quranm◉

Surah At-Tariq transliteration

◉ ಸೂರಾ · ∞

86:1

وَٱلسَّمَآءِ وَٱلطَّارِقِ ﴿1﴾

Transliteration: Waalssamai waalttariqi

Translation: ಆಕಾಶದ ಮೇಲಾಣೆ. ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದರ ಮೇಲಾಣೆ!

86:2

وَمَآ أَدۡرَىٰكَ مَا ٱلطَّارِقُ ﴿2﴾

Transliteration: Wama adraka ma alttariqu

Translation: ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದು ಏನೆಂದು ನಿಮಗೇನು ಗೊತ್ತು?

86:3

ٱلنَّجۡمُ ٱلثَّاقِبُ ﴿3﴾

Transliteration: Alnnajmu alththaqibu

Translation: ಅದು ಬೆಳಗುವ ನಕ್ಷತ್ರವಾಗಿದೆ.

86:4

إِن كُلُّ نَفۡسٖ لَّمَّا عَلَيۡهَا حَافِظٞ ﴿4﴾

Transliteration: In kullu nafsin lamma AAalayha hafithun

Translation: ನಿಗಾವಣೆಯಲ್ಲಿರುವ ದೇವದೂತರಿಲ್ಲದ ಯಾವುದೇ ವ್ಯಕ್ತಿಯೂ ಇಲ್ಲ.[1]

86:5

فَلۡيَنظُرِ ٱلۡإِنسَٰنُ مِمَّ خُلِقَ ﴿5﴾

Transliteration: Falyanthuri alinsanu mimma khuliqa

Translation: ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನು ನೋಡಿಕೊಳ್ಳಲಿ.

86:6

خُلِقَ مِن مَّآءٖ دَافِقٖ ﴿6﴾

Transliteration: Khuliqa min main dafiqin

Translation: ಅವನನ್ನು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿದೆ.

86:7

يَخۡرُجُ مِنۢ بَيۡنِ ٱلصُّلۡبِ وَٱلتَّرَآئِبِ ﴿7﴾

Transliteration: Yakhruju min bayni alssulbi waalttaraibi

Translation: ಅದು ಬೆನ್ನು ಮತ್ತು ಪಕ್ಕೆಲುಬುಗಳ ನಡುವಿನಿಂದ ಹೊರಬರುತ್ತದೆ.

86:8

إِنَّهُۥ عَلَىٰ رَجۡعِهِۦ لَقَادِرٞ ﴿8﴾

Transliteration: Innahu AAala rajAAihi laqadirun

Translation: ನಿಶ್ಚಯವಾಗಿಯೂ ಅವನನ್ನು ಮರಳಿ ತರಲು (ಮರಳಿ ಸೃಷ್ಟಿಸಲು) ಅಲ್ಲಾಹನಿಗೆ ಸಾಮರ್ಥ್ಯವಿದೆ.

86:9

يَوۡمَ تُبۡلَى ٱلسَّرَآئِرُ ﴿9﴾

Transliteration: Yawma tubla alssarairu

Translation: ಮರೆಯಾಗಿರುವ ರಹಸ್ಯಗಳನ್ನು ತನಿಖೆ ಮಾಡಲಾಗುವ ದಿನ![1]

86:10

فَمَا لَهُۥ مِن قُوَّةٖ وَلَا نَاصِرٖ ﴿10﴾

Transliteration: Fama lahu min quwwatin wala nasirin

Translation: ಆಗ ಮನುಷ್ಯನ ಬಳಿ ಯಾವುದೇ ಶಕ್ತಿ ಅಥವಾ ಸಹಾಯಕರು ಇರುವುದಿಲ್ಲ.

86:11

وَٱلسَّمَآءِ ذَاتِ ٱلرَّجۡعِ ﴿11﴾

Transliteration: Waalssamai thati alrrajAAi

Translation: ಮಳೆಯನ್ನು ಸುರಿಸುವ ಆಕಾಶದ ಮೇಲಾಣೆ!

86:12

وَٱلۡأَرۡضِ ذَاتِ ٱلصَّدۡعِ ﴿12﴾

Transliteration: Waalardi thati alssadAAi

Translation: ಸೀಳುವ ಭೂಮಿಯ ಮೇಲಾಣೆ!

86:13

إِنَّهُۥ لَقَوۡلٞ فَصۡلٞ ﴿13﴾

Transliteration: Innahu laqawlun faslun

Translation: ನಿಶ್ಚಯವಾಗಿಯೂ ಇದು (ಕುರ್‌ಆನ್) ನಿರ್ಣಾಯಕ ಮಾತಾಗಿದೆ.

86:14

وَمَا هُوَ بِٱلۡهَزۡلِ ﴿14﴾

Transliteration: Wama huwa bialhazli

Translation: ಇದು ಹಾಸ್ಯದ ಮಾತುಗಳಲ್ಲ.

86:15

إِنَّهُمۡ يَكِيدُونَ كَيۡدٗا ﴿15﴾

Transliteration: Innahum yakeedoona kaydan

Translation: ನಿಶ್ಚಯವಾಗಿಯೂ ಅವರು ತಂತ್ರಗಾರಿಕೆ ಮಾಡುತ್ತಿದ್ದಾರೆ.

86:16

وَأَكِيدُ كَيۡدٗا ﴿16﴾

Transliteration: Waakeedu kaydan

Translation: ನಾನು ಕೂಡ ತಂತ್ರಗಾರಿಕೆ ಮಾಡುತ್ತಿದ್ದೇನೆ.

86:17

فَمَهِّلِ ٱلۡكَٰفِرِينَ أَمۡهِلۡهُمۡ رُوَيۡدَۢا ﴿17﴾

Transliteration: Famahhili alkafireena amhilhum ruwaydan

Translation: ಸತ್ಯನಿಷೇಧಿಗಳಿಗೆ ಕಾಲಾವಕಾಶ ನೀಡಿರಿ. ಅವರನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟುಬಿಡಿ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download