quranm◉

Surah An-Najm transliteration

◉ ಸೂರಾ · ∞

53:1

وَٱلنَّجۡمِ إِذَا هَوَىٰ ﴿1﴾

Transliteration: Waalnnajmi itha hawa

Translation: ನಕ್ಷತ್ರದ ಮೇಲಾಣೆ! ಅದು ಮರೆಯಾಗುವಾಗ.

53:2

مَا ضَلَّ صَاحِبُكُمۡ وَمَا غَوَىٰ ﴿2﴾

Transliteration: Ma dalla sahibukum wama ghawa

Translation: ನಿಮ್ಮ ಸಂಗಡಿಗನು (ಪ್ರವಾದಿ) ದಾರಿತಪ್ಪಿಲ್ಲ, ಅವರು ವಕ್ರ ದಾರಿಯಲ್ಲೂ ಇಲ್ಲ.

53:3

وَمَا يَنطِقُ عَنِ ٱلۡهَوَىٰٓ ﴿3﴾

Transliteration: Wama yantiqu AAani alhawa

Translation: ಅವರು ಮನಬಂದಂತೆ ಮಾತನಾಡುವುದಿಲ್ಲ.

53:4

إِنۡ هُوَ إِلَّا وَحۡيٞ يُوحَىٰ ﴿4﴾

Transliteration: In huwa illa wahyun yooha

Translation: ಅದು ಅವರಿಗೆ ಅವತೀರ್ಣಗೊಳಿಸಲಾದ ದೇವವಾಣಿಯಾಗಿದೆ.

53:5

عَلَّمَهُۥ شَدِيدُ ٱلۡقُوَىٰ ﴿5﴾

Transliteration: AAallamahu shadeedu alquwa

Translation: ಅವರಿಗೆ ಮಹಾ ಶಕ್ತಿಶಾಲಿಯಾದ ದೇವದೂತರು (ಜಿಬ್ರೀಲ್) ಕಲಿಸಿದ್ದಾರೆ.

53:6

ذُو مِرَّةٖ فَٱسۡتَوَىٰ ﴿6﴾

Transliteration: Thoo mirratin faistawa

Translation: ಅವರು ಅತ್ಯಂತ ಬಲಿಷ್ಠರು. ಅವರು (ತಮ್ಮ ನಿಜರೂಪದಲ್ಲಿ) ನೇರವಾಗಿ ನಿಂತರು.

53:7

وَهُوَ بِٱلۡأُفُقِ ٱلۡأَعۡلَىٰ ﴿7﴾

Transliteration: Wahuwa bialofuqi alaAAla

Translation: ಅವರು ಅತ್ಯುನ್ನತ ದಿಗಂತದಲ್ಲಿದ್ದರು.

53:8

ثُمَّ دَنَا فَتَدَلَّىٰ ﴿8﴾

Transliteration: Thumma dana fatadalla

Translation: ನಂತರ ಅವರು ಹತ್ತಿರವಾದರು ಮತ್ತು ಇಳಿದು ಬಂದರು.

53:9

فَكَانَ قَابَ قَوۡسَيۡنِ أَوۡ أَدۡنَىٰ ﴿9﴾

Transliteration: Fakana qaba qawsayni aw adna

Translation: ಅವರು ಎರಡು ಬಿಲ್ಲುಗಳ ದೂರದಲ್ಲಿ ಅಥವಾ ಅದಕ್ಕಿಂತಲೂ ಹತ್ತಿರವಾದರು.

53:10

فَأَوۡحَىٰٓ إِلَىٰ عَبۡدِهِۦ مَآ أَوۡحَىٰ ﴿10﴾

Transliteration: Faawha ila AAabdihi ma awha

Translation: ಅವರು ಅಲ್ಲಾಹನ ದಾಸರಿಗೆ (ಪ್ರವಾದಿಗೆ) ದೇವವಾಣಿಯಾಗಿ ತಲುಪಿಸಬೇಕಾದುದನ್ನು ತಲುಪಿಸಿದರು.

53:11

مَا كَذَبَ ٱلۡفُؤَادُ مَا رَأَىٰٓ ﴿11﴾

Transliteration: Ma kathaba alfuadu ma raa

Translation: ಅವರು (ಪ್ರವಾದಿ) ನೋಡಿದ ಆ ನೋಟವನ್ನು ಹೃದಯವು ನಿಷೇಧಿಸಲಿಲ್ಲ.

53:12

أَفَتُمَٰرُونَهُۥ عَلَىٰ مَا يَرَىٰ ﴿12﴾

Transliteration: Afatumaroonahu AAala ma yara

Translation: ಅವರು (ಪ್ರವಾದಿ) ನೋಡಿರುವುದರ ವಿಷಯದಲ್ಲಿ ನೀವು ಅವರೊಡನೆ ತರ್ಕಿಸುತ್ತೀರಾ?

53:13

وَلَقَدۡ رَءَاهُ نَزۡلَةً أُخۡرَىٰ ﴿13﴾

Transliteration: Walaqad raahu nazlatan okhra

Translation: ಅವರು ಇನ್ನೊಂದು ಬಾರಿಯೂ ಅವರನ್ನು (ಜಿಬ್ರೀಲರನ್ನು) ನೋಡಿದ್ದರು.

53:14

عِندَ سِدۡرَةِ ٱلۡمُنتَهَىٰ ﴿14﴾

Transliteration: AAinda sidrati almuntaha

Translation: ಸಿದ್ರತುಲ್ ಮುಂತಹಾದ (ತುತ್ತುತುದಿಯ ಬೋರೆ ಮರದ) ಬಳಿಯಲ್ಲಿ.[1]

53:15

عِندَهَا جَنَّةُ ٱلۡمَأۡوَىٰٓ ﴿15﴾

Transliteration: AAindaha jannatu almawa

Translation: ಅದರ ಬಳಿಯಲ್ಲೇ ಜನ್ನತುಲ್ ಮಅವಾ ಇದೆ.[1]

53:16

إِذۡ يَغۡشَى ٱلسِّدۡرَةَ مَا يَغۡشَىٰ ﴿16﴾

Transliteration: Ith yaghsha alssidrata ma yaghsha

Translation: ಆ ಬೋರೆ ಮರವನ್ನು ಆವರಿಸಬೇಕಾದುದೆಲ್ಲವೂ ಆವರಿಸಿದಾಗ.

53:17

مَا زَاغَ ٱلۡبَصَرُ وَمَا طَغَىٰ ﴿17﴾

Transliteration: Ma zagha albasaru wama tagha

Translation: (ಪ್ರವಾದಿಯ) ದೃಷ್ಟಿಯು ತಪ್ಪಿಹೋಗಲಿಲ್ಲ ಮತ್ತು ಎಲ್ಲೆ ಮೀರಲೂ ಇಲ್ಲ.[1]

53:18

لَقَدۡ رَأَىٰ مِنۡ ءَايَٰتِ رَبِّهِ ٱلۡكُبۡرَىٰٓ ﴿18﴾

Transliteration: Laqad raa min ayati rabbihi alkubra

Translation: ಅವರು ಅವರ ಪರಿಪಾಲಕನ (ಅಲ್ಲಾಹನ) ಮಹಾ ದೃಷ್ಟಾಂತಗಳಲ್ಲಿ ಕೆಲವನ್ನು ನೋಡಿದರು.

53:19

أَفَرَءَيۡتُمُ ٱللَّـٰتَ وَٱلۡعُزَّىٰ ﴿19﴾

Transliteration: Afaraaytumu allata waalAAuzza

Translation: ನೀವು ಲಾತ್ ಮತ್ತು ಉಝ್ಝಾದ ಬಗ್ಗೆ ಆಲೋಚಿಸಿ ನೋಡಿದ್ದೀರಾ?

53:20

وَمَنَوٰةَ ٱلثَّالِثَةَ ٱلۡأُخۡرَىٰٓ ﴿20﴾

Transliteration: Wamanata alththalithata alokhra

Translation: ಇನ್ನೊಂದು ಮೂರನೆಯ (ದೇವರಾದ) ಮನಾತ್ ಬಗ್ಗೆ.[1]

53:21

أَلَكُمُ ٱلذَّكَرُ وَلَهُ ٱلۡأُنثَىٰ ﴿21﴾

Transliteration: Alakumu alththakaru walahu alontha

Translation: ನಿಮಗೆ ಗಂಡು ಮಕ್ಕಳು ಮತ್ತು ಅಲ್ಲಾಹನಿಗೆ ಹೆಣ್ಣು ಮಕ್ಕಳೇ?

53:22

تِلۡكَ إِذٗا قِسۡمَةٞ ضِيزَىٰٓ ﴿22﴾

Transliteration: Tilka ithan qismatun deeza

Translation: ಇದು ಬಹುದೊಡ್ಡ ಅನ್ಯಾಯದ ಹಂಚಿಕೆಯಾಗಿದೆ!

53:23

إِنۡ هِيَ إِلَّآ أَسۡمَآءٞ سَمَّيۡتُمُوهَآ أَنتُمۡ وَءَابَآؤُكُم مَّآ أَنزَلَ ٱللَّهُ بِهَا مِن سُلۡطَٰنٍۚ إِن يَتَّبِعُونَ إِلَّا ٱلظَّنَّ وَمَا تَهۡوَى ٱلۡأَنفُسُۖ وَلَقَدۡ جَآءَهُم مِّن رَّبِّهِمُ ٱلۡهُدَىٰٓ ﴿23﴾

Transliteration: In hiya illa asmaon sammaytumooha antum waabaokum ma anzala Allahu biha min sultanin in yattabiAAoona illa alththanna wama tahwa alanfusu walaqad jaahum min rabbihimu alhuda

Translation: ಇವೆಲ್ಲವೂ ನೀವು ಮತ್ತು ನಿಮ್ಮ ಪೂರ್ವಜರು ನಾಮಕರಣ ಮಾಡಿದ ಕೆಲವು (ವಿಗ್ರಹಗಳ) ಹೆಸರುಗಳಲ್ಲದೆ ಇನ್ನೇನೂ ಅಲ್ಲ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಸಾಕ್ಷ್ಯಾಧಾರವನ್ನು ಇಳಿಸಿಕೊಟ್ಟಿಲ್ಲ. ಅವರು ಕೇವಲ ಊಹೆಯನ್ನು ಮತ್ತು ಅವರ ಮನಸ್ಸು ಬಯಸುವುದನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಅವರ ಬಳಿಗೆ ಅವರ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಸನ್ಮಾರ್ಗವು ಬಂದುಬಿಟ್ಟಿದೆ.

53:24

أَمۡ لِلۡإِنسَٰنِ مَا تَمَنَّىٰ ﴿24﴾

Transliteration: Am lilinsani ma tamanna

Translation: ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಸಿಗುವುದೇ?[1]

53:25

فَلِلَّهِ ٱلۡأٓخِرَةُ وَٱلۡأُولَىٰ ﴿25﴾

Transliteration: Falillahi alakhiratu waaloola

Translation: ಪರಲೋಕ ಮತ್ತು ಇಹಲೋಕವು ಅಲ್ಲಾಹನ ವಶದಲ್ಲಿವೆ.

53:26

وَكَم مِّن مَّلَكٖ فِي ٱلسَّمَٰوَٰتِ لَا تُغۡنِي شَفَٰعَتُهُمۡ شَيۡـًٔا إِلَّا مِنۢ بَعۡدِ أَن يَأۡذَنَ ٱللَّهُ لِمَن يَشَآءُ وَيَرۡضَىٰٓ ﴿26﴾

Transliteration: Wakam min malakin fee alssamawati la tughnee shafaAAatuhum shayan illa min baAAdi an yathana Allahu liman yashao wayarda

Translation: ಆಕಾಶಗಳಲ್ಲಿ ಎಷ್ಟು ದೇವದೂತರು‍ಗಳಿದ್ದಾರೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಮತ್ತು ಅವನ ಪ್ರೀತಿಗೆ ಪಾತ್ರರಾದವರಿಗೆ ಶಿಫಾರಸು ಮಾಡಲು ಅನುಮತಿ ನೀಡಿದವರ ಹೊರತು ಇತರರು ಮಾಡುವ ಶಿಫಾರಸಿನಿಂದ ಯಾವುದೇ ಪ್ರಯೋಜನವಿಲ್ಲ.

53:27

إِنَّ ٱلَّذِينَ لَا يُؤۡمِنُونَ بِٱلۡأٓخِرَةِ لَيُسَمُّونَ ٱلۡمَلَـٰٓئِكَةَ تَسۡمِيَةَ ٱلۡأُنثَىٰ ﴿27﴾

Transliteration: Inna allatheena la yuminoona bialakhirati layusammoona almalaikata tasmiyata alontha

Translation: ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ—ಅವರು ದೇವದೂತರು‍ಗಳಿಗೆ ಸ್ತ್ರೀಯರ ಹೆಸರನ್ನಿಡುತ್ತಾರೆ.[1]

53:28

وَمَا لَهُم بِهِۦ مِنۡ عِلۡمٍۖ إِن يَتَّبِعُونَ إِلَّا ٱلظَّنَّۖ وَإِنَّ ٱلظَّنَّ لَا يُغۡنِي مِنَ ٱلۡحَقِّ شَيۡـٔٗا ﴿28﴾

Transliteration: Wama lahum bihi min AAilmin in yattabiAAoona illa alththanna wainna alththanna la yughnee mina alhaqqi shayan

Translation: ಅವರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರು ಕೇವಲ ಊಹೆಯನ್ನು ಮಾತ್ರ ಹಿಂಬಾಲಿಸುತ್ತಾರೆ. ನಿಶ್ಚಯವಾಗಿಯೂ ಸತ್ಯದೆದುರು ಊಹೆಯು ಯಾವುದೇ ಉಪಕಾರ ಮಾಡುವುದಿಲ್ಲ.

53:29

فَأَعۡرِضۡ عَن مَّن تَوَلَّىٰ عَن ذِكۡرِنَا وَلَمۡ يُرِدۡ إِلَّا ٱلۡحَيَوٰةَ ٱلدُّنۡيَا ﴿29﴾

Transliteration: FaaAArid AAan man tawalla AAan thikrina walam yurid illa alhayata alddunya

Translation: ನಮ್ಮ ಸ್ಮರಣೆಯಿಂದ ವಿಮುಖರಾದವರು ಮತ್ತು ಇಹಲೋಕವನ್ನು ಮಾತ್ರ ಬಯಸುವವರು ಯಾರೋ—ಅವರಿಂದ ನೀವು ವಿಮುಖರಾಗಿರಿ.

53:30

ذَٰلِكَ مَبۡلَغُهُم مِّنَ ٱلۡعِلۡمِۚ إِنَّ رَبَّكَ هُوَ أَعۡلَمُ بِمَن ضَلَّ عَن سَبِيلِهِۦ وَهُوَ أَعۡلَمُ بِمَنِ ٱهۡتَدَىٰ ﴿30﴾

Transliteration: Thalika mablaghuhum mina alAAilmi inna rabbaka huwa aAAlamu biman dalla AAan sabeelihi wahuwa aAAlamu bimani ihtada

Translation: ಅದೇ ಅವರ ಜ್ಞಾನದ ಪರಾಕಾಷ್ಠೆ. ತನ್ನ ಮಾರ್ಗದಿಂದ ತಪ್ಪಿಹೋದವರ ಬಗ್ಗೆ ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ಸನ್ಮಾರ್ಗ ಪಡೆದವರ ಬಗ್ಗೆಯೂ ಅವನು ಬಹಳ ಚೆನ್ನಾಗಿ ತಿಳಿದಿದ್ದಾನೆ.

53:31

وَلِلَّهِ مَا فِي ٱلسَّمَٰوَٰتِ وَمَا فِي ٱلۡأَرۡضِ لِيَجۡزِيَ ٱلَّذِينَ أَسَـٰٓـُٔواْ بِمَا عَمِلُواْ وَيَجۡزِيَ ٱلَّذِينَ أَحۡسَنُواْ بِٱلۡحُسۡنَى ﴿31﴾

Transliteration: Walillahi ma fee alssamawati wama fee alardi liyajziya allatheena asaoo bima AAamiloo wayajziya allatheena ahsanoo bialhusna

Translation: ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ದುಷ್ಕರ್ಮಿಗಳಿಗೆ ಅವರು ಮಾಡಿದ ದುಷ್ಕರ್ಮದ ಪ್ರತಿಫಲವನ್ನು ನೀಡಲು ಮತ್ತು ಸತ್ಕರ್ಮಿಗಳಿಗೆ ಅತ್ಯುತ್ತಮವಾದ ಪ್ರತಿಫಲವನ್ನು ನೀಡಲು.

53:32

ٱلَّذِينَ يَجۡتَنِبُونَ كَبَـٰٓئِرَ ٱلۡإِثۡمِ وَٱلۡفَوَٰحِشَ إِلَّا ٱللَّمَمَۚ إِنَّ رَبَّكَ وَٰسِعُ ٱلۡمَغۡفِرَةِۚ هُوَ أَعۡلَمُ بِكُمۡ إِذۡ أَنشَأَكُم مِّنَ ٱلۡأَرۡضِ وَإِذۡ أَنتُمۡ أَجِنَّةٞ فِي بُطُونِ أُمَّهَٰتِكُمۡۖ فَلَا تُزَكُّوٓاْ أَنفُسَكُمۡۖ هُوَ أَعۡلَمُ بِمَنِ ٱتَّقَىٰٓ ﴿32﴾

Transliteration: Allatheena yajtaniboona kabaira alithmi waalfawahisha illa allamama inna rabbaka wasiAAu almaghfirati huwa aAAlamu bikum ith anshaakum mina alardi waith antum ajinnatun fee butooni ommahatikum fala tuzakkoo anfusakum huwa aAAlamu bimani ittaqa

Translation: ಅವರು (ಸತ್ಕರ್ಮಿಗಳು) ಯಾರೆಂದರೆ, ಮಹಾಪಾಪಗಳಿಂದ ಮತ್ತು ಅಶ್ಲೀಲಕೃತ್ಯಗಳಿಂದ ದೂರವಿರುವವರು. ಕೆಲವು ಚಿಕ್ಕಪುಟ್ಟ ಪಾಪಗಳ ಹೊರತು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿಶಾಲವಾಗಿ ಕ್ಷಮಿಸುವವನಾಗಿದ್ದಾನೆ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗ ಮತ್ತು ನೀವು ನಿಮ್ಮ ತಾಯಂದಿರ ಉದರಗಳಲ್ಲಿ ಭ್ರೂಣಗಳಾಗಿದ್ದಾಗ ಅವನಿಗೆ ನಿಮ್ಮ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. ಆದ್ದರಿಂದ ನೀವು ನಿಮ್ಮನ್ನು ಪರಿಶುದ್ಧರೆಂದು ಘೋಷಿಸಬೇಡಿ. ದೇವಭಯವುಳ್ಳವರ ಬಗ್ಗೆ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ.

53:33

أَفَرَءَيۡتَ ٱلَّذِي تَوَلَّىٰ ﴿33﴾

Transliteration: Afaraayta allathee tawalla

Translation: ಮುಖ ತಿರುಗಿಸಿ ಹೋದವನನ್ನು ನೀವು ನೋಡಿದ್ದೀರಾ?

53:34

وَأَعۡطَىٰ قَلِيلٗا وَأَكۡدَىٰٓ ﴿34﴾

Transliteration: WaaAAta qaleelan waakda

Translation: ಅವನು ಬಹಳ ಕಡಿಮೆ ಕೊಟ್ಟನು ಮತ್ತು ನಿಲ್ಲಿಸಿದನು.

53:35

أَعِندَهُۥ عِلۡمُ ٱلۡغَيۡبِ فَهُوَ يَرَىٰٓ ﴿35﴾

Transliteration: aAAindahu AAilmu alghaybi fahuwa yara

Translation: ಅವನ ಬಳಿ ಅದೃಶ್ಯ ಜ್ಞಾನವಿದ್ದು ಅವನು ಅದರ ಮೂಲಕ (ಎಲ್ಲವನ್ನು) ನೋಡುತ್ತಿದ್ದಾನೆಯೇ?

53:36

أَمۡ لَمۡ يُنَبَّأۡ بِمَا فِي صُحُفِ مُوسَىٰ ﴿36﴾

Transliteration: Am lam yunabba bima fee suhufi moosa

Translation: ಮೂಸಾರ ಗ್ರಂಥಗಳಲ್ಲಿರುವುದರ ಬಗ್ಗೆ ಅವನಿಗೆ ತಿಳಿಸಲಾಗಿಲ್ಲವೇ?

53:37

وَإِبۡرَٰهِيمَ ٱلَّذِي وَفَّىٰٓ ﴿37﴾

Transliteration: Waibraheema allathee waffa

Translation: (ಕರ್ತವ್ಯಗಳನ್ನು) ನೆರವೇರಿಸಿದ ಇಬ್ರಾಹೀಮ‌ರ ಗ್ರಂಥಗಳಲ್ಲಿರುವುದನ್ನು.

53:38

أَلَّا تَزِرُ وَازِرَةٞ وِزۡرَ أُخۡرَىٰ ﴿38﴾

Transliteration: Alla taziru waziratun wizra okhra

Translation: ಪಾಪಭಾರವನ್ನು ಹೊರುವ ಯಾರೂ ಇನ್ನೊಬ್ಬರ ಪಾಪಭಾರವನ್ನು ಹೊರುವುದಿಲ್ಲವೆಂದು,

53:39

وَأَن لَّيۡسَ لِلۡإِنسَٰنِ إِلَّا مَا سَعَىٰ ﴿39﴾

Transliteration: Waan laysa lilinsani illa ma saAAa

Translation: ಮನುಷ್ಯನಿಗೆ ಅವನು ಮಾಡುವ ಪರಿಶ್ರಮಗಳಲ್ಲದೆ ಬೇರೇನೂ ಇಲ್ಲವೆಂದು,

53:40

وَأَنَّ سَعۡيَهُۥ سَوۡفَ يُرَىٰ ﴿40﴾

Transliteration: Waanna saAAyahu sawfa yura

Translation: ಅವನ ಪರಿಶ್ರಮವನ್ನು ಸದ್ಯವೇ ಅವನಿಗೆ ತೋರಿಸಲಾಗುವುದೆಂದು,

53:41

ثُمَّ يُجۡزَىٰهُ ٱلۡجَزَآءَ ٱلۡأَوۡفَىٰ ﴿41﴾

Transliteration: Thumma yujzahu aljazaa alawfa

Translation: ನಂತರ ಅವನಿಗೆ ಪೂರ್ಣರೂಪದಲ್ಲಿ ಪ್ರತಿಫಲ ನೀಡಲಾಗುವುದೆಂದು,

53:42

وَأَنَّ إِلَىٰ رَبِّكَ ٱلۡمُنتَهَىٰ ﴿42﴾

Transliteration: Waanna ila rabbika almuntaha

Translation: ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೇ ತಲುಪಬೇಕೆಂದು,

53:43

وَأَنَّهُۥ هُوَ أَضۡحَكَ وَأَبۡكَىٰ ﴿43﴾

Transliteration: Waannahu huwa adhaka waabka

Translation: ಅವನೇ ನಗುವಂತೆ ಮತ್ತು ಅಳುವಂತೆ ಮಾಡುವವನೆಂದು,

53:44

وَأَنَّهُۥ هُوَ أَمَاتَ وَأَحۡيَا ﴿44﴾

Transliteration: Waannahu huwa amata waahya

Translation: ಅವನೇ ಮರಣ ಮತ್ತು ಜೀವನವನ್ನು ನೀಡುವವನೆಂದು,

53:45

وَأَنَّهُۥ خَلَقَ ٱلزَّوۡجَيۡنِ ٱلذَّكَرَ وَٱلۡأُنثَىٰ ﴿45﴾

Transliteration: Waannahu khalaqa alzzawjayni alththakara waalontha

Translation: ಅವನೇ ಗಂಡು-ಹೆಣ್ಣುಗಳೆಂಬ ಜೋಡಿಯನ್ನು ಸೃಷ್ಟಿಸಿದವನೆಂದು,

53:46

مِن نُّطۡفَةٍ إِذَا تُمۡنَىٰ ﴿46﴾

Transliteration: Min nutfatin itha tumna

Translation: ವೀರ್ಯದಿಂದ—ಅದನ್ನು ಸೃವಿಸಲಾದಾಗ.

53:47

وَأَنَّ عَلَيۡهِ ٱلنَّشۡأَةَ ٱلۡأُخۡرَىٰ ﴿47﴾

Transliteration: Waanna AAalayhi alnnashata alokhra

Translation: ಎರಡನೆಯ ಬಾರಿ ಜೀವ ನೀಡುವುದು ಅವನ ಹೊಣೆಗಾರಿಕೆಯೆಂದು,

53:48

وَأَنَّهُۥ هُوَ أَغۡنَىٰ وَأَقۡنَىٰ ﴿48﴾

Transliteration: Waannahu huwa aghna waaqna

Translation: ಅವನೇ ಐಶ್ವರ್ಯ ಮತ್ತು ಸಂತೃಪ್ತತೆಯನ್ನು ನೀಡುವವನೆಂದು,

53:49

وَأَنَّهُۥ هُوَ رَبُّ ٱلشِّعۡرَىٰ ﴿49﴾

Transliteration: Waannahu huwa rabbu alshshiAAra

Translation: ಅವನೇ ಶಿಅ‌ರಾ[1] ನಕ್ಷತ್ರದ ಒಡೆಯನೆಂದು,

53:50

وَأَنَّهُۥٓ أَهۡلَكَ عَادًا ٱلۡأُولَىٰ ﴿50﴾

Transliteration: Waannahu ahlaka AAadan aloola

Translation: ಅವನೇ ಪ್ರಾಚೀನ ಆದ್ ಗೋತ್ರವನ್ನು ನಾಶ ಮಾಡಿದವನೆಂದು,

53:51

وَثَمُودَاْ فَمَآ أَبۡقَىٰ ﴿51﴾

Transliteration: Wathamooda fama abqa

Translation: ಮತ್ತು ಸಮೂದ್ ಗೋತ್ರವನ್ನು. ಅವನು ಅವರಲ್ಲಿ ಒಬ್ಬನನ್ನೂ ಬಾಕಿಯುಳಿಸಲಿಲ್ಲ.

53:52

وَقَوۡمَ نُوحٖ مِّن قَبۡلُۖ إِنَّهُمۡ كَانُواْ هُمۡ أَظۡلَمَ وَأَطۡغَىٰ ﴿52﴾

Transliteration: Waqawma noohin min qablu innahum kanoo hum athlama waatgha

Translation: ಅದಕ್ಕಿಂತ ಮೊದಲು ನೂಹರ ಜನರನ್ನು. ನಿಶ್ಚಯವಾಗಿಯೂ ಅವರು ಮಹಾ ಅಕ್ರಮಿಗಳು ಮತ್ತು ಅತಿರೇಕಿಗಳಾಗಿದ್ದರು.

53:53

وَٱلۡمُؤۡتَفِكَةَ أَهۡوَىٰ ﴿53﴾

Transliteration: Waalmutafikata ahwa

Translation: ಮತ್ತು ಬುಡಮೇಲಾದ ದೇಶವನ್ನು.[1] ಅವನು ಅದನ್ನು ಬುಡಮೇಲುಗೊಳಿಸಿದನು.

53:54

فَغَشَّىٰهَا مَا غَشَّىٰ ﴿54﴾

Transliteration: Faghashshaha ma ghashsha

Translation: ನಂತರ ಅದನ್ನು ಆವರಿಸಬೇಕಾದುದೆಲ್ಲವೂ ಆವರಿಸುವಂತೆ ಮಾಡಿದನು.

53:55

فَبِأَيِّ ءَالَآءِ رَبِّكَ تَتَمَارَىٰ ﴿55﴾

Transliteration: Fabiayyi alai rabbika tatamara

Translation: ಆದ್ದರಿಂದ (ಓ ಮಾನವನೇ), ನೀನು ನಿನ್ನ ಪರಿಪಾಲಕನ (ಅಲ್ಲಾಹನ) ಅನುಗ್ರಹಗಳಲ್ಲಿ ಯಾವುದರ ಬಗ್ಗೆ ಸಂಶಯಪಡುವೆ?

53:56

هَٰذَا نَذِيرٞ مِّنَ ٱلنُّذُرِ ٱلۡأُولَىٰٓ ﴿56﴾

Transliteration: Hatha natheerun mina alnnuthuri aloola

Translation: ಇವರು (ಪ್ರವಾದಿ) ಪೂರ್ವಿಕ ಮುನ್ನೆಚ್ಚರಿಕೆಗಾರರಲ್ಲಿ (ಪ್ರವಾದಿಗಳಲ್ಲಿ) ಸೇರಿದ ಒಬ್ಬ ಮುನ್ನೆಚ್ಚರಿಕೆಗಾರರಾಗಿದ್ದಾರೆ.

53:57

أَزِفَتِ ٱلۡأٓزِفَةُ ﴿57﴾

Transliteration: Azifati alazifatu

Translation: ಹತ್ತಿರವಾಗುವ ಆ ಸಮಯವು (ಪುನರುತ್ಥಾನ ದಿನ) ಹತ್ತಿರವಾಗಿದೆ.

53:58

لَيۡسَ لَهَا مِن دُونِ ٱللَّهِ كَاشِفَةٌ ﴿58﴾

Transliteration: Laysa laha min dooni Allahi kashifatun

Translation: ಅದನ್ನು (ಅದರ ನಿಶ್ಚಿತ ಸಮಯದಲ್ಲಿ) ಅಲ್ಲಾಹನ ಹೊರತು ಯಾರೂ ತೋರಿಸುವವರಿಲ್ಲ.

53:59

أَفَمِنۡ هَٰذَا ٱلۡحَدِيثِ تَعۡجَبُونَ ﴿59﴾

Transliteration: Afamin hatha alhadeethi taAAjaboona

Translation: ಹಾಗಾದರೆ ಈ ಸಮಾಚಾರದಿಂದ ನಿಮಗೆ ಅಚ್ಚರಿಯಾಗುತ್ತಿದೆಯೇ?

53:60

وَتَضۡحَكُونَ وَلَا تَبۡكُونَ ﴿60﴾

Transliteration: Watadhakoona wala tabkoona

Translation: ನೀವು ನಗುತ್ತಿದ್ದೀರಿ. ನೀವು ಅಳುತ್ತಿಲ್ಲ.

53:61

وَأَنتُمۡ سَٰمِدُونَ ﴿61﴾

Transliteration: Waantum samidoona

Translation: ನೀವು ಆಟವಾಡುತ್ತಿದ್ದೀರಿ.

53:62

فَٱسۡجُدُواْۤ لِلَّهِۤ وَٱعۡبُدُواْ۩ ﴿62﴾

Transliteration: Faosjudoo lillahi waoAAbudoo

Translation: ನೀವು ಅಲ್ಲಾಹನಿಗೆ ಸಾಷ್ಟಾಂಗ ಮಾಡಿರಿ ಮತ್ತು ಅವನನ್ನು ಆರಾಧಿಸಿರಿ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download