವಾಗ ಅವರು ಅಲ್ಲಿ ಉಪಸ್ಥಿತರಿದ್ದರೇ?”

37:151

أَلَآ إِنَّهُم مِّنۡ إِفۡكِهِمۡ لَيَقُولُونَ ﴿151﴾

Transliteration: Ala innahum min ifkihim layaqooloona

Translation: ತಿಳಿಯಿರಿ! ಅವರು ಕೇವಲ ಸುಳ್ಳನ್ನು ಕಲ್ಪಿಸಿ ಹೇಳುತ್ತಿದ್ದಾರೆ.

37:152

وَلَدَ ٱللَّهُ وَإِنَّهُمۡ لَكَٰذِبُونَ ﴿152﴾

Transliteration: Walada Allahu wainnahum lakathiboona

Translation: ಅಲ್ಲಾಹನಿಗೆ ಮಕ್ಕಳಿದ್ದಾರೆಂದು. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುವವರಾಗಿದ್ದಾರೆ.

37:153

أَصۡطَفَى ٱلۡبَنَاتِ عَلَى ٱلۡبَنِينَ ﴿153﴾

Transliteration: Astafa albanati AAala albaneena

Translation: ಅಲ್ಲಾಹು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡಿದನೇ?

37:154

مَا لَكُمۡ كَيۡفَ تَحۡكُمُونَ ﴿154﴾

Transliteration: Ma lakum kayfa tahkumoona

Translation: ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತಿದ್ದೀರಿ?

37:155

أَفَلَا تَذَكَّرُونَ ﴿155﴾

Transliteration: Afala tathakkaroona

Translation: ನೀವು ಆಲೋಚಿಸುವುದಿಲ್ಲವೇ?

37:156

أَمۡ لَكُمۡ سُلۡطَٰنٞ مُّبِينٞ ﴿156﴾

Transliteration: Am lakum sultanun mubeenun

Translation: ಇದಕ್ಕೆ ನಿಮ್ಮ ಬಳಿ ಯಾವುದಾದರೂ ಸ್ಪಷ್ಟ ಸಾಕ್ಷ್ಯಾಧಾರವಿದೆಯೇ?

37:157

فَأۡتُواْ بِكِتَٰبِكُمۡ إِن كُنتُمۡ صَٰدِقِينَ ﴿157﴾

Transliteration: Fatoo bikitabikum in kuntum sadiqeena

Translation: ಹಾಗಿದ್ದರೆ ನೀವು ನಿಮ್ಮ ಗ್ರಂಥವನ್ನು ತನ್ನಿರಿ. ನೀವು ಸತ್ಯವಂತರಾಗಿದ್ದರೆ!

37:158

وَجَعَلُواْ بَيۡنَهُۥ وَبَيۡنَ ٱلۡجِنَّةِ نَسَبٗاۚ وَلَقَدۡ عَلِمَتِ ٱلۡجِنَّةُ إِنَّهُمۡ لَمُحۡضَرُونَ ﴿158﴾

Transliteration: WajaAAaloo baynahu wabayna aljinnati nasaban walaqad AAalimati aljinnatu innahum lamuhdaroona

Translation: ಅವರು ಅವನ (ಅಲ್ಲಾಹನ) ಮತ್ತು ಜಿನ್ನ್‌ಗಳ ಮಧ್ಯೆ ಕುಟುಂಬ ಸಂಬಂಧವನ್ನು ಸ್ಥಾಪಿಸಿದ್ದರು. ಆದರೆ (ಇಂತಹ ನಂಬಿಕೆಯಿರುವ ಜನರನ್ನು) ನಿಶ್ಚಯವಾಗಿಯೂ ಶಿಕ್ಷೆಗೆ ಹಾಜರುಪಡಿಸಲಾಗುವುದೆಂದು ಜಿನ್ನ್‌ಗಳಿಗೆ ತಿಳಿದಿದೆ.

37:159

سُبۡحَٰنَ ٱللَّهِ عَمَّا يَصِفُونَ ﴿159﴾

Transliteration: Subhana Allahi AAamma yasifoona

Translation: ಅವರು (ಅಲ್ಲಾಹನ ಬಗ್ಗೆ) ವರ್ಣಿಸಿ ಹೇಳುವ ಇಂತಹ ಸುಳ್ಳುಗಳಿಂದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.

37:160

إِلَّا عِبَادَ ٱللَّهِ ٱلۡمُخۡلَصِينَ ﴿160﴾

Transliteration: Illa AAibada Allahi almukhlaseena

Translation: ಆದರೆ ಅಲ್ಲಾಹನ ನಿಷ್ಕಳಂಕ ದಾಸರು (ಇದರಿಂದ) ಹೊರತಾಗಿದ್ದಾರೆ.

37:161

فَإِنَّكُمۡ وَمَا تَعۡبُدُونَ ﴿161﴾

Transliteration: Fainnakum wama taAAbudoona

Translation: ನಿಶ್ಚಯವಾಗಿಯೂ ನೀವು ಮತ್ತು ನೀವು ಆರಾಧಿಸುತ್ತಿರುವ ದೇವರುಗಳು.

37:162

مَآ أَنتُمۡ عَلَيۡهِ بِفَٰتِنِينَ ﴿162﴾

Transliteration: Ma antum AAalayhi bifatineena

Translation: ಯಾರನ್ನೂ ಅವನಿಂದ (ಅಲ್ಲಾಹನಿಂದ) ತಪ್ಪಿಸಿಬಿಡಲು ನಿಮಗೆ ಸಾಧ್ಯವಿಲ್ಲ.

37:163

إِلَّا مَنۡ هُوَ صَالِ ٱلۡجَحِيمِ ﴿163﴾

Transliteration: Illa man huwa sali aljaheemi

Translation: ನರಕವಾಸಿಯಾಗುವವನ ಹೊರತು.

37:164

وَمَامِنَّآ إِلَّا لَهُۥ مَقَامٞ مَّعۡلُومٞ ﴿164﴾

Transliteration: Wama minna illa lahu maqamun maAAloomun

Translation: (ದೇವದೂತರು‍ಗಳು ಹೇಳುತ್ತಾರೆ): “ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ನಿಶ್ಚಿತ ಸ್ಥಾನವಿದೆ.

37:165

وَإِنَّا لَنَحۡنُ ٱلصَّآفُّونَ ﴿165﴾

Transliteration: Wainna lanahnu alssaffoona

Translation: ನಿಶ್ಚಯವಾಗಿಯೂ ನಾವು (ಅಲ್ಲಾಹನನ್ನು ಆರಾಧಿಸಲು) ಸಾಲುಗಟ್ಟಿ ನಿಲ್ಲುತ್ತೇವೆ.

37:166

وَإِنَّا لَنَحۡنُ ٱلۡمُسَبِّحُونَ ﴿166﴾

Transliteration: Wainna lanahnu almusabbihoona

Translation: ನಿಶ್ಚಯವಾಗಿಯೂ ನಾವು (ಅಲ್ಲಾಹನ) ಪರಿಶುದ್ಧಿಯನ್ನು ಕೊಂಡಾಡುವವರಾಗಿದ್ದೇವೆ.”

37:167

وَإِن كَانُواْ لَيَقُولُونَ ﴿167﴾

Transliteration: Wain kanoo layaqooloona

Translation: ನಿಶ್ಚಯವಾಗಿಯೂ ಅವರು (ಸತ್ಯನಿಷೇಧಿಗಳು) ಹೇಳುತ್ತಿದ್ದರು:

37:168

لَوۡ أَنَّ عِندَنَا ذِكۡرٗا مِّنَ ٱلۡأَوَّلِينَ ﴿168﴾

Transliteration: Law anna AAindana thikran mina alawwaleena

Translation: “ನಮ್ಮ ಬಳಿ ಪೂರ್ವಜರ ಯಾವುದಾದರೂ ಉಪದೇಶವು ಇರುತ್ತಿದ್ದರೆ.

37:169

لَكُنَّا عِبَادَ ٱللَّهِ ٱلۡمُخۡلَصِينَ ﴿169﴾

Transliteration: Lakunna AAibada Allahi almukhlaseena

Translation: ನಾವು ಕೂಡ ಅಲ್ಲಾಹನ ನಿಷ್ಕಳಂಕ ದಾಸರಾಗಿರುತ್ತಿದ್ದೆವು.”

37:170

فَكَفَرُواْ بِهِۦۖ فَسَوۡفَ يَعۡلَمُونَ ﴿170﴾

Transliteration: Fakafaroo bihi fasawfa yaAAlamoona

Translation: ಆದರೂ ಅವರು ಅದನ್ನು (ಪವಿತ್ರ ಕುರ್‌ಆನನ್ನು) ನಿಷೇಧಿಸಿದರು. ಆದ್ದರಿಂದ ಸದ್ಯವೇ ಅವರು ತಿಳಿಯುವರು.

37:171

وَلَقَدۡ سَبَقَتۡ كَلِمَتُنَا لِعِبَادِنَا ٱلۡمُرۡسَلِينَ ﴿171﴾

Transliteration: Walaqad sabaqat kalimatuna liAAibadina almursaleena

Translation: ನಮ್ಮ ವಾಗ್ದಾನವು ಸಂದೇಶವಾಹಕರುಗಳಾದ ನಮ್ಮ ದಾಸರಿಗೆ ಈಗಾಗಲೇ ಜಾರಿಯಾಗಿಬಿಟ್ಟಿದೆ.

37:172

إِنَّهُمۡ لَهُمُ ٱلۡمَنصُورُونَ ﴿172﴾

Transliteration: Innahum lahumu almansooroona

Translation: (ಅದೇನೆಂದರೆ) ನಿಶ್ಚಯವಾಗಿಯೂ ಅವರಿಗೇ ಸಹಾಯ ಮಾಡಲಾಗುವುದೆಂದು.

37:173

وَإِنَّ جُندَنَا لَهُمُ ٱلۡغَٰلِبُونَ ﴿173﴾

Transliteration: Wainna jundana lahumu alghaliboona

Translation: ನಿಶ್ಚಯವಾಗಿಯೂ ನಮ್ಮ ಸೈನ್ಯವೇ ವಿಜಯಿಯಾಗುವುದೆಂದು.

37:174

فَتَوَلَّ عَنۡهُمۡ حَتَّىٰ حِينٖ ﴿174﴾

Transliteration: Fatawalla AAanhum hatta heenin

Translation: ಆದ್ದರಿಂದ ನೀವು ಕೆಲವು ದಿನಗಳ ತನಕ ಅವರಿಂದ ವಿಮುಖರಾಗಿರಿ.

37:175

وَأَبۡصِرۡهُمۡ فَسَوۡفَ يُبۡصِرُونَ ﴿175﴾

Transliteration: Waabsirhum fasawfa yubsiroona

Translation: ಅವರನ್ನು ವೀಕ್ಷಿಸುತ್ತಿರಿ. ಅವರು ಕೂಡ ಮುಂದೆ (ಏನಾಗುವುದೆಂದು) ನೋಡುವರು.

37:176

أَفَبِعَذَابِنَا يَسۡتَعۡجِلُونَ ﴿176﴾

Transliteration: AfabiAAathabina yastaAAjiloona

Translation: ಅವರು ನಮ್ಮ ಶಿಕ್ಷೆಗಾಗಿ ತ್ವರೆ ಮಾಡುತ್ತಿದ್ದಾರೆಯೇ?

37:177

فَإِذَا نَزَلَ بِسَاحَتِهِمۡ فَسَآءَ صَبَاحُ ٱلۡمُنذَرِينَ ﴿177﴾

Transliteration: Faitha nazala bisahatihim fasaa sabahu almunthareena

Translation: ಆದರೆ ನಮ್ಮ ಶಿಕ್ಷೆಯು ಅವರ ಅಂಗಳದಲ್ಲಿ ಇಳಿಯುವಾಗ ಮುನ್ನೆಚ್ಚರಿಕೆ ನೀಡಲಾದವರ ಮುಂಜಾನೆಯು ಬಹಳ ನಿಕೃಷ್ಟವಾಗಿರುವುದು!

37:178

وَتَوَلَّ عَنۡهُمۡ حَتَّىٰ حِينٖ ﴿178﴾

Transliteration: Watawalla AAanhum hatta heenin

Translation: ಆದ್ದರಿಂದ ನೀವು ಕೆಲವು ದಿನಗಳ ತನಕ ಅವರಿಂದ ವಿಮುಖರಾಗಿರಿ.

37:179

وَأَبۡصِرۡ فَسَوۡفَ يُبۡصِرُونَ ﴿179﴾

Transliteration: Waabsir fasawfa yubsiroona

Translation: ಅವರನ್ನು ವೀಕ್ಷಿಸುತ್ತಿರಿ. ಅವರು ಕೂಡ ಮುಂದೆ (ಏನಾಗುವುದೆಂದು) ನೋಡುವರು.

37:180

سُبۡحَٰنَ رَبِّكَ رَبِّ ٱلۡعِزَّةِ عَمَّا يَصِفُونَ ﴿180﴾

Transliteration: Subhana rabbika rabbi alAAizzati AAamma yasifoona

Translation: ಮಹಾ ಪ್ರತಿಷ್ಠೆಯ ಒಡೆಯನಾದ ನಿಮ್ಮ ಪರಿಪಾಲಕನು (ಅಲ್ಲಾಹು) ಅವರು ವರ್ಣಿಸುವ ಎಲ್ಲಾ ಸುಳ್ಳುಗಳಿಂದ ಎಷ್ಟೋ ಪರಿಶುದ್ಧನಾಗಿದ್ದಾನೆ.

37:181

وَسَلَٰمٌ عَلَى ٱلۡمُرۡسَلِينَ ﴿181﴾

Transliteration: Wasalamun AAala almursaleena

Translation: ಸಂದೇಶವಾಹಕರುಗಳ ಮೇಲೆ ಶಾಂತಿಯಿರಲಿ!

37:182

وَٱلۡحَمۡدُ لِلَّهِ رَبِّ ٱلۡعَٰلَمِينَ ﴿182﴾

Transliteration: Waalhamdu lillahi rabbi alAAalameena

Translation: ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download