quranm◉

Surah An-Naba transliteration

◉ ಸೂರಾ · ∞

78:1

عَمَّ يَتَسَآءَلُونَ ﴿1﴾

Transliteration: AAamma yatasaaloona

Translation: ಅವರು ಪರಸ್ಪರ ಯಾವುದರ ಬಗ್ಗೆ ವಿಚಾರಿಸುತ್ತಿದ್ದಾರೆ?

78:2

عَنِ ٱلنَّبَإِ ٱلۡعَظِيمِ ﴿2﴾

Transliteration: AAani alnnabai alAAatheemi

Translation: ಆ ಮಹಾ ಸಮಾಚಾರದ (ಪುನರುತ್ಥಾನದ) ಬಗ್ಗೆ.

78:3

ٱلَّذِي هُمۡ فِيهِ مُخۡتَلِفُونَ ﴿3﴾

Transliteration: Allathee hum feehi mukhtalifoona

Translation: ಅದು ಅವರು ಭಿನ್ನಮತ ತಳೆದಿರುವ ಸಮಾಚಾರವಾಗಿದೆ.

78:4

كَلَّا سَيَعۡلَمُونَ ﴿4﴾

Transliteration: Kalla sayaAAlamoona

Translation: ಖಂಡಿತವಾಗಿಯೂ ಅವರು ಸದ್ಯವೇ ತಿಳಿಯುವರು.

78:5

ثُمَّ كَلَّا سَيَعۡلَمُونَ ﴿5﴾

Transliteration: Thumma kalla sayaAAlamoona

Translation: ನಂತರ ಖಂಡಿತವಾಗಿಯೂ ಅವರಿಗೆ ಶೀಘ್ರವೇ ತಿಳಿದುಬರುವುದು.

78:6

أَلَمۡ نَجۡعَلِ ٱلۡأَرۡضَ مِهَٰدٗا ﴿6﴾

Transliteration: Alam najAAali alarda mihadan

Translation: ನಾವು ಭೂಮಿಯನ್ನು ಹಾಸನ್ನಾಗಿ ಮಾಡಲಿಲ್ಲವೇ?

78:7

وَٱلۡجِبَالَ أَوۡتَادٗا ﴿7﴾

Transliteration: Waaljibala awtadan

Translation: ಪರ್ವತಗಳನ್ನು ಗೂಟಗಳನ್ನಾಗಿ ಮಾಡಲಿಲ್ಲವೇ?

78:8

وَخَلَقۡنَٰكُمۡ أَزۡوَٰجٗا ﴿8﴾

Transliteration: Wakhalaqnakum azwajan

Translation: ನಿಮ್ಮನ್ನು ನಾವು ಜೋಡಿಗಳಾಗಿ ಸೃಷ್ಟಿಸಿದೆವು.

78:9

وَجَعَلۡنَا نَوۡمَكُمۡ سُبَاتٗا ﴿9﴾

Transliteration: WajaAAalna nawmakum subatan

Translation: ನಾವು ನಿಮ್ಮ ನಿದ್ದೆಯನ್ನು ವಿಶ್ರಾಂತಿಗೆ ಕಾರಣವಾಗಿ ಮಾಡಿದೆವು.

78:10

وَجَعَلۡنَا ٱلَّيۡلَ لِبَاسٗا ﴿10﴾

Transliteration: WajaAAalna allayla libasan

Translation: ನಾವು ರಾತ್ರಿಯನ್ನು ಪರದೆಯಾಗಿ ಮಾಡಿದೆವು.

78:11

وَجَعَلۡنَا ٱلنَّهَارَ مَعَاشٗا ﴿11﴾

Transliteration: WajaAAalna alnnahara maAAashan

Translation: ನಾವು ಹಗಲನ್ನು ಜೀವನೋಪಾಯದ ವೇಳೆಯಾಗಿ ಮಾಡಿದೆವು.

78:12

وَبَنَيۡنَا فَوۡقَكُمۡ سَبۡعٗا شِدَادٗا ﴿12﴾

Transliteration: Wabanayna fawqakum sabAAan shidadan

Translation: ನಾವು ನಿಮ್ಮ ಮೇಲ್ಭಾಗದಲ್ಲಿ ಏಳು ಬಲಿಷ್ಠ ಆಕಾಶಗಳನ್ನು ನಿರ್ಮಿಸಿದೆವು.

78:13

وَجَعَلۡنَا سِرَاجٗا وَهَّاجٗا ﴿13﴾

Transliteration: WajaAAalna sirajan wahhajan

Translation: ನಾವು ಬೆಳಗುವ ಒಂದು ದೀಪವನ್ನು (ಸೂರ್ಯ) ಮಾಡಿದೆವು.

78:14

وَأَنزَلۡنَا مِنَ ٱلۡمُعۡصِرَٰتِ مَآءٗ ثَجَّاجٗا ﴿14﴾

Transliteration: Waanzalna mina almuAAsirati maan thajjajan

Translation: ನಾವು ಮೋಡಗಳಿಂದ ಧಾರಾಕಾರವಾಗಿ ಮಳೆಯನ್ನು ಸುರಿಸಿದೆವು.

78:15

لِّنُخۡرِجَ بِهِۦ حَبّٗا وَنَبَاتٗا ﴿15﴾

Transliteration: Linukhrija bihi habban wanabatan

Translation: ಅದರಿಂದ ಧಾನ್ಯ ಹಾಗೂ ತರಕಾರಿಯನ್ನು ಬೆಳೆಸುವುದಕ್ಕಾಗಿ.

78:16

وَجَنَّـٰتٍ أَلۡفَافًا ﴿16﴾

Transliteration: Wajannatin alfafan

Translation: ಮತ್ತು ದಟ್ಟವಾದ ತೋಟಗಳನ್ನು.

78:17

إِنَّ يَوۡمَ ٱلۡفَصۡلِ كَانَ مِيقَٰتٗا ﴿17﴾

Transliteration: Inna yawma alfasli kana meeqatan

Translation: ನಿಶ್ಚಯವಾಗಿಯೂ ತೀರ್ಪು ನೀಡುವ ದಿನದ ಸಮಯವನ್ನು ನಿಶ್ಚಯಿಸಲಾಗಿದೆ.

78:18

يَوۡمَ يُنفَخُ فِي ٱلصُّورِ فَتَأۡتُونَ أَفۡوَاجٗا ﴿18﴾

Transliteration: Yawma yunfakhu fee alssoori fatatoona afwajan

Translation: ಕಹಳೆಯಲ್ಲಿ ಊದಲಾಗುವ ದಿನ. ಆಗ ನೀವು ಗುಂಪು ಗುಂಪಾಗಿ ಬರುವಿರಿ.

78:19

وَفُتِحَتِ ٱلسَّمَآءُ فَكَانَتۡ أَبۡوَٰبٗا ﴿19﴾

Transliteration: Wafutihati alssamao fakanat abwaban

Translation: ಆಕಾಶವನ್ನು ತೆರೆಯಲಾಗುವುದು. ಆಗ ಅದು ಅಸಂಖ್ಯ ಬಾಗಿಲುಗಳಾಗಿ ಮಾರ್ಪಡುವುದು.

78:20

وَسُيِّرَتِ ٱلۡجِبَالُ فَكَانَتۡ سَرَابًا ﴿20﴾

Transliteration: Wasuyyirati aljibalu fakanat saraban

Translation: ಪರ್ವತಗಳನ್ನು ಚಲಿಸುವಂತೆ ಮಾಡಲಾಗುವುದು. ಆಗ ಅವು ಮರೀಚಿಕೆಯಂತಾಗುವುವು.

78:21

إِنَّ جَهَنَّمَ كَانَتۡ مِرۡصَادٗا ﴿21﴾

Transliteration: Inna jahannama kanat mirsadan

Translation: ನಿಶ್ಚಯವಾಗಿಯೂ ನರಕವು ನಿಗಾವಣೆಯ ಸ್ಥಳದಲ್ಲಿದೆ.

78:22

لِّلطَّـٰغِينَ مَـَٔابٗا ﴿22﴾

Transliteration: Lilttagheena maaban

Translation: ಅದು ಎಲ್ಲೆ ಮೀರಿ ವರ್ತಿಸಿದವರ ವಾಸಸ್ಥಳವಾಗಿದೆ.

78:23

لَّـٰبِثِينَ فِيهَآ أَحۡقَابٗا ﴿23﴾

Transliteration: Labitheena feeha ahqaban

Translation: ಅವರು ಯುಗ ಯುಗಾಂತರ ಅದರಲ್ಲಿ ವಾಸಿಸುವರು.

78:24

لَّا يَذُوقُونَ فِيهَا بَرۡدٗا وَلَا شَرَابًا ﴿24﴾

Transliteration: La yathooqoona feeha bardan wala sharaban

Translation: ಅವರು ಅಲ್ಲಿ ತಂಪು ಅಥವಾ ಪಾನೀಯದ ರುಚಿಯನ್ನು ನೋಡುವುದೇ ಇಲ್ಲ.

78:25

إِلَّا حَمِيمٗا وَغَسَّاقٗا ﴿25﴾

Transliteration: Illa hameeman waghassaqan

Translation: ಕುದಿಯುವ ನೀರು ಮತ್ತು (ದುರ್ಗಂಧಪೂರಿತ) ಕೀವಿನ (ರುಚಿಯ) ಹೊರತು.

78:26

جَزَآءٗ وِفَاقًا ﴿26﴾

Transliteration: Jazaan wifaqan

Translation: ಅವರಿಗೆ ಪೂರ್ಣ ಪ್ರತಿಫಲ ನೀಡಲಾಗುವುದು.

78:27

إِنَّهُمۡ كَانُواْ لَا يَرۡجُونَ حِسَابٗا ﴿27﴾

Transliteration: Innahum kanoo la yarjoona hisaban

Translation: ನಿಶ್ಚಯವಾಗಿಯೂ ಅವರು ವಿಚಾರಣೆಯನ್ನು ನಿರೀಕ್ಷಿಸುತ್ತಿರಲಿಲ್ಲ.

78:28

وَكَذَّبُواْ بِـَٔايَٰتِنَا كِذَّابٗا ﴿28﴾

Transliteration: Wakaththaboo biayatina kiththaban

Translation: ಅವರು ಸೊಕ್ಕಿನಿಂದ ನಮ್ಮ ವಚನಗಳನ್ನು ನಿಷೇಧಿಸಿದ್ದರು.

78:29

وَكُلَّ شَيۡءٍ أَحۡصَيۡنَٰهُ كِتَٰبٗا ﴿29﴾

Transliteration: Wakulla shayin ahsaynahu kitaban

Translation: ನಾವು ಎಲ್ಲ ವಿಷಯಗಳನ್ನೂ ಲಿಖಿತಗೊಳಿಸಿ ಎಣಿಸಿಟ್ಟಿದ್ದೇವೆ.

78:30

فَذُوقُواْ فَلَن نَّزِيدَكُمۡ إِلَّا عَذَابًا ﴿30﴾

Transliteration: Fathooqoo falan nazeedakum illa AAathaban

Translation: ಆದ್ದರಿಂದ ನೀವು (ನಿಮ್ಮ ದುಷ್ಕರ್ಮಗಳ) ರುಚಿಯನ್ನು ನೋಡಿರಿ. ನಾವು ನಿಮಗೆ ಶಿಕ್ಷೆಯಲ್ಲದೆ ಬೇರೇನನ್ನೂ ಅಧಿಕಗೊಳಿಸುವುದಿಲ್ಲ.

78:31

إِنَّ لِلۡمُتَّقِينَ مَفَازًا ﴿31﴾

Transliteration: Inna lilmuttaqeena mafazan

Translation: ನಿಶ್ಚಯವಾಗಿಯೂ ದೇವಭಯವುಳ್ಳವರಿಗೆ ವಿಜಯವಿದೆ.

78:32

حَدَآئِقَ وَأَعۡنَٰبٗا ﴿32﴾

Transliteration: Hadaiqa waaAAnaban

Translation: ತೋಟಗಳು ಮತ್ತು ದ್ರಾಕ್ಷಿಗಳಿವೆ.

78:33

وَكَوَاعِبَ أَتۡرَابٗا ﴿33﴾

Transliteration: WakawaAAiba atraban

Translation: ಸಮಪ್ರಾಯದ ಯುವ ತರುಣಿಯರಿದ್ದಾರೆ.

78:34

وَكَأۡسٗا دِهَاقٗا ﴿34﴾

Transliteration: Wakasan dihaqan

Translation: ತುಂಬಿ ತುಳುಕುವ ಲೋಟಗಳಿವೆ.

78:35

لَّا يَسۡمَعُونَ فِيهَا لَغۡوٗا وَلَا كِذَّـٰبٗا ﴿35﴾

Transliteration: La yasmaAAoona feeha laghwan wala kiththaban

Translation: ಅವರು ಅಲ್ಲಿ ಅನಗತ್ಯ ಮಾತುಗಳನ್ನು ಅಥವಾ ಸುಳ್ಳು ವಾರ್ತೆಗಳನ್ನು ಕೇಳುವುದಿಲ್ಲ.

78:36

جَزَآءٗ مِّن رَّبِّكَ عَطَآءً حِسَابٗا ﴿36﴾

Transliteration: Jazaan min rabbika AAataan hisaban

Translation: ಇವೆಲ್ಲವೂ ಅವರಿಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ದೊರೆಯುವ ಪರ್ಯಾಪ್ತ ಪ್ರತಿಫಲವಾಗಿದೆ.

78:37

رَّبِّ ٱلسَّمَٰوَٰتِ وَٱلۡأَرۡضِ وَمَا بَيۡنَهُمَا ٱلرَّحۡمَٰنِۖ لَا يَمۡلِكُونَ مِنۡهُ خِطَابٗا ﴿37﴾

Transliteration: Rabbi alssamawati waalardi wama baynahuma alrrahmani la yamlikoona minhu khitaban

Translation: ಅವನು ಯಾರೆಂದರೆ ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ಅವನು ಪರಮ ದಯಾಳುವಾಗಿದ್ದಾನೆ. ಅವನೊಡನೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ.

78:38

يَوۡمَ يَقُومُ ٱلرُّوحُ وَٱلۡمَلَـٰٓئِكَةُ صَفّٗاۖ لَّا يَتَكَلَّمُونَ إِلَّا مَنۡ أَذِنَ لَهُ ٱلرَّحۡمَٰنُ وَقَالَ صَوَابٗا ﴿38﴾

Transliteration: Yawma yaqoomu alrroohu waalmalaikatu saffan la yatakallamoona illa man athina lahu alrrahmanu waqala sawaban

Translation: ರೂಹ್ (ಜಿಬ್ರೀಲ್) ಮತ್ತು ದೇವದೂತರು‍ಗಳು ಸಾಲು ಸಾಲಾಗಿ ನಿಲ್ಲುವ ದಿನ. (ಅಂದು) ಪರಮ ದಯಾಳುವಾದ ಅಲ್ಲಾಹು ಯಾರಿಗೆ ಅನುಮತಿ ನೀಡುತ್ತಾನೋ ಮತ್ತು ಯಾರು ಸರಿಯಾದ ಮಾತನ್ನೇ ಆಡುತ್ತಾರೋ ಅವರ ಹೊರತು ಬೇರೆ ಯಾರಿಗೂ ತುಟಿ ಬಿಚ್ಚಲಾಗುವುದಿಲ್ಲ.

78:39

ذَٰلِكَ ٱلۡيَوۡمُ ٱلۡحَقُّۖ فَمَن شَآءَ ٱتَّخَذَ إِلَىٰ رَبِّهِۦ مَـَٔابًا ﴿39﴾

Transliteration: Thalika alyawmu alhaqqu faman shaa ittakhatha ila rabbihi maaban

Translation: ಆ ದಿನವು ಸತ್ಯವಾಗಿದೆ. ಆದ್ದರಿಂದ ಇಚ್ಛೆಯುಳ್ಳವನು (ಸತ್ಕರ್ಮಗಳನ್ನು ಮಾಡಿ) ತನ್ನ ಪರಿಪಾಲಕನ (ಅಲ್ಲಾಹನ) ಬಳಿ ವಾಸಸ್ಥಳವನ್ನು ಸ್ವೀಕರಿಸಿಕೊಳ್ಳಲಿ.

78:40

إِنَّآ أَنذَرۡنَٰكُمۡ عَذَابٗا قَرِيبٗا يَوۡمَ يَنظُرُ ٱلۡمَرۡءُ مَا قَدَّمَتۡ يَدَاهُ وَيَقُولُ ٱلۡكَافِرُ يَٰلَيۡتَنِي كُنتُ تُرَٰبَۢا ﴿40﴾

Transliteration: Inna antharnakum AAathaban qareeban yawma yanthuru almaro ma qaddamat yadahu wayaqoolu alkafiru ya laytanee kuntu turaban

Translation: ನಾವು ನಿಮಗೆ ಶೀಘ್ರದಲ್ಲೇ ಬರುವ ಒಂದು ಶಿಕ್ಷೆಯ ಬಗ್ಗೆ ನಿಶ್ಚಯವಾಗಿಯೂ ಮುನ್ನೆಚ್ಚರಿಕೆ ನೀಡಿದ್ದೇವೆ. ಅಂದು ಮನುಷ್ಯನು ತನ್ನ ಕೈಗಳು ಮುಂದಕ್ಕೆ ಕಳುಹಿಸಿದ ಕರ್ಮಗಳನ್ನು ನೋಡುವನು ಮತ್ತು ಸತ್ಯನಿಷೇಧಿಯು ಹೇಳುವನು: “ಅಯ್ಯೋ! ನಾನು ಮಣ್ಣಾಗಿ ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು!”

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download