quranm◉

Surah Al-Mutaffifin transliteration

◉ ಸೂರಾ · ∞

83:1

وَيۡلٞ لِّلۡمُطَفِّفِينَ ﴿1﴾

Transliteration: Waylun lilmutaffifeena

Translation: ಅಳತೆ ಮತ್ತು ತೂಕದಲ್ಲಿ ಕಡಿಮೆ ಮಾಡುವವರಿಗೆ ಮಹಾ ನಾಶವಿದೆ.

83:2

ٱلَّذِينَ إِذَا ٱكۡتَالُواْ عَلَى ٱلنَّاسِ يَسۡتَوۡفُونَ ﴿2﴾

Transliteration: Allatheena itha iktaloo AAala alnnasi yastawfoona

Translation: ಅವರು ಯಾರೆಂದರೆ ಜನರಿಂದ ಅಳತೆ ಮಾಡಿ ಪಡೆಯುವಾಗ ಪೂರ್ಣವಾಗಿ ಪಡೆಯುವವರು.

83:3

وَإِذَا كَالُوهُمۡ أَو وَّزَنُوهُمۡ يُخۡسِرُونَ ﴿3﴾

Transliteration: Waitha kaloohum aw wazanoohum yukhsiroona

Translation: ಆದರೆ ಜನರಿಗೆ ಅಳತೆ ಮಾಡಿ ಕೊಡುವಾಗ ಅಥವಾ ತೂಕ ಮಾಡಿ ಕೊಡುವಾಗ ಕಡಿಮೆ ಮಾಡುವವರು.

83:4

أَلَا يَظُنُّ أُوْلَـٰٓئِكَ أَنَّهُم مَّبۡعُوثُونَ ﴿4﴾

Transliteration: Ala yathunnu olaika annahum mabAAoothoona

Translation: ಮರಣಾನಂತರ ಅವರಿಗೆ ಪುನಃ ಜೀವ ನೀಡಿ ಎಬ್ಬಿಸಲಾಗುವುದೆಂಬ ಪ್ರಜ್ಞೆ ಅವರಿಗಿಲ್ಲವೇ?

83:5

لِيَوۡمٍ عَظِيمٖ ﴿5﴾

Transliteration: Liyawmin AAatheemin

Translation: ಆ ಮಹಾ ದಿನಕ್ಕಾಗಿ.

83:6

يَوۡمَ يَقُومُ ٱلنَّاسُ لِرَبِّ ٱلۡعَٰلَمِينَ ﴿6﴾

Transliteration: Yawma yaqoomu alnnasu lirabbi alAAalameena

Translation: ಜನರೆಲ್ಲರೂ ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಮುಂದೆ ಎದ್ದು ನಿಲ್ಲುವ ದಿನ.

83:7

كَلَّآ إِنَّ كِتَٰبَ ٱلۡفُجَّارِ لَفِي سِجِّينٖ ﴿7﴾

Transliteration: Kalla inna kitaba alfujjari lafee sijjeenin

Translation: ನಿಶ್ಚಯವಾಗಿಯೂ ದುಷ್ಕರ್ಮಿಗಳ ಕರ್ಮದಾಖಲೆಯು ಸಿಜ್ಜೀನ್‍ನಲ್ಲಿದೆ.

83:8

وَمَآ أَدۡرَىٰكَ مَا سِجِّينٞ ﴿8﴾

Transliteration: Wama adraka ma sijjeenun

Translation: ಸಿಜ್ಜೀನ್ ಏನೆಂದು ನಿಮಗೇನು ಗೊತ್ತು?

83:9

كِتَٰبٞ مَّرۡقُومٞ ﴿9﴾

Transliteration: Kitabun marqoomun

Translation: ಅದು ನಮೂದಿಸಲಾದ ಪುಸ್ತಕವಾಗಿದೆ.

83:10

وَيۡلٞ يَوۡمَئِذٖ لِّلۡمُكَذِّبِينَ ﴿10﴾

Transliteration: Waylun yawmaithin lilmukaththibeena

Translation: ಅಂದು ನಿಷೇಧಿಸಿದವರಿಗೆ ಮಹಾ ನಾಶವಿದೆ.

83:11

ٱلَّذِينَ يُكَذِّبُونَ بِيَوۡمِ ٱلدِّينِ ﴿11﴾

Transliteration: Allatheena yukaththiboona biyawmi alddeeni

Translation: ಅವರು ಯಾರೆಂದರೆ ಪ್ರತಿಫಲ ದಿನವನ್ನು ನಿಷೇಧಿಸುವವರು.

83:12

وَمَا يُكَذِّبُ بِهِۦٓ إِلَّا كُلُّ مُعۡتَدٍ أَثِيمٍ ﴿12﴾

Transliteration: Wama yukaththibu bihi illa kullu muAAtadin atheemin

Translation: ಎಲ್ಲೆ ಮೀರಿ ನಡೆಯುವವರು ಮತ್ತು ಮಹಾಪಾಪಿಗಳ ಹೊರತು ಇನ್ನಾರೂ ಅದನ್ನು ನಿಷೇಧಿಸುವುದಿಲ್ಲ.

83:13

إِذَا تُتۡلَىٰ عَلَيۡهِ ءَايَٰتُنَا قَالَ أَسَٰطِيرُ ٱلۡأَوَّلِينَ ﴿13﴾

Transliteration: Itha tutla AAalayhi ayatuna qala asateeru alawwaleena

Translation: ಅವನಿಗೆ ನಮ್ಮ ವಚನಗಳನ್ನು ಓದಿಕೊಡಲಾದರೆ ಅದನ್ನು “ಪ್ರಾಚೀನ ಕಾಲದ ಜನರ ಪುರಾಣಗಳು” ಎನ್ನುತ್ತಾನೆ.

83:14

كَلَّاۖ بَلۡۜ رَانَ عَلَىٰ قُلُوبِهِم مَّا كَانُواْ يَكۡسِبُونَ ﴿14﴾

Transliteration: Kalla bal rana AAala quloobihim ma kanoo yaksiboona

Translation: ಅಲ್ಲ, ಅವರು ಮಾಡುತ್ತಿದ್ದ ದುಷ್ಕರ್ಮಗಳ ಕಾರಣ ಕಪ್ಪುಕಲೆಗಳು ಅವರ ಹೃದಯಗಳನ್ನು ಆವರಿಸಿಕೊಂಡಿವೆ.

83:15

كَلَّآ إِنَّهُمۡ عَن رَّبِّهِمۡ يَوۡمَئِذٖ لَّمَحۡجُوبُونَ ﴿15﴾

Transliteration: Kalla innahum AAan rabbihim yawmaithin lamahjooboona

Translation: ಅಲ್ಲ, ಅಂದು ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ದರ್ಶಿಸದಂತೆ ಪರದೆಯಲ್ಲಿ ಹಾಕಲಾಗುವರು.[1]

83:16

ثُمَّ إِنَّهُمۡ لَصَالُواْ ٱلۡجَحِيمِ ﴿16﴾

Transliteration: Thumma innahum lasaloo aljaheemi

Translation: ನಂತರ ನಿಶ್ಚಯವಾಗಿಯೂ ಅವರನ್ನು ಧಗಧಗಿಸುವ ನರಕಕ್ಕೆ ಎಸೆಯಲಾಗುವುದು.

83:17

ثُمَّ يُقَالُ هَٰذَا ٱلَّذِي كُنتُم بِهِۦ تُكَذِّبُونَ ﴿17﴾

Transliteration: Thumma yuqalu hatha allathee kuntum bihi tukaththiboona

Translation: ನಂತರ ಅವರೊಡನೆ ಹೇಳಲಾಗುವುದು: “ಇದೇ ನೀವು ನಿಷೇಧಿಸುತ್ತಿದ್ದ ನರಕ.”

83:18

كَلَّآ إِنَّ كِتَٰبَ ٱلۡأَبۡرَارِ لَفِي عِلِّيِّينَ ﴿18﴾

Transliteration: Kalla inna kitaba alabrari lafee AAilliyyeena

Translation: ಇಲ್ಲವೇ ಇಲ್ಲ. ನಿಶ್ಚಯವಾಗಿಯೂ ಸಜ್ಜನರ ಕರ್ಮದಾಖಲೆಯು ಇಲ್ಲಿಯ್ಯೂನ್‍ನಲ್ಲಿದೆ.

83:19

وَمَآ أَدۡرَىٰكَ مَا عِلِّيُّونَ ﴿19﴾

Transliteration: Wama adraka ma AAilliyyoona

Translation: ಇಲ್ಲಿಯ್ಯೂನ್ ಏನೆಂದು ನಿಮಗೇನು ಗೊತ್ತು?

83:20

كِتَٰبٞ مَّرۡقُومٞ ﴿20﴾

Transliteration: Kitabun marqoomun

Translation: ಅದು ನಮೂದಿಸಲಾದ ಪುಸ್ತಕವಾಗಿದೆ.

83:21

يَشۡهَدُهُ ٱلۡمُقَرَّبُونَ ﴿21﴾

Transliteration: Yashhaduhu almuqarraboona

Translation: ಸಾಮೀಪ್ಯ ಪಡೆದವರು (ದೇವದೂತರು) ಅದರ ಬಳಿ ಉಪಸ್ಥಿತರಾಗುವರು.

83:22

إِنَّ ٱلۡأَبۡرَارَ لَفِي نَعِيمٍ ﴿22﴾

Transliteration: Inna alabrara lafee naAAeemin

Translation: ನಿಶ್ಚಯವಾಗಿಯೂ ಸಜ್ಜನರು ಸುಖಾಡಂಬರಗಳಲ್ಲಿರುವರು.

83:23

عَلَى ٱلۡأَرَآئِكِ يَنظُرُونَ ﴿23﴾

Transliteration: AAala alaraiki yanthuroona

Translation: ಸುಖಾಸನಗಳಲ್ಲಿ ಕುಳಿತು ನೋಡುತ್ತಿರುವರು.

83:24

تَعۡرِفُ فِي وُجُوهِهِمۡ نَضۡرَةَ ٱلنَّعِيمِ ﴿24﴾

Transliteration: TaAArifu fee wujoohihim nadrata alnnaAAeemi

Translation: ನೀವು ಅವರ ಮುಖಗಳಲ್ಲಿ ಆ ಸುಖಗಳ ಹೊಳಪನ್ನು ಗುರುತಿಸುವಿರಿ.

83:25

يُسۡقَوۡنَ مِن رَّحِيقٖ مَّخۡتُومٍ ﴿25﴾

Transliteration: Yusqawna min raheeqin makhtoomin

Translation: ಅವರಿಗೆ ಮೊಹರು ಹಾಕಲಾದ ಶುದ್ಧ ಮದ್ಯವನ್ನು ಕುಡಿಯಲು ನೀಡಲಾಗುವುದು.

83:26

خِتَٰمُهُۥ مِسۡكٞۚ وَفِي ذَٰلِكَ فَلۡيَتَنَافَسِ ٱلۡمُتَنَٰفِسُونَ ﴿26﴾

Transliteration: Khitamuhu miskun wafee thalika falyatanafasi almutanafisoona

Translation: ಅದರ ಮೊಹರು ಕಸ್ತೂರಿಯಾಗಿದೆ. ಪೈಪೋಟಿ ನಡೆಸುವವರು ಇದಕ್ಕಾಗಿ ಪೈಪೋಟಿ ನಡೆಸಲಿ.

83:27

وَمِزَاجُهُۥ مِن تَسۡنِيمٍ ﴿27﴾

Transliteration: Wamizajuhu min tasneemin

Translation: ಅದರ ಮಿಶ್ರಣವು ತಸ್ನೀಮ್[1] ಆಗಿದೆ.

83:28

عَيۡنٗا يَشۡرَبُ بِهَا ٱلۡمُقَرَّبُونَ ﴿28﴾

Transliteration: AAaynan yashrabu biha almuqarraboona

Translation: ಅಂದರೆ ಸಾಮೀಪ್ಯ ಪಡೆದವರು ಕುಡಿಯುವ ಚಿಲುಮೆಯ ನೀರು.

83:29

إِنَّ ٱلَّذِينَ أَجۡرَمُواْ كَانُواْ مِنَ ٱلَّذِينَ ءَامَنُواْ يَضۡحَكُونَ ﴿29﴾

Transliteration: Inna allatheena ajramoo kanoo mina allatheena amanoo yadhakoona

Translation: ನಿಶ್ಚಯವಾಗಿಯೂ (ಇಹಲೋಕದಲ್ಲಿ) ಅಪರಾಧಿಗಳು ಸತ್ಯವಿಶ್ವಾಸಿಗಳನ್ನು ತಮಾಷೆ ಮಾಡಿ ನಗುತ್ತಿದ್ದರು.

83:30

وَإِذَا مَرُّواْ بِهِمۡ يَتَغَامَزُونَ ﴿30﴾

Transliteration: Waitha marroo bihim yataghamazoona

Translation: ಅವರು ಸತ್ಯವಿಶ್ವಾಸಿಗಳ ಬಳಿಯಿಂದ ಹೋಗುವಾಗ ಒಬ್ಬರು ಇನ್ನೊಬ್ಬರಿಗೆ ಕಣ್ಣಿನಿಂದ ಸನ್ನೆ ಮಾಡುತ್ತಿದ್ದರು.

83:31

وَإِذَا ٱنقَلَبُوٓاْ إِلَىٰٓ أَهۡلِهِمُ ٱنقَلَبُواْ فَكِهِينَ ﴿31﴾

Transliteration: Waitha inqalaboo ila ahlihimu inqalaboo fakiheena

Translation: ಅವರ ತಮ್ಮ ಮನೆಯವರ ಬಳಿಗೆ ಮರಳುವಾಗ ಮೋಜು ಮಾಡುತ್ತಾ ಮರಳುತ್ತಿದ್ದರು.

83:32

وَإِذَا رَأَوۡهُمۡ قَالُوٓاْ إِنَّ هَـٰٓؤُلَآءِ لَضَآلُّونَ ﴿32﴾

Transliteration: Waitha raawhum qaloo inna haolai ladalloona

Translation: ಸತ್ಯವಿಶ್ವಾಸಿಗಳನ್ನು ಕಂಡರೆ, “ನಿಶ್ಚಯವಾಗಿಯೂ ಇವರೆಲ್ಲರೂ ದಾರಿತಪ್ಪಿದವರು” ಎನ್ನುತ್ತಿದ್ದರು.

83:33

وَمَآ أُرۡسِلُواْ عَلَيۡهِمۡ حَٰفِظِينَ ﴿33﴾

Transliteration: Wama orsiloo AAalayhim hafitheena

Translation: ಇವರನ್ನು ಅವರ (ಸತ್ಯವಿಶ್ವಾಸಿಗಳ) ಕಾವಲುಗಾರರಾಗಿ ಮಾಡಿ ಕಳುಹಿಸಲಾಗಿಲ್ಲ.

83:34

فَٱلۡيَوۡمَ ٱلَّذِينَ ءَامَنُواْ مِنَ ٱلۡكُفَّارِ يَضۡحَكُونَ ﴿34﴾

Transliteration: Faalyawma allatheena amanoo mina alkuffari yadhakoona

Translation: ಆದರೆ ಇಂದು ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ನೋಡಿ ನಗುವರು.

83:35

عَلَى ٱلۡأَرَآئِكِ يَنظُرُونَ ﴿35﴾

Transliteration: AAala alaraiki yanthuroona

Translation: ಅವರು ಸುಖಾಸನಗಳಲ್ಲಿ ಕುಳಿತು ನೋಡುತ್ತಿರುವರು.

83:36

هَلۡ ثُوِّبَ ٱلۡكُفَّارُ مَا كَانُواْ يَفۡعَلُونَ ﴿36﴾

Transliteration: Hal thuwwiba alkuffaru ma kanoo yafAAaloona

Translation: ಆ ಸತ್ಯನಿಷೇಧಿಗಳಿಗೆ ಅವರು ಮಾಡಿದ ದುಷ್ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗಿದೆಯೋ ಎಂದು.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download