quranm◉

Surah Al-Muddaththir transliteration

◉ ಸೂರಾ · ∞

74:1

يَـٰٓأَيُّهَا ٱلۡمُدَّثِّرُ ﴿1﴾

Transliteration: Ya ayyuha almuddaththiru

Translation: ಓ ಹೊದಿಕೆಯನ್ನು ಹೊದ್ದುಕೊಂಡವರೇ![1]

74:2

قُمۡ فَأَنذِرۡ ﴿2﴾

Transliteration: Qum faanthir

Translation: ಎದ್ದೇಳಿರಿ ಮತ್ತು ಎಚ್ಚರಿಕೆ ನೀಡಿರಿ.

74:3

وَرَبَّكَ فَكَبِّرۡ ﴿3﴾

Transliteration: Warabbaka fakabbir

Translation: ನಿಮ್ಮ ಪರಿಪಾಲಕನ (ಅಲ್ಲಾಹನ) ಮಹಾತ್ಮೆಯನ್ನು ಕೊಂಡಾಡಿರಿ.

74:4

وَثِيَابَكَ فَطَهِّرۡ ﴿4﴾

Transliteration: Wathiyabaka fatahhir

Translation: ನಿಮ್ಮ ಬಟ್ಟೆಗಳನ್ನು ಶುದ್ಧವಾಗಿಡಿರಿ.

74:5

وَٱلرُّجۡزَ فَٱهۡجُرۡ ﴿5﴾

Transliteration: Waalrrujza faohjur

Translation: ಅಶುದ್ಧವನ್ನು ವರ್ಜಿಸಿರಿ.

74:6

وَلَا تَمۡنُن تَسۡتَكۡثِرُ ﴿6﴾

Transliteration: Wala tamnun tastakthiru

Translation: ಉಪಕಾರ ಮಾಡಿ ಹೆಚ್ಚು ಗಳಿಸುವ ವ್ಯಾಮೋಹ ಬಿಟ್ಟುಬಿಡಿ.

74:7

وَلِرَبِّكَ فَٱصۡبِرۡ ﴿7﴾

Transliteration: Walirabbika faisbir

Translation: ನಿಮ್ಮ ಪರಿಪಾಲಕನ (ಅಲ್ಲಾಹನ) ಮಾರ್ಗದಲ್ಲಿ ತಾಳ್ಮೆಯಿಂದಿರಿ.

74:8

فَإِذَا نُقِرَ فِي ٱلنَّاقُورِ ﴿8﴾

Transliteration: Faitha nuqira fee alnnaqoori

Translation: ಕಹಳೆಯಲ್ಲಿ ಊದಲಾಗುವಾಗ.

74:9

فَذَٰلِكَ يَوۡمَئِذٖ يَوۡمٌ عَسِيرٌ ﴿9﴾

Transliteration: Fathalika yawmaithin yawmun AAaseerun

Translation: ಆ ದಿನವು ಅತ್ಯಂತ ಕಠಿಣ ದಿನವಾಗಿರುವುದು.

74:10

عَلَى ٱلۡكَٰفِرِينَ غَيۡرُ يَسِيرٖ ﴿10﴾

Transliteration: AAala alkafireena ghayru yaseerin

Translation: ಅದು ಸತ್ಯನಿಷೇಧಿಗಳಿಗೆ ಸುಗಮವಾಗಿರುವುದಿಲ್ಲ.

74:11

ذَرۡنِي وَمَنۡ خَلَقۡتُ وَحِيدٗا ﴿11﴾

Transliteration: Tharnee waman khalaqtu waheedan

Translation: ನನ್ನನ್ನು ಹಾಗೂ ನಾನು ಏಕಾಂಗಿಯಾಗಿ ಸೃಷ್ಟಿದವನನ್ನು ಬಿಟ್ಟುಬಿಡಿ.[1]

74:12

وَجَعَلۡتُ لَهُۥ مَالٗا مَّمۡدُودٗا ﴿12﴾

Transliteration: WajaAAaltu lahu malan mamdoodan

Translation: ನಾನು ಅವನಿಗೆ ಹೇರಳ ಐಶ್ವರ್ಯವನ್ನು ನೀಡಿದೆನು.

74:13

وَبَنِينَ شُهُودٗا ﴿13﴾

Transliteration: Wabaneena shuhoodan

Translation: ಸನ್ನದ್ಧರಾಗಿರುವ ಗಂಡು ಮಕ್ಕಳನ್ನು ನೀಡಿದೆನು.

74:14

وَمَهَّدتُّ لَهُۥ تَمۡهِيدٗا ﴿14﴾

Transliteration: Wamahhadtu lahu tamheedan

Translation: ನಾನು ಅವನಿಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಟ್ಟೆನು.

74:15

ثُمَّ يَطۡمَعُ أَنۡ أَزِيدَ ﴿15﴾

Transliteration: Thumma yatmaAAu an azeeda

Translation: ಆದರೂ ನಾನು ಅವನಿಗೆ ಇನ್ನೂ ಹೆಚ್ಚು ನೀಡಬೇಕೆಂದು ಅವನು ಹಾತೊರೆಯುತ್ತಾನೆ.

74:16

كَلَّآۖ إِنَّهُۥ كَانَ لِأٓيَٰتِنَا عَنِيدٗا ﴿16﴾

Transliteration: Kalla innahu kana liayatina AAaneedan

Translation: ಖಂಡಿತ ಇಲ್ಲ. ಅವನು ನಮ್ಮ ವಚನಗಳ ವಿರೋಧಿಯಾಗಿದ್ದಾನೆ.

74:17

سَأُرۡهِقُهُۥ صَعُودًا ﴿17﴾

Transliteration: Saorhiquhu saAAoodan

Translation: ಸದ್ಯವೇ ನಾನು ಅವನನ್ನು ಒಂದು ಪ್ರಯಾಸಕರ ಏರುವಿಕೆಯನ್ನು ಏರುವಂತೆ ಮಾಡುವೆನು.[1]

74:18

إِنَّهُۥ فَكَّرَ وَقَدَّرَ ﴿18﴾

Transliteration: Innahu fakkara waqaddara

Translation: ಅವನು ಯೋಚಿಸಿದನು ಮತ್ತು ನಿರ್ಣಯಿಸಿದನು.

74:19

فَقُتِلَ كَيۡفَ قَدَّرَ ﴿19﴾

Transliteration: Faqutila kayfa qaddara

Translation: ಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿದನು?

74:20

ثُمَّ قُتِلَ كَيۡفَ قَدَّرَ ﴿20﴾

Transliteration: Thumma qutila kayfa qaddara

Translation: ಪುನಃ ಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿದನು?

74:21

ثُمَّ نَظَرَ ﴿21﴾

Transliteration: Thumma nathara

Translation: ನಂತರ ಅವನು ನೋಡಿದನು.

74:22

ثُمَّ عَبَسَ وَبَسَرَ ﴿22﴾

Transliteration: Thumma AAabasa wabasara

Translation: ನಂತರ ಅವನು ಹುಬ್ಬುಗಂಟಿಕ್ಕಿದನು ಮತ್ತು ಮುಖವನ್ನು ಸಿಂಡರಿಸಿದನು.

74:23

ثُمَّ أَدۡبَرَ وَٱسۡتَكۡبَرَ ﴿23﴾

Transliteration: Thumma adbara waistakbara

Translation: ನಂತರ ಅವನು ಹಿಂದಡಿಯಿಟ್ಟನು ಮತ್ತು ಅಹಂಕಾರ ತೋರಿದನು.

74:24

فَقَالَ إِنۡ هَٰذَآ إِلَّا سِحۡرٞ يُؤۡثَرُ ﴿24﴾

Transliteration: Faqala in hatha illa sihrun yutharu

Translation: ನಂತರ ಅವನು ಹೇಳಿದನು: “ಇದು (ಕುರ್‌ಆನ್) ನಕಲು ಮಾಡಲಾದ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ.

74:25

إِنۡ هَٰذَآ إِلَّا قَوۡلُ ٱلۡبَشَرِ ﴿25﴾

Transliteration: In hatha illa qawlu albashari

Translation: ಇದು ಕೇವಲ ಒಬ್ಬ ಮನುಷ್ಯನ ಮಾತಾಗಿದೆ.”

74:26

سَأُصۡلِيهِ سَقَرَ ﴿26﴾

Transliteration: Saosleehi saqara

Translation: ನಾನು ಸದ್ಯವೇ ಅವನನ್ನು ಸಖರ್‌ಗೆ (ನರಕಕ್ಕೆ) ಹಾಕುವೆನು.

74:27

وَمَآ أَدۡرَىٰكَ مَا سَقَرُ ﴿27﴾

Transliteration: Wama adraka ma saqaru

Translation: ಸಖರ್ ಏನೆಂದು ನಿಮಗೇನು ಗೊತ್ತು?

74:28

لَا تُبۡقِي وَلَا تَذَرُ ﴿28﴾

Transliteration: La tubqee wala tatharu

Translation: ಅದು ಏನನ್ನೂ ಉಳಿಸುವುದಿಲ್ಲ ಮತ್ತು ಬಿಟ್ಟುಬಿಡುವುದಿಲ್ಲ.

74:29

لَوَّاحَةٞ لِّلۡبَشَرِ ﴿29﴾

Transliteration: Lawwahatun lilbashari

Translation: ಅದು ಚರ್ಮವನ್ನು ಸುಟ್ಟು ಕರಕಲಾಗಿಸುತ್ತದೆ.

74:30

عَلَيۡهَا تِسۡعَةَ عَشَرَ ﴿30﴾

Transliteration: AAalayha tisAAata AAashara

Translation: ಅದರ ಮೇಲೆ ಹತ್ತೊಂಬತ್ತು (ದೇವದೂತರುಗಳು) ಇದ್ದಾರೆ.

74:31

وَمَا جَعَلۡنَآ أَصۡحَٰبَ ٱلنَّارِ إِلَّا مَلَـٰٓئِكَةٗۖ وَمَا جَعَلۡنَا عِدَّتَهُمۡ إِلَّا فِتۡنَةٗ لِّلَّذِينَ كَفَرُواْ لِيَسۡتَيۡقِنَ ٱلَّذِينَ أُوتُواْ ٱلۡكِتَٰبَ وَيَزۡدَادَ ٱلَّذِينَ ءَامَنُوٓاْ إِيمَٰنٗا وَلَا يَرۡتَابَ ٱلَّذِينَ أُوتُواْ ٱلۡكِتَٰبَ وَٱلۡمُؤۡمِنُونَ وَلِيَقُولَ ٱلَّذِينَ فِي قُلُوبِهِم مَّرَضٞ وَٱلۡكَٰفِرُونَ مَاذَآ أَرَادَ ٱللَّهُ بِهَٰذَا مَثَلٗاۚ كَذَٰلِكَ يُضِلُّ ٱللَّهُ مَن يَشَآءُ وَيَهۡدِي مَن يَشَآءُۚ وَمَا يَعۡلَمُ جُنُودَ رَبِّكَ إِلَّا هُوَۚ وَمَا هِيَ إِلَّا ذِكۡرَىٰ لِلۡبَشَرِ ﴿31﴾

Transliteration: Wama jaAAalna ashaba alnnari illa malaikatan wama jaAAalna AAiddatahum illa fitnatan lillatheena kafaroo liyastayqina allatheena ootoo alkitaba wayazdada allatheena amanoo eemanan wala yartaba allatheena ootoo alkitaba waalmuminoona waliyaqoola allatheena fee quloobihim maradun waalkafiroona matha arada Allahu bihatha mathalan kathalika yudillu Allahu man yashao wayahdee man yashao wama yaAAlamu junooda rabbika illa huwa wama hiya illa thikra lilbashari

Translation: ನಾವು ನರಕದ ಕಾವಲುಗಾರರಾಗಿ ಕೇವಲ ದೇವದೂತರುಗಳನ್ನು ಮಾತ್ರ ನಿಶ್ಚಯಿಸಿದ್ದೇವೆ. ನಾವು ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳಿಗೆ ಒಂದು ಪರೀಕ್ಷೆಯಾಗಿ ಮಾಡಿದ್ದೇವೆ.[1] ಇದೇಕೆಂದರೆ, ಗ್ರಂಥ ನೀಡಲಾದವರಿಗೆ ದೃಢವಿಶ್ವಾಸ ಉಂಟಾಗಲೆಂದು[2] ಮತ್ತು ಸತ್ಯವಿಶ್ವಾಸಿಗಳ ವಿಶ್ವಾಸವು ಇನ್ನಷ್ಟು ಹೆಚ್ಚಾಗಲೆಂದು. ಅದೇ ರೀತಿ ಗ್ರಂಥ ನೀಡಲಾದವರು ಹಾಗೂ ಸತ್ಯವಿಶ್ವಾಸಿಗಳು ಸಂಶಯ ಪಡದಿರಲೆಂದು ಮತ್ತು ಹೃದಯದಲ್ಲಿ ರೋಗವಿರುವವರು ಹಾಗೂ ಸತ್ಯನಿಷೇಧಿಗಳು, “ಈ ವಿವರಣೆಯಿಂದ ಅಲ್ಲಾಹು ಉದ್ದೇಶಿಸುವುದೇನು?” ಎಂದು ಕೇಳಲೆಂದು. ಈ ರೀತಿ ಅಲ್ಲಾಹು ಅವನು ಇಚ್ಛಿಸಿದವರನ್ನು ದಾರಿತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸಿದವರಿಗೆ ಸನ್ಮಾರ್ಗ ತೋರಿಸುತ್ತಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಸೈನ್ಯವನ್ನು ಅವನ ಹೊರತು ಯಾರೂ ತಿಳಿದಿಲ್ಲ. ಅದು (ನರಕ) ಮನುಷ್ಯರಿಗೆ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ.

74:32

كَلَّا وَٱلۡقَمَرِ ﴿32﴾

Transliteration: Kalla waalqamari

Translation: ಇಲ್ಲ; ಚಂದ್ರನ ಮೇಲಾಣೆ!

74:33

وَٱلَّيۡلِ إِذۡ أَدۡبَرَ ﴿33﴾

Transliteration: Waallayli ith adbara

Translation: ರಾತ್ರಿಯ ಮೇಲಾಣೆ! ಅದು ಹಿಂದಕ್ಕೆ ಸರಿಯುವಾಗ.

74:34

وَٱلصُّبۡحِ إِذَآ أَسۡفَرَ ﴿34﴾

Transliteration: Waalssubhi itha asfara

Translation: ಬೆಳಗ್ಗಿನ ಮೇಲಾಣೆ! ಅದು ಬೆಳಗುವಾಗ.

74:35

إِنَّهَا لَإِحۡدَى ٱلۡكُبَرِ ﴿35﴾

Transliteration: Innaha laihda alkubari

Translation: ನಿಶ್ಚಯವಾಗಿಯೂ ಅದು (ನರಕ) ಮಹಾ ವಿಷಯಗಳಲ್ಲಿ ಒಂದಾಗಿದೆ.

74:36

نَذِيرٗا لِّلۡبَشَرِ ﴿36﴾

Transliteration: Natheeran lilbashari

Translation: ಮನುಷ್ಯರಿಗೆ ಒಂದು ಮುನ್ನೆಚ್ಚರಿಕೆಯಾಗಿದೆ.

74:37

لِمَن شَآءَ مِنكُمۡ أَن يَتَقَدَّمَ أَوۡ يَتَأَخَّرَ ﴿37﴾

Transliteration: Liman shaa minkum an yataqaddama aw yataakhkhara

Translation: ಅಂದರೆ ನಿಮ್ಮಲ್ಲಿ ಮುಂದಕ್ಕೆ ಬರಲು ಅಥವಾ ಹಿಂದೆಯೇ ಉಳಿಯಲು ಇಚ್ಛಿಸುವವರಿಗೆ.

74:38

كُلُّ نَفۡسِۭ بِمَا كَسَبَتۡ رَهِينَةٌ ﴿38﴾

Transliteration: Kullu nafsin bima kasabat raheenatun

Translation: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮಗಳಿಗೆ ಅಡಮಾನವಾಗಿದ್ದಾನೆ.[1]

74:39

إِلَّآ أَصۡحَٰبَ ٱلۡيَمِينِ ﴿39﴾

Transliteration: Illa ashaba alyameeni

Translation: ಬಲಭಾಗದ ಜನರ ಹೊರತು.

74:40

فِي جَنَّـٰتٖ يَتَسَآءَلُونَ ﴿40﴾

Transliteration: Fee jannatin yatasaaloona

Translation: ಅವರು ಸ್ವರ್ಗೋದ್ಯಾನಗಳಲ್ಲಿ (ಕುಳಿತು) ಪರಸ್ಪರ ವಿಚಾರಿಸುವರು.

74:41

عَنِ ٱلۡمُجۡرِمِينَ ﴿41﴾

Transliteration: AAani almujrimeena

Translation: ಅಪರಾಧಿಗಳ ಕುರಿತು.

74:42

مَا سَلَكَكُمۡ فِي سَقَرَ ﴿42﴾

Transliteration: Ma salakakum fee saqara

Translation: ನಿಮ್ಮನ್ನು ನರಕದಲ್ಲಿ ಬೀಳಿಸಿದ್ದೇನು?

74:43

قَالُواْ لَمۡ نَكُ مِنَ ٱلۡمُصَلِّينَ ﴿43﴾

Transliteration: Qaloo lam naku mina almusalleena

Translation: ಅವರು ಹೇಳುವರು: “ನಾವು ನಮಾಝ್ ಮಾಡುವವರಾಗಿರಲಿಲ್ಲ.

74:44

وَلَمۡ نَكُ نُطۡعِمُ ٱلۡمِسۡكِينَ ﴿44﴾

Transliteration: Walam naku nutAAimu almiskeena

Translation: ನಾವು ಬಡವರಿಗೆ ಆಹಾರ ನೀಡುತ್ತಿರಲಿಲ್ಲ.

74:45

وَكُنَّا نَخُوضُ مَعَ ٱلۡخَآئِضِينَ ﴿45﴾

Transliteration: Wakunna nakhoodu maAAa alkhaideena

Translation: ನಾವು ಅನಗತ್ಯ ಮಾತುಕತೆ ನಡೆಸುವವರ (ಸತ್ಯನಿಷೇಧಿಗಳ) ಜೊತೆಗೆ ಅನಗತ್ಯ ಮಾತುಗಳಲ್ಲಿ ತಲ್ಲೀನರಾಗಿದ್ದೆವು.

74:46

وَكُنَّا نُكَذِّبُ بِيَوۡمِ ٱلدِّينِ ﴿46﴾

Transliteration: Wakunna nukaththibu biyawmi alddeeni

Translation: ನಾವು ಪ್ರತಿಫಲದ ದಿನವನ್ನು ನಿಷೇಧಿಸುತ್ತಿದ್ದೆವು.

74:47

حَتَّىٰٓ أَتَىٰنَا ٱلۡيَقِينُ ﴿47﴾

Transliteration: Hatta atana alyaqeenu

Translation: ಎಲ್ಲಿಯವರೆಗೆಂದರೆ ನಮಗೆ ಸಾವು ಬರುವ ತನಕ.”

74:48

فَمَا تَنفَعُهُمۡ شَفَٰعَةُ ٱلشَّـٰفِعِينَ ﴿48﴾

Transliteration: Fama tanfaAAuhum shafaAAatu alshshafiAAeena

Translation: ಅವರಿಗೆ ಶಿಫಾರಸುಗಾರರ ಶಿಫಾರಸು ಪ್ರಯೋಜನಪಡುವುದಿಲ್ಲ.

74:49

فَمَا لَهُمۡ عَنِ ٱلتَّذۡكِرَةِ مُعۡرِضِينَ ﴿49﴾

Transliteration: Fama lahum AAani alttathkirati muAArideena

Translation: ಅವರಿಗೇನಾಗಿದೆ? ಅವರೇಕೆ ಉಪದೇಶದಿಂದ ವಿಮುಖರಾಗುತ್ತಿದ್ದಾರೆ?

74:50

كَأَنَّهُمۡ حُمُرٞ مُّسۡتَنفِرَةٞ ﴿50﴾

Transliteration: Kaannahum humurun mustanfiratun

Translation: ಅವರು ಗಾಬರಿಗೊಂಡ ಕತ್ತೆಗಳೋ ಎಂಬಂತೆ.

74:51

فَرَّتۡ مِن قَسۡوَرَةِۭ ﴿51﴾

Transliteration: Farrat min qaswaratin

Translation: ಸಿಂಹವನ್ನು ಕಂಡು ಪಲಾಯನ ಮಾಡಿದ.

74:52

بَلۡ يُرِيدُ كُلُّ ٱمۡرِيٕٖ مِّنۡهُمۡ أَن يُؤۡتَىٰ صُحُفٗا مُّنَشَّرَةٗ ﴿52﴾

Transliteration: Bal yureedu kullu imriin minhum an yuta suhufan munashsharatan

Translation: ಅಲ್ಲ, ವಾಸ್ತವವಾಗಿ ಅವರಲ್ಲಿ ಪ್ರತಿಯೊಬ್ಬನೂ ತನಗೆ ತೆರೆದಿಟ್ಟ ಧರ್ಮಗ್ರಂಥಗಳು ಸಿಗಬೇಕೆಂದು ಬಯಸುತ್ತಾನೆ.

74:53

كَلَّاۖ بَل لَّا يَخَافُونَ ٱلۡأٓخِرَةَ ﴿53﴾

Transliteration: Kalla bal la yakhafoona alakhirata

Translation: ಇಲ್ಲ; ವಾಸ್ತವವಾಗಿ ಅವರು ಪರಲೋಕವನ್ನು ಭಯಪಡುವುದಿಲ್ಲ.

74:54

كَلَّآ إِنَّهُۥ تَذۡكِرَةٞ ﴿54﴾

Transliteration: Kalla innahu tathkiratun

Translation: ಖಂಡಿತ ಇಲ್ಲ. ನಿಶ್ಚಯವಾಗಿಯೂ ಇದು (ಕುರ್‌ಆನ್) ಉಪದೇಶವಾಗಿದೆ.

74:55

فَمَن شَآءَ ذَكَرَهُۥ ﴿55﴾

Transliteration: Faman shaa thakarahu

Translation: ಇಷ್ಟವಿರುವವರು ಅದರಿಂದ ಉಪದೇಶವನ್ನು ಪಡೆದುಕೊಳ್ಳಲಿ.

74:56

وَمَا يَذۡكُرُونَ إِلَّآ أَن يَشَآءَ ٱللَّهُۚ هُوَ أَهۡلُ ٱلتَّقۡوَىٰ وَأَهۡلُ ٱلۡمَغۡفِرَةِ ﴿56﴾

Transliteration: Wama yathkuroona illa an yashaa Allahu huwa ahlu alttaqwa waahlu almaghfirati

Translation: ಆದರೆ ಅಲ್ಲಾಹು ಇಚ್ಛಿಸಿದ ಹೊರತು ಅವರು ಅದರಿಂದ ಉಪದೇಶ ಪಡೆಯುವುದಿಲ್ಲ. ಅವನು ಭಯಪಡಲು ಅರ್ಹನಾಗಿದ್ದಾನೆ ಮತ್ತು ಕ್ಷಮಿಸಲು ಅರ್ಹನಾಗಿದ್ದಾನೆ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download