quranm◉

Surah An-Nazi'at transliteration

◉ ಸೂರಾ · ∞

79:1

وَٱلنَّـٰزِعَٰتِ غَرۡقٗا ﴿1﴾

Transliteration: WaalnnaziAAati gharqan

Translation: (ದೇಹದೊಳಗೆ) ಧುಮುಕಿ (ಸತ್ಯನಿಷೇಧಿಗಳ ಆತ್ಮಗಳನ್ನು) ಕಠೋರವಾಗಿ ಎಳೆಯುವ ದೇವದೂತರ ಮೇಲಾಣೆ!

79:2

وَٱلنَّـٰشِطَٰتِ نَشۡطٗا ﴿2﴾

Transliteration: Waalnnashitati nashtan

Translation: (ಸತ್ಯವಿಶ್ವಾಸಿಗಳ ಆತ್ಮಗಳನ್ನು) ಸೌಮ್ಯವಾಗಿ ಎಳೆಯುವ ದೇವದೂತರ ಮೇಲಾಣೆ!

79:3

وَٱلسَّـٰبِحَٰتِ سَبۡحٗا ﴿3﴾

Transliteration: Waalssabihati sabhan

Translation: ಈಜುತ್ತಾ ಚಲಿಸುವ ದೇವದೂತರ ಮೇಲಾಣೆ!

79:4

فَٱلسَّـٰبِقَٰتِ سَبۡقٗا ﴿4﴾

Transliteration: Faalssabiqati sabqan

Translation: ನಂತರ ದೌಡಾಯಿಸುತ್ತಾ ಮುಂದಕ್ಕೆ ಸಾಗುವ ದೇವದೂತರ ಮೇಲಾಣೆ!

79:5

فَٱلۡمُدَبِّرَٰتِ أَمۡرٗا ﴿5﴾

Transliteration: Faalmudabbirati amran

Translation: ಕಾರ್ಯಗಳನ್ನು ನಿಯಂತ್ರಿಸುವ ದೇವದೂತರ ಮೇಲಾಣೆ!

79:6

يَوۡمَ تَرۡجُفُ ٱلرَّاجِفَةُ ﴿6﴾

Transliteration: Yawma tarjufu alrrajifatu

Translation: ನಡುಗಿಸುವಂತದ್ದು (ಪ್ರಥಮ ಊದುವಿಕೆ) ನಡುಗಿಸುವ ದಿನ!

79:7

تَتۡبَعُهَا ٱلرَّادِفَةُ ﴿7﴾

Transliteration: TatbaAAuha alrradifatu

Translation: ಹಿಂಬಾಲಿಸಿ ಬರುವಂತದ್ದು (ಎರಡನೇ ಊದುವಿಕೆ) ಅದರ ಹಿಂದೆಯೇ ಬರುವುದು.

79:8

قُلُوبٞ يَوۡمَئِذٖ وَاجِفَةٌ ﴿8﴾

Transliteration: Quloobun yawmaithin wajifatun

Translation: ಅಂದು ಬಹಳಷ್ಟು ಹೃದಯಗಳು ಢವಗುಡುತ್ತಿರುವುವು.

79:9

أَبۡصَٰرُهَا خَٰشِعَةٞ ﴿9﴾

Transliteration: Absaruha khashiAAatun

Translation: ಅವರ ಕಣ್ಣುಗಳು ಕೆಳಭಾಗಕ್ಕೆ ತಗ್ಗಿರುವುವು.

79:10

يَقُولُونَ أَءِنَّا لَمَرۡدُودُونَ فِي ٱلۡحَافِرَةِ ﴿10﴾

Transliteration: Yaqooloona ainna lamardoodoona fee alhafirati

Translation: ಅವರು ಕೇಳುವರು: “ನಮ್ಮನ್ನು ನಮ್ಮ ಪೂರ್ವಸ್ಥಿತಿಗೆ ಮರಳಿಸಲಾಗುವುದೇ?

79:11

أَءِذَا كُنَّا عِظَٰمٗا نَّخِرَةٗ ﴿11﴾

Transliteration: Aitha kunna AAithaman nakhiratan

Translation: ನಾವು ಕೊಳೆತ ಮೂಳೆಗಳಾಗಿ ಬಿಟ್ಟ ಬಳಿಕ!”

79:12

قَالُواْ تِلۡكَ إِذٗا كَرَّةٌ خَاسِرَةٞ ﴿12﴾

Transliteration: Qaloo tilka ithan karratun khasiratun

Translation: ಅವರು ಹೇಳುವರು: “ಹಾಗಿದ್ದರೆ ಅದು ನಷ್ಟಭರಿತ ಮರಳುವಿಕೆಯಾಗಿದೆ.”

79:13

فَإِنَّمَا هِيَ زَجۡرَةٞ وَٰحِدَةٞ ﴿13﴾

Transliteration: Fainnama hiya zajratun wahidatun

Translation: ಅದು ಕೇವಲ ಒಂದು (ಭಯಾನಕ) ಗದರಿಕೆಯಾಗಿದೆ.

79:14

فَإِذَا هُم بِٱلسَّاهِرَةِ ﴿14﴾

Transliteration: Faitha hum bialssahirati

Translation: ಆಗ ಅಗೋ ಅವರು ಒಂದು ಮೈದಾನದಲ್ಲಿ ಒಟ್ಟುಗೂಡುವರು!

79:15

هَلۡ أَتَىٰكَ حَدِيثُ مُوسَىٰٓ ﴿15﴾

Transliteration: Hal ataka hadeethu moosa

Translation: ಮೂಸಾರ ಸಮಾಚಾರವು ನಿಮಗೆ ತಲುಪಿದೆಯೇ?

79:16

إِذۡ نَادَىٰهُ رَبُّهُۥ بِٱلۡوَادِ ٱلۡمُقَدَّسِ طُوًى ﴿16﴾

Transliteration: Ith nadahu rabbuhu bialwadi almuqaddasi tuwan

Translation: ಪವಿತ್ರ ತುವಾ ಕಣಿವೆಯಲ್ಲಿ ಅವರ ಪರಿಪಾಲಕನು (ಅಲ್ಲಾಹು) ಅವರನ್ನು ಕರೆದು ಹೇಳಿದ ಸಂದರ್ಭ:

79:17

ٱذۡهَبۡ إِلَىٰ فِرۡعَوۡنَ إِنَّهُۥ طَغَىٰ ﴿17﴾

Transliteration: Ithhab ila firAAawna innahu tagha

Translation: “ಫರೋಹನ ಬಳಿಗೆ ಹೋಗಿರಿ. ನಿಶ್ಚಯವಾಗಿಯೂ ಅವನು ಎಲ್ಲೆ ಮೀರಿ ವರ್ತಿಸಿದ್ದಾನೆ.

79:18

فَقُلۡ هَل لَّكَ إِلَىٰٓ أَن تَزَكَّىٰ ﴿18﴾

Transliteration: Faqul hal laka ila an tazakka

Translation: ಅವನೊಡನೆ ಕೇಳಿರಿ: ನೀನು ಸ್ವಯಂ ಸಂಸ್ಕರಿಸಲು ಬಯಸುವೆಯಾ?

79:19

وَأَهۡدِيَكَ إِلَىٰ رَبِّكَ فَتَخۡشَىٰ ﴿19﴾

Transliteration: Waahdiyaka ila rabbika fatakhsha

Translation: ನಾನು ನಿನಗೆ ನಿನ್ನ ಪರಿಪಾಲಕನ (ಅಲ್ಲಾಹನ) ಮಾರ್ಗವನ್ನು ತೋರಿಸಿಕೊಡುವೆನು. ಅದರಿಂದ ನೀನು ದೇವಭಯವುಳ್ಳವನಾಗಬಹುದು.”

79:20

فَأَرَىٰهُ ٱلۡأٓيَةَ ٱلۡكُبۡرَىٰ ﴿20﴾

Transliteration: Faarahu alayata alkubra

Translation: ಮೂಸಾ ಅವನಿಗೆ ಮಹಾ ದೃಷ್ಟಾಂತವನ್ನು ತೋರಿಸಿದರು.

79:21

فَكَذَّبَ وَعَصَىٰ ﴿21﴾

Transliteration: Fakaththaba waAAasa

Translation: ಆದರೆ ಅವನು ನಿಷೇಧಿಸಿದನು ಮತ್ತು ಅವಿಧೇಯತೆ ತೋರಿದನು.

79:22

ثُمَّ أَدۡبَرَ يَسۡعَىٰ ﴿22﴾

Transliteration: Thumma adbara yasAAa

Translation: ನಂತರ ಅವನು (ತಂತ್ರಗಾರಿಕೆ ಮಾಡಲು) ಪರಿಶ್ರಮಿಸುತ್ತಾ ಹಿಂದಿರುಗಿ ಹೋದನು.

79:23

فَحَشَرَ فَنَادَىٰ ﴿23﴾

Transliteration: Fahashara fanada

Translation: ನಂತರ ಎಲ್ಲರನ್ನೂ ಜಮಾವಣೆಗೊಳಿಸಿ ಘೋಷಿಸಿದನು.

79:24

فَقَالَ أَنَا۠ رَبُّكُمُ ٱلۡأَعۡلَىٰ ﴿24﴾

Transliteration: Faqala ana rabbukumu alaAAla

Translation: ಅವನು ಹೇಳಿದನು: “ನಾನು ನಿಮ್ಮ ಪರಮೋಚ್ಛ ದೇವನಾಗಿದ್ದೇನೆ.”

79:25

فَأَخَذَهُ ٱللَّهُ نَكَالَ ٱلۡأٓخِرَةِ وَٱلۡأُولَىٰٓ ﴿25﴾

Transliteration: Faakhathahu Allahu nakala alakhirati waaloola

Translation: ಆಗ ಅಲ್ಲಾಹು ಅವನನ್ನು ಪರಲೋಕ ಮತ್ತು ಇಹಲೋಕದ ಶಿಕ್ಷೆಗಾಗಿ ಹಿಡಿದನು.

79:26

إِنَّ فِي ذَٰلِكَ لَعِبۡرَةٗ لِّمَن يَخۡشَىٰٓ ﴿26﴾

Transliteration: Inna fee thalika laAAibratan liman yakhsha

Translation: ನಿಶ್ಚಯವಾಗಿಯೂ ಭಯಪಡುವವರಿಗೆ ಅದರಲ್ಲಿ ನೀತಿಪಾಠವಿದೆ.

79:27

ءَأَنتُمۡ أَشَدُّ خَلۡقًا أَمِ ٱلسَّمَآءُۚ بَنَىٰهَا ﴿27﴾

Transliteration: Aantum ashaddu khalqan ami alssamao banaha

Translation: ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಆಕಾಶವನ್ನೋ? ಅವನು ಆಕಾಶವನ್ನು ನಿರ್ಮಿಸಿದನು.

79:28

رَفَعَ سَمۡكَهَا فَسَوَّىٰهَا ﴿28﴾

Transliteration: RafaAAa samkaha fasawwaha

Translation: ಅದರ ಛಾವಣಿಯನ್ನು ಎತ್ತರಿಸಿದನು ಮತ್ತು ಅದನ್ನು ಸರಿಪಡಿಸಿದನು.

79:29

وَأَغۡطَشَ لَيۡلَهَا وَأَخۡرَجَ ضُحَىٰهَا ﴿29﴾

Transliteration: Waaghtasha laylaha waakhraja duhaha

Translation: ಅದರ ರಾತ್ರಿಯನ್ನು ಕತ್ತಲೆಯಾಗಿ ಮಾಡಿದನು ಮತ್ತು ಅದರ ಹಗಲನ್ನು ಪ್ರತ್ಯಕ್ಷಗೊಳಿಸಿದನು.

79:30

وَٱلۡأَرۡضَ بَعۡدَ ذَٰلِكَ دَحَىٰهَآ ﴿30﴾

Transliteration: Waalarda baAAda thalika dahaha

Translation: ಅದರ ನಂತರ ಅವನು ಭೂಮಿಯನ್ನು ವಿಸ್ತರಿಸಿದನು.

79:31

أَخۡرَجَ مِنۡهَا مَآءَهَا وَمَرۡعَىٰهَا ﴿31﴾

Transliteration: Akhraja minha maaha wamarAAaha

Translation: ಅದರಿಂದ ನೀರನ್ನು ಮತ್ತು ಹುಲ್ಲುಗಾವಲುಗಳನ್ನು ಹೊರತೆಗೆದನು.

79:32

وَٱلۡجِبَالَ أَرۡسَىٰهَا ﴿32﴾

Transliteration: Waaljibala arsaha

Translation: ಪರ್ವತಗಳನ್ನು ದೃಢವಾಗಿ ನಿಲ್ಲಿಸಿದನು.

79:33

مَتَٰعٗا لَّكُمۡ وَلِأَنۡعَٰمِكُمۡ ﴿33﴾

Transliteration: MataAAan lakum walianAAamikum

Translation: ಇವೆಲ್ಲವೂ ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ.

79:34

فَإِذَا جَآءَتِ ٱلطَّآمَّةُ ٱلۡكُبۡرَىٰ ﴿34﴾

Transliteration: Faitha jaati alttammatu alkubra

Translation: ಆ ಮಹಾ ವಿಪತ್ತು (ಪುನರುತ್ಥಾನ ದಿನ) ಬರುವ ಸಂದರ್ಭ.

79:35

يَوۡمَ يَتَذَكَّرُ ٱلۡإِنسَٰنُ مَا سَعَىٰ ﴿35﴾

Transliteration: Yawma yatathakkaru alinsanu ma saAAa

Translation: ಅಂದು ಮನುಷ್ಯನು ತಾನು ಮಾಡಿಟ್ಟ ಕರ್ಮಗಳನ್ನು ಸ್ಮರಿಸುವನು.

79:36

وَبُرِّزَتِ ٱلۡجَحِيمُ لِمَن يَرَىٰ ﴿36﴾

Transliteration: Waburrizati aljaheemu liman yara

Translation: ನೋಡುಗರೆಲ್ಲರ ಮುಂದೆ ನರಕವನ್ನು ಪ್ರದರ್ಶಿಸಲಾಗುವುದು.

79:37

فَأَمَّا مَن طَغَىٰ ﴿37﴾

Transliteration: Faamma man tagha

Translation: ಆದ್ದರಿಂದ ಯಾರು ಎಲ್ಲೆ ಮೀರಿದವನೋ,

79:38

وَءَاثَرَ ٱلۡحَيَوٰةَ ٱلدُّنۡيَا ﴿38﴾

Transliteration: Waathara alhayata alddunya

Translation: ಮತ್ತು ಇಹಲೋಕಕ್ಕೆ ಪ್ರಾಶಸ್ತ್ಯ ನೀಡಿದವನೋ,

79:39

فَإِنَّ ٱلۡجَحِيمَ هِيَ ٱلۡمَأۡوَىٰ ﴿39﴾

Transliteration: Fainna aljaheema hiya almawa

Translation: ನಿಶ್ಚಯವಾಗಿಯೂ ನರಕವೇ ಅವನ ವಾಸಸ್ಥಳ.

79:40

وَأَمَّا مَنۡ خَافَ مَقَامَ رَبِّهِۦ وَنَهَى ٱلنَّفۡسَ عَنِ ٱلۡهَوَىٰ ﴿40﴾

Transliteration: Waama man khafa maqama rabbihi wanaha alnnafsa AAani alhawa

Translation: ಯಾರು ತನ್ನ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲುವುದನ್ನು ಭಯಪಟ್ಟನೋ ಮತ್ತು ತನ್ನ ದೇಹವನ್ನು ಸ್ವೇಚ್ಛೆಗಳಿಂದ ದೂರವಿಟ್ಟವನೋ,

79:41

فَإِنَّ ٱلۡجَنَّةَ هِيَ ٱلۡمَأۡوَىٰ ﴿41﴾

Transliteration: Fainna aljannata hiya almawa

Translation: ನಿಶ್ಚಯವಾಗಿಯೂ ಸ್ವರ್ಗವೇ ಅವನ ವಾಸಸ್ಥಳ.

79:42

يَسۡـَٔلُونَكَ عَنِ ٱلسَّاعَةِ أَيَّانَ مُرۡسَىٰهَا ﴿42﴾

Transliteration: Yasaloonaka AAani alssaAAati ayyana mursaha

Translation: ಅಂತ್ಯಸಮಯವು—ಅದು ಯಾವಾಗ ಸಂಭವಿಸುತ್ತದೆಯೆಂದು ಅವರು ನಿಮ್ಮಲ್ಲಿ ಕೇಳುತ್ತಾರೆ.

79:43

فِيمَ أَنتَ مِن ذِكۡرَىٰهَآ ﴿43﴾

Transliteration: Feema anta min thikraha

Translation: ನಿಮಗೆ ಅದರ ಬಗ್ಗೆ ಏನು ಜ್ಞಾನವಿದೆ?

79:44

إِلَىٰ رَبِّكَ مُنتَهَىٰهَآ ﴿44﴾

Transliteration: Ila rabbika muntahaha

Translation: ಅದರ ಆತ್ಯಂತಿಕ ಜ್ಞಾನವಿರುವುದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ.

79:45

إِنَّمَآ أَنتَ مُنذِرُ مَن يَخۡشَىٰهَا ﴿45﴾

Transliteration: Innama anta munthiru man yakhshaha

Translation: ನೀವಂತೂ ಅದನ್ನು ಭಯಪಡುವವರಿಗೆ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ.

79:46

كَأَنَّهُمۡ يَوۡمَ يَرَوۡنَهَا لَمۡ يَلۡبَثُوٓاْ إِلَّا عَشِيَّةً أَوۡ ضُحَىٰهَا ﴿46﴾

Transliteration: Kaannahum yawma yarawnaha lam yalbathoo illa AAashiyyatan aw duhaha

Translation: ಅವರು ಅದನ್ನು ನೋಡುವ ದಿನದಂದು, ದಿನದ ಕೊನೆಯ ಭಾಗ ಅಥವಾ ದಿನದ ಮೊದಲ ಭಾಗ ಮಾತ್ರ ಅವರು (ಭೂಮಿಯಲ್ಲಿ) ವಾಸವಾಗಿದ್ದರು ಎಂದು ಅವರಿಗೆ ಭಾಸವಾಗುವುದು.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download